ಹಲಾಲ್ ಕಟ್ ವಿವಾದ, ಭದ್ರಾವತಿ ಬಜರಂಗದಳ ಕಾರ್ಯಕರ್ತರ ವಿರುದ್ಧ ಕೇಸ್

ಶಿವಮೊಗ್ಗLIVE

ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ

SHIVAMOGGA LIVE NEWS | 1 ಏಪ್ರಿಲ್ 2022

ಹಲಾಲ್ ಗಲಾಟೆಗೆ ಸಂಬಂಧಿಸಿದಂತೆ ಹಳೇನಗರ ಹಾಗೂ ಹೊಸಮನೆ ಪೊಲೀಸ್ ಠಾಣೆಗಳಲ್ಲಿ ಬಜರಂಗದಳದ 7 ಕಾರ್ಯಕರ್ತರ ಮೇಲೆ ದೂರು ದಾಖಲಾಗಿದೆ.

ನಗರದ ಹೊಸಮನೆ ಬಡಾವಣಿ, ಬಿ.ಎಚ್.ರಸ್ತೆ, ಸಂತೆ ಮೈದಾನ, ಸಿ.ಎನ್.ರಸ್ತೆ ಸೇರಿದಂತೆ ನಗರದ ಎಲ್ಲೆಡೆ ಇರುವ ಚಿಕನ್, ಮಟನ್ ಅಂಗಡಿಗಳು, ರೆಸ್ಟೋರೆಂಟ್‌ಗಳಿಗೆ ಬುಧವಾರ ತೆರಳಿದ ಬಜರಂಗದಳದ ಕಾರ್ಯಕರ್ತರು ಇನ್ನು ಮುಂದೆ ಹಿಂದುಗಳಿಗೆ ನೀವು ಹಲಾಲ್ ಮಾಡದ ಮಾಂಸ ನೀಡಬೇಕು ಎಂದು ಹಿಂದು ಹಾಗೂ ಅನ್ಯ ಕೋಮಿನವರ ಅಂಗಡಿ ಮಾಲೀಕರುಗಳೊಂದಿಗೆ ಮಾತುಕತೆ ನಡೆಸಿದ್ದಾರೆ. ಅದಕ್ಕೆ ಬಹುತೇಕ ಮಾಂಸ ಮಾರಾಟಗಾರರು ಒಪ್ಪಿಗೆ ಸೂಚಿಸಿದ್ದಾರೆ.

ಆದರೆ ಹೊಸಮನೆ ವ್ಯಾಪ್ತಿಯಲ್ಲಿನ ಒಂದು ಚಿಕನ್ ಅಂಗಡಿಯಲ್ಲಿ ಕೆಲಸಗಾರ ನಾನು ಹಲಾಲ್ ಮಾಡದೆ ಯಾರಿಗೂ ಮಾಂಸ ನೀಡುವುದಿಲ್ಲ ಎಂದು ಹೇಳಿದಾಗ ಕಾರ್ಯಕರ್ತರು ಹಾಗೂ ಆತನಿಗೂ ಮಾತಿನ ಚಕಮಕಿ ನಡೆದಿದ್ದು ಹೊಸಮನೆ ಪೊಲೀಸ್ ಠಾಣೆಯಲ್ಲಿ ಬಜರಂಗದಳದ ಕಾರ್ಯಕರ್ತರ ಮೇಲೆ ದೂರು ದಾಖಲಾಗಿದೆ.

ಅದೇ ರೀತಿ ಪಟ್ಟಣದ ಬಿ.ಎಚ್. ರಸ್ತೆಯ ಮಾಂಸಾಹಾರಿ ಹೋಟೆಲ್‌ಗೆ ತೆರಳಿದ ಬಜರಂಗದಳದ ಕಾರ್ಯಕರ್ತರು ನಿಮ್ಮ ಹೋಟೆಲ್‌ಗೆ ಹಿಂದುಗಳೇ ಹೆಚ್ಚಾಗಿ ಬರುತ್ತಿದ್ದು ನೀವು ಇನ್ನು ಮುಂದೆ ಗ್ರಾಹಕರಿಗೆ ಹಲಾಲ್ ಮಾಡದ ಮಾಂಸದೂಟ ನೀಡಿ ಎಂದು ಮನವಿ ಮಾಡಿದ್ದಾರೆ. ಅದೇ ಸಂದರ್ಭದಲ್ಲಿ ಊಟ ಮಾಡುತ್ತಿದ್ದ ಗ್ರಾಹಕನೊಬ್ಬ ನನಗೆ ಹಲಾಲ್ ಮಾಡಿದ ಮಾಂಸವೇ ಬೇಕು. ನನಗೆ ಅದನ್ನೇ ಕೊಡಿ ಎಂದಿದ್ದಾನೆ. ಆಗ ಕಾರ್ಯಕರ್ತರು ಹಾಗೂ ಗ್ರಾಹಕನ ನಡುವೆ ಮಾತಿನ ಚಕಮಕಿ ನಡೆದಿದ್ದು ಗ್ರಾಹಕ ಬಜರಂಗದಳದ ಕಾರ್ಯಕರ್ತರು ಹಲ್ಲೆ ಮಾಡಿರುವುದಾಗಿ ದೂರು ನೀಡಿದ್ದಾನೆ.

Shimoga Nanjappa Hospital

ಇದನ್ನೂ ಓದಿ | ಇವತ್ತಿನ ಎಲ್ಲಾ ಸುದ್ದಿಗಳನ್ನು ಓದಲು ಕ್ಲಿಕ್ ಮಾಡಿ

ಈ ಮೇಲ್ – shivamoggalive@gmail.com

WhatsApp Number – 7411700200

ನಿಮ್ಮ ಕನಸಿನ ಮನೆ ಈಗ ನನಸು! 🏠

ಅತಿ ಕಡಿಮೆ ಬಡ್ಡಿ ದರದಲ್ಲಿ ಸುಲಭ ಗೃಹ ಸಾಲ


ಈಗಲೇ ಕರೆ ಮಾಡಿ
9972194422


 

About The Editor

ನಿತಿನ್‌ ಆರ್‌.ಕೈದೊಟ್ಲು

Nitin Kaidotlu - Editor - Shivamogga Live

© ಶಿವಮೊಗ್ಗ ಲೈವ್‌ : April 1, 2022

Leave a Comment