ಸಾಗರದಲ್ಲಿ ಬೆಳಂಬೆಳಗ್ಗೆ ಭೀಕರ ಅಪಘಾತ, ಲಾರಿಗಳ ಮುಖಾಮುಖಿ ಡಿಕ್ಕಿ, ಸ್ವಲ್ಪದರಲ್ಲಿ ತಪ್ಪಿತು ಭಾರೀ ಅನಾಹುತ

ನಿಮ್ಮೂರ ಸುದ್ದಿ ಕೆಲವೇ ನಿಮಿಷದಲ್ಲಿ ಸಾವಿರ ಸಾವಿರ ಜನರನ್ನು ತಲುಪುತ್ತೆ!

ಶಿವಮೊಗ್ಗ ಜಿಲ್ಲೆಯ ಯಾವುದೇ ಊರಿನ ಸುದ್ದಿಯನ್ನು ನಮಗೆ ಕಳುಹಿಸಬಹುದು. ನಮ್ಮ ವಾಟ್ಸಪ್‌ ನಂಬರ್ 7411700200.

ನಮ್ಮ ಗ್ರೂಪ್‌ ಸೇರಿಲು ಇಲ್ಲಿ ಕ್ಲಿಕ್‌ ಮಾಡಿ

ಶಿವಮೊಗ್ಗ ಲೈವ್.ಕಾಂ | 23 ಮಾರ್ಚ್ 2019

ಲಾರಿಗಳು ಮುಖಾಮುಖಿ ಡಿಕ್ಕಿಯಾಗಿ, ಮೂವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಸಾಗರ ತಾಲೂಕಿನ ಐಗಿನಬೈಲು ಬಳಿ ಘಟನೆ ನಡೆದಿದೆ. ಅಡುಗೆ ಅನಿಲ ಸಿಲಿಂಡರ್ ತುಂಬಿದ್ದ ಲಾರಿ ಮತ್ತು ಡಾಂಬರ್ ಸಾಗಿಸುತ್ತಿದ್ದ ಲಾರಿಗಳು ಡಿಕ್ಕಿಯಾಗಿವೆ. ಸುದ್ದಿಯ ಮುಂದಿನ 5 ಪ್ಯಾರಾಗಳು ಕೆಳಗಿವೆ.

ಅಡುಗೆ ಅನಿಲ ಸಿಲಿಂಡರ್ ಲಾರಿ ಚಾಲಕ ಲೋಕೇಶ್, ಡಾಂಬರ್ ಲಾರಿ ಚಾಲಕ ಸಚಿನ್, ಕ್ಲೀನರ್ ಮಾಲಕಪ್ಪ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಸಿಲಿಂಡರ್ ಲಾರಿ ಕ್ಲೀನರ್ ಉಮೇಶ್, ಗಂಭೀರ ಗಾಯಗೊಂಡಿದ್ದು, ಸಾಗರದ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

ಅಪಘಾತದಿಂದಾಗಿ ಬೆಂಗಳೂರು ಹೊನ್ನಾವರ ರಾಷ್ಟ್ರೀಯ ಹೆದ್ದಾರಿಯಲ್ಲಿ ಕೆಲಕಾಲ ವಾಹನ ಸಂಚಾರ ಸ್ಥಗಿತಗೊಂಡಿತ್ತು. ಲಾರಿಯಲ್ಲಿ ಸಿಲಿಂಡರ್’ಗಳಿದ್ದಿದ್ದರಿಂದ ಸ್ಥಳೀಯರು ಆತಂಕ್ಕಕೀಡಾಗಿದ್ದರು. ವಿಚಾರ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ಸಿಬ್ಬಂದಿ, ಸಿಲಿಂಡರ್ ಲಾರಿಯ ಪರಿಶೀಲನೆ ನಡೆಸಿದರು.

ಶಿವಮೊಗ್ಗ ಲೈವ್.ಕಾಂ ವಾಟ್ಸಪ್ ನಂಬರ್ | 7411700200

ಸುದ್ದಿಗಾಗಿ ಮೊಬೈಲ್ ನಂಬರ್ | 9964634494

ಈ ಮೇಲ್ | shivamoggalive@gmail.com

Leave a Comment