ಸೂಳೆಬೈಲ್ ಮುಖ್ಯರಸ್ತೆಯಲ್ಲಿ ಗೃಹ ಸಚಿವರಿಂದ ವಾರ್ನಿಂಗ್, ಏನಂದರು ಹೋಂ ಮಿನಿಸ್ಟರ್?

ಶಿವಮೊಗ್ಗLIVE

ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ

SHIVAMOGGA LIVE NEWS | HOME MINISTER | 07 ಮೇ 2022

ಶಿವಮೊಗ್ಗದ ಸೂಳೆಬೈಲಿನಲ್ಲಿ ಕಾರಿನ ಮೇಲೆ ದಾಳಿ ಪ್ರಕರಣದ ಹಿನ್ನೆಲೆ, ಗೃಹ ಸಚಿವ ಆರಗ ಜ್ಞಾನೇಂದ್ರ ಅವರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ಈ ವೇಳೆ ಸ್ಥಳೀಯರೊಬ್ಬರಿಗೆ ವಾರ್ನಿಂಗ್ ನೀಡಿದ್ದಾರೆ. ಇಲ್ಲಿರುವ ಹುಡುಗರಿಗೆ ಎಚ್ಚರಿಕೆಯಿಂದ ಇರುವಂತೆ ಸೂಚಿಸಿದರು.

ಮತ್ತೂರು ಗ್ರಾಮಕ್ಕೆ ತೆರಳಿದ್ದ ಗೃಹ ಸಚಿವ ಆರಗ ಜ್ಞಾನೇಂದ್ರ ಅವರು, ಸೂಳೆಬೈಲು ಮೂಲಕ ಶಿವಮೊಗ್ಗಕ್ಕೆ ಆಗಮಿಸಿದರು. ಈ ಸಂದರ್ಭ ಕಾರಿನ ಮೇಲೆ ದಾಳಿಯಾದ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು.

‘ಈಗ ಎಲ್ಲವೂ ಬದಲಾಗಿದೆ’

ಈ ವೇಳೆ ಸ್ಥಳೀಯರೊಬ್ಬರನ್ನು ಕರೆದು ಮಾತನಾಡಿದ ಗೃಹ ಸಚಿವ ಆರಗ ಜ್ಞಾನೇಂದ್ರ ಅವರು ವಾರ್ನಿಂಗ್ ನೀಡಿದರು.

Shimoga Nanjappa Hospital

‘ನಿಮ್ಮ ಹುಡುಗರಿಗೆಲ್ಲ ಕರೆದು ಹೇಳಿ. ಈಗ ಮುಂಚಿನ ಹಾಗೆಲ್ಲ ಇಲ್ಲ. ಹೀಗೆ ಮುಂದುವರೆದರೆ ಬಿಡೋದಿಲ್ಲ. ಹೇಗೆ ಬುದ್ದಿ ಕಲಿಸಬೇಕೋ ಹಾಗೆ ಕಲಿಸುತ್ತಾರೆ. ಗಲಾಟೆ ಮಾಡಿದವರು ಅನುಭವಿಸುತ್ತಾರೆ. ಈವರೆಗೂ ಜನ ತಾಳ್ಮೆಯಿಂದ ಇದ್ದರು. ಹರ್ಷನ ಕೊಲೆ ನಂತರ ಒಂದಿಲ್ಲೊಂದು ಘಟನೆ ನಡೆಯುತ್ತಿದೆ. ಕಾನೂನ ಕೈಗೆತ್ತಿಕೊಂಡರೆ ಪೊಲೀಸರು ಕಾರ್ಯಾಚರಣೆ ನಡೆಸುತ್ತಾರೆ’ ಎಂದು ವಾರ್ನಿಂಗ್ ನೀಡಿದರು.

VIDEO NEWS

ಇದನ್ನೂ ಓದಿ – ಕಾರು ಗಾಜು ಪೀಸ್ ಪೀಸ್ ಕೇಸ್, ಮತ್ತೂರಿಗೆ ಗೃಹ ಸಚಿವರ ಭೇಟಿ

ನಿಮ್ಮ ಕನಸಿನ ಮನೆ ಈಗ ನನಸು! 🏠

ಅತಿ ಕಡಿಮೆ ಬಡ್ಡಿ ದರದಲ್ಲಿ ಸುಲಭ ಗೃಹ ಸಾಲ


ಈಗಲೇ ಕರೆ ಮಾಡಿ
9972194422


 

About The Editor

ನಿತಿನ್‌ ಆರ್‌.ಕೈದೊಟ್ಲು

Nitin Kaidotlu - Editor - Shivamogga Live

© ಶಿವಮೊಗ್ಗ ಲೈವ್‌ : May 7, 2022

Leave a Comment