ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ
SHIVAMOGGA LIVE NEWS | RAINFALL | 16 ಮೇ 2022
ಶಿವಮೊಗ್ಗ ನಗರದಲ್ಲಿ ಗಾಳಿ, ಗುಡುಗು ಸಹಿತ ಜೋರು ಮಳೆ ಆರಂಭವಾಗಿದೆ. ದಿಢೀರ್ ಮಳೆಯಿಂದ ಜನಜೀವನ ಅಸ್ತವ್ಯಸ್ತಗೊಂಡಿದೆ.
ಚಂಡಮಾರುತದ ಪರಿಣಾಮ ಕಳೆದ ವಾರ ರಾಜ್ಯದ ವಿವಿಧೆಡೆ ಮಳೆಯಾಗಿತ್ತು. ಶಿವಮೊಗ್ಗ ಜಿಲ್ಲೆಯಾದ್ಯಂತ ಕೂಡ ಮಳೆ ಅಬ್ಬರಿಸಿತ್ತು. ಒಂದೆರಡು ದಿನ ಬಿಡುವಿನ ಬಳಿಕ ಪುನಃ ಮಳೆ ಶುರುವಾಗಿದೆ.
ಶಿವಮೊಗ್ಗ ನಗರದಲ್ಲಿ ಇವತ್ತು ಸಂಜೆಯಿಂದ ಜೋರು ಗಾಳಿ, ಗುಡುಗು ಸಹಿತ ಮಳೆ ಸುರಿಯುತ್ತಿದೆ. ಬಿಸಿಲ ಧಗೆಯಿಂದ ಕಂಗೆಟ್ಟಿದ್ದ ಜನರಿಗೆ ಮಳೆ ತುಸು ನೆಮ್ಮದಿ ಮೂಡಿಸಿದೆ. ಈ ಮಧ್ಯೆ ದಿಢೀರ್ ಮಳೆಯಿಂದಾಗಿ ಜನಜೀವನ ಅಸ್ತವ್ಯಸ್ತಗೊಂಡಿದೆ. ಸಂಜೆ ವೇಳೆ ವ್ಯಾಪಾರ, ವಾಹಿವಾಟಿಗೂ ತೊಂದರೆ ಉಂಟಾಗಿದೆ.
ಭದ್ರಾವತಿಯಲ್ಲೂ ವರುಣಾರ್ಭಟ
ಭದ್ರಾವತಿ ತಾಲೂಕಿನಲ್ಲಿಯು ಇವತ್ತು ಮಳೆ ಅಬ್ಬರಿಸಿದೆ. ಜೋರಿ ಮಳೆಯಿಂದಾಗಿ ಭದ್ರಾವತಿಯಲ್ಲಿಯು ಜನಜೀವನ ಅಸ್ತವ್ಯಸ್ತ ಉಂಟಾಯಿತು.
ಇನ್ನೂ ಐದು ದಿನ ಭಾರಿ ಮಳೆ
ಕರ್ನಾಟಕ, ಕೇರಳ, ತಮಿಳುನಾಡು ರಾಜ್ಯಗಳಲ್ಲಿ ಇನ್ನೂ ಐದು ದಿನ ಭಾರಿ ಮಳೆಯಾಗುವ ಸಂಭವವಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಕರ್ನಾಟಕದ ದಕ್ಷಿಣ ಒಳನಾಡಿನಲ್ಲಿ ಜೋರು ಮಳೆ ಸುರಿಯಲಿದೆ ಎಂದು ಮುನ್ನೆಚ್ಚರಿಕೆ ನೀಡಲಾಗಿದೆ.
ಪೂರ್ವ ಮತ್ತು ಪಶ್ಚಿಮ ಕರಾವಳಿಯಲ್ಲಿನ ಚಂಡಮಾರುತದ ಪರಿಣಾಮ ದಕ್ಷಿಣ ಭಾರತದಲ್ಲಿ ಮಳೆ ಸುರಿಯುತ್ತಿದೆ. ಇನ್ನು, ಈ ಭಾರಿ ನಿಗದಿಗಿಂತಲೂ ಮುಂಚೆಯೆ ಮುಂಗಾರು ಪ್ರವೇಶಿಸಲಿದೆ. ಹಾಗಾಗಿ ಈ ತಿಂಗಳ ಅಂತ್ಯದ ವೇಳೆ ಮುಂಗಾರು ಮಳೆ ಶುರುವಾಗುವ ಸಾದ್ಯತೆ ಇದೆ.
ಇದನ್ನೂ ಓದಿ – ಇವತ್ತಿನ ಎಲ್ಲಾ ಸುದ್ದಿಗಳನ್ನು ಓದಲು ಕ್ಲಿಕ್ ಮಾಡಿ
ನಿಮ್ಮೂರು, ನಿಮ್ಮ ಏರಿಯಾದ ಕಾರ್ಯಕ್ರಮಗಳು, ಸಮಸ್ಯೆಗಳು ಸುದ್ದಿಯಾಗಬೇಕಾ? ನೀವೇ ವರದಿಗಾರರಾಗಿ. ವಿಡಿಯೋ, ಫೋಟೊ ಮಾಡಿ 7411700200 ಮೊಬೈಲ್ ನಂಬರ್’ಗೆ ವಾಟ್ಸಪ್ ಮಾಡಿ. ನೆನಪಿರಲಿ, ಸುದ್ದಿ ಪ್ರಕಟಣೆಗೆ ನಾವು ಹಣ ಪಡೆಯುವುದಿಲ್ಲ.
LATEST NEWS
- ಶಿವಮೊಗ್ಗದಲ್ಲಿ ಅತಿ ಕೆಳಗೆ ಹಾರಿದ ವಿಮಾನ, ಎರಡು ಟ್ರಿಪ್ ಹಾರಾಟ, ಕಾರಣವೇನು?

- ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಿಗೆ ಚಾಕು ತೋರಿಸಿ ಬೆದರಿಕೆ ಹಾಕಿ ದರೋಡೆ, ಎಲ್ಲಿ? ಆಗಿದ್ದೇನು?

- ಎಸ್ಸೆಸ್ಸೆಲ್ಸಿ ಪರೀಕ್ಷೆ, 192 ವಿದ್ಯಾರ್ಥಿಗಳು ಗೈರು, ಹೇಗಿತ್ತು ಮೊದಲ ದಿನದ ಪರೀಕ್ಷೆ?

- ಕುಡಿಗೆರೆಯಲ್ಲಿ ಅಧಿಕಾರಿಗಳ ದಾಳಿ, ಮೂವರ ವಿರುದ್ಧ ದಾಖಲಾಯ್ತು ಕೇಸ್, ಕಾರಣವೇನು?

- ಶಿವಮೊಗ್ಗ ಜಿಲ್ಲೆಯಲ್ಲಿ ತಂಪು ತಂಪು ವಾತಾವರಣ, ಇವತ್ತೂ ಬರುತ್ತಾ ಮಳೆ?

About The Editor
ನಿತಿನ್ ಆರ್.ಕೈದೊಟ್ಲು















