ಶಿವಮೊಗ್ಗ ಲೈವ್.ಕಾಂ
ಶಿವಮೊಗ್ಗ ಜಿಲ್ಲೆಯ ನಂಬರ್ 1 ಸುದ್ದಿ ಮಾಧ್ಯಮ
ಶಿವಮೊಗ್ಗ ಲೈವ್.ಕಾಂ | 29 ಮಾರ್ಚ್ 2019
ಜನವರಿ 30ರಂದು ಟಿವಿಯಲ್ಲಿ ಯಶ್ ಅಭಿನಯನದ ಕೆಜಿಎಫ್ ಚಲನಚಿತ್ರ ಪ್ರಸಾರವಾಗುತ್ತಿದೆ. ಈ ವೇಳೆ ರಾಜಕೀಯ ಕುಮ್ಮಕ್ಕಿನಿಂದ ಕರೆಂಟ್ ತೆಗೆದರೆ ನಿಮ್ಮ ಕಚೇರಿಗೆ ಬೆಂಕಿ ಹಾಕುತ್ತೇವೆ. ನಿಮ್ಮ ಜೀವ ಹೋಗುತ್ತದೆ ಎಂದು ಪುಡಾರಿಗಳು ಕೆಇಬಿ ಹಾಗೂ ಮೆಸ್ಕಾಂ ಕಚೇರಿಗೆ ಬೆದರಿಕೆ ಪತ್ರ ಬರೆದಿದ್ದಾರೆ.
ಭದ್ರಾವತಿಯ ಕೆಇಬಿ ಕಚೇರಿಗೆ ಅಂಚೆ ಪತ್ರ ಬರೆಯಲಾಗಿದ್ದು, ಚಲನಚಿತ್ರ ಪ್ರಸಾರವಾಗುವ ಸಮಯದಲ್ಲಿ ಹೆಚ್.ಡಿ.ಕುಮಾರಸ್ವಾಮಿ, ಅಪ್ಪಾಜಿ ಕುಮ್ಮಕ್ಕಿನಿಂದ ಕರೆಂಟ್ ತೆಗೆದ್ರೆ ನಿಮ್ಮ ಆಫೀಸ್’ಗೆ ಬಾಂಬ್ ಫಿಕ್ಸ್ ಮಾಡ್ತೀವಿ ಎಂದು ಸಹ ಬೆದರಿಕೆ ಹಾಕಿದ್ದಾರೆ. ಶಿವಮೊಗ್ಗ ಕಚೇರಿಗೂ ಎಚ್ಚರಿಕೆ ನೀಡಿದ್ದೇವೆ. ಮಿಸ್ ಆಗಿ ಕರೆಂಟ್ ಹೋದರೆ ನಿಮ್ ಜೀವ ಹೋಗುತ್ತೆ. ಎಚ್ಚರಿಕೆ, ಇದರಲ್ಲಿ ರಾಜಕೀಯ ಬೇಡ ಎಂದು ಸಹ ಉಲ್ಲೇಖಿಸಿದ್ದಾರೆ. ಕೊನೆಯ ಸಾಲಿನಲ್ಲಿ ಪ್ರಜ್ಞಾ ನಾಗರಿಕರು, ಬಿಜೆಪಿ ಕಾರ್ಯಕರ್ತರು ಎಂದು ಸಹ ಇದೆ.
ಇನ್ನು, ಅನಾಮಧೇಯ ಪತ್ರ ಬಂದಿರುವ ಕುರಿತು, ಮೆಸ್ಕಾಂ ಎಇಇ ಸುರೇಶ್ ಅವರನ್ನು ಶಿವಮೊಗ್ಗ ಲೈವ್.ಕಾಂ ಸಂಪರ್ಕಿಸಿದಾಗ, ಗುರುವಾರವೇ ಈ ಸಂಬಂಧ ದೂರು ನೀಡಲು ಜಿಲ್ಲಾ ರಕ್ಷಣಾಧಿಕಾರಿ ಅವರನ್ನು ಸಂಪರ್ಕಿಸಿದೆವು. ಅವರು ಬ್ಯುಸಿ ಇದ್ದ ಕಾರಣ ಆಗಲಿಲ್ಲ. ಶುಕ್ರವಾರ ದೂರು ಸಲ್ಲಿಸಲಾಗುವುದು ಎಂದು ತಿಳಿಸಿದರು.
ಶಿವಮೊಗ್ಗ ಲೈವ್.ಕಾಂ ವಾಟ್ಸಪ್ ನಂಬರ್ | 7411700200
ಸುದ್ದಿಗಾಗಿ ಮೊಬೈಲ್ ನಂಬರ್ | 9964634494
ಈ ಮೇಲ್ | [email protected]
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422