ಹೊಳೆ ಬಸ್ ಸ್ಟಾಪ್ ಬಳಿ ತುಂಗಾ ನದಿಗೆ ಹಾರಿದ ಯುವಕ, ಶೋಧ ಕಾರ್ಯ

SHIVAMOGGA LIVE NEWS | SHIMOGA | 15 ಜುಲೈ 2022

ನಗರದ ಹೊಳೆ ಬಸ್ ಸ್ಟಾಪ್ ಸಮೀಪ ಯುವಕನೊಬ್ಬ ತುಂಗಾ ನದಿಗೆ (TUNGA RIVER) ಹಾರಿದ್ದಾನೆ ಎಂದು ಸ್ಥಳೀಯರು ಮಾಹಿತಿ ನೀಡಿದ್ದಾರೆ. ಇದರ ಆಧಾರದಲ್ಲಿ ಅಗ್ನಿಶಾಮಕ ಸಿಬ್ಬಂದಿ ಶೋಧ ಕಾರ್ಯ ನಡೆಸಿದರು.

Shimoga Nanjappa Hospital

ಗುರುವಾರ ಸಂಜೆ ವೇಳೆಗೆ ಯುವಕನೊಬ್ಬ ತುಂಗಾ ನದಿಗೆ ಹಾರಿದ್ದಾನೆ ಎಂದು ಸ್ಥಳೀಯರು ತಿಳಿಸಿದ್ದಾರೆ. ತುಂಬಿ ಹರಿಯುತ್ತಿರುವ ತುಂಗಾ ನದಿಯಲ್ಲಿ ಆತ ರಕ್ಷಣೆಗಾಗಿ ಕೈ ತೋರಿಸುತ್ತಿದ್ದ ಎಂದು ಮಾಹಿತಿ ನೀಡಿದ್ದರು.

ವಿಚಾರ ತಿಳಿಯುತ್ತಿದ್ದ ಹಾಗೆ ಶಿವಮೊಗ್ಗದ ಅಗ್ನಿಶಾಮಕ ಸಿಬ್ಬಂದಿ (FIRE DEPARTMENT) ತುಂಗಾ ಹೋಳೆಯಲ್ಲಿ ಶೋಧ ಕಾರ್ಯ ನಡೆಸಿದರು. ಹೊಳೆಗೆ ಹಾರಿದವನನ್ನು ಸಂತೋಷ್ (27) ಎಂದು ಹೇಳಲಾಗುತ್ತಿದೆ. ಸಂಜೆವರೆಗೂ ಹುಡುಕಾಟ ನಡೆಸಿದರೂ ಆತನ ಸುಳಿವು ಪತ್ತೆಯಾಗಿಲ್ಲ.

ಅಗ್ನಿಶಾಮಕ ಸಿಬ್ಬಂದಿ ಕಾರ್ಯಾಚರಣೆ ವೀಕ್ಷಿಸಲು ತುಂಗಾ ನದಿ ಸೇತುವೆ (TUNGA BRIDGE) ಮೇಲೆ ದೊಡ್ಡ ಸಂಖ್ಯೆಯಲ್ಲಿ ಜನ ಸೇರಿದ್ದರು.

ಇದನ್ನೂ ಓದಿ – ಭದ್ರಾವತಿ ಹೊಸ ಸೇತುವೆ ಸಂಪೂರ್ಣ ಜಲಾವೃತ, ಸೇತುವೆ ಮುಂದೆ ಬ್ಯಾರಿಕೇಡ್

ADVERTISEMENT

  • ಆರೋಗ್ಯ ತುರ್ತು ಸಂದರ್ಭದಲ್ಲಿ ಹಣಕಾಸು ಹೊಂದಿಸುವುದು ಸುಲಭವೇನಲ್ಲ. ಒಂದು ವೇಳೆ INSURANCE ಇದ್ದರೆ, ನಿರಮ್ಮಳವಾಗಿರಬಹುದು ಅಲ್ಲವೆ? ಈಗಲೆ INSURANCE ಮಾಡಿಸಿ. ಒಳ್ಳೆಯ INSURANCE PLANSಗಾಗಿ ಕರೆ ಮಾಡಿ – LIC LIFE INSURANCE – ಅನಿಲ್ 9538414151, ಪ್ರಶಾಂತ್ 9972194422
  • ಸುಂದರ ಮನೆ ಕಟ್ಟಬೇಕು, ಸ್ವಂತ ಮನೆಯಲ್ಲಿ ನೆಮ್ಮದಿಯ ಬದುಕು ಸಾಗಿಸಬೇಕು ಅನ್ನವು ಆಸೆ ಯಾರಿಗಿಲ್ಲ? ಇನ್ಯಾಕೆ ತಡ? ಮನೆ ಕಟ್ಟಲು LICಯಿಂದ HOUSING LOAN ಲಭ್ಯವಿದೆ. ಇವತ್ತೇ ಸಂಪರ್ಕಿಸಿ – ಪ್ರಶಾಂತ್ 9972194422

SHIVAMOGGA LIVE WHATSAPP

ನಿಮ್ಮೂರು, ನಿಮ್ಮ ಏರಿಯಾದ ಕಾರ್ಯಕ್ರಮಗಳು, ಸಮಸ್ಯೆಗಳು ಸುದ್ದಿಯಾಗಬೇಕಾ? ನೀವೇ ವರದಿಗಾರರಾಗಿ. ವಿಡಿಯೋ, ಫೋಟೊ ಮಾಡಿ 7411700200 ಮೊಬೈಲ್ ನಂಬರ್’ಗೆ ವಾಟ್ಸಪ್ ಮಾಡಿ. ನೆನಪಿರಲಿ, ಸುದ್ದಿ ಪ್ರಕಟಣೆಗೆ ನಾವು ಹಣ ಪಡೆಯುವುದಿಲ್ಲ.

Fire-Department-Search-For-Drowned-youth-in-Tunga-river

Leave a Comment