ಸವಳಂಗ ರಸ್ತೆ ಪಕ್ಕದ ಕೃಷಿ ನಗರದ ಬಳಿ ಪೊಲೀಸರಿಂದ ದಾಳಿ, ಮೂವರು ಅರೆಸ್ಟ್

ಶಿವಮೊಗ್ಗLIVE

ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ

SHIVAMOGGA LIVE NEWS | SHIMOGA | 22 ಜುಲೈ 2022

ಖಚಿತ ಮಾಹಿತಿ ಮೇರೆಗೆ ಶಿವಮೊಗ್ಗದ ಕೃಷಿ ನಗರದ (KRUSHI NAGARA) ಬಳಿ ಪೊಲೀಸರು ದಾಳಿ (POLICE RAID) ನಡೆಸಿ, ದರೋಡೆಗೆ ಹೊಂಚು ಹಾಕಿದ್ದ ಮೂವರನ್ನು ಬಂಧಿಸಿದ್ದಾರೆ. ಇಬ್ಬರು ಪರಾರಿಯಾಗಿದ್ದು ಅವರ ಶೋಧ ಕಾರ್ಯ ನಡೆಯುತ್ತಿದೆ. ಇನ್ನು, ದರೋಡೆಗೆ ಹೊಂಚು ಹಾಕಿದ್ದವರಿಂದ ಮಾರಕಾಸ್ತ್ರಗಳನ್ನು ವಶಕ್ಕೆ ಪಡೆಯಲಾಗಿದೆ.

Shimoga Nanjappa Hospital

ಅಜೆಯ (21), ಕೃಷ್ಣ (21), ಶಿವಕುಮಾರ (20) ಬಂಧಿತರು. ಯುವರಾಜ ನಾಯ್ಕ ಮತ್ತು ರಾಜು ನಾಯ್ಕ ಎಂಬುವವರು ಪರಾರಿಯಾಗಿದ್ದಾರೆ.

ಏನಿದು ಪ್ರಕರಣ?

ಸವಳಂಗ ರಸ್ತೆ (SAVALANGA ROAD) ಸಮೀಪದಲ್ಲಿರುವ ತ್ರಿಮೂರ್ತಿ ನಗರದಿಂದ (TRIMURTHY NAGARA) ಕೃಷಿ ನಗರಕ್ಕೆ ಹೋಗುವ ಮಾರ್ಗದಲ್ಲಿ ಗುಂಪೊಂದು, ಮಾರಕಾಸ್ತ್ರಗಳನ್ನು ಹಿಡಿದುಕೊಂಡು ಹೊಂಚು ಹಾಕುತ್ತಿದ್ದಾರೆ ಎಂದು ಪೊಲೀಸರಿಗೆ ಮಾಹಿತಿ ಲಭ್ಯವಾಗಿತ್ತು. ಅದರಂತೆ ಪೊಲೀಸರು ದಾಳಿ ನಡೆಸಿದ್ದಾರೆ. ಈ ವೇಳೆ ಪೊಲೀಸರನ್ನು ಕಂಡು ಗುಂಪಿನಲ್ಲಿದ್ದ ಇಬ್ಬರು ಪರಾರಿಯಾಗಿದ್ದಾರೆ. ಮೂವರನ್ನು ಬಂಧಿಸಲಾಗಿದೆ.

ಬಂಧಿತರ ಬಳಿ ಚಾಕು, ಮಚ್ಚು, ಕಬ್ಬಿಣದ ರಾಡ್, ದೊಣ್ಣೆ, ಖಾರದ ಪುಡಿ ಪತ್ತೆಯಾಗಿದೆ. ಇದನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಮದ್ಯಪಾನ, ಗಾಂಜಾ ಸೇವನೆಗೆ ಹಣದ ಅವಶ್ಯಕತೆ ಇದೆ. ಅದ್ದರಿಂದ ಹಣ ಅಥವಾ ಬಂಗಾರದ ಒಡವೆ ಹಾಕಿಕೊಂಡು ಬರುವವರನ್ನು ಅಡ್ಡಗಟ್ಟಿ ದರೋಡೆಗೆ ಹೊಂಚು ಹಾಕಿದ್ದಾಗಿ ಆರೋಪಿಗಳು ಹೇಳಿಕೆ ನೀಡಿದ್ದಾರೆ ಎಂದು ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಇನ್ಸ್ ಪೆಕ್ಟರ್ ಸಂಜೀವ್ ಕುಮಾರ್ ನೇತೃತ್ವದಲ್ಲಿ ದಾಳಿ (POLICE RAID) ನಡೆದಿದೆ. ಶಿವಮೊಗ್ಗ ಗ್ರಾಮಾಂತರ (RURAL POLICE STATION) ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ.

ಇದನ್ನೂ ಓದಿ – ಹೊಳೆಹೊನ್ನೂರು ಪೊಲೀಸ್ ಠಾಣೆ ಗೇಟ್ ಮುಂದೆ ಗ್ರಾಮಸ್ಥರ ಪ್ರತಿಭಟನೆ

ADVERTISEMENT

  • ಆರೋಗ್ಯ ತುರ್ತು ಸಂದರ್ಭದಲ್ಲಿ ಹಣಕಾಸು ಹೊಂದಿಸುವುದು ಸುಲಭವೇನಲ್ಲ. ಒಂದು ವೇಳೆ INSURANCE ಇದ್ದರೆ, ನಿರಮ್ಮಳವಾಗಿರಬಹುದು ಅಲ್ಲವೆ? ಈಗಲೆ INSURANCE ಮಾಡಿಸಿ. ಒಳ್ಳೆಯ INSURANCE PLANSಗಾಗಿ ಕರೆ ಮಾಡಿ – LIC LIFE INSURANCE – ಅನಿಲ್ 9538414151, ಪ್ರಶಾಂತ್ 9972194422
  • ಸುಂದರ ಮನೆ ಕಟ್ಟಬೇಕು, ಸ್ವಂತ ಮನೆಯಲ್ಲಿ ನೆಮ್ಮದಿಯ ಬದುಕು ಸಾಗಿಸಬೇಕು ಅನ್ನವು ಆಸೆ ಯಾರಿಗಿಲ್ಲ? ಇನ್ಯಾಕೆ ತಡ? ಮನೆ ಕಟ್ಟಲು LICಯಿಂದ HOUSING LOAN ಲಭ್ಯವಿದೆ. ಇವತ್ತೇ ಸಂಪರ್ಕಿಸಿ – ಪ್ರಶಾಂತ್ 9972194422

SHIVAMOGGA LIVE WHATSAPP

ನಿಮ್ಮೂರು, ನಿಮ್ಮ ಏರಿಯಾದ ಕಾರ್ಯಕ್ರಮಗಳು, ಸಮಸ್ಯೆಗಳು ಸುದ್ದಿಯಾಗಬೇಕಾ? ನೀವೇ ವರದಿಗಾರರಾಗಿ. ವಿಡಿಯೋ, ಫೋಟೊ ಮಾಡಿ 7411700200 ಮೊಬೈಲ್ ನಂಬರ್’ಗೆ ವಾಟ್ಸಪ್ ಮಾಡಿ. ನೆನಪಿರಲಿ, ಸುದ್ದಿ ಪ್ರಕಟಣೆಗೆ ನಾವು ಹಣ ಪಡೆಯುವುದಿಲ್ಲ.

ನಿಮ್ಮ ಕನಸಿನ ಮನೆ ಈಗ ನನಸು! 🏠

ಅತಿ ಕಡಿಮೆ ಬಡ್ಡಿ ದರದಲ್ಲಿ ಸುಲಭ ಗೃಹ ಸಾಲ

ಈಗಲೇ ಕರೆ ಮಾಡಿ
9972194422

About The Editor

ನಿತಿನ್‌ ಆರ್‌.ಕೈದೊಟ್ಲು

Nitin Kaidotlu - Editor - Shivamogga Live

© ಶಿವಮೊಗ್ಗ ಲೈವ್‌ : July 22, 2022

ಶಿವಮೊಗ್ಗ JNNCEಯಲ್ಲಿ ಹ್ಯಾಕ್‌ಫೆಸ್ಟ್‌, ತಮಿಳುನಾಡು, ಮೈಸೂರು, ದಾವಣಗೆರೆ ಕಾಲೇಜುಗಳಿಗೆ ಬಹುಮಾನ

ಶಿವಮೊಗ್ಗ JNNCEಯಲ್ಲಿ ಹ್ಯಾಕ್‌ಫೆಸ್ಟ್‌, ತಮಿಳುನಾಡು, ಮೈಸೂರು, ದಾವಣಗೆರೆ ಕಾಲೇಜುಗಳಿಗೆ ಬಹುಮಾನ

ಬಟ್ಟೆಯೊಳಗೆ ಚೇಳು ನುಗ್ಗಿದೆ ಅಂತಾ ಗೆಳತಿ ಮನೆಗೆ ಹೋದ ಮಹಿಳೆ, ಆಮೇಲೆ ಗೆಳತಿಗೆ ಕಾದಿತ್ತು ಶಾಕ್

ಬಟ್ಟೆಯೊಳಗೆ ಚೇಳು ನುಗ್ಗಿದೆ ಅಂತಾ ಗೆಳತಿ ಮನೆಗೆ ಹೋದ ಮಹಿಳೆ, ಆಮೇಲೆ ಗೆಳತಿಗೆ ಕಾದಿತ್ತು ಶಾಕ್

ಸೋಮಿನಕೊಪ್ಪದಲ್ಲಿ ಜಾನಪದ ಸಮ್ಮೇಳನ, ಅಹೋರಾತ್ರಿ ಕಾರ್ಯಕ್ರಮ, ಏನೇನೆಲ್ಲ ಇರಲಿದೆ?

ಸೋಮಿನಕೊಪ್ಪದಲ್ಲಿ ಜಾನಪದ ಸಮ್ಮೇಳನ, ಅಹೋರಾತ್ರಿ ಕಾರ್ಯಕ್ರಮ, ಏನೇನೆಲ್ಲ ಇರಲಿದೆ?

ವಿದ್ಯುತ್‌ ಬೇಲಿಗೆ ಹಸು ಬಲಿ, ಸಾಕ್ಷ್ಯ ನಾಶಕ್ಕೆ ನಡೆದಿತ್ತಾ ಪ್ಲಾನ್?‌

ವಿದ್ಯುತ್‌ ಬೇಲಿಗೆ ಹಸು ಬಲಿ, ಸಾಕ್ಷ್ಯ ನಾಶಕ್ಕೆ ನಡೆದಿತ್ತಾ ಪ್ಲಾನ್?‌

ತ್ಯಾವರೆಕೊಪ್ಪ ಮೃಗಾಲಯದಲ್ಲಿ ವೈದ್ಯೆ ಸಾವು, ಮಿನಿಸ್ಟರ್‌ ಗರಂ, ಖಡಕ್‌ ಸೂಚನೆ, ಏನದು?

ತ್ಯಾವರೆಕೊಪ್ಪ ಮೃಗಾಲಯದಲ್ಲಿ ವೈದ್ಯೆ ಸಾವು, ಮಿನಿಸ್ಟರ್‌ ಗರಂ, ಖಡಕ್‌ ಸೂಚನೆ, ಏನದು?

BREAKING NEWS – ಶಿವಮೊಗ್ಗದ ಸಿಂಹಧಾಮದಲ್ಲಿ ನೀರಾನೆ ದಾಳಿ ಡಾಕ್ಟರ್‌ ಸಾವು

BREAKING NEWS – ಶಿವಮೊಗ್ಗದ ಸಿಂಹಧಾಮದಲ್ಲಿ ನೀರಾನೆ ದಾಳಿ ಡಾಕ್ಟರ್‌ ಸಾವು

ಡಿ.ಬಿ.ಹಳ್ಳಿ ಕ್ರಾಸ್‌ನಲ್ಲಿ ಅಪಘಾತ, ಮಹಿಳೆಯ ಕೈ ಮೂಳೆ ಕಟ್‌, ಆಗಿದ್ದೇನು?

ಡಿ.ಬಿ.ಹಳ್ಳಿ ಕ್ರಾಸ್‌ನಲ್ಲಿ ಅಪಘಾತ, ಮಹಿಳೆಯ ಕೈ ಮೂಳೆ ಕಟ್‌, ಆಗಿದ್ದೇನು?

ಕೋಟೆ ದೇಗುಲದಲ್ಲಿ ದೇವರಿಗೆ ಮಹಾವಿಷ್ಣು ಅಲಂಕಾರ, ಪಂಚಾಂಗ ಶ್ರವಣ, ಇವತ್ತು ಯಾವ ಅಲಂಕಾರ ಇರಲಿದೆ?

ಕೋಟೆ ದೇಗುಲದಲ್ಲಿ ದೇವರಿಗೆ ಮಹಾವಿಷ್ಣು ಅಲಂಕಾರ, ಪಂಚಾಂಗ ಶ್ರವಣ, ಇವತ್ತು ಯಾವ ಅಲಂಕಾರ ಇರಲಿದೆ?

ಶಿವಮೊಗ್ಗದಲ್ಲಿ ಯುವಕನ ಮೇಲೆ ಬಿಯರ್‌ ಬಾಟಲಿಯಿಂದ ಅಟ್ಯಾಕ್‌, ಕಾರಣವೇನು?

ಶಿವಮೊಗ್ಗದಲ್ಲಿ ಯುವಕನ ಮೇಲೆ ಬಿಯರ್‌ ಬಾಟಲಿಯಿಂದ ಅಟ್ಯಾಕ್‌, ಕಾರಣವೇನು?

ಶಿವಮೊಗ್ಗ ಜಿಲ್ಲೆಯಲ್ಲಿ ಜಾಸ್ತಿಯಾಗಲಿದೆ ಬಿಸಿಲು, ರಾತ್ರಿ ವೇಳೆ ಮುಂದುವರೆಯುತ್ತಾ ತಂಪು?

ಶಿವಮೊಗ್ಗ ಜಿಲ್ಲೆಯಲ್ಲಿ ಜಾಸ್ತಿಯಾಗಲಿದೆ ಬಿಸಿಲು, ರಾತ್ರಿ ವೇಳೆ ಮುಂದುವರೆಯುತ್ತಾ ತಂಪು?

Leave a Comment