ಯಡಿಯೂರಪ್ಪ ನನಗೆ ಮಾಟ ಮಾಡಿಸಿದ್ದರಿಂದ ಮಂಕಾಗಿದ್ದೆ, ಈಗ ಮಾಟಕ್ಕೆ ಪ್ರತಿತಂತ್ರ ಮಾಡಿಸಿಕೊಂಡಿದ್ದೇನೆ ಗೊತ್ತಾ?

ನಿಮ್ಮೂರ ಸುದ್ದಿ ಕೆಲವೇ ನಿಮಿಷದಲ್ಲಿ ಸಾವಿರ ಸಾವಿರ ಜನರನ್ನು ತಲುಪುತ್ತೆ!

ಶಿವಮೊಗ್ಗ ಜಿಲ್ಲೆಯ ಯಾವುದೇ ಊರಿನ ಸುದ್ದಿಯನ್ನು ನಮಗೆ ಕಳುಹಿಸಬಹುದು. ನಮ್ಮ ವಾಟ್ಸಪ್‌ ನಂಬರ್ 7411700200.

ನಮ್ಮ ಗ್ರೂಪ್‌ ಸೇರಿಲು ಇಲ್ಲಿ ಕ್ಲಿಕ್‌ ಮಾಡಿ
NEWS HIGHLIGHTS

ಶಿವಮೊಗ್ಗ ಲೈವ್.ಕಾಂ | 03 ಏಪ್ರಿಲ್ 2019

➤ ಸುದ್ದಿಯ ಮುಂದಿನ 10 ಪ್ಯಾರಾಗಳು ಕೆಳಗಿವೆ.

ಬಿ.ಎಸ್.ಯಡಿಯೂರಪ್ಪ ತಮಗೆ ಮಾಟ ಮಾಡಿಸಿದ್ದಾರೆ. ಹಾಗಾಗಿ ನಾನು ಸ್ವಲ್ಪ ಮಂಕಾಗಿದ್ದೇನೆ ಅಂತಾ ಮಾಜಿ ಶಾಸಕ ಬೇಳೂರು ಗೋಪಾಲಕೃಷ್ಣ ಆರೋಪಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಬೇಳೂರು ಗೋಪಾಲಕೃಷ್ಣ, ತಾವು ಕಳೆದ ಕೆಲವು ದಿನಗಳಿಂದ ಮಂಕಾಗಿದ್ದು ನಿಜ. ಇದಕ್ಕೆ ಬಿ.ಎಸ್.ಯಡಿಯೂರಪ್ಪ ಕಾರಣ. ಅವರು ತಮ್ಮ ಮೇಲೆ ಮಾಟ ಮಾಡಿಸಿದ್ದಾರೆ. ಆದರೆ ತಾವೀಗ ಆ ಮಾಟಕ್ಕೆ ಪ್ರತಿತಂತ್ರ ರೂಪಿಸಿದ್ದು, ಇನ್ಯಾವ ಮಾಟಕ್ಕೂ ಹೆದರುವುದಿಲ್ಲ ಎಂದು ತಮ್ಮ ಕೈಯಲ್ಲಿ ಧರಿಸಿದ ಬಂಗಾರದ ವಾಚನ್ನು ಪತ್ರಕರ್ತರಿಗೆ ತೋರಿಸಿ ಯಡಿಯೂರಪ್ಪ ವಿರುದ್ಧ ವ್ಯಂಗ್ಯ ಮಾಡಿದರು.

ಅಡ್ವಾಣಿಯಂತೆ ಯಡಿಯೂರಪ್ಪ ಕೂಡ ಮೂಲೆಗುಂಪಾಗ್ತಾರೆ

ಲೋಕಸಭಾ ಚುನಾವಣೆಯ ನಂತರ ಯಡಿಯೂರಪ್ಪ ಅವರನ್ನು ಬಿಜೆಪಿಯೇ ಮೂಲೆ ಗುಂಪಾಗಿ ಮಾಡುವುದು ನೂರಕ್ಕೆ ನೂರರಷ್ಟು ನಿಜ. ಬಿಜೆಪಿ ರಾಷ್ಟ್ರೀಯ ನಾಯಕರು ಅಡ್ವಾಣಿಯಂತಹ ವ್ಯಕ್ತಿಗಳನ್ನೇ ಮೂಲೆಗುಂಪು ಮಾಡಿದ್ದಾರೆ. ಇನ್ನು ಬಿ.ಎಸ್. ಯಡಿಯೂರಪ್ಪನವರು ಯಾವಲೆಕ್ಕ. ಸದ್ಯದಲ್ಲೇ ಅವರು ಮೂಲೆಗುಂಪಾಗುತ್ತಾರೆ ಎಂದರು.

181218 Yedyurappa at Shivamogga BSY 1 1

ನಿಖಿಲ್ ಕುಮಾರ್ ಸ್ವಾಮಿ ಆಸ್ತಿ 9 ಕೋಟಿ ಎಂದು ಬಿಜೆಪಿಯವರು ಟೀಕಿಸುತ್ತಾರೆ. ಆದರೆ ಬಿಜೆಪಿ ಶಿವಮೊಗ್ಗ ಅಭ್ಯರ್ಥಿ ಬಿ.ವೈ.ರಾಘವೇಂದ್ರ ಆಸ್ತಿ ಕಳೆದ ಐದು ತಿಂಗಳಲ್ಲಿ 12 ಕೋಟಿ ಹೆಚ್ಚಾಗಿದೆ. ಈ ಆದಾಯ ಎಲ್ಲಿಂದ ಬಂತು ಎಂದು ಬೇಳೂರು ಗೋಪಾಲಕೃಷ್ಣ ಪ್ರಶ್ನಿಸಿದರು.  

ಸಿಡಿ ಇಟ್ಟುಕೊಂಡು ಬ್ಲಾಕ್ ಮೇಲ್

ಯಡಿಯೂರಪ್ಪ ಕುಟುಂಬಕ್ಕೆ ಸಂಬಂಸಿದ ಸಿಡಿ ಹರತಾಳು ಹಾಲಪ್ಪ ಹಾಗೂ ಕೆ.ಎಸ್.ಈಶ್ವರಪ್ಪ ಪಿಎ ಬಳಿ ಇದೆ. ಇದೇ ಕಾರಣದಿಂದ ಕಳೆದ ಬಾರಿ ರಾಘವೇಂದ್ರ ಹಾಗೂ ವಿಜಯೇಂದ್ರ ಅವರಿಗೆ ಬ್ಲಾಕ್ ಮೇಲ್ ಮಾಡಿ ಸಾಗರ ಕ್ಷೇತ್ರದಲ್ಲಿ ಹಾಲಪ್ಪ ಟಿಕೆಟ್ ಪಡೆದಿದ್ದಾರೆ. ಇದನ್ನು ಸಾಗರದಲ್ಲಿ ಮೊನ್ನೆ ನಡೆದ ಸಭೆಯಲ್ಲಿ ವಿಜಯೇಂದ್ರ ಅವರು ಪರೋಕ್ಷವಾಗಿ ಹೇಳಿದ್ದಾರೆ. ಯಡಿಯೂರಪ್ಪ ಶೋಭಾ ಕರಂದ್ಲಾಜೆ ಕೇರಳ ದೇವಸ್ಥಾನದಲ್ಲಿ ಮದುವೆಯಾಗಿದ್ದಾರೆ ಎಂದು ಈ ಹಿಂದೆ ಕೆಜೆಪಿ ಸಂಸ್ಥಾಪಕರೇ ಹೇಳಿದ್ದರು. ಅದೇ ಸಿಡಿ ಹಾಲಪ್ಪ ಅವರ ಬಳಿ ಇರಬೇಕು ಅಂತಾ ಬೇಳೂರು ಗೋಪಾಲಕೃಷ್ಣ ಆರೋಪಿಸಿದರು.

ಶಿವಮೊಗ್ಗ ಲೈವ್.ಕಾಂ ವಾಟ್ಸಪ್ ನಂಬರ್ | 7411700200

ಸುದ್ದಿಗಾಗಿ ಮೊಬೈಲ್ ನಂಬರ್ | 9964634494

ಈ ಮೇಲ್ | shivamoggalive@gmail.com

Leave a Comment