ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ
SHIVAMOGGA LIVE NEWS
ಶಿವಮೊಗ್ಗ | ಬೈಕ್’ನಲ್ಲಿ ತೆರಳುತ್ತಿದ್ದ ದಂಪತಿಯನ್ನು ಅಡ್ಡಗಟ್ಟಿ ಕಣ್ಣಿಗೆ ಖಾರದ ಪುಡಿ ಎರಚಿ, ಹಲ್ಲೆ (ASSAULT) ನಡೆಸಲಾಗಿದೆ. ಜಮೀನು ವಿಚಾರವಾಗಿ ಈ ಘಟನೆ ಸಂಭವಿಸಿದೆ ಎಂದು ಆರೋಪಿಸಿ ದೂರು ನೀಡಲಾಗಿದೆ.
ಶಿವಮೊಗ್ಗ ತಾಲೂಕು ಗಾಜನೂರು ಗ್ರಾಮದಲ್ಲಿ ಘಟನೆ ಸಂಭವಿಸಿದೆ. ಗ್ರಾಮದ ನಾಗರಾಜು ಮತ್ತು ಅವರ ಪತ್ನಿ ನಿರ್ಮಲಾ ಅವರ ಮೇಲೆ ಹಲ್ಲೆ ನಡೆಸಲಾಗಿದೆ.
ಜಮೀನು ವಿಚಾರವಾಗಿ ಗಲಾಟೆ
ಜಮೀನು ವಿಚಾರ ಸಂಬಂಧ ಸ್ಥಳೀಯರೊಬ್ಬರ ಜೊತೆಗೆ ನಾಗರಾಜು ಅವರಿಗೆ ಆಗಾಗ ಜಗಳವಾಗುತ್ತಿತ್ತು. ಇದೆ ಘಟನೆ ಸಂಬಂಧ ನಿಖಿಲ್ ಎಂಬಾತ ನಾಲ್ವರು ಅಪರಿಚಿತರ ಜೊತೆಗೆ ಹಲ್ಲೆ ನಡೆಸಿದ್ದಾನೆ ಎಂದು ದೂರಿನಲ್ಲಿ ತಿಳಿಸಲಾಗಿದೆ.
ನಾಗರಾಜು, ನಿರ್ಮಾಲಾ ದಂಪತಿ ಬೈಕಿನಲ್ಲಿ ತಮ್ಮ ಜಮೀನಿಗೆ ಹೋಗುವಾಗ, ನಿಖಿಲ್ ಮತ್ತು ಆತನ ಜೊತೆಗೆ ಬಂದಿದ್ದ ಇತರೆ ನಾಲ್ವರು ಅಡ್ಡಗಟ್ಟಿದ್ದಾರೆ. ನಿಖಿಲ್ ತನ್ನ ಜೇಬಿನಲ್ಲಿದ್ದ ಖಾರದ ಪುಡಿಯನ್ನು ನಾಗರಾಜು ಅವರ ಕಣ್ಣಿಗೆ ಎರಚಿ, ಹಲ್ಲೆ ನಡೆಸಿದ್ದಾನೆ. ಈ ವೇಳೆ ನಾಗರಾಜು ಅವರ ಬೆನ್ನಿಗೆ ಪೆಟ್ಟು ಬಿದ್ದಿದೆ. ನಿರ್ಮಲಾ ಅವರ ಮೇಲೂ ಹಲ್ಲೆ ನಡೆಸಲಾಗಿದೆ ಎಂದು ಆರೋಪಿಸಲಾಗಿದೆ.
ಸ್ಥಳೀಯರು ಬಂದು ಜಗಳ ಬಿಡಿಸಿದ್ದಾರೆ. ತೀವ್ರ ಗಾಯಗೊಂಡಿದ್ದ ನಾಗರಾಜು ಅವರನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಘಟನೆ ಸಂಬಂಧ ತುಂಗಾ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
LATEST NEWS
- ಶಿವಮೊಗ್ಗ ವಿಮಾನ ನಿಲ್ದಾಣ, ಮಹತ್ವದ ಟೆಸ್ಟ್ನಲ್ಲಿ ಪಾಸ್, DoVR ಕೆಲಸ ಶುರು, ಏನಿದು? ಪ್ರಯೋಜನ ಏನು?

- ಶಿವಮೊಗ್ಗ ಜಿಲ್ಲೆಯ ಎಲ್ಲ ತಾಲೂಕುಗಳಲ್ಲಿಯು ಹೆಚ್ಚಿದ ತಾಪಮಾನ? ಇವತ್ತು ಎಷ್ಟಿರುತ್ತೆ?

- ಭಟ್ಕಳದ ಮಹಿಳೆ ಸೇರಿ ನಾಲ್ವರು ನಗರ ಠಾಣೆ ಪೊಲೀಸರ ಬಲೆಗೆ, ಕಾರಣವೇನು? ಏನೇನೆಲ್ಲ ಸಿಕ್ತು?

- ಇಂದಿನ ಪಂಚಾಂಗ – ಯಾವ್ಯಾವ ಸಮಯ ಯಾವಾಗಿದೆ?

- ಶಿವಮೊಗ್ಗದ ದೇಗುಲಗಳಿಗೆ ಸಂಜೆ ಬಳಿಕ ಹೆಚ್ಚಿದ ಭಕ್ತರು, ವಿಶೇಷ ಪೂಜೆ

About The Editor
ನಿತಿನ್ ಆರ್.ಕೈದೊಟ್ಲು






