ಇವತ್ತು ಭದ್ರಾವತಿ ಹಿಂದೂ ಮಹಾಸಭಾ ಗಣಪತಿ ರಾಜಬೀದಿ ಉತ್ಸವ, ಸಿದ್ಧತೆಗಳೇನು? ಭದ್ರತೆ ಹೇಗಿದೆ?

ಶಿವಮೊಗ್ಗLIVE

ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ

 SHIVAMOGGA LIVE NEWS 

BHADRAVATHI | ಹಿಂದೂ ಮಹಾಸಭಾ (HINDU MAHASABHA) ಗಣಪತಿ ರಾಜಬೀದಿ (PROCESSION) ಉತ್ಸವಕ್ಕೆ ಅದ್ಧೂರಿ ತಯಾರಿಯಾಗಿದೆ. ಭದ್ರಾವತಿ ನಗರ ಕೇಸರಿಮಯವಾಗಿದೆ. ಇನ್ನು, ಭದ್ರತೆಗಾಗಿ ದೊಡ್ಡ ಸಂಖ್ಯೆಯ ಪೊಲೀಸರನ್ನು (POLICE) ನಿಯೋಜನೆ ಮಾಡಲಾಗಿದೆ.

Shimoga Nanjappa Hospital

ಹಿಂದೂ ಮಹಾಸಭಾ ಮತ್ತು ಹಿಂದೂ ರಾಷ್ಟ್ರ ಸೇನಾ ವಿನಾಯಕ ಸೇವಾ ಸಮಿತಿ ವತಿಯಿಂದ ಹೊಸಮನೆಯ ತಮಿಳು ಶಾಲೆ ಬಳಿ ಗಣಪತಿ ಮೂರ್ತಿಯನ್ನು ಪ್ರತಿಷ್ಠಾಪಿಸಲಾಗಿದೆ. ಇವತ್ತು ಗಣಪತಿಯ ಮೆರವಣಿಗೆ ನಡೆಯಲಿದೆ.

50ನೇ ವರ್ಷದ ಗಣೇಶೋತ್ಸವ

ಈ ಭಾರಿ 50ನೇ ವಾರ್ಷಿಕೋತ್ಸವವಾಗಿದೆ. ಹಾಗಾಗಿ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಲಾಗಿತ್ತು. ಇವತ್ತು ರಾಜಬೀದಿ ಉತ್ಸವವನ್ನು ಅದ್ಧೂರಿಯಾಗಿ ನೆರವೇರಿಸಲು ಯೋಜಿಸಲಾಗಿದೆ. ಈಗಾಗಲೆ ಮೆರವಣಿಗೆ ಸಾಗುವ ಹಾದಿ ಉದ್ದಕ್ಕೂ ಅಲಂಕಾರ ಮಾಡಲಾಗಿದ್ದು, ಸಿದ್ಧತೆಗಳು ಪೂರ್ಣಗೊಂಡಿವೆ.

ಮಹಾದ್ವಾರಗಳ ನಿರ್ಮಾಣ

ಹಿಂದೂ ಮಹಾಸಭಾ ಗಣಪತಿ ಮೆರವಣಿಗೆ ಸಾಗುವ ಮಾರ್ಗದಲ್ಲಿ ಆಕರ್ಷಣೀಯ ಮಹಾದ್ವಾರ ನಿರ್ಮಾಣ ಮಾಡಲಾಗಿದೆ. ಅಂಬೇಡ್ಕರ್ ವೃತ್ತ, ಮಾಧವಾಚಾರ್ ವೃತ್ತಗಳಲ್ಲಿ ಕೋಟೆಯ ಮಾದರಿಯ ಮಹಾದ್ವಾರಗಳನ್ನು ನಿರ್ಮಿಸಲಾಗಿದೆ.

Ganesh Birthday

ಲಡ್ಡು, ಮೈಸೂರು ಪಾಕ್

ಮೆರವಣಿಗೆಯಲ್ಲಿ ಪಾಲ್ಗೊಳ್ಳುವವರು ಮತ್ತು ಸಾರ್ವಜನಿಕರಿಗೆ ವಿತರಿಸಲು 25 ಸಾವಿರ ಲಡ್ಡು ಸಿದ್ಧಪಡಿಸಲಾಗಿದೆ. ಕೇಸರಿ ಪಡೆ ಸಂಘಟನೆ ವತಿಯಿಂದ ಲಡ್ಡು ತಯಾರಿಸಲಾಗಿದೆ. ಇನ್ನು, ಸಾರ್ಥಕ ಸಮಾಜಮುಖಿ ಟ್ರಸ್ಟ್ ವತಿಯಿಂದ ಅನ್ನಸಂತರ್ಪಣೆ ಮತ್ತು 10 ಸಾವಿರ ಮೈಸೂರು ಪಾಕ್ ವಿತರಣೆ ಮಾಡಲು ಸಿದ್ಧತೆ ಮಾಡಿಕೊಳ್ಳಲಾಗಿದೆ.

ಬಿಗಿ ಬಂದೋಬಸ್ತ್, ಪೊಲಿಸ್ ಭದ್ರಕೋಟೆ

ಇತ್ತ ಹಿಂದೂ ಪರ ಸಂಘಟನೆ ಕಾರ್ಯಕರ್ತರು ಅದ್ಧೂರಿ ರಾಜಬೀದಿ (PROCESSION) ಉತ್ಸವಕ್ಕೆ ಸಿದ್ಧತೆ ಮಾಡಿಕೊಂಡಿದ್ದರೆ, ಪೊಲೀಸ್ ಇಲಾಖೆ ಭದ್ರತೆಗೆ ಹೆಚ್ಚಿನ ಸಿಬ್ಬಂದಿ ನಿಯೋಜನೆ ಮಾಡಿದೆ.

ಒಬ್ಬರು ಹೆಚ್ಚುವರಿ ಪೊಲೀಸ್ ಅಧೀಕ್ಷಕರು, 9 ಡಿವೈಎಸ್’ಪಿ, 18 ಇನ್ಸ್ ಪೆಕ್ಟರ್’ಗಳು, 27 ಸಬ್ ಇನ್ಸ್ ಪೆಕ್ಟರ್’ಗಳು, 1000 ಪೊಲೀಸ್ ಸಿಬ್ಬಂದಿ, 400 ಗೃಹ ರಕ್ಷಕ ದಳ ಸಿಬ್ಬಂದಿ, 1 ಆರ್.ಎ.ಎಫ್ ಕಂಪನಿ (200 ಅಧಿಕಾರಿ ಮತ್ತು ಸಿಬ್ಬಂದಿ), 6 ಕೆ.ಎಸ್.ಆರ್.ಪಿ (120 ಅಧಿಕಾರಿ ಮತ್ತು ಸಿಬ್ಬಂದಿ), 6 ಡಿಎಆರ್ ತುಕಡಿ (48 ಅಧಿಕಾರಿ ಮತ್ತು ಸಿಬ್ಬಂದಿ) ನಿಯೋಜನೆ ಮಾಡಲಾಗಿದೆ ಎಂದು ಜಿಲ್ಲಾ ಪೊಲೀಸ್ ಇಲಾಖೆ ಪ್ರಕಟಣೆಯಲ್ಲಿ ತಿಳಿಸಿದೆ.

TODAY NEWS PARAGRAPH

ಇದನ್ನೂ ಓದಿ – ಶಿವಮೊಗ್ಗ ನಗರ ಕೇಸರಿಮಯ, ಹೇಗಿದೆ ಈ ಭಾರಿಯ ಅಲಂಕಾರ?

ADVERTISEMENT

  • ಆರೋಗ್ಯ ತುರ್ತು ಸಂದರ್ಭದಲ್ಲಿ ಹಣಕಾಸು ಹೊಂದಿಸುವುದು ಸುಲಭವೇನಲ್ಲ. ಒಂದು ವೇಳೆ INSURANCE ಇದ್ದರೆ, ನಿರಮ್ಮಳವಾಗಿರಬಹುದು ಅಲ್ಲವೆ? ಈಗಲೆ INSURANCE ಮಾಡಿಸಿ. ಒಳ್ಳೆಯ INSURANCE PLANSಗಾಗಿ ಕರೆ ಮಾಡಿ – LIC LIFE INSURANCE – ಅನಿಲ್ 9538414151, ಪ್ರಶಾಂತ್ 9972194422
  • ಸುಂದರ ಮನೆ ಕಟ್ಟಬೇಕು, ಸ್ವಂತ ಮನೆಯಲ್ಲಿ ನೆಮ್ಮದಿಯ ಬದುಕು ಸಾಗಿಸಬೇಕು ಅನ್ನವು ಆಸೆ ಯಾರಿಗಿಲ್ಲ? ಇನ್ಯಾಕೆ ತಡ? ಮನೆ ಕಟ್ಟಲು LICಯಿಂದ HOUSING LOAN ಲಭ್ಯವಿದೆ. ಇವತ್ತೇ ಸಂಪರ್ಕಿಸಿ – ಪ್ರಶಾಂತ್ 9972194422

SHIVAMOGGA LIVE WHATSAPP

ನಿಮ್ಮೂರು, ನಿಮ್ಮ ಏರಿಯಾದ ಕಾರ್ಯಕ್ರಮಗಳು, ಸಮಸ್ಯೆಗಳು ಸುದ್ದಿಯಾಗಬೇಕಾ? ನೀವೇ ವರದಿಗಾರರಾಗಿ. ವಿಡಿಯೋ, ಫೋಟೊ ಮಾಡಿ 7411700200 ಮೊಬೈಲ್ ನಂಬರ್’ಗೆ ವಾಟ್ಸಪ್ ಮಾಡಿ. ನೆನಪಿರಲಿ, ಸುದ್ದಿ ಪ್ರಕಟಣೆಗೆ ನಾವು ಹಣ ಪಡೆಯುವುದಿಲ್ಲ.

ನಿಮ್ಮ ಕನಸಿನ ಮನೆ ಈಗ ನನಸು! 🏠

ಅತಿ ಕಡಿಮೆ ಬಡ್ಡಿ ದರದಲ್ಲಿ ಸುಲಭ ಗೃಹ ಸಾಲ


ಈಗಲೇ ಕರೆ ಮಾಡಿ
9972194422


 

About The Editor

ನಿತಿನ್‌ ಆರ್‌.ಕೈದೊಟ್ಲು

Nitin Kaidotlu - Editor - Shivamogga Live

© ಶಿವಮೊಗ್ಗ ಲೈವ್‌ : September 8, 2022

Leave a Comment