ಶಿವಮೊಗ್ಗ – ಭದ್ರಾವತಿ ನಡುವೆ ಇರುವುದು ಹೈವೆ ರಸ್ತೆನೋ, ಯಮಲೋಕದ ದಾರಿನೋ?

ಶಿವಮೊಗ್ಗLIVE

ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ

 SHIVAMOGGA LIVE NEWS 

SHIMOGA | ಹೆಸರಿಗೆ ಇದು ರಾಷ್ಟ್ರೀಯ ಹೆದ್ದಾರಿ (HIGHWAY). ಇತ್ತೀಚಿಗೆ ಯಮ ಲೋಕದ ಹೈವೇಯಾಗಿದೆ. ಇಲ್ಲಿ ಓಡಾಡುವವರು ಜೀವಂತವಾಗಿ ಮನೆ ಸೇರುವುದೆ ದೊಡ್ಡ ಸಾಹಸವಾಗಿದೆ.

Shimoga Nanjappa Hospital

ರಾಷ್ಟ್ರೀಯ ಹೆದ್ದಾರಿ ಬರುತ್ತದೆ. ಶಿವಮೊಗ್ಗ – ಭದ್ರಾವತಿ ನಡುವೆ 15 ನಿಮಿಷದಲ್ಲಿ ಸಂಚಾರ ಮಾಡಬಹುದು ಎಂದು ಖುಷಿಯಾಗಿದ್ದ ಜನರೀಗ, ಯಾಕಾದರೂ ಬಂತೋ ಎಂದು ಹಿಡಿಶಾಪ ಹಾಕುತ್ತಿದ್ದಾರೆ.

5 ವರ್ಷದಿಂದ ರಸ್ತೆಗೆ ತೇಪೆ ಹಾಕಿದ್ದು ಬಿಟ್ಟರೆ ಒಂದು ಲೇಯರ್ ಡಾಂಬರ್ ಬಿದ್ದಿಲ್ಲ. 16 ಕಿ.ಮೀ ರಸ್ತೆ ವಾಹನ ಸವಾರರಿಗೆ ನರಕ ದರ್ಶನ ಮಾಡಿಸುತ್ತಿದೆ. ಮಳೆಗಾಲಕ್ಕೆ ಮುನ್ನವೇ ಗುಂಡಿ ಬಿದ್ದಿದ್ದ ಶಿವಮೊಗ್ಗ-ಭದ್ರಾವತಿ ನಡುವಿನ ರಸ್ತೆ (HIGHWAY) ಈಗ ಸಂಪೂರ್ಣ ಕಿತ್ತು ಹೋಗಿದೆ. ಗುಂಡಿಗಳ ನಡುವೆ ರಸ್ತೆ ಕಾಣುತ್ತಿದೆ.

ತುಮಕೂರಿನಿಂದ ಶಿವಮೊಗ್ಗವರೆಗೆ ಚತುಷ್ಪಥ ರಸ್ತೆ ಕಾಮಗಾರಿ ಆರಂಭವಾಗಿದ್ದು ಇನ್ನೇನು ಅತ್ಯುತ್ತಮ ರಸ್ತೆ ಸೇವೆ ಸಿಗುತ್ತದೆ ಎಂಬ ಜನರ ನಿರೀಕ್ಷೆ ಹುಸಿಯಾಗಿದೆ. ಗುಂಡಿ ಬಿದ್ದರೆ ಬರೀ ತೇಪೆ ಹಾಕಿ ಹಾಕಿ ಈಗ ಮೂಲ ರಸ್ತೆ ಉಳಿದೇ ಇಲ್ಲ. 16 ಕಿ.ಮೀ ರಸ್ತೆಯಲ್ಲಿ ಲೆಕ್ಕಾ ಹಾಕಲು ಕಷ್ಟವಾಗುವಷ್ಟು ಗುಂಡಿಗಳಿವೆ.

ಯಡಿಯೂರಪ್ಪ ಅವರ ಕನಸಿನ ಯೋಜನೆ

2010ರಲ್ಲಿ ಶಿವಮೊಗ್ಗ-ಭದ್ರಾವತಿ ನಡುವೆ ಕೈಗಾರಿಕೆ, ಐಟಿ ಪಾರ್ಕ್, ಗಾರ್ಮೆಂಟ್ಸ್’ಗೆ ಹೋಗಿ ಬರಲು ಜನರಿಗೆ ಅನುಕೂಲವಾಗುವಂತೆ ಚತುಷ್ಪಥ ರಸ್ತೆ ಅಭಿವೃದ್ಧಿ ಮಾಡಲಾಗಿತ್ತು. ಅಲ್ಲಿಂದ ನಾಲ್ಕೈದು ವರ್ಷ ಮಾತ್ರ ರಸ್ತೆ ನಿರ್ವಹಣೆ ಮಾಡಲಾಗಿತ್ತು. ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾಗಿದ್ದಾಗ ಈ ರಸ್ತೆ ನಿರ್ಮಾಣ ಮಾಡಲಾಗಿತ್ತು. ಇದು ಅವರ ಕನಸಿನ ಯೋಜನೆಗಳಲ್ಲಿ ಒಂದಾಗಿತ್ತು.

Shimoga Bhadravathi Highway Road

ಈ ರಸ್ತೆಯನ್ನು ರಾಷ್ಟ್ರೀಯ ಹೆದ್ದಾರಿಯಾಗಿ (HIGHWAY) ಮೇಲ್ದರ್ಜೆಗೆ ಏರಿಸಿ ತುಮಕೂರಿನಿಂದ ಶಿವಮೊಗ್ಗವರೆಗೂ ಚತುಷ್ಪಥ ರಸ್ತೆ ಮಾಡಲು ಯೋಜನೆ ಸಿದ್ಧವಾಗಿತ್ತು. ಭೂಸ್ವಾಧೀನ ಪ್ರಕ್ರಿಯೆ ವಿಳಂಬವಾದ ಹಿನ್ನೆಲೆ ಕಾಮಗಾರಿ ಕುಂಟುತ್ತಾ ಸಾಗಿದೆ. ಬಿ.ಎಸ್.ಯಡಿಯೂರಪ್ಪ ಅವರು ನಾಲ್ಕನೇ ಬಾರಿ ಸಿಎಂ ಆದ ಮೇಲೆ ಕಾಮಗಾರಿ ವೇಗ ನೀಡಿದರು. ಆದರೆ ರಾಷ್ಟೀಯ ಹೆದ್ದಾರಿ ಬರುತ್ತದೆ ಎಂದು ಜನ ಖುಷಿಪಡಬೇಕೋ, ಇಂತಹ ರಸ್ತೆಯಲ್ಲಿ ಓಡಾಡುವಂತಾಗಿದೆಯಲ್ಲ ಎಂದು ದುಃಖ ಪಡಬೇಕೋ ತಿಳಿಯದಾಗಿದೆ.

ಕೆಲಸ ಶುರುವಾಗೋದು ಯಾವಾಗ?

ಚತುಷ್ಪಥ ರಸ್ತೆ ಕಾಮಗಾರಿಗೆ ಬೇಕಾದ ಭೂಸ್ವಾಧೀನ ಪ್ರಕ್ರಿಯೆ ಪೂರ್ಣಗೊಂಡಿಲ್ಲ. ಜನವಸತಿ ಪ್ರದೇಶಗಳಲ್ಲಿ ಕಟ್ಟಡಗಳನ್ನು ತೆರವು ಮಾಡಿಲ್ಲ. ಜೇಡಿಕಟ್ಟೆ, ನಿಧಿಗೆ, ಮಾಚೇನಹಳ್ಳಿ, ಹರಿಗೆ, ಮಲವಗೊಪ್ಪದಲ್ಲಿ ಈವರೆಗೆ ಶೇ.10ರಷ್ಟು ಕಟ್ಟಡಗಳನ್ನು ತೆರವು ಮಾಡಿಲ್ಲ. ಭೂಸ್ವಾಧೀನ ಪ್ರಕ್ರಿಯೆ ಪೂರ್ಣಗೊಳ್ಳುವವರೆಗೂ ಒಂದು ಬದಿ ರಸ್ತೆ ಕಾಮಗಾರಿ ಆರಂಭವಾಗುವುದಿಲ್ಲ.

Pot hole in Shimoga Bhadravathi Highway

ಭೂಸ್ವಾಧೀನ ಪೂರ್ಣಗೊಂಡ ಬಳಿಕ ಕಾಮಗಾರಿ ಮುಗಿಸಲು ಕನಿಷ್ಠ ಒಂದು ವರ್ಷವಾದರೂ ಬೇಕು. ಅಲ್ಲಿವರೆಗೂ ಶಿವಮೊಗ್ಗ – ಭದ್ರಾವತಿ ಅಷ್ಟೇ ಅಲ್ಲದೆ ಬೇರೆ ಜಿಲ್ಲೆಗಳಿಂದ ಬರುವ ಜನ ಇದೇ ನರಕದಲ್ಲಿ ಓಡಾಡಬೇಕಾ ಎಂಬುದು ನಾಗರಿಕರ ಪ್ರಶ್ನೆ.

ಅಪಘಾತ ತಾಣ

ಗುಂಡಿ ತಪ್ಪಿಸಲು ಹೋಗಿ ಅನೇಕ ಅಪಘಾತಗಳಾಗುತ್ತಿದ್ದು ಇದಕ್ಕೆ ಕೊನೆಯೇ ಇಲ್ಲದಂತಾಗಿದೆ. ಬೈಕ್ ಸವಾರರು ಬಿದ್ದು ಗಾಯ ಮಾಡಿಕೊಳ್ಳುತ್ತಿದ್ದಾರೆ. ಭಾನುವಾರ ಗುಂಡಿ ತಪ್ಪಿಸುವ ಭರದಲ್ಲಿ ಕೆಎಸ್‌ಆರ್‌ಟಿಸಿ ಬಸ್ ಹರಿಗೆ ಬಳಿ ಡಿವೈಡರ್ ಏರಿ ನಿಂತಿತ್ತು. ಅದೃಷ್ಟಾವಷತ್ ಪ್ರಯಾಣಿಕರಿಗೆ ತೊಂದರೆಯಾಗಿಲ್ಲ. ಪ್ರತಿದಿನ ಓಡಾಡುವ ಬೈಕ್ ಸವಾರರಿಗೆ ಬೆನ್ನು ನೋವು, ಸೊಂಟ ನೋವು ಹೆಚ್ಚಾಗುತ್ತಿದೆ. ವಾಹನಗಳು ರಿಪೇರಿಗೆ ಬರುತ್ತಿವೆ. ಸಮಸ್ಯೆಗಳಿಗೆ ಕೊನಯೇ ಇಲ್ಲದಂತಾಗಿದೆ.

ಕ್ಲಿಕ್ ಮಾಡಿ ಇದನ್ನೂ ಓದಿ ಶಿವಮೊಗ್ಗ – ಭದ್ರಾವತಿ ಹೈವೇ ರಸ್ತೆಯಲ್ಲಿ ತಪ್ಪಿದ ದುರಂತ, ಆಗಿದ್ದೇನು?

Pot Hole in Shimoga Bhadravathi Highway

ಗುಂಡಿಗಳಿಗೆ ತೇಪೆ ನಿಲ್ಲಲ್ಲ

ಗುಂಡಿಗಳನ್ನು ಮುಚ್ಚಲು ತೇಪೆ ಹಾಕುತ್ತಿದ್ದರೂ ಅವುಗಳು ತಡೆಯುತ್ತಿಲ್ಲ. ಒಂದು ಸಣ್ಣ ಮಳೆ ಬಂದು ವಾಹನ ಓಡಾಡಿದರೆ ಸಂಪೂರ್ಣ ಕಿತ್ತು ಬರುತ್ತಿದೆ. ಹೈವೇ ವತಿಯಿಂದ ಕಾಂಕ್ರೀಟ್ ಮಿಕ್ಸ್, ಜಲ್ಲಿ ಪೌಡರ್, ಡಾಂಬರ್ ಹಾಕಲಾಗುತ್ತಿದೆ. ಅದು ಏನೂ ಉಪಯೋಗವಾಗುತ್ತಿಲ್ಲ. ಲಾರಿ, ಬಸ್‌ಗಳು ಯಾವುದೇ ಅಡಚಣೆ ಇಲ್ಲದೆ ಓಡಾಡುತ್ತಿದ್ದು ಬೈಕ್, ಕಾರು ಸವಾರರು ನಾಟ್ಯ ಮಾಡಬೇಕಿದೆ.

Shimoga Bhadravathi Highway

Shimoga Bhadravathi Highway

Shimoga Nanjappa Hospital

Shimoga Bhadravathi Highway

Shimoga Bhadravathi Highway

Shimoga Bhadravathi Highway

Shimoga Bhadravathi Highway

Shimoga Bhadravathi Highway

Shimoga Bhadravathi Highway

Sarji Hospital

ಕ್ಲಿಕ್ ಮಾಡಿ ಇದನ್ನೂ ಓದಿ ಶಿವಮೊಗ್ಗದ ಮಹಿಳೆಯರೆ ಹುಷಾರ್, ಮನೆಯಲ್ಲಿ ಒಬ್ಬರೆ ಇದ್ದಾಗ ನುಗ್ಗಬಹುದು ಇಂತಹ ಖದೀಮರು

ADVERTISEMENT

  • ಆರೋಗ್ಯ ತುರ್ತು ಸಂದರ್ಭದಲ್ಲಿ ಹಣಕಾಸು ಹೊಂದಿಸುವುದು ಸುಲಭವೇನಲ್ಲ. ಒಂದು ವೇಳೆ INSURANCE ಇದ್ದರೆ, ನಿರಮ್ಮಳವಾಗಿರಬಹುದು ಅಲ್ಲವೆ? ಈಗಲೆ INSURANCE ಮಾಡಿಸಿ. ಒಳ್ಳೆಯ INSURANCE PLANSಗಾಗಿ ಕರೆ ಮಾಡಿ – LIC LIFE INSURANCE – ಅನಿಲ್ 9538414151, ಪ್ರಶಾಂತ್ 9972194422
  • ಸುಂದರ ಮನೆ ಕಟ್ಟಬೇಕು, ಸ್ವಂತ ಮನೆಯಲ್ಲಿ ನೆಮ್ಮದಿಯ ಬದುಕು ಸಾಗಿಸಬೇಕು ಅನ್ನವು ಆಸೆ ಯಾರಿಗಿಲ್ಲ? ಇನ್ಯಾಕೆ ತಡ? ಮನೆ ಕಟ್ಟಲು LICಯಿಂದ HOUSING LOAN ಲಭ್ಯವಿದೆ. ಇವತ್ತೇ ಸಂಪರ್ಕಿಸಿ – ಪ್ರಶಾಂತ್ 9972194422

SHIVAMOGGA LIVE WHATSAPP

ನಿಮ್ಮೂರು, ನಿಮ್ಮ ಏರಿಯಾದ ಕಾರ್ಯಕ್ರಮಗಳು, ಸಮಸ್ಯೆಗಳು ಸುದ್ದಿಯಾಗಬೇಕಾ? ನೀವೇ ವರದಿಗಾರರಾಗಿ. ವಿಡಿಯೋ, ಫೋಟೊ ಮಾಡಿ 7411700200 ಮೊಬೈಲ್ ನಂಬರ್’ಗೆ ವಾಟ್ಸಪ್ ಮಾಡಿ. ನೆನಪಿರಲಿ, ಸುದ್ದಿ ಪ್ರಕಟಣೆಗೆ ನಾವು ಹಣ ಪಡೆಯುವುದಿಲ್ಲ.

ನಿಮ್ಮ ಕನಸಿನ ಮನೆ ಈಗ ನನಸು! 🏠

ಅತಿ ಕಡಿಮೆ ಬಡ್ಡಿ ದರದಲ್ಲಿ ಸುಲಭ ಗೃಹ ಸಾಲ


ಈಗಲೇ ಕರೆ ಮಾಡಿ
9972194422


 

About The Editor

ನಿತಿನ್‌ ಆರ್‌.ಕೈದೊಟ್ಲು

Nitin Kaidotlu - Editor - Shivamogga Live

© ಶಿವಮೊಗ್ಗ ಲೈವ್‌ : September 13, 2022

Leave a Comment