ನೂರೆಂಟು ಗುಂಡಿಗಳಿರುವ ಹೆದ್ದಾರಿಯಲ್ಲಿ ಲಾರಿ, ಬಸ್ಸುಗಳಿಗೆ ಲೆಕ್ಕಕ್ಕಿಲ್ಲದ ‘ಅವೈಜ್ಞಾನಿಕ ಹಂಪು’ಗಳೇಕೆ?

ಶಿವಮೊಗ್ಗ
LIVE

ಕಡಿಮೆ ಬಡ್ಡಿಯಲ್ಲಿ ಗೃಹ ಸಾಲ (HOME LOAN)

ನಿಮ್ಮ ಸ್ವಂತ ಮನೆಯ ಕನಸು ಈಗ ನನಸು!
ಮನೆ ಕಟ್ಟಲು ಅಥವಾ ಸೈಟ್ ಖರೀದಿಸಲು ಸಾಲ ಸೌಲಭ್ಯ.

✅ ಅತೀ ಕಡಿಮೆ ಬಡ್ಡಿ ದರ
✅ ತ್ವರಿತ ಸಾಲ ಮಂಜೂರಾತಿ
✅ ಸುಲಭ ಮರುಪಾವತಿ ಕಂತುಗಳು

ಹೆಚ್ಚಿನ ಮಾಹಿತಿಗಾಗಿ ಕರೆ ಮಾಡಿ ಅಥವಾ ವಾಟ್ಸಾಪ್ ಮಾಡಿ:

99721 94422
*ಷರತ್ತುಗಳು ಅನ್ವಯಿಸುತ್ತವೆ

 SHIVAMOGGA LIVE NEWS 

SHIMOGA | ‘ಹಂಪ್ ಗಳು (HUMPS) ಅವೈಜ್ಞಾನಿಕವಾಗಿವೆ. ಮೊದಲು ಅದನ್ನು ತೆರವು ಮಾಡಿ’. ಇದು ಗೃಹ ಸಚಿವ ಆರಗ ಜ್ಞಾನೇಂದ್ರ ಅವರು ಕಳೆದ ಕೆಡಿಪಿ ಸಭೆಯಲ್ಲಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳಿಗೆ ನೀಡಿದ ಸೂಚನೆ. ಅವರು ಹೇಳಿ ತಿಂಗಳಾದರೂ ಈವರೆಗೆ ಶಿವಮೊಗ್ಗ- ಭದ್ರಾವತಿ ನಡುವಿನ ಹಂಪ್ ಗಳು ತೆರವಾಗಿಲ್ಲ.

ಶಿವಮೊಗ್ಗ ಲೈವ್‌ನ ಪ್ರತಿ ಅಪ್‌ಡೇಟ್‌ ನೀವೇ ಮೊದಲು ಪಡೆಯಲು ಕೆಳಗಿನ ಗ್ರೂಪ್‌ಗಳನ್ನು ಜಾಯಿನ್ ಆಗಿ:

Shimoga Nanjappa Hospital

ಹಂಪ್ ಗಳು ಎಂದರೆ ವೇಗ ನಿಯಂತ್ರಣ ಮಾಡಬೇಕು. ಆದರೆ ಶಿವಮೊಗ್ಗ-ಭದ್ರಾವತಿ ನಡುವಿನ ಹಂಪ್ ಗಳು ಯಮಲೋಕಕ್ಕೆ ದಾರಿಯಾಗಿವೆ. ರಸ್ತೆ ಚೆನ್ನಾಗಿಲ್ಲದಿದ್ದರೂ ಹಂಪ್ ಗಳು ಗಟ್ಟಿ ಮುಟ್ಟಾಗಿವೆ.

ಸಾಲು ಸಾಲು HUMPS

ಶಿವಮೊಗ್ಗದ ಹೊಳೆ ಬಸ್ ನಿಲ್ದಾಣ ದಾಟಿದರೆ ಭದ್ರಾವತಿವರೆಗೂ ಅದೆಷ್ಟು ಹಂಪ್ ಗಳು ಸಿಗುತ್ತವೋ ಲೆಕ್ಕಕ್ಕೆ ಇಡಲು ಸಾಧ್ಯವಿಲ್ಲ. ಹೊಳೆ ಬಸ್ ನಿಲ್ದಾಣದಿಂದ ಎಂಆರ್‌ಎಸ್ ಕ್ರಾಸ್‌ವರೆಗೆ ಸ್ಪೀಡ್ ಬ್ರೇಕರ್‌ಗಳನ್ನು ಪ್ರತಿ ಯೂಟರ್ನ್ ಕಡೆ ಎರಡು ಬದಿ ಹಾಕಲಾಗಿದೆ.

ಕ್ಲಿಕ್ ಮಾಡಿ ಇದನ್ನೂ ಓದಿ ಶಿವಮೊಗ್ಗ – ಭದ್ರಾವತಿ ನಡುವೆ ಇರುವುದು ಹೈವೆ ರಸ್ತೆನೋ, ಯಮಲೋಕದ ದಾರಿನೋ?

ಇದನ್ನು ದಾಟಿ ಹೋಗುತ್ತಿದ್ದಂತೆ ಎಂಆರ್‌ಎಸ್ ಸರ್ಕಲ್ ಬಳಿ ಎರಡು, ಹರಿಗೆ ಬಳಿ ಎರಡು, ಮಲವಗೊಪ್ಪ ಬಳಿ ನಾಲ್ಕು, ಮಾಚೇನಹಳ್ಳಿ ಬಳಿ ಎರಡು, ಡೈರಿ ಸರ್ಕಲ್ ಬಳಿ ನಾಲ್ಕು ಕಡೆ ಹಂಪ್ ಗಳು ಸಿಗುತ್ತವೆ. ಈ ಹಂಪ್ ಗಳಿಗೆ ಯಾವುದೇ ಮಾನದಂಡವಿಲ್ಲ ಆರು ಇಂಚು ಎತ್ತರದ ಹತ್ತಕ್ಕೂ ಹೆಚ್ಚು ಹಂಪ್ ಗಳು ಸಿಗುತ್ತವೆ. ಎಲ್ಲ ಕಡೆ ಇದೇ ಮಾದರಿಯಲ್ಲಿ ಹಂಪ್ ಗಳನ್ನು ಮಾಡಲಾಗಿದೆ.

ಲಾರಿ, ಬಸ್ಸುಗಳಿಗೆ HUMPS ಲೆಕ್ಕಕ್ಕಿಲ್ಲ

ವಾಹನ ಸವಾರರು ಹಂಪ್ಸ್ ದಾಟುವ ಹೊತ್ತಿಗೆ ಹೈರಾಣಾಗುತ್ತಾರೆ. ದೊಡ್ಡ ದೊಡ್ಡ ಲಾರಿ, ಬಸ್‌ಗಳು ಇದಕ್ಕೆ ಕ್ಯಾರೆ ಎನ್ನದೆ ದಡಬಡನೆ ಹಾದು ಹೋಗುತ್ತವೆ. ಮಾಚೇನಹಳ್ಳಿ ಬಳಿ ಇದೇ ರೀತಿ ಅಪಘಾತ ಸಂಭವಿಸಿ ವ್ಯಕ್ತಿಯೊಬ್ಬ ಮೃತಪಟ್ಟಿದ್ದ. ಸಣ್ಣಪುಟ್ಟ ಅಪಘಾತಗಳಿಗೆ ಲೆಕ್ಕವೇ ಇಲ್ಲದಂತಾಗಿದೆ.

ಕ್ಲಿಕ್ ಮಾಡಿ ಇದನ್ನೂ ಓದಿ ಶಿವಮೊಗ್ಗ – ಭದ್ರಾವತಿ ರಸ್ತೆಯಲ್ಲಿ ಅಪಘಾತ ಆದರಷ್ಟೆ ಗುಂಡಿ ಬಂದ್, ಇಲ್ಲಿದೆ ನೋಡಿ ಉದಾಹರಣೆ

ಇನ್ನು ಹಂಪ್ಸ್ ಇದೆ ಎನ್ನುವುದಕ್ಕೆ ಯಾವುದೇ ಕುರುಹುಗಳು ಕಾಣುವುದಿಲ್ಲ. ಹಂಪ್ಸ್ ಇರುವ ಜಾಗದಲ್ಲಿ ಬಿಳಿ ಬಣ್ಣ ಬಳಿದು ಸವಾರರಿಗೆ ಕಾಣುವಂತೆ ಮಾಡಬೇಕು. ಇಲ್ಲೆಲ್ಲೂ ಹಂಪ್ಸ್ ಇರುವುದು ತಿಳಿಯುವುದಿಲ್ಲ. ದಿಢೀರ್ ಎದುರಾಗುವ ಹಂಪ್ ಗಳು ಭಯ ಹುಟ್ಟಿಸುತ್ತವೆ.

ಕ್ಲಿಕ್ ಮಾಡಿ ಇದನ್ನೂ ಓದಿ ಶಿವಮೊಗ್ಗ – ಭದ್ರಾವತಿ ಹೈವೆಯಲ್ಲಿ ಅಪಘಾತಕ್ಕೆ ಗುಂಡಿಗಳಷ್ಟೆ ಕಾರಣವಲ್ಲ

ರಸ್ತೆ ಚೆನ್ನಾಗಿದ್ದರೆ ಹಂಪ್ ಗಳು ಅಷ್ಟು ತೊಂದರೆ ಎನಿಸುವುದಿಲ್ಲ. ರಸ್ತೆಗಳೇ ಕಿತ್ತು ಹೋಗಿರುವಾಗ ಹಂಪ್ ಹಾಕಿ ಇನ್ನಷ್ಟು ತೊಂದರೆಗೆ ಸಿಲುಕಿಸಲಾಗುತ್ತಿದೆ. ಇದನ್ನು ಹೈವೇ ಅಧಿಕಾರಿಗಳು ಅರ್ಥ ಮಾಡಿಕೊಳ್ಳದೆ ಭಂಡತನ ಮೆರೆಯುತ್ತಿದ್ದಾರೆ. ತಕ್ಷಣ ತೆರವು ಮಾಡುವಂತೆ ನಾಗರಿಕರು ಒತ್ತಾಯಿಸಿದ್ದಾರೆ.

ಕ್ಲಿಕ್ ಮಾಡಿ ಇದನ್ನೂ ಓದಿ ಶಿವಮೊಗ್ಗದ ಈ ಸರ್ಕಲ್’ನಲ್ಲಿ ವಾಹನ ಓಡಿಸಲು ಗುಂಡಿಗೆ ಗಟ್ಟಿ ಇರಬೇಕು, ನಡೆದು ಹೋಗಲು ಧೈರ್ಯ ಬೇಕು

ತಿರುವಿನಲ್ಲಿ ದಿಢೀರ್ ಪ್ರತ್ಯಕ್ಷವಾಗಿದ್ದ ಹಂಪ್

ಜೇಡಿಕಟ್ಟೆ, ಮಾಚೇನಹಳ್ಳಿ, ಮಲವಗೊಪ್ಪ ಬಳಿ ಇರುವ ತಿರುವುಗಳಲ್ಲಿ ರಸ್ತೆಗಳು ಪೂರ್ಣ ಪ್ರಮಾಣದಲ್ಲಿ ಕಿತ್ತು ಹೋಗಿದೆ. ಮೂರ್ನಾಲ್ಕು ದಿನದ ಹಿಂದೆ ಜೇಡಿಕಟ್ಟೆ ತಿರುವಿನಲ್ಲಿ ದಿಢೀರ್ ಎಂದು ಹಂಪ್ಸ್ ಹಾಕಲಾಗಿತ್ತು. ವಿರೋಧ ಬಂದ ಹಿನ್ನೆಲೆ ತೆರವು ಮಾಡಿ, ರಸ್ತ ಪಕ್ಕಕ್ಕೆ ಹಂಪ್ ಬಿಸಾಡಲಾಗಿದೆ. ವೈಜ್ಞಾನಿಕವಲ್ಲದ ಈ ತಿರುವಿನಲ್ಲಿ ರಿಫ್ಲೆಕ್ಟರ್‌ಗಳು ಇಲ್ಲದಿರುವುದು ಅಪಘಾತಕ್ಕೆ ಮತ್ತಷ್ಟು ಕಾರಣಗಳಾಗಿವೆ.

Sarji Hospital

ಕ್ಲಿಕ್ ಮಾಡಿ ಇದನ್ನೂ ಓದಿ ಶಿವಮೊಗ್ಗ – ಭದ್ರಾವತಿ ರಸ್ತೆಯಲ್ಲಿ ಲಾರಿಗಳ ಮಧ್ಯೆ ಅಪಘಾತ

ADVERTISEMENT

  • ಆರೋಗ್ಯ ತುರ್ತು ಸಂದರ್ಭದಲ್ಲಿ ಹಣಕಾಸು ಹೊಂದಿಸುವುದು ಸುಲಭವೇನಲ್ಲ. ಒಂದು ವೇಳೆ INSURANCE ಇದ್ದರೆ, ನಿರಮ್ಮಳವಾಗಿರಬಹುದು ಅಲ್ಲವೆ? ಈಗಲೆ INSURANCE ಮಾಡಿಸಿ. ಒಳ್ಳೆಯ INSURANCE PLANSಗಾಗಿ ಕರೆ ಮಾಡಿ – LIC LIFE INSURANCE – ಅನಿಲ್ 9538414151, ಪ್ರಶಾಂತ್ 9972194422
  • ಸುಂದರ ಮನೆ ಕಟ್ಟಬೇಕು, ಸ್ವಂತ ಮನೆಯಲ್ಲಿ ನೆಮ್ಮದಿಯ ಬದುಕು ಸಾಗಿಸಬೇಕು ಅನ್ನವು ಆಸೆ ಯಾರಿಗಿಲ್ಲ? ಇನ್ಯಾಕೆ ತಡ? ಮನೆ ಕಟ್ಟಲು LICಯಿಂದ HOUSING LOAN ಲಭ್ಯವಿದೆ. ಇವತ್ತೇ ಸಂಪರ್ಕಿಸಿ – ಪ್ರಶಾಂತ್ 9972194422

SHIVAMOGGA LIVE WHATSAPP

ನಿಮ್ಮೂರು, ನಿಮ್ಮ ಏರಿಯಾದ ಕಾರ್ಯಕ್ರಮಗಳು, ಸಮಸ್ಯೆಗಳು ಸುದ್ದಿಯಾಗಬೇಕಾ? ನೀವೇ ವರದಿಗಾರರಾಗಿ. ವಿಡಿಯೋ, ಫೋಟೊ ಮಾಡಿ 7411700200 ಮೊಬೈಲ್ ನಂಬರ್’ಗೆ ವಾಟ್ಸಪ್ ಮಾಡಿ. ನೆನಪಿರಲಿ, ಸುದ್ದಿ ಪ್ರಕಟಣೆಗೆ ನಾವು ಹಣ ಪಡೆಯುವುದಿಲ್ಲ.

About The Editor

ನಿತಿನ್‌ ಆರ್‌.ಕೈದೊಟ್ಲು

Nitin Kaidotlu - Editor - Shivamogga Live

Leave a Comment