ಶಿವಮೊಗ್ಗ ಲೈವ್.ಕಾಂ | 09 ಏಪ್ರಿಲ್ 2019
ಲೋಕಸಭೆ ಚುನಾವಣೆಗೆ ಹದಿನಾಲ್ಕು ದಿನವಷ್ಟೆ ಬಾಕಿ ಇದೆ. ಅಭ್ಯರ್ಥಿಗಳು ಪ್ರಚಾರವನ್ನು ಬಿರುಸುಗೊಳಿಸಿದ್ದಾರೆ. ಯಡಿಯೂರಪ್ಪ ತವರಲ್ಲಿ ಜೆಡಿಎಸ್ ಅಭ್ಯರ್ಥಿ ಮಧು ಬಂಗಾರಪ್ಪ ಪ್ರಚಾರ ನಡೆಸಿದರೆ, ಮಧು ಬಂಗಾರಪ್ಪ ತವರಲ್ಲಿ, ಬಿಜೆಪಿ ಅಭ್ಯರ್ಥಿ ಬಿ.ವೈ.ರಾಘವೇಂದ್ರ ಬಿರುಸಿನ ಕ್ಯಾಂಪೇನ್ ಮಾಡಿದರು.
ಹೇಗಿತ್ತು ರಾಘವೇಂದ್ರ ಕ್ಯಾಂಪೇನ್?
ಸೊರಬ ತಾಲೂಕಿನ ವಿವಿಧೆಡೆ ಬಿಜೆಪಿ ಅಭ್ಯರ್ಥಿ ಬಿ.ವೈ.ರಾಘವೇಂದ್ರ ಬಿರುಸಿನ ಪ್ರಚಾರ ನಡೆಸಿದರು. ಬೂತ್ ಮಟ್ಟದಲ್ಲಿ ಕ್ಯಾಂಪೇನ್ ಮಾಡಿ, ಪೇಜ್ ಪ್ರಮುಖರ ಸಭೆಯನ್ನು ನಡೆಸಿದರು.

ಸೊರಬ ತಾಲೂಕಿನ ಸೈದೂರು ಗ್ರಾಮದಲ್ಲಿ ಪೇಜ್ ಪ್ರಮುಖರ ಸಭೆ ನಡೆಸಿದರು. ಈ ವೇಳೆ ಮಾತನಾಡಿದ ರಾಘವೇಂದ್ರ, ತಾಳಗುಪ್ಪದಿಂದ ಸೊರಬ ಆನವಟ್ಟಿ ಮೂಲಕ ಹುಬ್ಬಳ್ಳಿಗೆ ರೈಲ್ವೆ ಸಂಪರ್ಕ ಕಲ್ಪಿಸುವ ಯೋಜನೆಗೆ ಜಾರಿಗೊಳಿಸುವ ಭರವಸೆ ನೀಡಿದರು. ಇನ್ನು, ಸೊರಬದ ಬೆನ್ನೂರು ಸೇರಿದಂತೆ ವಿವಿಧೆಡೆ ಸಾಲು ಸಾಲು ಸಭೆಗಳನ್ನು ನಡೆಸಿದರು. ಶಾಸಕ ಕುಮಾರ್ ಬಂಗಾರಪ್ಪ ಈ ಸಂದರ್ಭ ಉಪಸ್ಥಿತರಿದ್ದರು.
ಮಳೆ ನಡುವೆ ಮಧು ಕ್ಯಾಂಪೇನ್
ಮತ್ತೊಂದೆಡೆ ಶಿಕಾರಿಪುರದಲ್ಲಿ ಜೆಡಿಎಸ್ ಅಭ್ಯರ್ಥಿ ಮಧು ಬಂಗಾರಪ್ಪ ಕ್ಯಾಂಪೇನ್ ಮಾಡಿದರು. ಹಿತ್ತಲ, ಕಲ್ಮನೆ, ಈಸೂರು, ಶಿಕಾರಿಪುರ ಪಟ್ಟಣ, ಹೊಸೂರು, ಮರವಳ್ಳಿ, ಮುದ್ದನಹಳ್ಳಿ ಸೇರಿದಂತೆ ವಿವಿಧೆಡೆ ಪ್ರಚಾರ ನಡೆಸಿದರು.
ಪ್ರಚಾರದ ನಡುವೆ, ಮುದ್ದನಹಳ್ಳಿಯಲ್ಲಿ ಮಕ್ಕಳ ಜೊತೆಗೆ ಕೆಲ ಹೊತ್ತು ಮಧು ಬಂಗಾರಪ್ಪ ಕಬ್ಬಡಿ ಆಡಿದರು. ಇನ್ನು, ಮರವಳ್ಳಿ ಬಳಿ ಪ್ರಚಾರ ನಡೆಸುತ್ತಿದ್ದಾಗ ಮಳೆ ಬಂತು. ಹಾಗಾಗಿ ರಸ್ತೆ ಪಕ್ಕದ ಟೀ ಅಂಗಡಿಗೆ ಹೋಗಿ, ಮಧು ಬಂಗಾರಪ್ಪ ಸ್ಥಳೀಯರೊಂದಿಗೆ ಕುಳಿತು ಟೀ ಕುಡಿದು ಚರ್ಚೆ ನಡೆಸಿದರು.
ಶಿವಮೊಗ್ಗ ಲೈವ್.ಕಾಂ ವಾಟ್ಸಪ್ ನಂಬರ್ | 7411700200
ಸುದ್ದಿಗಾಗಿ ಮೊಬೈಲ್ ನಂಬರ್ | 9964634494
ಈ ಮೇಲ್ | shivamoggalive@gmail.com
ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್ಗೆ ಕಳುಹಿಸುತ್ತೇವೆ.
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» ಶಿವಮೊಗ್ಗ ಲೈವ್ gmail
» Whatsapp Number
7411700200