ಮಕ್ಕಳ ಕಳ್ಳರು ವದಂತಿ, ಕಂಡ ಕಂಡವರ ಮೇಲೆ ದಾಳಿ, ಶಿವಮೊಗ್ಗ, ಸಾಗರದಲ್ಲಿ ಪ್ರಕರಣ

ಶಿವಮೊಗ್ಗLIVE

ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ

Shivamogga-Live-9-years-Number-1.avif

 SHIVAMOGGA LIVE NEWS 

SHIMOGA | ರಾಜ್ಯಾದ್ಯಂತ ಮತ್ತೆ ಸಾಮಾಜಿಕ ಜಾಲತಾಣಗಳಲ್ಲಿ ‘ಮಕ್ಕಳ ಕಳ್ಳರು’ (CHILD THEFT) ಪ್ರತ್ಯಕ್ಷವಾಗಿದ್ದಾರೆ. ವಾಟ್ಸಪ್, ಫೇಸ್ ಬುಕ್’ಗಳಲ್ಲಿ ಮೆಸೇಜುಗಳು ಹರಿದಾಡುತ್ತಿವೆ. ಇದೆ ಕಾರಣಕ್ಕೆ ಜನರು ಹಲವರನ್ನ ಹಿಡಿದು ಹೊಡೆದು ಪೊಲೀಸರಿಗೆ ಒಪ್ಪಿಸುತ್ತಿದ್ದಾರೆ.

Shimoga Nanjappa Hospital

ಶಿವಮೊಗ್ಗ ಜಿಲ್ಲೆಯಲ್ಲಿಯು ಮಕ್ಕಳ ಕಳ್ಳರ ವದಂತಿ ಹಬ್ಬಿದೆ. ಸಾಮಾಜಿಕ ಜಾಲತಾಣಗಳಲ್ಲಿ ಬಂದ ಮೆಸೇಜುಗಳನ್ನು ನಂಬಿಕೊಂಡು, ಅಮಾಯಕರ ಮೇಲೆ ಹಲ್ಲೆ ನಡೆಸಲಾಗುತ್ತಿದೆ. ಈಗಾಗಲೇ ಎರಡು ಕಡೆ ಇದೆ ರೀತಿ ಅಮಾಯಕರು ಸಿಕ್ಕಿಬಿದ್ದು ಹಿಂಸೆ ಅನುಭವಿಸಿದ್ದಾರೆ.

CHILD THEFT ಎಲ್ಲೆಲ್ಲಿ ಏನೇನಾಯ್ತು?

 ಘಟನೆ 1 :  ಶಿವಮೊಗ್ಗದ ಗುಂಡಪ್ಪ ಶೆಡ್’ನಲ್ಲಿ ಮಗುವಿನೊಂದಿಗೆ ನಡೆದು ಹೋಗುತ್ತಿದ್ದ ಮಹಿಳೆಯನ್ನು ವಿಚಾರಿಸಿದ ಸ್ಥಳೀಯರು, ಮಕ್ಕಳ ಕಳ್ಳಿ ಎಂಬ ಶಂಕೆ ಮೇರೆಗೆ ಹೊಡೆದಿದ್ದಾರೆ. ಅವಾಚ್ಯ ಶಬ್ದಗಳಿಂದಲು ನಿಂದಿಸಿದ್ದಾರೆ. ಅಷ್ಟು ಹೊತ್ತಿಗೆ ಮಗುವಿನ ಪೋಷಕರು ಸ್ಥಳಕ್ಕೆ ಬಂದಿದ್ದಾರೆ. ಮಗು ಮತ್ತು ಮಹಿಳೆ ತಮ್ಮವರೆ ಎಂದು ತಿಳಿಸಿದ್ದಾರೆ. ಮಾನಸಿಕ ಅಸ್ವಸ್ಥ ಮಹಿಳೆ ತಮ್ಮ ಮನೆಯಲ್ಲಿರುವಾಕೆ. ಮಗುವಿನೊಂದಿಗೆ ಅಂಗಡಿಗೆ ಹೋಗುತ್ತಿದ್ದಳು ಎಂದು ಮನೆಯವರು ಖಚಿತ ಪಡಿಸಿದ್ದರಿಂದ ಜನ ಆಕೆಯನ್ನು ಬಿಟ್ಟು ಕಳುಹಿಸಿದ್ದಾರೆ.

 ಘಟನೆ 2 :  ಸಾಗರ ಪಟ್ಟಣದಲ್ಲಿ ಮಹಿಳೆಯೊಬ್ಬರ ಮೇಲೆ ಶಂಕೆ ವ್ಯಕ್ತಪಡಿಸಿದ ಸಾರ್ವಜನಿಕರು, ಆಕೆಯನ್ನು ಪೊಲೀಸರಿಗೆ ಒಪ್ಪಿಸಿದ್ದಾರೆ. ಸಾಗರ ಪಟ್ಟಣದಲ್ಲಿ ವಿಚಾರಣೆ ನಡೆಸಿದಾಗ, ಮಹಿಳೆ ತನ್ನ ಸ್ನೇಹಿತೆಯ ಮನೆಗೆ ಬಂದಿದ್ದಾಗಿ ತಿಳಿಸಿದ್ದಾರೆ. ಕೂಲಂಕಷ ವಿಚಾರಣೆ ಬಳಿಕ ಮಹಿಳೆಯನ್ನು ಬಿಟ್ಟು ಕಳುಹಿಸಲಾಯಿತು.

ಕ್ಲಿಕ್ ಮಾಡಿ ಇದನ್ನೂ ಓದಿ ಮಕ್ಕಳ ಕಳ್ಳಿ ಅಂತಾ ಮಹಿಳೆ ಹಿಡಿದು ಪೊಲೀಸರಿಗೆ ಒಪ್ಪಿಸಿದ ಜನ, ವಿಚಾರಣೆ ವೇಳೆ ಗೊತ್ತಾಗಿದ್ದೇನು?

ಸಾಮಾಜಿಕ ಜಾಲತಾಣದ ‘ಮಕ್ಕಳ ಕಳ್ಳರು’

ಸಾಮಾಜಿಕ ಜಾಲತಾಣಗಳಲ್ಲಿ ಮಕ್ಕಳ ಕಳ್ಳರ (CHILD THEFT) ವದಂತಿ ಹಬ್ಬಿದೆ. ವಾಟ್ಸಪ್, ಫೇಸ್ ಬುಕ್ ಫಾರ್ವರ್ಡ್ ಮೆಸೇಜುಗಳನ್ನು ನಿಜ ಎಂದು ನಂಬಿಕೊಂಡು, ಜನರು ಕಂಡ ಕಂಡವರನ್ನು ಅನುಮಾನದ ಕಣ್ಣಿನಿಂದ ನೋಡುತ್ತಿದ್ದಾರೆ. ಹಿಡಿದು ಹೊಡೆಯುತ್ತಿದ್ದಾರೆ.

ಸಾಮಾಜಿಕ ಜಾಲತಾಣದಲ್ಲಿ ಮಕ್ಕಳ ಕಳ್ಳರ ವದಂತಿ ಹಬ್ಬುತ್ತಿರುವುದು ಇದೆ ಮೊದಲಲ್ಲ.  ಈ ಹಿಂದೆ ದೇಶಾದ್ಯಂತ ಮಕ್ಕಳ ಕಳ್ಳರ ಶಂಕೆ ಮೇಲೆ ಹಲವರ ಮೇಲೆ ಹಲ್ಲೆ, ಹತ್ಯೆಗಳಾಗಿವೆ. ಈಗ ಪುನಃ ಮಕ್ಕಳ ಕಳ್ಳರ ಕುರಿತ ವದಂತಿ ಮುನ್ನಲೆಗೆ ಬಂದಿದೆ.

ಇತ್ತ ವದಂತಿ ಹಬ್ಬಿಸುವವರ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ಪೊಲೀಸ್ ಇಲಾಖೆ ಎಚ್ಚರಿಕೆ ನೀಡಿದೆ.

ಕ್ಲಿಕ್ ಮಾಡಿ ಇದನ್ನೂ ಓದಿ ಶಿವಮೊಗ್ಗದಲ್ಲಿ ಶಂಕಿತರ ಬಂಧನ, ವಿಧಾನಸೌಧದಲ್ಲಿ ಗೃಹ ಸಚಿವರು ಹೇಳಿದ್ದೇನು?

gundi

ADVERTISEMENT

  • ಆರೋಗ್ಯ ತುರ್ತು ಸಂದರ್ಭದಲ್ಲಿ ಹಣಕಾಸು ಹೊಂದಿಸುವುದು ಸುಲಭವೇನಲ್ಲ. ಒಂದು ವೇಳೆ INSURANCE ಇದ್ದರೆ, ನಿರಮ್ಮಳವಾಗಿರಬಹುದು ಅಲ್ಲವೆ? ಈಗಲೆ INSURANCE ಮಾಡಿಸಿ. ಒಳ್ಳೆಯ INSURANCE PLANSಗಾಗಿ ಕರೆ ಮಾಡಿ – LIC LIFE INSURANCE – ಅನಿಲ್ 9538414151, ಪ್ರಶಾಂತ್ 9972194422
  • ಸುಂದರ ಮನೆ ಕಟ್ಟಬೇಕು, ಸ್ವಂತ ಮನೆಯಲ್ಲಿ ನೆಮ್ಮದಿಯ ಬದುಕು ಸಾಗಿಸಬೇಕು ಅನ್ನವು ಆಸೆ ಯಾರಿಗಿಲ್ಲ? ಇನ್ಯಾಕೆ ತಡ? ಮನೆ ಕಟ್ಟಲು LICಯಿಂದ HOUSING LOAN ಲಭ್ಯವಿದೆ. ಇವತ್ತೇ ಸಂಪರ್ಕಿಸಿ – ಪ್ರಶಾಂತ್ 9972194422

SHIVAMOGGA LIVE WHATSAPP

ನಿಮ್ಮೂರು, ನಿಮ್ಮ ಏರಿಯಾದ ಕಾರ್ಯಕ್ರಮಗಳು, ಸಮಸ್ಯೆಗಳು ಸುದ್ದಿಯಾಗಬೇಕಾ? ನೀವೇ ವರದಿಗಾರರಾಗಿ. ವಿಡಿಯೋ, ಫೋಟೊ ಮಾಡಿ 7411700200 ಮೊಬೈಲ್ ನಂಬರ್’ಗೆ ವಾಟ್ಸಪ್ ಮಾಡಿ. ನೆನಪಿರಲಿ, ಸುದ್ದಿ ಪ್ರಕಟಣೆಗೆ ನಾವು ಹಣ ಪಡೆಯುವುದಿಲ್ಲ.

ನಿಮ್ಮ ಕನಸಿನ ಮನೆ ಈಗ ನನಸು! 🏠

ಅತಿ ಕಡಿಮೆ ಬಡ್ಡಿ ದರದಲ್ಲಿ ಸುಲಭ ಗೃಹ ಸಾಲ

ಈಗಲೇ ಕರೆ ಮಾಡಿ
9972194422

About The Editor

ನಿತಿನ್‌ ಆರ್‌.ಕೈದೊಟ್ಲು

Nitin Kaidotlu - Editor - Shivamogga Live

© ಶಿವಮೊಗ್ಗ ಲೈವ್‌ : September 20, 2022

ಜಯನಗರ ಪೊಲೀಸ್‌ ಠಾಣೆಯಲ್ಲಿ 8 ವಾಹನಗಳ ಹರಾಜು, ದಿನಾಂಕ ಪ್ರಕಟ

ಜಯನಗರ ಪೊಲೀಸ್‌ ಠಾಣೆಯಲ್ಲಿ 8 ವಾಹನಗಳ ಹರಾಜು, ದಿನಾಂಕ ಪ್ರಕಟ

ಶಿವಮೊಗ್ಗದಲ್ಲಿ ಇವತ್ತು ಯಾವ್ಯಾವ ಅಡಿಕೆಗೆ ಎಷ್ಟಿದೆ ರೇಟ್‌? – 31 ಮಾರ್ಚ್‌ 2026

ಶಿವಮೊಗ್ಗದಲ್ಲಿ ಇವತ್ತು ಯಾವ್ಯಾವ ಅಡಿಕೆಗೆ ಎಷ್ಟಿದೆ ರೇಟ್‌? – 31 ಮಾರ್ಚ್‌ 2026

ಗೋಪಾಳದ ಕ್ರೀಡಾ ಸಂಕೀರ್ಣದಲ್ಲಿ ಬೇಸಿಗೆ ಶಿಬಿರ, ಸರ್ಕಾರಿ ಶಾಲೆ ಮಕ್ಕಳಿಗೆ ಶೇ.50ರಷ್ಟು ರಿಯಾಯಿತಿ

ಗೋಪಾಳದ ಕ್ರೀಡಾ ಸಂಕೀರ್ಣದಲ್ಲಿ ಬೇಸಿಗೆ ಶಿಬಿರ, ಸರ್ಕಾರಿ ಶಾಲೆ ಮಕ್ಕಳಿಗೆ ಶೇ.50ರಷ್ಟು ರಿಯಾಯಿತಿ

ಶಿವಮೊಗ್ಗ ಜಿಲ್ಲಾ ಕನ್ನಡ ಸಾಹಿತ್ಯ ಸಾಂಸ್ಕೃತಿಕ ವೇದಿಕೆಗೆ ಪ್ರಶಸ್ತಿ

ಶಿವಮೊಗ್ಗ ಜಿಲ್ಲಾ ಕನ್ನಡ ಸಾಹಿತ್ಯ ಸಾಂಸ್ಕೃತಿಕ ವೇದಿಕೆಗೆ ಪ್ರಶಸ್ತಿ

ಹಾಸ್ಟೆಲ್‌ನಲ್ಲಿ ಸಾಲು ಸಾಲು ಸಮಸ್ಯೆ, ಶಿವಮೊಗ್ಗ ಡಿ.ಸಿ.ಗೆ ದೂರು ನೀಡಿದ ವಿದ್ಯಾರ್ಥಿಗಳು

ಹಾಸ್ಟೆಲ್‌ನಲ್ಲಿ ಸಾಲು ಸಾಲು ಸಮಸ್ಯೆ, ಶಿವಮೊಗ್ಗ ಡಿ.ಸಿ.ಗೆ ದೂರು ನೀಡಿದ ವಿದ್ಯಾರ್ಥಿಗಳು

6 ರಿಂದ 16 ವರ್ಷದ ಮಕ್ಕಳಿಗೆ ರಂತ ತರಬೇತಿ ಶಿಬಿರ, ಎಲ್ಲಿ? ಏನೇನು ಕಲಿಸಲಾಗುತ್ತದೆ?

6 ರಿಂದ 16 ವರ್ಷದ ಮಕ್ಕಳಿಗೆ ರಂತ ತರಬೇತಿ ಶಿಬಿರ, ಎಲ್ಲಿ? ಏನೇನು ಕಲಿಸಲಾಗುತ್ತದೆ?

₹50 ಪೆಟ್ರೋಲ್‌ ಹಾಕಿಸಿಕೊಂಡು ಹಣ ಕೇಳಿದ್ದಕ್ಕೆ ಬಂಕ್‌ ಮಾಲೀಕ, ಸಿಬ್ಬಂದಿ ಮೇಲೆ ಅಟ್ಯಾಕ್‌

₹50 ಪೆಟ್ರೋಲ್‌ ಹಾಕಿಸಿಕೊಂಡು ಹಣ ಕೇಳಿದ್ದಕ್ಕೆ ಬಂಕ್‌ ಮಾಲೀಕ, ಸಿಬ್ಬಂದಿ ಮೇಲೆ ಅಟ್ಯಾಕ್‌

ವರದಹಳ್ಳಿಯಲ್ಲಿ ಶ್ರೀಧರ ಸ್ವಾಮೀಜಿ ಆರಾಧನಾ ಮಹೋತ್ಸವ, ಏನೇನು ಕಾರ್ಯಕ್ರಮ ಇರಲಿದೆ?

ವರದಹಳ್ಳಿಯಲ್ಲಿ ಶ್ರೀಧರ ಸ್ವಾಮೀಜಿ ಆರಾಧನಾ ಮಹೋತ್ಸವ, ಏನೇನು ಕಾರ್ಯಕ್ರಮ ಇರಲಿದೆ?

ಇವತ್ತು ದೀನಬಂಧು ಟ್ರಸ್ಟ್‌ 25ನೇ ವರ್ಷದ ಬೆಳ್ಳಿ ಹಬ್ಬ, ಕಾರ್ಯಕ್ರಮದಲ್ಲಿ ಯಾರೆಲ್ಲ ಭಾಗವಹಿಸ್ತಾರೆ?

ಇವತ್ತು ದೀನಬಂಧು ಟ್ರಸ್ಟ್‌ 25ನೇ ವರ್ಷದ ಬೆಳ್ಳಿ ಹಬ್ಬ, ಕಾರ್ಯಕ್ರಮದಲ್ಲಿ ಯಾರೆಲ್ಲ ಭಾಗವಹಿಸ್ತಾರೆ?

ಭದ್ರಾವತಿಯ ಗೌಡರಹಳ್ಳಿ ಬಳಿ ಅಪಘಾತ, ಟ್ರಾಕ್ಟರ್‌ ಚಾಲಕನ ವಿರುದ್ಧ ಪ್ರಕರಣ, ಆಗಿದ್ದೇನು?

ಭದ್ರಾವತಿಯ ಗೌಡರಹಳ್ಳಿ ಬಳಿ ಅಪಘಾತ, ಟ್ರಾಕ್ಟರ್‌ ಚಾಲಕನ ವಿರುದ್ಧ ಪ್ರಕರಣ, ಆಗಿದ್ದೇನು?

Leave a Comment