ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ
[su_highlight background=”#d70000″ color=”#ffffff”]SHIVAMOGGA LIVE NEWS[/su_highlight]
SHIMOGA | ಇಸ್ಲಾಮಿಕ್ ಸ್ಟೇಟ್ (ಐಎಸ್ಐಎಸ್) ಉಗ್ರ ಸಂಘಟನೆಯೊಂದಿಗೆ ನಂಟು ಹೊಂದಿರುವ ಆರೋಪದ ಹಿನ್ನೆಲೆ ಇಬ್ಬರು ಶಂಕಿತ (SUSPECT) ಉಗ್ರರನ್ನು ಬಂಧಿಸಲಾಗಿದೆ. ಮತ್ತೊಬ್ಬನಿಗೆ ಶೋಧ ಕಾರ್ಯ ನಡೆಯುತ್ತಿದೆ. ಇದರಿಂದ ಮಲೆನಾಡು ಭಾಗದಲ್ಲಿ ಮತ್ತೆ ಉಗ್ರರ ಜಾಡಿನ ಕುರಿತು ಆತಂಕ ಮೂಡಿದೆ.

ಶಂಕಿತ ಉಗ್ರರ ಬಂಧನ ಮತ್ತು ಆನಂತರ ಏನೇನೆಲ್ಲ ಬೆಳವಣಿಗೆಗಳಾಗಿವೆ. ಅದರ 10 ಪ್ರಮುಖ ಮಾಹಿತಿ ಇಲ್ಲಿದೆ.
[su_highlight background=”#001003″ color=”#ffffff”]ಬೆಳವಣಿಗೆ 1[/su_highlight] ಆಗಸ್ಟ್ 15ರಂದು ಗಾಂಧಿ ಬಜಾರ್’ನಲ್ಲಿ ಪ್ರೇಮ್ ಸಿಂಗ್ ಎಂಬ ಯುವಕನ ಮೇಲೆ ಚಾಕು ಇರಿತ ಪ್ರಕರಣದ ತನಿಖೆ ವೇಳೆ, ಶಿವಮೊಗ್ಗದಲ್ಲಿ ಶಂಕಿತ (SUSPECT) ಉಗ್ರರ ಕುರಿತು ಮಾಹಿತಿ ಲಭ್ಯ. ಖಚಿತ ಮಾಹಿತಿ ಮೇರೆಗೆ ಮಂಗಳೂರಿನ ಮಾಜ್ ಮುನೀರ್ ಅಹಮದ್ (22) ಮತ್ತು ಶಿವಮೊಗ್ಗದ ಸಿದ್ಧೇಶ್ವರ ನಗರದ ಸಯ್ಯದ್ ಯಾಸೀನ್ ಅಲಿಯಾಸ್ ಬೈಲ್ (21) ಬಂಧನ. ತೀರ್ಥಹಳ್ಳಿ ಗುಡ್ಡೆಕೊಪ್ಪದ ಶಾರೀಕ್’ಗಾಗಿ ಶೋಧ ಕಾರ್ಯ. ಶಿವಮೊಗ್ಗ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲು.
[su_highlight background=”#001003″ color=”#ffffff”]ಬೆಳವಣಿಗೆ 2[/su_highlight] ‘ನಿಷೇಧಿತ ಸಂಘಟನೆ ಇಸ್ಲಾಮಿಕ್ ಸ್ಟೇಟ್ ಜೊತೆ ನಂಟು ಶಂಕೆ. ಭಯೋತ್ಪಾದನಾ ಚಟುವಟಿಕೆ ನಡೆಸಲು ಸಂಚು ರೂಪಿಸಿದ್ದರು. ಸ್ಪೋಟಕಗಳನ್ನು ಹೊಂದಿರುವ ಮತ್ತು ರಾಷ್ಟ್ರಧ್ವಜವನ್ನು ಸುಟ್ಟಿರುವ ಶಂಕೆ ಇದೆ’ ಎಂದು ಎಫ್ಐಆರ್ ದಾಖಲು.
[su_highlight background=”#001003″ color=”#ffffff”]ಬೆಳವಣಿಗೆ 3[/su_highlight] ಶಂಕಿತ ಉಗ್ರರನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸಿದ ಶಿವಮೊಗ್ಗ ಪೊಲೀಸರು. ಸೆ.29ರವರೆಗೆ ಇಬ್ಬರನ್ನು ಪೊಲೀಸ್ ಕಸ್ಟಡಿಗೆ ಒಪ್ಪಿಸಿದ ನ್ಯಾಯಾಲಯ.

[su_highlight background=”#001003″ color=”#ffffff”]ಬೆಳವಣಿಗೆ 4[/su_highlight] ‘ಚಾಕು ಇರಿತ ಪ್ರಕರಣ ತನಿಖೆ ವೇಳೆ ಶಂಕಿತರ ಕುರಿತು ಮಾಹಿತಿ ಲಭ್ಯ. ಆ ಪ್ರಕರಣಕ್ಕೂ ಇವರಿಗೂ ಸಂಬಂಧವಿರದ ಹಿನ್ನೆಲೆ ಇವರನ್ನು ಬಂಧಿಸಿ, ಪ್ರತ್ಯೇಕ ಎಫ್ಐಆರ್ ದಾಖಲು ಮಾಡಲಾಗಿದೆ. ತನಿಖೆ ನಡೆಯುತ್ತಿದೆ’ ಎಂದು ಜಿಲ್ಲಾ ರಕ್ಷಣಾಧಿಕಾರಿ ಲಕ್ಷ್ಮಿ ಪ್ರಸಾದ್ ಶಿವಮೊಗ್ಗದಲ್ಲಿ ಹೇಳಿಕೆ.
[su_highlight background=”#001003″ color=”#ffffff”]ಬೆಳವಣಿಗೆ 5[/su_highlight] ಸಿದ್ಧೇಶ್ವರ ನಗರದಲ್ಲಿರುವ ಸಯ್ಯದ್ ಯಾಸೀನ್’ನನ್ನು ಆತನ ಮನೆಗೆ ಕರೆತಂದ ಪೊಲೀಸರು. ಸುಮಾರು ಒಂದೂವರೆ ಗಂಟೆ ಮಹಜರ್ ನಡೆಸಿದರು. ಈ ವೇಳೆ ಬಿಗಿ ಪೊಲೀಸ್ ಬಂದೋಬಸ್ತ್ ಕೈಗೊಳ್ಳಲಾಗಿತ್ತು.
[su_highlight background=”#001003″ color=”#ffffff”]ಬೆಳವಣಿಗೆ 6[/su_highlight] ಯಾಸೀನ್ ಮನೆ ಸಮೀಪ ಗುರುಪುರದ ತುಂಗಾ ನದಿ ದಂಡೆ ಬಳಿ ಕರೆದೊಯ್ದು ಮಹಜರ್ ನಡೆಸಲಾಯಿತು. ಯಾಸೀನ್, ಮಾಜ್ ಮತ್ತು ಶರೀಕ್ ಬಾಂಬುಗಳನ್ನು ತಯಾರಿಸಿ ತುಂಗಾ ನದಿಗೆ ಎಸೆಯುತ್ತಿದ್ದರು ಎಂದು ಹೇಳಲಾಗುತ್ತಿದೆ. ಇನ್ನೂ ಹೆಚ್ಚಿನ ಸ್ಥಳಗಳಲ್ಲಿ ಮಹಜರ್ ನಡೆಸುವ ಸಾಧ್ಯತೆ ಇದೆ. ಈ ಭಾಗದಲ್ಲಿ ಪೊಲೀಸರು ಬ್ಯಾರಿಕೇಡ್ ಹಾಕಿ ಬಂದೋಬಸ್ತ್ ಮಾಡಿದ್ದಾರೆ.
[su_highlight background=”#001003″ color=”#ffffff”]ಬೆಳವಣಿಗೆ 7[/su_highlight] ಶಿವಮೊಗ್ಗಕ್ಕೆ ವಿಧಿವಿಜ್ಞಾನ ಪ್ರಯೋಗಾಲಯದ (ಎಫ್ಎಸ್ಎಲ್) ಅಧಿಕಾರಿಗಳು ಆಗಮನ. ವಿವಿಧೆಡೆ ಶೋಧ. ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್ಐಎ) ಅಧಿಕಾರಿಗಳು ಶಿವಮೊಗ್ಗಕ್ಕೆ ಭೇಟಿ ನೀಡುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. ಪೊಲೀಸರು ತನಿಖೆ ಮುಂದುವರೆಸಿದ್ದರು, ಇನ್ನಷ್ಟು ಸಾಕ್ಷ್ಯ ಸಂಗ್ರಹ ಮಾಡುತ್ತಿದ್ದಾರೆ.
ಕ್ಲಿಕ್ ಮಾಡಿ ಇದನ್ನೂ ಓದಿ | ಶಿವಮೊಗ್ಗದಲ್ಲಿ ಶಂಕಿತರ ಬಂಧನ, ವಿಧಾನಸೌಧದಲ್ಲಿ ಗೃಹ ಸಚಿವರು ಹೇಳಿದ್ದೇನು?
[su_highlight background=”#001003″ color=”#ffffff”]ಬೆಳವಣಿಗೆ 8[/su_highlight] ‘ಮಂಗಳೂರು ಗೋಡೆ ಬರಹ ಪ್ರಕರಣದಲ್ಲಿ ಶಾರೀಕ್ ಮತ್ತು ಮಾಜ್ ವಿರುದ್ಧ ಪ್ರಕರಣ ದಾಖಲಾಗಿತ್ತು. ಇಬ್ಬರನ್ನು ಬಂಧಿಸಲಾಗಿತ್ತು. ಸುಮಾರು ಒಂದು ವರ್ಷ ಇವರಿಬ್ಬರು ಜೈಲಿನಲ್ಲಿದ್ದರು ಜಾಮೀನಿನ ಮೇಲೆ ಹೊರ ಬಂದಿದ್ದರು’ ಎಂದು ಜಿಲ್ಲಾ ರಕ್ಷಣಾಧಿಕಾರಿ ಲಕ್ಷ್ಮಿಪ್ರಸಾದ್ ಮಾಹಿತಿ ನೀಡಿದರು.
ಕ್ಲಿಕ್ ಮಾಡಿ ಇದನ್ನೂ ಓದಿ | ಭಯೋತ್ಪಾದಕ ಸಂಘಟನೆ ಜೊತೆ ನಂಟು, ಶಿವಮೊಗ್ಗದಲ್ಲಿ ಶಂಕಿತರು ಅರೆಸ್ಟ್
[su_highlight background=”#001003″ color=”#ffffff”]ಬೆಳವಣಿಗೆ 9[/su_highlight] ‘ತನ್ನ ಮಗ ಚೆನ್ನಾಗಿ ಓದುತ್ತಿದ್ದ. ಇಂಜಿನಿಯರಿಂಗ್ ಮಾಡಿದ್ದಾನೆ. ಆತನಿಗೆ ಯಾವುದೆ ಉಗ್ರ ಸಂಘಟನೆ ನಂಟು ಇಲ್ಲ. ತಮ್ಮ ಮನೆ ಸುತ್ತಮುತ್ತಲು ಎಲ್ಲರೊಂದಿಗೂ ಚನ್ನಾಗಿ ಬೆರೆಯುತ್ತಿದ್ದ. ಯಾಸೀನ್ ಗೆ ಒಳ್ಳೆಯ ಸ್ನೇಹಿತರು ಇದ್ದರು. ಕಳೆದ 15 ದಿನದ ಹಿಂದೆ ಸ್ನೇಹಿತರೊಂದಿಗೆ ಟೂರ್’ಗೆ ಹೋಗುತ್ತಿದ್ದೇನೆ ಎಂದು ತಿಳಿಸಿ ಮನೆಯಿಂದ ಹೊರಟಿದ್ದ. ಈಗ ಪೊಲೀಸರು ಬಂಧಿಸಿದ್ದಾರೆ’ ಎಂದು ಯಾಸೀನ್ ತಂದೆ ಆಯುಬ್ ಖಾನ್ ಮಾಧ್ಯಮಗಳಿಗೆ ತಿಳಿಸಿದ್ದಾರೆ.

[su_highlight background=”#001003″ color=”#ffffff”]ಬೆಳವಣಿಗೆ 10[/su_highlight] ‘ಕೆಲವು ಪ್ರಕರಣಗಳನ್ನು ಎನ್ಐಎಗೆ ಕೊಟ್ಟಿದ್ದೇಕೆ ಎಂದು ಪ್ರಶ್ನಿಸುತ್ತಿದ್ದರು. ಈಗ ಉತ್ತರ ಸಿಕ್ಕಿದೆ. ಶಿವಮೊಗ್ಗ ಪೊಲೀಸರು ಒಳ್ಳೆಯ ಕೆಲಸ ಮಾಡಿದ್ದಾರೆ. ಬಂಧಿತರ ವಿಚಾರಣೆ ನಡೆಯುತ್ತಿದೆ. ಇದರ ಹಿಂದೆ ಇನ್ನೆಷ್ಟು ಜನರಿದ್ದಾರೆ ಅನ್ನುವುದು ಕೂಲಂಕಷ ತನಿಖೆಯಿಂದ ಗೊತ್ತಾಬೇಗಿದೆ. ಇಬ್ಬರ ವಿರುದ್ಧ ಯುಎಪಿಎ ಅಡಿ ಪ್ರಕರಣ ದಾಖಲಾಗಿದೆ.’ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಅವರು ವಿಧಾನಸೌಧದಲ್ಲಿ ಮಾಧ್ಯಮಗಳಿಗೆ ತಿಳಿಸಿದರು.
ಕ್ಲಿಕ್ ಮಾಡಿ ಇದನ್ನೂ ಓದಿ | ಶಿವಮೊಗ್ಗದಲ್ಲಿ ಶಂಕಿತರ ಬಂಧನ, ವಿಧಾನಸೌಧದಲ್ಲಿ ಗೃಹ ಸಚಿವರು ಹೇಳಿದ್ದೇನು?
ADVERTISEMENT
- ಆರೋಗ್ಯ ತುರ್ತು ಸಂದರ್ಭದಲ್ಲಿ ಹಣಕಾಸು ಹೊಂದಿಸುವುದು ಸುಲಭವೇನಲ್ಲ. ಒಂದು ವೇಳೆ INSURANCE ಇದ್ದರೆ, ನಿರಮ್ಮಳವಾಗಿರಬಹುದು ಅಲ್ಲವೆ? ಈಗಲೆ INSURANCE ಮಾಡಿಸಿ. ಒಳ್ಳೆಯ INSURANCE PLANSಗಾಗಿ ಕರೆ ಮಾಡಿ – LIC LIFE INSURANCE – ಅನಿಲ್ 9538414151, ಪ್ರಶಾಂತ್ 9972194422
- ಸುಂದರ ಮನೆ ಕಟ್ಟಬೇಕು, ಸ್ವಂತ ಮನೆಯಲ್ಲಿ ನೆಮ್ಮದಿಯ ಬದುಕು ಸಾಗಿಸಬೇಕು ಅನ್ನವು ಆಸೆ ಯಾರಿಗಿಲ್ಲ? ಇನ್ಯಾಕೆ ತಡ? ಮನೆ ಕಟ್ಟಲು LICಯಿಂದ HOUSING LOAN ಲಭ್ಯವಿದೆ. ಇವತ್ತೇ ಸಂಪರ್ಕಿಸಿ – ಪ್ರಶಾಂತ್ 9972194422
SHIVAMOGGA LIVE WHATSAPP
ನಿಮ್ಮೂರು, ನಿಮ್ಮ ಏರಿಯಾದ ಕಾರ್ಯಕ್ರಮಗಳು, ಸಮಸ್ಯೆಗಳು ಸುದ್ದಿಯಾಗಬೇಕಾ? ನೀವೇ ವರದಿಗಾರರಾಗಿ. ವಿಡಿಯೋ, ಫೋಟೊ ಮಾಡಿ 7411700200 ಮೊಬೈಲ್ ನಂಬರ್’ಗೆ ವಾಟ್ಸಪ್ ಮಾಡಿ. ನೆನಪಿರಲಿ, ಸುದ್ದಿ ಪ್ರಕಟಣೆಗೆ ನಾವು ಹಣ ಪಡೆಯುವುದಿಲ್ಲ.
–
[su_divider top=”no” style=”dotted” divider_color=”#ffffff” link_color=”#000000″ margin=”10″]
[su_button url=”https://www.facebook.com/liveshivamogga” target=”blank” style=”flat” background=” #316FF6″ color=”#ffffff” size=”4″ radius=”0″ icon=”icon: facebook-square”][/su_button] [su_button url=”https://x.com/liveshivamogga” target=”blank” style=”flat” background=”#000000″ color=”#ffffff” size=”4″ radius=”0″ icon=”icon: twitter”][/su_button] [su_button url=”https://www.instagram.com/shivamoggalive/” target=”blank” style=”flat” background=”#E1306C” color=”#ffffff” size=”4″ radius=”0″ icon=”icon: instagram”][/su_button] [su_button url=”https://www.youtube.com/@shivamoggalive” target=”blank” style=”flat” background=”#FF0000″ color=”#ffffff” size=”4″ radius=”0″ icon=”icon: youtube-square”][/su_button] [su_button url=”https://www.linkedin.com/in/shivamogga-live-666a05322/” target=”blank” style=”flat” background=”#0072b1″ color=”#ffffff” size=”4″ radius=”0″ icon=”icon: linkedin-square”][/su_button]
[su_divider top=”no” style=”dotted” divider_color=”#ffffff” link_color=”#000000″ margin=”10″]
[su_divider top=”no” style=”dotted” divider_color=”#ffffff” link_color=”#000000″ margin=”10″]
[su_divider top=”no” style=”dotted” divider_color=”#ffffff” link_color=”#000000″ margin=”10″]
About The Editor
ನಿತಿನ್ ಆರ್.ಕೈದೊಟ್ಲು



