ವಿದ್ಯಾನಗರದ ಆರ್ಮಿ ಕ್ಯಾಂಟೀನ್‌ನಲ್ಲಿ ಮದ್ಯ ಕಳ್ಳತನಕ್ಕೆ ಯತ್ನ, ಆಗಿದ್ದೇನು?

PACE-College-2026

ಶಿವಮೊಗ್ಗ: ವಿದ್ಯಾನಗರದಲ್ಲಿರುವ ಎನ್‌ಸಿಸಿ ಬೆಟಾಲಿಯನ್ ಕಚೇರಿ ಅವರಣದಲ್ಲಿರುವ ಆರ್ಮಿ ಕ್ಯಾಂಟೀನ್‌ನಲ್ಲಿ (Army Canteen) ಮದ್ಯ ಕಳ್ಳತನಕ್ಕೆ ಯತ್ನ ನಡೆದಿದೆ. ಈ ಸಂಬಂಧ ವ್ಯಕ್ತಿಯೊಬ್ಬನ ವಿರುದ್ಧ ಪ್ರಕರಣ ದಾಖಲಾಗಿದೆ.

ನಿವೃತ್ತ ಸೈನಿಕರಿಗಾಗಿ ಇರುವ ಲಿಕ್ಕರ್ ಕೌಂಟರ್ ಬಳಿ ಬಂದ ದೇವ ಎಂಬುವನು ಶೋಕೇಸ್‌ನಲ್ಲಿ ಇಟ್ಟಿದ್ದ ₹260 ಮೌಲ್ಯದ ಬಕಾರ್ಡಿ ಮದ್ಯದ ಬಾಟಲಿ ಕಳ್ಳತನ ಮಾಡಲು ಯತ್ನಿಸಿದ್ದಾನೆ. ಇದನ್ನು ಗಮನಿಸಿದ ಹವಾಲ್ದಾರ್‌ ಚಿರಂಜೀವಿ ಅವರು ಕೂಡಲೇ ಆರೋಪಿಯನ್ನು ಹಿಡಿದು ವಿಚಾರಣೆ ನಡೆಸಿ ಪೊಲೀಸರಿಗೆ ಒಪ್ಪಿಸಿದ್ದಾರೆ. ಘಟನೆ ಸಂಬಂಧ ಕೋಟೆ ಠಾಣೆಗೆ ದೂರು ನೀಡಿದ್ದರು, ಪ್ರಕರಣ ದಾಖಲಾಗಿದೆ.

Kote Police station building

ಇದನ್ನೂ ಓದಿ – ಹೊಂಬುಜದಲ್ಲಿ ವೈಭದ ರಥೋತ್ಸವ, ಹೇಗಿತ್ತು ಪೂಜೆ? ಎಲ್ಲೆಲ್ಲಿಂದ ಬಂದಿದ್ದರು ಭಕ್ತರು?

Sunrise Facility Services, Sri sai Trust Shimoga

Leave a Comment