‘ನಾನು ಪುನೀತಣ್ಣ, ಶಿವಣ್ಣನ ಅಭಿಮಾನಿ’, ಶಿವಮೊಗ್ಗ ದಸರಾದಲ್ಲಿ ಕಾಫಿನಾಡು ಚಂದು ಅಬ್ಬರ

ಶಿವಮೊಗ್ಗLIVE

ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ

 SHIVAMOGGA LIVE NEWS 

SHIMOGA | ಸೋಷಿಯಲ್ ಮೀಡಿಯಾ ಸ್ಟಾರ್ ಕಾಫಿನಾಡು ಚಂದು (COFFEENADU CHANDU) ಈ ಭಾರಿ ಶಿವಮೊಗ್ಗ ದಸರಾದಲ್ಲಿ ಅಬ್ಬರಿಸಿದ್ದಾರೆ. ಚಂದುವನ್ನು ನೋಡಲು, ಅವರ ಮಾತು, ಹಾಡು ಕೇಳಲು, ಡಾನ್ಸ್ ನೋಡಲು ನೂಕು ನುಗ್ಗಲು ಉಂಟಾಯಿತು.

Coffenadu-Chandu-in-Shimoga-Dasara-2022

ನಗರದ ಫ್ರೀಡಂ ಪಾರ್ಕ್ ನಲ್ಲಿ ಮಹಿಳಾ ದಸರಾ ಕಾರ್ಯಕ್ರಮದ ಸಮಾರೋಪ ಸಮಾರಂಭದ ಅಂಗವಾಗಿ ಕಾಫಿನಾಡು ಚಂದು ಅವರನ್ನು ಮುಖ್ಯ ಅತಿಥಿಯಾಗಿ ಆಹ್ವಾನಿಸಲಾಗಿತ್ತು. ಚಂದು ಬರುವ ವಿಚಾರ ತಿಳಿದು ದೊಡ್ಡ ಸಂಖ್ಯೆಯಲ್ಲಿ ಅಭಿಮಾನಿಗಳು ಜಮಾಯಿಸಿದ್ದರು.

ವೇದಿಕೆ ಮುಂದೆ ಜನವೋ ಜನ COFFEENADU CHANDU

ಕಾಫಿನಾಡು ಚುಂದುವನ್ನು (COFFEENADU CHANDU) ವೇದಿಕೆಗೆ ಆಹ್ವಾನಿಸುತ್ತಿದ್ದಂತೆ ಅಭಿಮಾನಿಗಳು ವೇದಿಕೆ ಮುಂಭಾಗಕ್ಕೆ ಬಂದು ನಿಂತರು. ಕೆಲವರು ಕಾಫಿ ನಾಡು ಚಂದು ಪರವಾಗಿ ಘೋಷಣೆಗಳನ್ನು ಕೂಗಿದರು.

Shimoga Nanjappa Hospital

ದಸರಾ ಸಮಿತಿಯವರು ಮತ್ತು ಉಳಿದ ಅತಿಥಿಗಳು ಮಾತು ಆರಂಭಿಸುತ್ತಿದ್ದಂತೆ ‘ಚಂದುಗೆ ಮಾತನಾಡಲು ಕೊಡಿ’ ಎಂದು ಕೂಗುತ್ತಿದ್ದರು. ಇದೆ ಕಾರಣಕ್ಕೆ ಉಳಿದವರು ಮಾತು ಮೊಟಕುಗೊಳಿಸಬೇಕಾಯಿತು.

COFFEENADU CHANDU ಹಾಡು, ಡಾನ್ಸಿಗೆ ಫ್ಯಾನ್ಸ್ ಕೇಕೆ

ಕಾಫಿ ನಾಡು ಚಂದು ಮಾತು ಆರಂಭಿಸುತ್ತಿದ್ದಂತೆ ಅಭಿಮಾನಿಗಳು ಶಿಳ್ಳೆ, ಚಪ್ಪಾಳೆ ಹೊಡೆದು ಕೇಕೆ ಹಾಕಿದರು. ಮಹಿಳಾ ದಸರಾ ಕುರಿತು ಸ್ವಲ್ಪ ಹೊತ್ತು ಮಾತನಾಡಿದ ಚಂದು, ಬಳಿಕ ತನ್ನದೆ ಶೈಲಿಯ ಹಾಡುಗಳು, ಹುಟ್ಟುಹಬ್ಬದ ಶುಭಾಶಯಗಳನ್ನು ಹೇಳಿ ಡಾನ್ಸ್ ಮಾಡಲು ಆರಂಭಿಸಿದರು.

Coffenadu-Chandu-in-Shimoga-Dasara-2022

ಕೊನೆಗೆ ತನ್ನದೆ ಧ್ವನಿಯಲ್ಲಿ ನಿರ್ಮಾಣವಾಗಿರುವ ಡಿಜೆ ಸಾಂಗ್ ಗೆ ಚಂದು ಹೆಜ್ಜೆ ಹಾಕಿದರು. ಆಗಂತೂ ಅಭಿಮಾನಿಗಳು ONCE MORE ಅಂತಾ ಪಟ್ಟು ಹಿಡಿದರು.

ಸೆಲ್ಫಿ, ಫೋಟೊಗೆ ಮುಗಿಬಿದ್ದ ಫ್ಯಾನ್ಸ್

ಕಾಫಿ ನಾಡು ಚಂದು ವೇದಿಕೆ ಮೇಲೆ ಡಾನ್ಸ್ ಮಾಡುವುದನ್ನು ಮೊಬೈಲ್ ಫೋನುಗಳಲ್ಲಿ ರೆಕಾರ್ಡ್ ಮಾಡಲು ಜನರು ಹರಸಾಹಸ ಪಟ್ಟರು. ಇನ್ನೊಂದೆಡೆ ಕಾರ್ಯಕ್ರಮ ಮುಗಿಯುತ್ತಿದ್ದಂತೆ ಚಂದು ಜೊತೆ ಸೆಲ್ಫಿಗಾಗಿ ಮುಗಬಿದ್ದರು. ಪೊಲೀಸ್ ಸಿಬ್ಬಂದಿ, ದಸರಾ ಸಮಿತಿಯವರು ಚಂದ ಅವರನ್ನು ಕಾರಿಗೆ ಹತ್ತಿಸಲು ಹರಸಾಹಸ ಪಡಬೇಕಾಯಿತು.

Coffenadu-Chandu-in-Shimoga-Dasara-2022

Coffenadu-Chandu-in-Shimoga-Dasara-2022

Coffenadu-Chandu-in-Shimoga-Dasara-2022

Shimoga Nanjappa Hospital

Coffenadu-Chandu-in-Shimoga-Dasara-2022

Coffenadu-Chandu-in-Shimoga-Dasara-2022

Coffenadu-Chandu-in-Shimoga-Dasara-2022

Coffenadu-Chandu-in-Shimoga-Dasara-2022

Shimoga Nanjappa Hospital

Coffenadu-Chandu-in-Shimoga-Dasara-2022

Coffenadu-Chandu-in-Shimoga-Dasara-2022

Coffenadu-Chandu-in-Shimoga-Dasara-2022

Coffenadu-Chandu-in-Shimoga-Dasara-2022

Coffenadu-Chandu-in-Shimoga-Dasara-2022

Coffenadu-Chandu-in-Shimoga-Dasara-2022

Shimoga Nanjappa Hospital

ಕ್ಲಿಕ್ ಮಾಡಿ ಇದನ್ನೂ ಓದಿ ಶಿವಮೊಗ್ಗದಲ್ಲಿ ರೈತ ದಸರಾದ ಮೆರಗು ಹೆಚ್ಚಿಸಿದ ಕೆಸರು ಗದ್ದೆ ಓಟ, ಹಗ್ಗ ಜಗ್ಗಾಟ

ADVERTISEMENT

  • ಆರೋಗ್ಯ ತುರ್ತು ಸಂದರ್ಭದಲ್ಲಿ ಹಣಕಾಸು ಹೊಂದಿಸುವುದು ಸುಲಭವೇನಲ್ಲ. ಒಂದು ವೇಳೆ INSURANCE ಇದ್ದರೆ, ನಿರಮ್ಮಳವಾಗಿರಬಹುದು ಅಲ್ಲವೆ? ಈಗಲೆ INSURANCE ಮಾಡಿಸಿ. ಒಳ್ಳೆಯ INSURANCE PLANSಗಾಗಿ ಕರೆ ಮಾಡಿ – LIC LIFE INSURANCE – ಅನಿಲ್ 9538414151, ಪ್ರಶಾಂತ್ 9972194422
  • ಸುಂದರ ಮನೆ ಕಟ್ಟಬೇಕು, ಸ್ವಂತ ಮನೆಯಲ್ಲಿ ನೆಮ್ಮದಿಯ ಬದುಕು ಸಾಗಿಸಬೇಕು ಅನ್ನವು ಆಸೆ ಯಾರಿಗಿಲ್ಲ? ಇನ್ಯಾಕೆ ತಡ? ಮನೆ ಕಟ್ಟಲು LICಯಿಂದ HOUSING LOAN ಲಭ್ಯವಿದೆ. ಇವತ್ತೇ ಸಂಪರ್ಕಿಸಿ – ಪ್ರಶಾಂತ್ 9972194422

SHIVAMOGGA LIVE WHATSAPP

ನಿಮ್ಮೂರು, ನಿಮ್ಮ ಏರಿಯಾದ ಕಾರ್ಯಕ್ರಮಗಳು, ಸಮಸ್ಯೆಗಳು ಸುದ್ದಿಯಾಗಬೇಕಾ? ನೀವೇ ವರದಿಗಾರರಾಗಿ. ವಿಡಿಯೋ, ಫೋಟೊ ಮಾಡಿ 7411700200 ಮೊಬೈಲ್ ನಂಬರ್’ಗೆ ವಾಟ್ಸಪ್ ಮಾಡಿ. ನೆನಪಿರಲಿ, ಸುದ್ದಿ ಪ್ರಕಟಣೆಗೆ ನಾವು ಹಣ ಪಡೆಯುವುದಿಲ್ಲ.

ನಿಮ್ಮ ಕನಸಿನ ಮನೆ ಈಗ ನನಸು! 🏠

ಅತಿ ಕಡಿಮೆ ಬಡ್ಡಿ ದರದಲ್ಲಿ ಸುಲಭ ಗೃಹ ಸಾಲ


ಈಗಲೇ ಕರೆ ಮಾಡಿ
9972194422


 

About The Editor

ನಿತಿನ್‌ ಆರ್‌.ಕೈದೊಟ್ಲು

Nitin Kaidotlu - Editor - Shivamogga Live

Leave a Comment