ಶಿವಮೊಗ್ಗ ಲೈವ್.ಕಾಂ
ಶಿವಮೊಗ್ಗ ಜಿಲ್ಲೆಯ ನಂಬರ್ 1 ಸುದ್ದಿ ಮಾಧ್ಯಮ
SHIVAMOGGA LIVE NEWS
SAGARA | ಕರ್ತವ್ಯ ನಿರತ ಪೊಲೀಸರು ತಮ್ಮ ಆವರಣ ಪ್ರವೇಶಿಸಲು ಪಾಸ್ (PASS CONTROVERSY) ಪಡೆದು ಬರಬೇಕು ಎಂದು ಕರ್ನಾಟಕ ಪವರ್ ಕಾರ್ಪೊರೇಷನ್ ಭದ್ರತಾ ಸಿಬ್ಬಂದಿ ಸೂಚಿಸಿದ್ದಾರೆ. ಇದರಿಂದ ವಿವಾದ ಹುಟ್ಟಿಕೊಂಡಿದೆ. ಇವುಗಳ ಮಧ್ಯೆ ಮೊಬೈಲ್ ವಿಡಿಯೋಗಳು, ಸಿಸಿಟಿವಿ ದೃಶ್ಯಗಳು ವೈರಲ್ ಆಗಿದ್ದು, ಪರ – ವಿರೋಧದ ಚರ್ಚೆಗೆ ಕಾರಣವಾಗಿದೆ.
ಸಾಗರ ತಾಲೂಕು ಕಾರ್ಗಲ್ ಬಳಿ ಕೆಪಿಸಿ ಚೇಕ್ ಪೋಸ್ಟ್ ನಲ್ಲಿ ಘಟನೆ ಸಂಭವಿಸಿದೆ. ಕಾರ್ಗಲ್ ಠಾಣೆ ಸಬ್ ಇನ್ಸ್ ಪೆಕ್ಟರ್ ತಿರುಮಲೇಶ್ ಮತ್ತು ಸಿಬ್ಬಂದಿ ಜೀಪಿನಲ್ಲಿ ಗಸ್ತು ತಿರುಗುತ್ತಿದ್ದರು. ಈ ಸಂದರ್ಭ ಕರ್ನಾಟಕ ಪವರ್ ಕಾರ್ಪೊರೇಷನ್ (ಕೆಪಿಸಿಎಲ್) ಭದ್ರತಾ ಸಿಬ್ಬಂದಿ ತಮ್ಮ ಆವರಣ ಪ್ರವೇಶಿಸಲು ಪಾಸ್ ಬೇಕು ಎಂದು ಕೇಳಿದ್ದಾರೆ. ಆಗ ಮಾತಿನ ಚಕಮಕಿ ನಡೆದಿದೆ. ಇದರ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.
(PASS CONTROVERSY)
ಕೆಪಿಸಿಎಲ್ ಸೆಕ್ಯೂರಿಟಿ ವಾದವೇನು?
ಕೆಪಿಸಿಎಲ್ ಆವರಣ ಪ್ರವೇಶಿಸಲು ಪಾಸ್ (PASS CONTROVERSY) ಕಡ್ಡಾಯವೆಂದು ಭದ್ರತಾ ಸಿಬ್ಬಂದಿ ತಿಳಿಸಿದ್ದಾರೆ. ‘ಆವರಣದೊಳಗೆ ಹೋಗಲು ಪಾಸ್ ಬೇಕು. ಕೆಪಿಸಿಎಲ್ ಹಿರಿಯ ಅಧಿಕಾರಿಗಳಿಂದ ಪಾಸ್ ಪಡೆದು ಬರಬೇಕು. ಪೊಲೀಸರು ಒಳ ಪ್ರವೇಶಿಸಬೇಕಿದ್ದರೆ ತಮ್ಮ ವಾಕಿ ಟಾಕಿ ಮೂಲಕ ಹಿರಿಯ ಅಧಿಕಾರಿಗಳನ್ನ ವಿಚಾರಿಸಬೇಕಾಗುತ್ತದೆ. ಅವರು ಒಳಗೆ ಬಿಡುವಂತೆ ಸೂಚಿಸಿದರೆ ಮಾತ್ರ ಬಿಡುತ್ತೇವೆ’ ಎಂದು ಸೆಕ್ಯೂರಿಟಿ ಗಾರ್ಡ್ ವಿಡಿಯೋದಲ್ಲಿ ತಿಳಿಸಿದ್ದಾರೆ.
(PASS CONTROVERSY)
ಪೊಲೀಸ್ ಸಿಬ್ಬಂದಿ ಹೇಳೋದೇನು?
ಇತ್ತ ಕಾರ್ಗಲ್ ಠಾಣೆ ಸಬ್ ಇನ್ಸ್ ಪೆಕ್ಟರ್ ತಿರುಮಲೇಶ್ ಅವರು ಮಾತನಾಡಿರುವ ವಿಡಿಯೋ ವೈರಲ್ ಆಗಿದೆ. ಅದರಲ್ಲಿ ‘ಪೊಲೀಸರು ಕರ್ತವ್ಯ ನಿಮಿತ್ತ ಬಂದಾಗ ಪಾಸ್ ಪಡೆದು ಬರಬೇಕಾ. ಸಮವಸ್ತ್ರ ಧರಿಸಿ ಬಂದ ಪೊಲೀಸರನ್ನು ತಡೆಯುವಂತಿಲ್ಲ. ಒಳ ಬಿಡಲು ಪಾಸ್ ಬೇಕು ಎಂಬ ಆದೇಶ ಪ್ರತಿ ಇದ್ದರೆ ತೋರಿಸಿ. ನಾವು ಒಳಗೆ ಬರುವುದಿಲ್ಲ’ ಎಂದು ತಿಳಿಸಿದ್ದಾರೆ.
VIRAL VIDEO
ಸಿಸಿಟಿವಿ ದೃಶ್ಯವು ವೈರಲ್
ಕೆಪಿಸಿಎಲ್ ಭದ್ರತಾ ಸಿಬ್ಬಂದಿ ಮತ್ತು ಸಬ್ ಇನ್ಸ್ ಪೆಕ್ಟರ್ ತಿರುಮಲೇಶ್ ಅವರು ಮಾತನಾಡಿರುವ ವಿಡಿಯೋಗಳ ನಡುವೆ ಸಿಸಿಟಿವಿ ದೃಶ್ಯಾವಳಿಯೊಂದು ವೈರಲ್ ಆಗಿದೆ. ಇದು ಕೆಪಿಸಿಎಲ್ ಚೆಕ್ ಪೋಸ್ಟ್ ನಲ್ಲಿ ಅಳವಡಿಸಿರುವ ಕ್ಯಾಮರಾದಲ್ಲಿ ಸೆರೆಯಾದ ದೃಶ್ಯ. ಇದರಲ್ಲಿ ಸಬ್ ಇನ್ಸ್ ಪೆಕ್ಟರ್ ತಿರುಮಲೇಶ್ ಅವರು ಭದ್ರತಾ ಸಿಬ್ಬಂದಿಯನ್ನು ತಳ್ಳಿರುವ ದೃಶ್ಯವಿದೆ.
ಇದೇನು ಮೊದಲಲ್ಲ
ಪೊಲೀಸರು ಮತ್ತು ಕೆಪಿಸಿಎಲ್ ಭದ್ರತಾ ಸಿಬ್ಬಂದಿ ನಡುವಿನ ಸಂಘರ್ಷ ಇದೆ ಮೊದಲಲ್ಲ. ಕೆಪಿಸಿಎಲ್ ಆವರಣ ಅತ್ಯಂತ ಸೂಕ್ಷ್ಮ ಪ್ರದೇಶ. ಇದೆ ಕಾರಣಕ್ಕೆ ಸಾರ್ವಜನಿಕ ಪ್ರವೇಶಕ್ಕೆ ನಿಷೇಧವಿದೆ. ಆದರೆ ಕರ್ತವ್ಯ ನಿರತ ಪೊಲೀಸರನ್ನು ಕೂಡ ಇಲ್ಲಿ ಬಿಡುವುದಿಲ್ಲ ಎಂಬ ಆರೋಪವಿದೆ. ಈ ಹಿಂದೆಯು ಹಲವು ಭಾರಿ ಪೊಲೀಸರನ್ನು ತಡೆದು, ಪಾಸ್ ಕೇಳಿ, ಹಿಂದಕ್ಕೆ ಕಳುಹಿಸಲಾಗಿದೆ ಎಂಬ ಆರೋಪವಿದೆ.
ಶಾಸಕರೆ ಒಮ್ಮೆ ಧರಣಿ ಮಾಡಿದ್ದರು
ಕೆಪಿಸಿಎಲ್ ಅಧಿಕಾರಿಗಳು ಸಾರ್ವಜನಿಕರಿಗೆ ಕಿರುಕುಳ ನೀಡುತ್ತಿದ್ದಾರೆ ಎಂದು ಆರೋಪಿಸಿ, ಈ ಹಿಂದೆ ಶಾಸಕ ಹರತಾಳು ಹಾಲಪ್ಪ ಅವರು ಧರಣಿ ನಡೆಸಿದ್ದರು. ರೈತರಿಗೆ ಕಿರುಕುಳ ನೀಡಲಾಗುತ್ತಿದೆ. ನೀರು ಪೂರೈಕೆಗೆ ಸಮಸ್ಯೆ ಉಂಟು ಮಾಡುತ್ತಿದ್ದಾರೆ ಎಂದು ಕಾರ್ಗಲ್ ಕೆಪಿಸಿ ಕಚೇರಿ ಮುಂಭಾಗ ಧರಣಿ ಮಾಡಿದ್ದರು.
ಏನಿದು ಕೆಪಿಸಿಎಲ್? ಇಲ್ಲೇನು ಸಮಸ್ಯೆ?
ಶರಾವತಿ ಹಿನ್ನೀರು ಭಾಗದಲ್ಲಿ ಜಲವಿದ್ಯುತ್ ಉತ್ಪಾದಿಸಲಾಗುತ್ತದೆ. ಕರ್ನಾಟಕ ವಿದ್ಯುತ್ ನಿಗಮ ನಿಯಮಿತದ ವತಿಯಿಂದ ವಿದ್ಯುತ್ ಉತ್ಪಾದನೆ ಕಾರ್ಯ ನಡೆಸಲಾಗುತ್ತಿದೆ. ಹಾಗಾಗಿ ವಿದ್ಯುತ್ ಉತ್ಪಾದನಾ ಕೇಂದ್ರ ವ್ಯಾಪ್ತಿಯನ್ನು ನಿಷೇಧಿತ ಪ್ರದೇಶ ಎಂದು ಘೋಷಿಸಲಾಗಿದೆ. ಕೆಪಿಸಿ ಸಿಬ್ಬಂದಿ ಹೊರತು ಉಳಿದವರಾರಿಗೂ ಇಲ್ಲಿ ಪ್ರವೇಶವಿಲ್ಲ.
ಕ್ಲಿಕ್ ಮಾಡಿ ಇದನ್ನೂ ಓದಿ | ಗಾಜನೂರು ಮೀನು ಹೊಟೇಲ್ ನಲ್ಲಿ ಬಿಲ್ ವಿಚಾರವಾಗಿ ಜಗಳ, ಗ್ರಾಹಕನಿಗೆ ಗೂಸ
ಆದರೆ ಕೆಪಿಸಿ ವ್ಯಾಪ್ತಿ ಅಂಚಿನಲ್ಲಿ ಹಲವು ಗ್ರಾಮಗಳಿವೆ. ವಡನಬೈಲು, ಸುಂಕದ ಮನೆ, ಮರಾಠಿ ಕ್ಯಾಂಪ್ ಸೇರಿದಂತೆ ಒಂದೆರಡು ಗ್ರಾಮಗಳಿಗೆ ಕೆಪಿಸಿ ವ್ಯಾಪ್ತಿಯ ರಸ್ತೆಯಲ್ಲೇ ಸಂಚರಿಸಬೇಕು. ಇಲ್ಲಿಯ ನಿವಾಸಿಗಳು ಕೆಪಿಸಿ ಜಾಗದಿಂದ ಹಾದು ಹೋಗಲು ಪಾಸ್ ಪಡೆಯಬೇಕು. ಅಷ್ಟೆ ಅಲ್ಲ, ಆ ಮನೆಗಳಿಗೆ ನಂಟರು, ಇಷ್ಟರು ಬರುವುದಿದ್ದರು ಕೆಪಿಸಿ ಕಚೇರಿಯಿಂದ ಪಾಸ್ ಬೇಕು. ಇದೆ ಕಾರಣಕ್ಕೆ ಸಾರ್ವಜನಿಕರು ಕಿರಿಕಿರಿ ಅನುಭವಿಸುತ್ತಿದ್ದಾರೆ. ಇನ್ನು, ವಡನಬೈಲು ಪದ್ಮಾವತಿ ದೇವಿ ದೇವಸ್ಥಾನ ಜೈನರ ಪ್ರಮುಖ ಆರಾಧನ ಕೇಂದ್ರ. ಇಲ್ಲಿಗೆ ಬರುವ ಭಕ್ತರು ಕೂಡ ಪಾಸ್ ಪಡೆಯುವುದು ಕಡ್ಡಯವಾಗಿದೆ.
ಈ ಗ್ರಾಮಗಳು ಕಾರ್ಗಲ್ ಪೊಲೀಸ್ ಠಾಣೆ ವ್ಯಾಪ್ತಿಗೆ ಬರಲಿವೆ. ಇಲ್ಲಿ ಬಂದೋಬಸ್ತ್ ಮತ್ತು ಗಸ್ತು ತಿರುಗಲು ಪೊಲೀಸರು ಸಂಚರಿಸಬೇಕು. ಆದರೆ ನಿತ್ಯ ಪಾಸ್ ಪಡೆಯಲು ಸಾಧ್ಯವೆ ಅನ್ನುವುದು ಪೊಲೀಸರ ವಾದ. ಇತ್ತ ಪಾಸ್ ಇಲ್ಲದೆ ಯಾರನ್ನೂ ಒಳಗೆ ಬಿಡುವಂತಿಲ್ಲ ಅನ್ನವುದು ಕೆಪಿಸಿ ಭದ್ರತಾ ಸಿಬ್ಬಂದಿಯ ಪಟ್ಟು. ಈ ವಿವಾದ ಈಗ ಸ್ಪೋಟಗೊಂಡಿದೆ.
ಕ್ಲಿಕ್ ಮಾಡಿ ಇದನ್ನೂ ಓದಿ | 30 ಅಡಿ ಮೇಲಿಂದ ಬಿದ್ದ ಕಾರ್ಮಿಕ, ಮಾಲೀಕನ ವಿರುದ್ಧ ಪ್ರಕರಣ
ADVERTISEMENT
- ಆರೋಗ್ಯ ತುರ್ತು ಸಂದರ್ಭದಲ್ಲಿ ಹಣಕಾಸು ಹೊಂದಿಸುವುದು ಸುಲಭವೇನಲ್ಲ. ಒಂದು ವೇಳೆ INSURANCE ಇದ್ದರೆ, ನಿರಮ್ಮಳವಾಗಿರಬಹುದು ಅಲ್ಲವೆ? ಈಗಲೆ INSURANCE ಮಾಡಿಸಿ. ಒಳ್ಳೆಯ INSURANCE PLANSಗಾಗಿ ಕರೆ ಮಾಡಿ – LIC LIFE INSURANCE – ಅನಿಲ್ 9538414151, ಪ್ರಶಾಂತ್ 9972194422
- ಸುಂದರ ಮನೆ ಕಟ್ಟಬೇಕು, ಸ್ವಂತ ಮನೆಯಲ್ಲಿ ನೆಮ್ಮದಿಯ ಬದುಕು ಸಾಗಿಸಬೇಕು ಅನ್ನವು ಆಸೆ ಯಾರಿಗಿಲ್ಲ? ಇನ್ಯಾಕೆ ತಡ? ಮನೆ ಕಟ್ಟಲು LICಯಿಂದ HOUSING LOAN ಲಭ್ಯವಿದೆ. ಇವತ್ತೇ ಸಂಪರ್ಕಿಸಿ – ಪ್ರಶಾಂತ್ 9972194422
SHIVAMOGGA LIVE WHATSAPP
ನಿಮ್ಮೂರು, ನಿಮ್ಮ ಏರಿಯಾದ ಕಾರ್ಯಕ್ರಮಗಳು, ಸಮಸ್ಯೆಗಳು ಸುದ್ದಿಯಾಗಬೇಕಾ? ನೀವೇ ವರದಿಗಾರರಾಗಿ. ವಿಡಿಯೋ, ಫೋಟೊ ಮಾಡಿ 7411700200 ಮೊಬೈಲ್ ನಂಬರ್’ಗೆ ವಾಟ್ಸಪ್ ಮಾಡಿ. ನೆನಪಿರಲಿ, ಸುದ್ದಿ ಪ್ರಕಟಣೆಗೆ ನಾವು ಹಣ ಪಡೆಯುವುದಿಲ್ಲ.
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422