SHIVAMOGGA LIVE NEWS | 2 JANUARY 2024 (ಈ ಸುದ್ದಿಯನ್ನು ಇನ್ನು 36 ಸೆಕೆಂಡ್‌ಗಳಲ್ಲಿ ಓದಿ ಮುಗಿಸಬಹುದು)
ಶಿವಮೊಗ್ಗ : ಬಾಲರಾಜ್ ಅರಸ್ ರಸ್ತೆಯಲ್ಲಿ ಕೇಬಲ್ ಡೆಕ್ಟ್‌ನ ಸ್ಲ್ಯಾಬ್‌ಗಳು ಅಪಾಯಕಾರಿ ಸ್ಥಿತಿಯಲ್ಲಿರುವ ಕುರಿತು ಶಿವಮೊಗ್ಗ ಲೈವ್.ಕಾಂ ವರದಿ ಬೆನ್ನಿಗೆ (Impact) ಅಧಿಕಾರಿಗಳು ತುರ್ತಾಗಿ ರಿಪೇರಿ ಮಾಡಿಸಿದ್ದಾರೆ. ಹಾಳಾಗಿದ್ದ ಕೇಬಲ್ ಡೆಕ್ಟ್‌ಗಳ ಸ್ಲ್ಯಾಬ್‌ಗಳನ್ನು ಬದಲು ಮಾಡಿದ್ದಾರೆ.
ಮಹಾವೀರ ವೃತ್ತದಿಂದ ಕೆಇಬಿ ವೃತ್ತದವರೆಗೆ ರಸ್ತೆಯ ಎರಡು ಬದಿಯಲ್ಲು ಕೇಬಲ್ ಡೆಕ್ಟ್‌ಗಳಿವೆ. ಭಾರಿ ವಾಹನ ಸಂಚಾರದಿಂದಾಗಿ ಈ ಕೇಬಲ್ ಡೆಕ್ಟ್‌ಗೆ ಅಳವಡಿಸಿದ್ದ ಸ್ಲ್ಯಾಬ್ ಹಾನಿಗೀಡಾಗಿದ್ದವು. ಇವುಗಳಿಂದಾಗಿ ಅಪಘಾತ ಸಂಭವಿಸುವ ಸಾಧ್ಯತೆಯು ಇತ್ತು. ಈ ಕುರಿತು ಶಿವಮೊಗ್ಗ ಲೈವ್.ಕಾಂ ಶಿವಮೊಗ್ಗದ ವಾಹನ ಸವಾರರೆ ಹುಷಾರ್, ಸ್ವಲ್ಪ ಯಾಮಾರಿದರೆ ನಿಮ್ಮ ಪ್ರಾಣಕ್ಕೆ ಸಂಚಕಾರ ಫಿಕ್ಸ್ ಎಂದು ವರದಿ ಮಾಡಿತ್ತು.

ವರದಿ ಬೆನ್ನಿಗೆ ತುರ್ತು ರಿಪೇರಿ ಕಾರ್ಯ ಕೈಗೊಂಡ ಅಧಿಕಾರಿಗಳು ಸ್ಲ್ಯಾಬ್‌ಗಳನ್ನು ಬದಲಿಸಿದ್ದಾರೆ. ಇದರಿಂದ ಸದ್ಯಕ್ಕೆ ವಾಹನ ಸವಾರರು ಈ ರಸ್ತೆಯಲ್ಲಿ ಆತಂಕವಿಲ್ಲದೆ ಸಂಚರಿಸಬಹುದಾಗಿದೆ.
