ಶಿವಮೊಗ್ಗದ 100 ಅಡಿ ರಸ್ತೆಯ ಫುಟ್ ಪಾತ್ ಕೆಳಗೆ ವಿಚಿತ್ರ ಶಬ್ದ, ಹೊಗೆ ಪ್ರತ್ಯಕ್ಷ, ಜನರಲ್ಲಿ ಆತಂಕ

ಶಿವಮೊಗ್ಗ
LIVE

ಕಡಿಮೆ ಬಡ್ಡಿಯಲ್ಲಿ ಗೃಹ ಸಾಲ (HOME LOAN)

ನಿಮ್ಮ ಸ್ವಂತ ಮನೆಯ ಕನಸು ಈಗ ನನಸು!
ಮನೆ ಕಟ್ಟಲು ಅಥವಾ ಸೈಟ್ ಖರೀದಿಸಲು ಸಾಲ ಸೌಲಭ್ಯ.

✅ ಅತೀ ಕಡಿಮೆ ಬಡ್ಡಿ ದರ
✅ ತ್ವರಿತ ಸಾಲ ಮಂಜೂರಾತಿ
✅ ಸುಲಭ ಮರುಪಾವತಿ ಕಂತುಗಳು

ಹೆಚ್ಚಿನ ಮಾಹಿತಿಗಾಗಿ ಕರೆ ಮಾಡಿ ಅಥವಾ ವಾಟ್ಸಾಪ್ ಮಾಡಿ:

99721 94422
*ಷರತ್ತುಗಳು ಅನ್ವಯಿಸುತ್ತವೆ

 SHIVAMOGGA LIVE NEWS 

SHIMOGA | ಫುಟ್ ಪಾತ್ ಕೆಳಗೆ (FOOT PATH) ವಿಚಿತ್ರ ಶಬ್ದ ಕೇಳಿಸಿದ್ದು, ಹೊಗೆ ಬಂದಿದೆ. ಇದನ್ನು ಕಂಡು ಸ್ಥಳೀಯರು ಆತಂಕಕ್ಕೀಡಾಗಿದ್ದಾರೆ.

ಶಿವಮೊಗ್ಗ ಲೈವ್‌ನ ಪ್ರತಿ ಅಪ್‌ಡೇಟ್‌ ನೀವೇ ಮೊದಲು ಪಡೆಯಲು ಕೆಳಗಿನ ಗ್ರೂಪ್‌ಗಳನ್ನು ಜಾಯಿನ್ ಆಗಿ:

Shimoga Nanjappa Hospital

ನಗರದ 100 ಅಡಿ ರಸ್ತೆಯಲ್ಲಿ ನಿರ್ಮಲಾ ಆಸ್ಪತ್ರೆ ಸಮೀಪ ಘಟನೆ ಸಂಭವಿಸಿದೆ. ಸ್ಮಾರ್ಟ್ ಸಿಟಿ ಫುಟ್ ಪಾತ್ ಕಳೆಗೆ ಶಬ್ದ ಮತ್ತು ಹೊಗೆ ಬಂದಿದೆ.

(FOOT PATH)

ಹೊಗೆ ಕಂಡು ಸ್ಥಳೀಯರಲ್ಲಿ ಆತಂಕ

ಸ್ಮಾರ್ಟ್ ಸಿಟಿ ಫುಟ್ ಪಾತ್ ಅಡಿಯಲ್ಲಿ ವಿಚಿತ್ರ ಶಬ್ದ ಕೇಳಿಸಿದೆ. ಕೆಲವೆ ಕ್ಷಣದಲ್ಲಿ ಸಣ್ಣ ಪ್ರಮಾಣದಲ್ಲಿ ಹೊಗೆ ಬರಲು ಶುರುವಾಗಿದೆ.  ಇದನ್ನು ಗಮನಿಸಿದ ಸ್ಥಳೀಯರು ಆತಂಕಕ್ಕೀಡಾಗಿದ್ದಾರೆ. ಕೂಡಲೆ ಮಹಾನಗರ ಪಾಲಿಕೆ ಮತ್ತು ಮೆಸ್ಕಾಂ ಇಲಾಖೆಗೆ ಕರೆ ಮಾಡಿದ್ದಾರೆ.

Shimoga Nanjappa Hospital

‘ಬೆಳಗ್ಗೆ 9 ಗಂಟೆ ಹೊತ್ತಿಗೆ ಅಂಗಡಿ ಬಾಗಿಲು ತೆಗೆಯುವಾಗ ಘಟನೆ ಸಂಭವಿಸಿದೆ. ಟ್ರಾಕ್ಟರ್ ಚಲಿಸುತ್ತಿರುವಂತೆ ಶಬ್ದ ಕೇಳಿಸಿತು. ಹತ್ತಿರ ಬಂದು ನೋಡಿದಾಗ ಹೊಗೆ ಬರುತ್ತಿತ್ತು. ಕೂಡಲೆ ಪಾಲಿಕೆ ಸದಸ್ಯರು ಮತ್ತು ಮೆಸ್ಕಾಂಗೆ ಕರೆ ಮಾಡಿ ಮಾಹಿತಿ ನೀಡಿದೆವು. ವಿಡಿಯೋ ಚಿತ್ರೀಕರಣ ಮಾಡಿ ಕಳುಹಿಸಿದೆವು’, ಅನ್ನುತ್ತಾರೆ ವ್ಯಾಪಾರಿ ರಿಷಬ್ ಜೈನ್.

(FOOT PATH)

ವಿದ್ಯುತ್ ಪೂರೈಕೆ ಕಡಿತ

ಫುಟ್ ಪಾತ್ ಕೆಳಗೆ (FOOT PATH) ಹೊಗೆ ಬರುತ್ತಿರುವುದನ್ನು ಗಮನಿಸಿದ ಮೆಸ್ಕಾಂ ಸಿಬ್ಬಂದಿ ಕೂಡಲೆ ವಿದ್ಯುತ್ ಸ್ಥಗಿತಗೊಳಿಸಿದ್ದಾರೆ. ಬಳಿಕ ಪರಿಶೀಲನೆ ನಡೆಸಿದರು. ಇದರಿಂದ ಸ್ಥಳೀಯರು ನಿಮ್ಮದಿಯ ನಿಟ್ಟುಸಿರು ಬಿಡುವಂತಾಯಿತು.

ಕ್ಲಿಕ್ ಮಾಡಿ ಇದನ್ನೂ ಓದಿ ರಾತ್ರಿ ಮನೆ ಗೋಡೆ ಮುಟ್ಟಿದರೆ ಕರೆಂಟ್ ಶಾಕ್, ಜನಕ್ಕೆ ಢವ ಢವ, ಸ್ಥಳಕ್ಕೆ ಅಧಿಕಾರಿಗಳು ದೌಡು

ಸ್ಮಾರ್ಟ್ ಸಿಟಿ ಯೋಜನೆ ಅಡಿ ಭೂಗತ ವಿದ್ಯುತ್ ಕೇಬಲ್ ಅಳವಡಿಸಲಾಗಿದೆ. ಇದೆ ಕೇಬಲ್ ಮೂಲಕ ಮನೆಗಳಿಗೆ ವಿದ್ಯುತ್ ಪೂರೈಕೆಯಾಗಲಿದೆ. ತಾಂತ್ರಿಕ ದೋಷ ಉಂಟಾಗಿದ್ದು, ಶಬ್ದ ಮತ್ತು ಹೊಗೆ ಬಂದಿದೆ ಎಂದು ಹೇಳಲಾಗುತ್ತಿದೆ.

ಅಲ್ಲಲ್ಲಿ ಸಮಸ್ಯೆಯ ವಿಡಿಯೋ

ಸ್ಮಾರ್ಟ್ ಸಿಟಿ ಯೋಜನೆಯ ಭೂಗತ ವಿದ್ಯುತ್ ಕೇಬಲ್’ನಿಂದಾಗಿ ಅಲ್ಲಲ್ಲಿ ಸಮಸ್ಯೆಯಾಗಿದೆ. ಈಚೆಗೆ ಹೊಸಮನೆ ಬಡಾವಣೆಯಲ್ಲಿ ರಾತ್ರಿ ಗ್ರೌಂಡಿಂಗ್ ಸಂಭವಿಸಿತ್ತು. ಕೆಲವು ಕಡೆ ವಿದ್ಯುತ್ ಶಾರ್ಟ್ ಆಗಿರುವ ವರದಿಯಾಗಿದೆ. ಇವುಗಳ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿ ವೈರಲ್ ಆಗಿತ್ತು. ಇದು ಜನರಲ್ಲಿ ಆತಂಕ ಮೂಡಿಸಿತ್ತು.

jnnce college of engineering

ಕ್ಲಿಕ್ ಮಾಡಿ ಇದನ್ನೂ ಓದಿ ದೀಪಾವಳಿಗೆ ಯಶವಂತಪುರ ಶಿವಮೊಗ್ಗ ಮಧ್ಯೆ ವಿಶೇಷ ರೈಲು, ಟೈಮಿಂಗ್ ಏನು?

ADVERTISEMENT

  • ಆರೋಗ್ಯ ತುರ್ತು ಸಂದರ್ಭದಲ್ಲಿ ಹಣಕಾಸು ಹೊಂದಿಸುವುದು ಸುಲಭವೇನಲ್ಲ. ಒಂದು ವೇಳೆ INSURANCE ಇದ್ದರೆ, ನಿರಮ್ಮಳವಾಗಿರಬಹುದು ಅಲ್ಲವೆ? ಈಗಲೆ INSURANCE ಮಾಡಿಸಿ. ಒಳ್ಳೆಯ INSURANCE PLANSಗಾಗಿ ಕರೆ ಮಾಡಿ – LIC LIFE INSURANCE – ಅನಿಲ್ 9538414151, ಪ್ರಶಾಂತ್ 9972194422
  • ಸುಂದರ ಮನೆ ಕಟ್ಟಬೇಕು, ಸ್ವಂತ ಮನೆಯಲ್ಲಿ ನೆಮ್ಮದಿಯ ಬದುಕು ಸಾಗಿಸಬೇಕು ಅನ್ನವು ಆಸೆ ಯಾರಿಗಿಲ್ಲ? ಇನ್ಯಾಕೆ ತಡ? ಮನೆ ಕಟ್ಟಲು LICಯಿಂದ HOUSING LOAN ಲಭ್ಯವಿದೆ. ಇವತ್ತೇ ಸಂಪರ್ಕಿಸಿ – ಪ್ರಶಾಂತ್ 9972194422

SHIVAMOGGA LIVE WHATSAPP

ನಿಮ್ಮೂರು, ನಿಮ್ಮ ಏರಿಯಾದ ಕಾರ್ಯಕ್ರಮಗಳು, ಸಮಸ್ಯೆಗಳು ಸುದ್ದಿಯಾಗಬೇಕಾ? ನೀವೇ ವರದಿಗಾರರಾಗಿ. ವಿಡಿಯೋ, ಫೋಟೊ ಮಾಡಿ 7411700200 ಮೊಬೈಲ್ ನಂಬರ್’ಗೆ ವಾಟ್ಸಪ್ ಮಾಡಿ. ನೆನಪಿರಲಿ, ಸುದ್ದಿ ಪ್ರಕಟಣೆಗೆ ನಾವು ಹಣ ಪಡೆಯುವುದಿಲ್ಲ.

About The Editor

ನಿತಿನ್‌ ಆರ್‌.ಕೈದೊಟ್ಲು

Nitin Kaidotlu - Editor - Shivamogga Live

Leave a Comment