ಚಿನ್ನಾಭರಣ ಶೋ ರೂಂನಲ್ಲಿ ಅಸಲಿ ಸರ ಕದ್ದು, ಟ್ರೇನಲ್ಲಿ ನಕಲಿ ಸರ ಇಟ್ಟು ಪರಾರಿಯಾದ ಮಹಿಳೆ

ಶಿವಮೊಗ್ಗLIVE

ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ

 SHIVAMOGGA LIVE NEWS 

SHIMOGA | ಗ್ರಾಹಕರ ಸೋಗಿನಲ್ಲಿ ಬಂದು ಚಿನ್ನಾಭರಣದ ಅಂಗಡಿಯಲ್ಲಿ (GOLD SHOWROOM) ಸೇಲ್ಸ್ ಮನ್ ಗಮನ ಬೇರೆಡೆ ಸೆಳೆದು ಕಳ್ಳತನ ಮಾಡಲಾಗಿದೆ. ಅಸಲಿ ಕರಿಮಣಿ ಸರದ ಜಾಗದಲ್ಲಿ ನಕಲಿ ಕರಿಮಣಿ ಸರ ಇರಿಸಿ ಯಾಮಾರಿಸಿ, ಮಹಿಳೆ ಪರಾರಿಯಾಗಿದ್ದಾಳೆ.

Shimoga Nanjappa Hospital

ಗೋಪಿ ಸರ್ಕಲ್ ಬಳಿ ಇರುವ ಶೋ ರೂಂನಲ್ಲಿ ಘಟನೆ ನಡೆದಿದೆ. ಅ.17ರಂದು ಶೋ ರೂಂಗೆ ಬಂದಿದ್ದ ಮಹಿಳೆ ಕರಿಮಣಿ ಸರ ಖರೀದಿಸುವಂತೆ ನಟಿಸಿದ್ದಾಳೆ. ಕೌಂಟರ್ ನಲ್ಲಿದ್ದ ಸೇಲ್ಸ್ ಮನ್ ಗಮನವನ್ನು ಬೇರೆಡೆ ಸೆಳೆದು ಟ್ರೇನಲ್ಲಿದ್ದ ಕರಿಮಣಿ ಸರ ತೆಗೆದುಕೊಂಡಿದ್ದಾಳೆ.

(GOLD SHOWROOM)

ಖಾಲಿ ಟ್ರೇನಲ್ಲಿ ತಾನು ತಂದಿದ್ದ ನಕಲಿ ಕರಿಮಣಿ ಸರವನ್ನು ಇರಿಸಿ ಅಂಗಡಿಯಿಂದ (GOLD SHOWROOM) ಹೋಗಿದ್ದಾಳೆ. ಸಿಬ್ಬಂದಿ ಪರಿಶೀಲನೆ ನಡೆಸುತ್ತಿದ್ದಾಗ ಟ್ರೇನಲ್ಲಿ ನಕಲಿ ಕರಿಮಣಿ ಸರ ಇರುವುದು ಗೊತ್ತಾಗಿದೆ. ಸಿಸಿಟಿವಿ ಪರಿಶೀಲಿಸಿದಾಗ ಘಟನೆ ಬೆಳಕಿಗೆ ಬಂದಿದೆ.

ಕ್ಲಿಕ್ ಮಾಡಿ ಇದನ್ನೂ ಓದಿ ಹಾಡಹಗಲೆ ವಿದ್ಯಾರ್ಥಿನಿಯ ಅಪಹರಣಕ್ಕೆ ಯತ್ನ, ಕಲ್ಲಿನಿಂದ ಹೊಡೆದು ಸ್ನೇಹಿತೆಯ ರಕ್ಷಿಸಿದ ಬಾಲಕರು

46,200 ರೂ. ಮೌಲ್ಯದ 9 ಗ್ರಾಂ ತೂಕದ ಚಿನ್ನದ ಕರಿಮಣಿ ಸರ ಕದ್ದೊಯ್ದಿರುವ ಆರೋಪ ಸಂಬಂಧ ಅಪರಿಚಿತ ಮಹಿಳೆ ವಿರುದ್ಧ ಶೋ ರೂಂ ಮಾಲೀಕರು ದೂರು ನೀಡಿದ್ದಾರೆ. ದೊಡ್ಡಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ತನಿಖೆ ನಡೆಯುತ್ತಿದೆ.

JNNCE COLLEGE SHIMOGA

ADVERTISEMENT

  • ಆರೋಗ್ಯ ತುರ್ತು ಸಂದರ್ಭದಲ್ಲಿ ಹಣಕಾಸು ಹೊಂದಿಸುವುದು ಸುಲಭವೇನಲ್ಲ. ಒಂದು ವೇಳೆ INSURANCE ಇದ್ದರೆ, ನಿರಮ್ಮಳವಾಗಿರಬಹುದು ಅಲ್ಲವೆ? ಈಗಲೆ INSURANCE ಮಾಡಿಸಿ. ಒಳ್ಳೆಯ INSURANCE PLANSಗಾಗಿ ಕರೆ ಮಾಡಿ – LIC LIFE INSURANCE – ಅನಿಲ್ 9538414151, ಪ್ರಶಾಂತ್ 9972194422
  • ಸುಂದರ ಮನೆ ಕಟ್ಟಬೇಕು, ಸ್ವಂತ ಮನೆಯಲ್ಲಿ ನೆಮ್ಮದಿಯ ಬದುಕು ಸಾಗಿಸಬೇಕು ಅನ್ನವು ಆಸೆ ಯಾರಿಗಿಲ್ಲ? ಇನ್ಯಾಕೆ ತಡ? ಮನೆ ಕಟ್ಟಲು LICಯಿಂದ HOUSING LOAN ಲಭ್ಯವಿದೆ. ಇವತ್ತೇ ಸಂಪರ್ಕಿಸಿ – ಪ್ರಶಾಂತ್ 9972194422

SHIVAMOGGA LIVE WHATSAPP

ನಿಮ್ಮೂರು, ನಿಮ್ಮ ಏರಿಯಾದ ಕಾರ್ಯಕ್ರಮಗಳು, ಸಮಸ್ಯೆಗಳು ಸುದ್ದಿಯಾಗಬೇಕಾ? ನೀವೇ ವರದಿಗಾರರಾಗಿ. ವಿಡಿಯೋ, ಫೋಟೊ ಮಾಡಿ 7411700200 ಮೊಬೈಲ್ ನಂಬರ್’ಗೆ ವಾಟ್ಸಪ್ ಮಾಡಿ. ನೆನಪಿರಲಿ, ಸುದ್ದಿ ಪ್ರಕಟಣೆಗೆ ನಾವು ಹಣ ಪಡೆಯುವುದಿಲ್ಲ.

ನಿಮ್ಮ ಕನಸಿನ ಮನೆ ಈಗ ನನಸು! 🏠

ಅತಿ ಕಡಿಮೆ ಬಡ್ಡಿ ದರದಲ್ಲಿ ಸುಲಭ ಗೃಹ ಸಾಲ


ಈಗಲೇ ಕರೆ ಮಾಡಿ
9972194422


 

About The Editor

ನಿತಿನ್‌ ಆರ್‌.ಕೈದೊಟ್ಲು

Nitin Kaidotlu - Editor - Shivamogga Live

© ಶಿವಮೊಗ್ಗ ಲೈವ್‌ : October 22, 2022

Leave a Comment