ದೀಪಾವಳಿ ಹಿನ್ನೆಲೆ, ಶಿವಮೊಗ್ಗದಿಂದ ಯಶವಂತಪುರಕ್ಕೆ ಒಂದು ದಿನ ವಿಶೇಷ ರೈಲು, ಯಾವಾಗ ಹೊರಡುತ್ತೆ?

ಶಿವಮೊಗ್ಗLIVE

ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ

 SHIVAMOGGA LIVE NEWS 

SHIMOGA | ದೀಪಾವಳಿ ಹಿನ್ನೆಲೆ ಹೆಚ್ಚುವರಿ ಪ್ರಯಾಣಿಕರ ಅನುಕೂಲಕ್ಕಾಗಿ ರೈಲ್ವೆ ಇಲಾಖೆ ವಿಶೇಷ ರೈಲು ಸೇವೆ ಒದಗಿಸಲು ನಿರ್ಧರಿಸಿದೆ. ಶಿವಮೊಗ್ಗದಿಂದ ಬೆಂಗಳೂರಿಗೆ ತೆರಳುವ ಪ್ರಯಾಣಿಕರಿಗೆ ವಿಶೇಷ ರೈಲು ವ್ಯವಸ್ಥೆ ಮಾಡಲಾಗಿದೆ. (DEEPAVALI SPECIAL)

Shimoga Nanjappa Hospital

ಅ.27ರಂದು ಒಂದು ದಿನ ಶಿವಮೊಗ್ಗದಿಂದ ಯಶವಂತಪುರಕ್ಕೆ ವಿಶೇಷ ರೈಲು ತೆರಳಲಿದೆ. ಅದೆ ದಿನ ಪುನಃ ಶಿವಮೊಗ್ಗಕ್ಕೆ ಮರಳಲಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

(DEEPAVALI SPECIAL)

ರೈಲಿನ ಟೈಮಿಂಗ್ ಏನು?

ಶಿವಮೊಗ್ಗ ಯಶವಂತಪುರ ಎಕ್ಸ್ ಪ್ರೆಸ್ ರೈಲು ಅ.27ರಂದು ಬೆಳಗ್ಗೆ 9 ಗಂಟೆಗೆ ಶಿವಮೊಗ್ಗದಿಂದ ಹೊರಡಲಿದೆ. ಮಹಾದೇವಿ ಟಾಕೀಸ್ ಬಳಿ ನಿಲ್ದಾಣಕ್ಕೆ ಬೆ.9.05ಕ್ಕೆ, ಭದ್ರಾವತಿ ಬೆ.9.20, ತರೀಕೆರೆ ಬೆ.9.40, ಬೀರೂರು ಬೆ.10.18, ಕಡೂರು ಬೆ. 10.30, ಅರಸೀಕೆರೆ ಬೆ.11.05, ತಿಪಟೂರು ಬೆ.11.30ಕ್ಕೆ, ತುಮಕೂರು ಮಧ್ಯಾಹ್ನ 12.20ಕ್ಕೆ, ಯಶವಂತಪುರಕ್ಕೆ ಮಧ್ಯಾಹ್ನ 2 ಗಂಟೆಗೆ ತಲುಪಲಿದೆ. (DEEPAVALI SPECIAL)

ಕ್ಲಿಕ್ ಮಾಡಿ ಇದನ್ನೂ ಓದಿ ಶಿವಮೊಗ್ಗ – ಮೈಸೂರು ನಡುವೆ ಎಷ್ಟು ರೈಲುಗಳಿವೆ, ಎಲ್ಲೆಲ್ಲಿ ಸ್ಟಾಪ್ ಇದೆ, ಟೈಮಿಂಗ್ ಏನು?

ಇದೆ ರೈಲು ಅ.27ರಂದು ಸಂಜೆ 4 ಗಂಟೆಗೆ ಯಶವಂತಪುರದಿಂದ ಹೊರಡಲಿದೆ. ತುಮಕೂರು ಸಂಜೆ 4.58ಕ್ಕೆ, ತಿಪಟೂರು ಸಂಜೆ 6.03ಕ್ಕೆ, ಅರಸೀಕೆರೆ 6.25ಕ್ಕೆ, ಕಡೂರು 7 ಗಂಟೆಗೆ, ಬೀರೂರು ರಾತ್ರಿ 7.13ಕ್ಕೆ, ತರೀಕೆರೆ ರಾತ್ರಿ 7.40ಕ್ಕೆ, ಭದ್ರಾವತಿ ರಾತ್ರಿ 8.18ಕ್ಕೆ, ಮಹಾದೇವಿ ಟಾಕೀಸ್ ಬಳಿ ನಿಲ್ದಾಣ ರಾತ್ರಿ 8.34, ರಾತ್ರಿ 9.15ಕ್ಕೆ ಶಿವಮೊಗ್ಗ ನಿಲ್ದಾಣ ತಲುಪಲಿದೆ.

ಕ್ಲಿಕ್ ಮಾಡಿ ಇದನ್ನೂ ಓದಿ ಶಿವಮೊಗ್ಗದಿಂದ ಬೆಂಗಳೂರಿಗೆ ಎಷ್ಟು ರೈಲುಗಳಿವೆ? ಯಾವೆಲ್ಲ ಸಮಯದಲ್ಲಿ ಸಂಚರಿಸುತ್ತವೆ?

ರೈಲಿನಲ್ಲಿ ಎಸಿ ಬೋಗಿಗಳು ಸೇರಿ ಒಟ್ಟು 16 ಕೋಚ್ ಇರಲಿದೆ. ಈ ಸೇವೆಯನ್ನು ಸಾರ್ವಜನಿಕರು ಬಳಕೆ ಮಾಡಿಕೊಳ್ಳುವಂತೆ ಸಂಸದ ಬಿ.ವೈ.ರಾಘವೇಂದ್ರ ಅವರ ಕಚೇರಿ ಪ್ರಕಟಣೆಯಲ್ಲಿ ತಿಳಿಸಿದೆ.

jnnce college shimoga

ADVERTISEMENT

  • ಆರೋಗ್ಯ ತುರ್ತು ಸಂದರ್ಭದಲ್ಲಿ ಹಣಕಾಸು ಹೊಂದಿಸುವುದು ಸುಲಭವೇನಲ್ಲ. ಒಂದು ವೇಳೆ INSURANCE ಇದ್ದರೆ, ನಿರಮ್ಮಳವಾಗಿರಬಹುದು ಅಲ್ಲವೆ? ಈಗಲೆ INSURANCE ಮಾಡಿಸಿ. ಒಳ್ಳೆಯ INSURANCE PLANSಗಾಗಿ ಕರೆ ಮಾಡಿ – LIC LIFE INSURANCE – ಅನಿಲ್ 9538414151, ಪ್ರಶಾಂತ್ 9972194422
  • ಸುಂದರ ಮನೆ ಕಟ್ಟಬೇಕು, ಸ್ವಂತ ಮನೆಯಲ್ಲಿ ನೆಮ್ಮದಿಯ ಬದುಕು ಸಾಗಿಸಬೇಕು ಅನ್ನವು ಆಸೆ ಯಾರಿಗಿಲ್ಲ? ಇನ್ಯಾಕೆ ತಡ? ಮನೆ ಕಟ್ಟಲು LICಯಿಂದ HOUSING LOAN ಲಭ್ಯವಿದೆ. ಇವತ್ತೇ ಸಂಪರ್ಕಿಸಿ – ಪ್ರಶಾಂತ್ 9972194422

SHIVAMOGGA LIVE WHATSAPP

ನಿಮ್ಮೂರು, ನಿಮ್ಮ ಏರಿಯಾದ ಕಾರ್ಯಕ್ರಮಗಳು, ಸಮಸ್ಯೆಗಳು ಸುದ್ದಿಯಾಗಬೇಕಾ? ನೀವೇ ವರದಿಗಾರರಾಗಿ. ವಿಡಿಯೋ, ಫೋಟೊ ಮಾಡಿ 7411700200 ಮೊಬೈಲ್ ನಂಬರ್’ಗೆ ವಾಟ್ಸಪ್ ಮಾಡಿ. ನೆನಪಿರಲಿ, ಸುದ್ದಿ ಪ್ರಕಟಣೆಗೆ ನಾವು ಹಣ ಪಡೆಯುವುದಿಲ್ಲ.

ನಿಮ್ಮ ಕನಸಿನ ಮನೆ ಈಗ ನನಸು! 🏠

ಅತಿ ಕಡಿಮೆ ಬಡ್ಡಿ ದರದಲ್ಲಿ ಸುಲಭ ಗೃಹ ಸಾಲ


ಈಗಲೇ ಕರೆ ಮಾಡಿ
9972194422


 

About The Editor

ನಿತಿನ್‌ ಆರ್‌.ಕೈದೊಟ್ಲು

Nitin Kaidotlu - Editor - Shivamogga Live

Leave a Comment