ಭದ್ರಾವತಿಯಲ್ಲಿ ಹೊಡೆದಾಟ, ಬಿಗುವಿನ ವಾತಾವರಣ, ಎಲ್ಲಕ್ಕು ಕಾರಣ ವಾಟ್ಸಪ್ ಸ್ಟೇಟಸ್

ಶಿವಮೊಗ್ಗLIVE

ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ

SHIVAMOGGA LIVE NEWS | 14 NOVEMBER 2022

BHADRAVATHI | ಎರಡು ಪ್ರತ್ಯೇಕ ಅಹಿತಕರ ಘಟನೆಯಲ್ಲಿ ಭದ್ರಾವತಿಯಲ್ಲಿ ಕೆಲ ಹೊತ್ತು ಬಿಗುವಿನ ವಾತಾವರಣ ನಿರ್ಮಾಣ  ಮಾಡಿತ್ತು. ವಾಟ್ಸಪ್ ಸ್ಟೇಟಸ್ (status) ವಿಚಾರವಾಗಿ ಜಗಳವಾಗಿದ್ದು, ಯುವಕನೊಬ್ಬನ ಮೇಲೆ ಕಲ್ಲಿನಿಂದ ಹಲ್ಲೆ ಮಾಡಲಾಗಿದೆ. ಮತ್ತೊಂದೆಡೆ ಮತ್ತೊಬ್ಬ ಯುವಕನ ಕೈಗೆ ಚಾಕುವಿನಿಂದ ಗಾಯಗೊಳಿಸಲಾಗಿದೆ.

Shimoga Nanjappa Hospital

ಪಟ್ಟಣದ ಗಾಂಧಿ ಸರ್ಕಲ್ ನಲ್ಲಿ ಯುವಕರ ಗುಂಪಿನ ಮಧ್ಯೆ ಗಲಾಟೆಯಾಗಿದೆ. ಘಟನೆಯಲ್ಲಿ ಹರೀಶ್, ಗೌತಮ್ ಮತ್ತು ಜಹೀರ್ ಎಂಬುವವರು ಗಾಯಗೊಂಡಿದ್ದಾರೆ.

STATUS ವಿಚಾರವಾಗಿ ಕಿರಿಕ್

ಗೌತಮ್ ಎಂಬಾತ ಅಪ್ ಲೋಡ್ ಮಾಡಿದ್ದ ಸ್ಟೇಟಸ್ ಗೆ (status) ಕೆಲ ತಿಂಗಳ ಹಿಂದೆ ಜಹೀರ್ ಎಂಬಾತ ಕಮೆಂಟ್ ಮಾಡಿದ್ದ. ಈ ವಿಚಾರವಾಗಿ ಗೌತಮ್, ಹರೀಶ್ ಮತ್ತು ಜಹೀರ್ ಮಧ್ಯೆ ಗಲಾಟೆಯಾಗಿದೆ. ಗೌತಮ್ ಮತ್ತು ಹರೀಶ್, ಜಹೀರ್ ಮೇಲೆ ಕಲ್ಲು ತೂರಿದ್ದಾರೆ. ಆಗ ಜಗಳ ಸಂಭವಿಸಿದ್ದು, ಮೂವರು ಗಾಯಗೊಂಡಿದ್ದಾರೆ. ಮೂವರನ್ನು ಭದ್ರಾವತಿಯ ಸರ್ಕಾರಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

ಹರೀಶ್, ಗೌತಮ್ ಮತ್ತು ಜಹೀರ್ ಬಹು ಸಮಯದ ಸ್ನೇಹಿತರು. ಇದು ಕೋಮು ಗಲಭೆಯಲ್ಲ. ತನಿಖೆ ನಡೆಯುತ್ತಿದೆ.ಮಿಥುನ್ ಕುಮಾರ್, ಶಿವಮೊಗ್ಗ ಜಿಲ್ಲಾ ರಕ್ಷಣಾಧಿಕಾರಿ

ಆಸ್ಪತ್ರೆ ಮುಂಭಾಗ ಕೈಗೆ ಚಾಕು ಇರಿತ

ಈ ನಡುವೆ ಭದ್ರಾವತಿ ಸರ್ಕಾರಿ ಆಸ್ಪತ್ರೆ ಮುಂಭಾಗ ಭಾನುವಾರ ಸಂಜೆ ಯುವಕನೊಬ್ಬನಿಗೆ ಚಾಕು ಇರಿಯಲು ಯತ್ನಿಸಲಾಗಿದೆ. ಆತ ತಪ್ಪಿಸಿಕೊಂಡಿದ್ದು, ಕೈಗೆ ಚಾಕು ತಾಗಿ ಗಾಯವಾಗಿದೆ. ರಿಜ್ವಾನ್ ಎಂಬಾತನ ಮೇಲೆ ದಾಳಿ ನಡೆಸಲಾಗಿದೆ.

ಕ್ಲಿಕ್ ಮಾಡಿ ಇದನ್ನೂ ಓದಿ ತಾಯಿಯ ಅಂತ್ಯ ಸಂಸ್ಕಾರ ಮುಗಿಸಿ ಮನೆಗೆ ಬಂದ ಮಗ ಹೃದಯಾಘಾತದಿಂದ ನಿಧನ

ಎರಡು ಘಟನೆಯಿಂದಾಗಿ ಭಾನುವಾರ ಸಂಜೆ ಭದ್ರಾವತಿಯಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿತ್ತು. ಎರಡು ಕೋಮಿನ ಯುವಕರ ನಡುವಿನ ಗಲಭೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಮೆಸೇಜುಗಳು ಹರಡಿತ್ತು. ವಿವಿಧ ಸಂಘಟನೆಗಳ ಮುಖಂಡು, ಕಾರ್ಯಕರ್ತರು ಭದ್ರಾವತಿ ಸರ್ಕಾರಿ ಆಸ್ಪತ್ರೆ ಮುಂಭಾಗ ಜಮಾವಣೆಗೊಂಡಿದ್ದರು. ಕೆಲ ಹೊತ್ತು ಗೊಂದಲ ಸೃಷ್ಟಿಯಾಗಿದ್ದು, ಪೊಲೀಸರು ಜನರನ್ನು ಚದುರಿಸಿದರು.

ಪೊಲೀಸರು ಎರಡು ಪ್ರತ್ಯೇಕ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ನಡೆಸುತ್ತಿದ್ದಾರೆ. ಸದ್ಯ ಭದ್ರಾವತಿ ಪಟ್ಟಣದಲ್ಲಿ ಪರಿಸ್ಥಿತಿ ತಿಳಿಯಾಗಿದೆ. ಮುಂಜಾಗ್ರತ ಕ್ರಮವಾಗಿ ಪೊಲೀಸ್ ಭದ್ರತೆ ಕೈಗೊಳ್ಳಲಾಗಿದೆ.

ಕ್ಲಿಕ್ ಮಾಡಿ ಇದನ್ನೂ ಓದಿ ‘8 ಕೆ.ಜಿ ಚಿನ್ನಕ್ಕೆ ಕೇವಲ 20 ಲಕ್ಷ ರೂ.’, ಜಮೀನು ಮಾರಿ ಹಣ ತಂದ ದಂಪತಿಗೆ ಪಂಗನಾಮ

ADVERTISEMENT

  • ಆರೋಗ್ಯ ತುರ್ತು ಸಂದರ್ಭದಲ್ಲಿ ಹಣಕಾಸು ಹೊಂದಿಸುವುದು ಸುಲಭವೇನಲ್ಲ. ಒಂದು ವೇಳೆ INSURANCE ಇದ್ದರೆ, ನಿರಮ್ಮಳವಾಗಿರಬಹುದು ಅಲ್ಲವೆ? ಈಗಲೆ INSURANCE ಮಾಡಿಸಿ. ಒಳ್ಳೆಯ INSURANCE PLANSಗಾಗಿ ಕರೆ ಮಾಡಿ – LIC LIFE INSURANCE – ಅನಿಲ್ 9538414151, ಪ್ರಶಾಂತ್ 9972194422
  • ಸುಂದರ ಮನೆ ಕಟ್ಟಬೇಕು, ಸ್ವಂತ ಮನೆಯಲ್ಲಿ ನೆಮ್ಮದಿಯ ಬದುಕು ಸಾಗಿಸಬೇಕು ಅನ್ನವು ಆಸೆ ಯಾರಿಗಿಲ್ಲ? ಇನ್ಯಾಕೆ ತಡ? ಮನೆ ಕಟ್ಟಲು LICಯಿಂದ HOUSING LOAN ಲಭ್ಯವಿದೆ. ಇವತ್ತೇ ಸಂಪರ್ಕಿಸಿ – ಪ್ರಶಾಂತ್ 9972194422

SHIVAMOGGA LIVE WHATSAPP

ನಿಮ್ಮೂರು, ನಿಮ್ಮ ಏರಿಯಾದ ಕಾರ್ಯಕ್ರಮಗಳು, ಸಮಸ್ಯೆಗಳು ಸುದ್ದಿಯಾಗಬೇಕಾ? ನೀವೇ ವರದಿಗಾರರಾಗಿ. ವಿಡಿಯೋ, ಫೋಟೊ ಮಾಡಿ 7411700200 ಮೊಬೈಲ್ ನಂಬರ್’ಗೆ ವಾಟ್ಸಪ್ ಮಾಡಿ. ನೆನಪಿರಲಿ, ಸುದ್ದಿ ಪ್ರಕಟಣೆಗೆ ನಾವು ಹಣ ಪಡೆಯುವುದಿಲ್ಲ.

ನಿಮ್ಮ ಕನಸಿನ ಮನೆ ಈಗ ನನಸು! 🏠

ಅತಿ ಕಡಿಮೆ ಬಡ್ಡಿ ದರದಲ್ಲಿ ಸುಲಭ ಗೃಹ ಸಾಲ


ಈಗಲೇ ಕರೆ ಮಾಡಿ
9972194422


 

About The Editor

ನಿತಿನ್‌ ಆರ್‌.ಕೈದೊಟ್ಲು

Nitin Kaidotlu - Editor - Shivamogga Live

Leave a Comment