SHIVAMOGGA LIVE NEWS | 14 NOVEMBER 2022
SHIMOGA | ತಾಲೂಕಿನ ವಿವಿಧೆಡೆ ಆನೆಗಳ ಉಪಟಳ ಹೆಚ್ಚಾಗಿದೆ. ರೈತರು, ಗ್ರಾಮಸ್ಥರು ಜೀವ ಭಯದಲ್ಲಿ ದಿನ ಕಳೆಯುತ್ತಿದ್ದಾರೆ. ಅರಣ್ಯ ಇಲಾಖೆಯು ಅಸಹಾಯಕವಾಗಿದೆ. ಈ ನಡುವೆ ಆನೆಗಳ ಹಾವಳಿಗೆ ಕಾರಣಗಳೇನು, ಅದರ ನಿಯಂತ್ರಣಕ್ಕೆ ಅನುಸರಿಸಬೇಕಾದ ಕ್ರಮಗಳ ಕುರಿತು ಅಧ್ಯಯನಕ್ಕೆ (study on elephant) ತಜ್ಞರ ತಂಡ ಶಿವಮೊಗ್ಗಕ್ಕೆ ಆಗಮಿಸಿದೆ.
ವನ್ಯಜೀವಿ ಸಂರಕ್ಷಕರು, ತಜ್ಞರ ತಂಡವೊಂದು ಶಿವಮೊಗ್ಗ ತಾಲೂಕಿನ ವಿವಿಧೆಡೆ ತೆರಳಿ, ಪ್ರಾಥಮಿಕ ಮಾಹಿತಿ ಸಂಗ್ರಹಿಸಿದೆ. ಆನೆಗಳ ಉಪಟಳದಿಂದ ನಲುಗಿರುವ ಜನರು, ರೈತರನ್ನು ಭೇಟಿಯಾಗಿ ಅನುಭವಗಳನ್ನು ದಾಖಲಿಸಿಕೊಂಡಿದೆ.
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422
(study on elephant)
ತಾಲೂಕಿನಲ್ಲಿ ಆನೆಗಳ ಹಾವಳಿ
ಶಿವಮೊಗ್ಗ ಮತ್ತು ಭದ್ರಾವತಿ ತಾಲೂಕಿನ ವಿವಿಧೆಡೆ ಆನೆಗಳ ಹಾವಳಿ ಹೆಚ್ಚಾಗಿದೆ. ಉಂಬ್ಳೆಬೈಲು ರೇಂಜ್ ವ್ಯಾಪ್ತಿಯಲ್ಲಿ ಪದೇ ಪದೆ ಆನೆಗಳು ಕಾಣಿಸಿಕೊಂಡು, ಬೆಳೆ ನಷ್ಟ ಉಂಟು ಮಾಡುತ್ತಿವೆ. ಇದರಿಂದ ರೈತರು ಸಂಕಷ್ಟಕ್ಕೀಡಾಗಿದ್ದಾರೆ. ಗ್ರಾಮಸ್ಥರು ಜೀವ ಭಯದಲ್ಲಿಯೆ ಮನೆಯಿಂದ ಹೊರ ಬರಬೇಕಾಗಿದೆ. ಉಂಬ್ಳೆಬೈಲು, ಕಾಕನ ಹಸೂಡಿ, ಕಣಗಲಸರ, ಲಕ್ಕಿನಕೊಪ್ಪ, ತಮ್ಮಡಿಹಳ್ಳಿ ವ್ಯಾಪ್ತಿಯಲ್ಲಿ ಆನೆಗಳು ಕಾಣಿಸಿವೆ. ಇನ್ನು, ಕುವೆಂಪು ವಿಶ್ವವಿದ್ಯಾಲಯ ಸುತ್ತಮುತ್ತ ಕೂಡ ಆನೆಗಳು ಪ್ರತ್ಯಕ್ಷವಾಗಿ ಜನರಲ್ಲಿ ದಿಗಲು ಮೂಡಿಸಿವೆ.
(study on elephant)
ಅಧ್ಯಯನಕ್ಕೆ ಬಂತು ತಜ್ಞರ ತಂಡ
ಮಾನವ, ವನ್ಯಜೀವ ಸಂಘರ್ಷ, ಆನೆಗಳ ಉಪಟಳ ಕುರಿತು ಸಂಶೋಧನೆ ನಡೆಸಿರುವ ಅನನ್ಯ ವಾಸುದೇವ್ ಅವರ ತಂಡ ಶಿವಮೊಗ್ಗದಲ್ಲಿ ಅಧ್ಯಯನಕ್ಕೆ ಸಿದ್ಧತೆ ನಡೆಸಿದೆ. ಉಂಬ್ಳೆಬೈಲು ವ್ಯಾಪ್ತಿಯಲ್ಲಿ ಪ್ರಾಥಮಿಕ ಮಾಹಿತಿ ಸಂಗ್ರಹಿಸಿದೆ. ಭದ್ರಾವತಿ ವನ್ಯಜೀವಿ ಸಂರಕ್ಷಕ ಕಾರ್ತಿಕ ಕೆದಿಲಾಯ, ಅರಣ್ಯ ಇಲಾಖೆಯ ಅಧಿಕಾರಿಗಳು ವಿವಿಧೆಡೆ ತೆರಳಿ ಪರಿಶೀಲನೆ ನಡೆಸಿದರು. ಉಂಬ್ಳೆಬೈಲು, ಕಾಕನ ಹಸೂಡಿ, ಕಣಗಲಸರ ಸೇರಿದಂತೆ ವಿವಿಧೆಡೆ ತೆರಳಿ ಮಾಹಿತಿ ಪಡೆದರು.
ಆನೆಗಳು ದಾಳಿ ನಡೆಸಿದ ಸ್ಥಳ, ಅರಣ್ಯ ಇಲಾಖೆಯಿಂದ ನಿರ್ಮಿಸಲಾಗಿರುವ ಟ್ರಂಚ್, ಆನೆಗಳ ಹೆಜ್ಜೆ ಗುರುತು, ಅವುಗಳ ಗಾತ್ರದ ಕುರಿತು ಪ್ರಾಥಮಿಕ ಮಾಹಿತಿ ಸಂಗ್ರಹಿಸಲಾಗಿದೆ. ಇದೆ ವೇಳೆ ಕೆಲವು ಸ್ಥಳೀಯರನ್ನು ಮಾತನಾಡಿಸಿ, ಅವರ ಅನುಭವ ದಾಖಲಿಸಲಾಗಿದೆ. ಇನ್ನು, ಅರಣ್ಯ ಇಲಾಖೆ ಅಧಿಕಾರಿಗಳಿಂದಲು ಆನೆಗಳ ಕುರಿತು ಮಾಹಿತಿ ಪಡೆಲಾಗಿದೆ.
(study on elephant)
ಇನ್ನಷ್ಟು ಅಧ್ಯಯನಕ್ಕೆ ಸಿದ್ಧತೆ
ಭದ್ರಾ ಅಭಯಾರಣ್ಯದ ಹುಲಿ ಮೀಸಲು ಅರಣ್ಯದ ವ್ಯಾಪ್ತಿಯಲ್ಲಿ ಆನೆಗಳು ನಿರಂತರವಾಗಿ ಕಾಣಿಸಿಕೊಳ್ಳುತ್ತಿವೆ. ಇವುಗಳ ಕುರಿತು ಅಧ್ಯಯನ ನಡೆಸಲು ವನ್ಯಜೀವಿ ಸಂರಕ್ಷಕರು, ತಜ್ಞರು ಸಿದ್ಧತೆ ನಡೆಸುತ್ತಿದ್ದಾರೆ. ಅರಣ್ಯ ಇಲಾಖೆ ಅನುಮತಿ ಸಿಕ್ಕರೆ, ಈ ಭಾಗದಲ್ಲಿ ಆನೆಗಳ ಹಾವಳಿ ಹೆಚ್ಚಲು ಕಾರಣವೇನು ಎಂಬುದರ ಸ್ಪಷ್ಟತೆ ಸಿಗಲಿದೆ.
ಈ ಕುರಿತು ಶಿವಮೊಗ್ಗ ಲೈವ್.ಕಾಂ ಜೊತೆಗೆ ಮಾತನಾಡಿದ ತಜ್ಞರ ತಂಡದ ಮುಖ್ಯಸ್ಥ ಅನನ್ಯ ವಾಸುದೇವ್ ಅವರು, ‘ಉಂಬ್ಳೆಬೈಲು ವ್ಯಾಪ್ತಿಯಲ್ಲಿ 2017ರಲ್ಲಿ ಮೊದಲ ಭಾರಿ ಆನೆ ಕಾಣಿಸಿಕೊಂಡಿದೆ ಎಂದು ಹೇಳಲಾಗುತ್ತಿದೆ. ಆಗ ಒಂದೆ ಆನೆ ಪ್ರತ್ಯಕ್ಷವಾಗಿತ್ತು. ಈಗ 8 ಆನೆಗಳಿವೆ ಎಂದು ಜನರು ಹೇಳುತ್ತಿದ್ದಾರೆ. ಕೆಲವೆ ವರ್ಷದಲ್ಲಿ ಆನೆಗಳ ಸಂಖ್ಯೆ ಹೆಚ್ಚಳವಾಗಿದ್ದೇಕೆ? ಆನೆಗಳು ಇಲ್ಲಿಯೆ ಬಿಡು ಬಿಟ್ಟಿದ್ದರೆ ಅದಕ್ಕೆ ಕಾರಣವೇನು? ಭವಿಷ್ಯದಲ್ಲಿ ಆನೆಗಳ ಉಪಟಳ ತಡೆಗೆ ಏನೆಲ್ಲ ಕ್ರಮ ಕೈಗೊಳ್ಳಬೇಕು ಎಂಬುದರ ಕುರಿತು ಸಮಗ್ರ ಅಧ್ಯಯನ ಮಾಡಬೇಕಾಗುತ್ತದೆ’ ಎಂದು ತಿಳಿಸಿದರು.
ಹಗಲು ರಾತ್ರಿ ನಡೆಯಲಿದೆ ಅಧ್ಯಯನ
ಉಂಬ್ಳೆಬೈಲು ಸುತ್ತಮುತ್ತ ಚಿರತೆ, ಹುಲಿಗಳು ಕಾಣಿಸಿಕೊಳ್ಳುತ್ತಿದ್ದವು. ಈಗ ಆನೆಗಳ ಹಿಂಡು ಪ್ರತ್ಯಕ್ಷವಾಗುತ್ತಿವೆ. ಕೆಲವೆ ವರ್ಷದಲ್ಲಿ ದೊಡ್ಡ ಸಂಖ್ಯೆಯಲ್ಲಿ ಆನೆಗಳು ಕಾಣಿಸಿಕೊಳ್ಳಲು ಕಾರಣವೇನು ಎಂಬುದು ತಜ್ಞರ ಮುಂದಿರುವ ಪ್ರಮುಖ ಪ್ರಶ್ನೆ. ಇದರ ಕುರಿತು ಅಧ್ಯಯನ ನಡೆಸಲು ಹಗಲು, ರಾತ್ರಿ ಶ್ರಮಿಸಬೇಕಿದೆ. ಆನೆಗಳ ನಡವಳಿಕೆ ಕುರಿತು ತಿಳಿಯಬೇಕಿದೆ. ಆನೆಗಳು ಉಪಟಳಕ್ಕೆ ಮಾನವ ನಿರ್ಮಿತ ಕಾರಣಗಳಿವೆಯೆ ಎಂದು ಪರಿಶೀಲಿಸಲಾಗುತ್ತದೆ. ಎಲ್ಲಾ ಹವಾಮಾನದಲ್ಲಿಯು ಆನೆಗಳ ನಡವಳಿಕೆ ಕುರಿತು ಅಧ್ಯಯನ ನಡೆಸಲು ಯೋಜಿಸಲಾಗಿದೆ.
ಉಂಬ್ಳೆಬೈಲು ರೇಂಜ್ ವ್ಯಾಪ್ತಿಯಲ್ಲಿ ಆಗಾಗ ಆನೆಗಳು ಕಾಣಿಸಿಕೊಂಡು, ಜನರಲ್ಲಿ ಭೀತಿ ಹುಟ್ಟಿಸಿವೆ. ಬೆಳೆ ಹಾನಿ ಮಾಡಿ, ರೈತರನ್ನು ಸಂಕಷ್ಟಕ್ಕೆ ದೂಡಿದೆ. ಈ ಹಿಂದೆ ಸಕ್ರೆಬೈಲು ಬಿಡಾರದ ಆನೆಗಳನ್ನು ಕರೆತಂದು ಕಾಡಾನೆಗಳನ್ನು ದಟ್ಟ ಅರಣ್ಯಕ್ಕೆ ಹಿಮ್ಮೆಟ್ಟಿಸುವ ಪ್ರಯತ್ನವಾಗಿತ್ತು. ಇದಾಗಿ ಕೆಲವೆ ದಿನದಲ್ಲಿ ಪುನಃ ಕಾಡಾನೆಗಳು ಕಾಣಿಸಿಕೊಂಡು ಜನರ ನೆಮ್ಮದಿ ಕಸಿದಿವೆ. ಈಗ ತಜ್ಞರ ಮೊರೆ ಹೋಗಿರುವ ಅರಣ್ಯ ಇಲಾಖೆ, ಸಮಸ್ಯೆಗೆ ಪರಿಹಾರ ಕಂಡುಕೊಳ್ಳು ಯತ್ನಿಸಿದೆ.
ಮಾನವ ಮತ್ತು ವನ್ಯಜೀವಿ ಸಂಘರ್ಷ ಕುರಿತು ಹಲವು ಅಧ್ಯಯನಗಳಾಗಿವೆ. ಆನೆಗಳ ಉಪಟಳ ಕುರಿತು ಬಂಡಿಪುರ, ಉಬ್ರಾಣಿ ವ್ಯಾಪ್ತಿಯಲ್ಲಿ ಅಧ್ಯಯನ ನಡೆಸಲಾಗಿತ್ತು. ಈಗ ಶಿವಮೊಗ್ಗ ತಾಲೂಕಿನಲ್ಲಿ ಅಧ್ಯಯಕ್ಕೆ ಸಿದ್ಧತೆ ನಡೆಯುತ್ತಿದೆ. ಅರಣ್ಯಿ ಇಲಾಖೆ ಒಪ್ಪಿಗೆ ಸಿಕ್ಕರೆ ಕೆಲವೆ ಸಮಯದಲ್ಲಿ ಈ ಭಾಗದಲ್ಲಿ ಆನೆಗಳ ಉಪಟಳದಿಂದ ಜನರಿಗೆ ಮುಕ್ತಿ ಸಿಗುವ ಸಂಭವ ಇದೆ.
ಕ್ಲಿಕ್ ಮಾಡಿ ಇದನ್ನೂ ಓದಿ | ‘8 ಕೆ.ಜಿ ಚಿನ್ನಕ್ಕೆ ಕೇವಲ 20 ಲಕ್ಷ ರೂ.’, ಜಮೀನು ಮಾರಿ ಹಣ ತಂದ ದಂಪತಿಗೆ ಪಂಗನಾಮ
ADVERTISEMENT
- ಆರೋಗ್ಯ ತುರ್ತು ಸಂದರ್ಭದಲ್ಲಿ ಹಣಕಾಸು ಹೊಂದಿಸುವುದು ಸುಲಭವೇನಲ್ಲ. ಒಂದು ವೇಳೆ INSURANCE ಇದ್ದರೆ, ನಿರಮ್ಮಳವಾಗಿರಬಹುದು ಅಲ್ಲವೆ? ಈಗಲೆ INSURANCE ಮಾಡಿಸಿ. ಒಳ್ಳೆಯ INSURANCE PLANSಗಾಗಿ ಕರೆ ಮಾಡಿ – LIC LIFE INSURANCE – ಅನಿಲ್ 9538414151, ಪ್ರಶಾಂತ್ 9972194422
- ಸುಂದರ ಮನೆ ಕಟ್ಟಬೇಕು, ಸ್ವಂತ ಮನೆಯಲ್ಲಿ ನೆಮ್ಮದಿಯ ಬದುಕು ಸಾಗಿಸಬೇಕು ಅನ್ನವು ಆಸೆ ಯಾರಿಗಿಲ್ಲ? ಇನ್ಯಾಕೆ ತಡ? ಮನೆ ಕಟ್ಟಲು LICಯಿಂದ HOUSING LOAN ಲಭ್ಯವಿದೆ. ಇವತ್ತೇ ಸಂಪರ್ಕಿಸಿ – ಪ್ರಶಾಂತ್ 9972194422
SHIVAMOGGA LIVE WHATSAPP
ನಿಮ್ಮೂರು, ನಿಮ್ಮ ಏರಿಯಾದ ಕಾರ್ಯಕ್ರಮಗಳು, ಸಮಸ್ಯೆಗಳು ಸುದ್ದಿಯಾಗಬೇಕಾ? ನೀವೇ ವರದಿಗಾರರಾಗಿ. ವಿಡಿಯೋ, ಫೋಟೊ ಮಾಡಿ 7411700200 ಮೊಬೈಲ್ ನಂಬರ್’ಗೆ ವಾಟ್ಸಪ್ ಮಾಡಿ. ನೆನಪಿರಲಿ, ಸುದ್ದಿ ಪ್ರಕಟಣೆಗೆ ನಾವು ಹಣ ಪಡೆಯುವುದಿಲ್ಲ.