ವಿಜಯೇಂದ್ರ ಹಾದಿ ಸುಗಮ, ಬಳಿಗಾರ್ ಬಿಜೆಪಿ ಸೇರ್ಪಡೆ, ಗಮನಿಸಬೇಕಾದ 4 ಅಂಶಗಳಿವು

ಶಿವಮೊಗ್ಗLIVE

ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ

SHIVAMOGGA LIVE NEWS | 18 NOVEMBER 2022

SHIKARIPURA | ಕ್ಷೇತ್ರದಲ್ಲಿ ಜೆಡಿಎಸ್ ಪಕ್ಷಕ್ಕೆ ಭದ್ರ ಬುನಾದಿ ಹಾಕಿದ್ದ ಕೆಎಎಸ್ ಮಾಜಿ ಅಧಿಕಾರಿ ಹೆಚ್.ಟಿ.ಬಳಿಗಾರ್ ಬಿಜೆಪಿ (join bjp) ಸೇರ್ಪಡೆಯಾಗಿದ್ದಾರೆ. ಈ ಬೆಳವಣಿಗೆ ಶಿಕಾರಿಪುರ ತಾಲೂಕಿನಲ್ಲಿ ತೀವ್ರ ಕುತೂಹಲ ಮತ್ತು ರಾಜಕೀಯ ಲೆಕ್ಕಾಚಾರಗಳಿಗೆ ಕಾರಣವಾಗಿದೆ.

Shimoga Atiyas Motors

(join bjp)

ಯಾರಿದು ಹೆಚ್.ಟಿ.ಬಳಿಗಾರ್?

ಹೆಚ್.ಟಿ.ಬಳಿಗಾರ್, ಕೆಎಎಸ್ ಅಧಿಕಾರಿಯಾಗಿದ್ದರು. ಮಾಜಿ ಮುಖ್ಯಮಂತ್ರಿ ಎಸ್.ಬಂಗಾರಪ್ಪ ಅವರ ನಿಕಟವರ್ತಿ. ರಾಜಕೀಯದಲ್ಲಿ ಸಕ್ರಿಯವಾದ ಬಳಿಗಾರ್ ಅವರು, ಶಿಕಾರಿಪುರ ಕ್ಷೇತ್ರದಲ್ಲಿ ಜೆಡಿಎಸ್ ಪಕ್ಷವನ್ನು ಸಂಘಟಿಸಿ, ಶಕ್ತಿ ತುಂಬಿದ್ದರು.

(join bjp)

ಪಾಯಿಂಟ್ 1 – ಎರಡು ಭಾರಿ ಚುನಾವಣಾ ಕಣಕ್ಕೆ

ಹೆಚ್.ಟಿ.ಬಳಿಗಾರ್ ಅವರು ಶಿಕಾರಿಪುರ ಕ್ಷೇತ್ರದಿಂದ ಎರಡು ಭಾರಿ ವಿಧಾನಸಭೆ ಚುನಾವಣೆಗೆ ಸ್ಪರ್ಧೆ ಮಾಡಿದ್ದರು. 2018ರಲ್ಲಿ ಸ್ಪರ್ಧಿಸಿ 13 ಸಾವಿರ ಮತಗಳನ್ನು ಗಳಿಸಿದ್ದರು. 2013ರಲ್ಲಿ 15 ಸಾವಿರ ಮತಗಳನ್ನು ಪಡೆದಿದ್ದರು. ಕ್ಷೇತ್ರದಲ್ಲಿ ಬಳಿಗಾರ್ ಅವರು ದೊಡ್ಡ ಸಂಖ್ಯೆಯ ಅಭಿಮಾನಿಗಳು, ಪಕ್ಷದ ಬೆಂಬಲಿಗರನ್ನು ಹೊಂದಿದ್ದಾರೆ.

(join bjp)

ಪಾಯಿಂಟ್ 2 – ಚುನಾವಣೆಗು ಮೊದಲೆ ರಣತಂತ್ರ

ವಿಧಾನಸಭೆ ಚುನಾವಣೆಗೆ ಕೆಲವೆ ತಿಂಗಳಿದೆ. ಆಗಲೆ ರಣತಂತ್ರಗಳು ಸಿದ್ಧವಾಗುತ್ತಿದೆ. ಹೆಚ್.ಟಿ.ಬಳಿಗಾರ್ ಅವರನ್ನು ಬಿಜೆಪಿಗೆ ಸೆಳೆದಿದ್ದು ರಣತಂತ್ರದ ಪ್ರಮುಖ ಭಾಗ ಎಂದು ವಿಶ್ಲೇಷಿಸಲಾಗುತ್ತಿದೆ. ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರು ತಮ್ಮ ಪುತ್ರ ಬಿ.ವೈ.ವಿಜಯೇಂದ್ರ ಅವರ ಹಾದಿ ಸುಗುಮಗೊಳಿಸಲು ಬಳಿಗಾರ್ ಅವರನ್ನು ಪಕ್ಷಕ್ಕೆ ಸೆಳೆದಿದ್ದಾರೆ ಎಂದು ಹೇಳಲಾಗುತ್ತಿದೆ.

HT Baligar Joins BJP in Shimoga

ಹೆಚ್.ಟಿ.ಬಳಿಗಾರ್ ಅವರು ಈ ಭಾರಿ ಚುನಾವಣೆಗೆ ಸ್ಪರ್ಧೆ ಮಾಡಿದರೆ, ಹೆಚ್ಚಿನ ಪ್ರಮಾಣದ ಮತ ಸೆಳೆಯುವ ಸಾಧ್ಯತೆ ಇದೆ. ಇದು ಬಿಜೆಪಿಯ ಮತ ಗಳಿಕೆ ಮೇಲೆ ಪ್ರಭಾವ ಉಂಟು ಮಾಡುವ ಸಂಭವವಿತ್ತು.

ಪಾಯಿಂಟ್ 3 – ಸಿಎಂ ಜೊತೆಗೆ ಸಭೆ

ಹೆಚ್.ಟಿ.ಬಳಿಗಾರ್ ಅವರನ್ನು ಬಿಜೆಪಿಗೆ ಸೆಳೆಯುವ ಸಂಬಂಧ ಸಭೆಗಳನ್ನು ನಡೆಸಲಾಗಿತ್ತು. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಮಾಜಿ ಸಿಎಂ ಯಡಿಯೂರಪ್ಪ ಅವರ ಜೊತೆ ಬಳಿಗಾರ್ ಸಭೆ ನಡೆಸಿದ್ದರು. ಶಿರಾಳಕೊಪ್ಪ, ಶಿಕಾರಿಪುರದಲ್ಲಿ ಬೆಂಬಲಿಗರ ಸಭೆ ನಡೆಸಿದ್ದಾರೆ. ಆ ಬಳಿಕ ಹೆಚ್.ಟಿ.ಬಳಿಗಾರ್ ಅವರು ಬಿಜೆಪಿ ಸೇರ್ಪಡೆಯಾಗಿದ್ದಾರೆ.

ಪಾಯಿಂಟ್ 4 – ಬಲ ಕಳೆದುಕೊಳ್ಳುತ್ತಾ ಜೆಡಿಎಸ್?

ಶಿಕಾರಿಪುರ ಕ್ಷೇತ್ರದಲ್ಲಿ ಜೆಡಿಎಸ್ ಪಕ್ಷಕ್ಕೆ ಗಟ್ಟಿ ನೆಲೆ ಇಲ್ಲ. ಹೆಚ್.ಟಿ.ಬಳಿಗಾರ್ ಅವರು ಆ ಪಕ್ಷದ ಮುಂಚೂಣಿಯಲ್ಲಿದ್ದರು. ಈಗ ಅವರು ಪಕ್ಷ ತೊರೆದಿರುವುದರಿಂದ ಶಿಕಾರಿಪುರ ಕ್ಷೇತ್ರದಲ್ಲಿ ಜೆಡಿಎಸ್ ಪಕ್ಷ ಬಲ ಕಳೆದುಕೊಳ್ಳುವ ಸಾಧ್ಯತೆ ಇದೆ. ಪ್ರಸ್ತುತ ಪಕ್ಷಕ್ಕೆ ಶಕ್ತಿ ತುಂಬಿ, ಕಾರ್ಯಕರ್ತರನ್ನು ಒಗ್ಗೂಡಿಸುವುದು ಅಷ್ಟು ಸುಲಭದ ಮಾತಲ್ಲ.

Shimoga Nanjappa Hospital

ಕ್ಲಿಕ್ ಮಾಡಿ ಇದನ್ನೂ ಓದಿ ಶಿವಮೊಗ್ಗದಿಂದ ಬೆಂಗಳೂರು ತಲುಪಬೇಕಿದ್ದ ಚಿನ್ನದ ಬಿಸ್ಕೇಟ್ ಗಳು ನಾಪತ್ತೆ

ADVERTISEMENT

  • ಆರೋಗ್ಯ ತುರ್ತು ಸಂದರ್ಭದಲ್ಲಿ ಹಣಕಾಸು ಹೊಂದಿಸುವುದು ಸುಲಭವೇನಲ್ಲ. ಒಂದು ವೇಳೆ INSURANCE ಇದ್ದರೆ, ನಿರಮ್ಮಳವಾಗಿರಬಹುದು ಅಲ್ಲವೆ? ಈಗಲೆ INSURANCE ಮಾಡಿಸಿ. ಒಳ್ಳೆಯ INSURANCE PLANSಗಾಗಿ ಕರೆ ಮಾಡಿ – LIC LIFE INSURANCE – ಅನಿಲ್ 9538414151, ಪ್ರಶಾಂತ್ 9972194422
  • ಸುಂದರ ಮನೆ ಕಟ್ಟಬೇಕು, ಸ್ವಂತ ಮನೆಯಲ್ಲಿ ನೆಮ್ಮದಿಯ ಬದುಕು ಸಾಗಿಸಬೇಕು ಅನ್ನವು ಆಸೆ ಯಾರಿಗಿಲ್ಲ? ಇನ್ಯಾಕೆ ತಡ? ಮನೆ ಕಟ್ಟಲು LICಯಿಂದ HOUSING LOAN ಲಭ್ಯವಿದೆ. ಇವತ್ತೇ ಸಂಪರ್ಕಿಸಿ – ಪ್ರಶಾಂತ್ 9972194422

SHIVAMOGGA LIVE WHATSAPP

ನಿಮ್ಮೂರು, ನಿಮ್ಮ ಏರಿಯಾದ ಕಾರ್ಯಕ್ರಮಗಳು, ಸಮಸ್ಯೆಗಳು ಸುದ್ದಿಯಾಗಬೇಕಾ? ನೀವೇ ವರದಿಗಾರರಾಗಿ. ವಿಡಿಯೋ, ಫೋಟೊ ಮಾಡಿ 7411700200 ಮೊಬೈಲ್ ನಂಬರ್’ಗೆ ವಾಟ್ಸಪ್ ಮಾಡಿ. ನೆನಪಿರಲಿ, ಸುದ್ದಿ ಪ್ರಕಟಣೆಗೆ ನಾವು ಹಣ ಪಡೆಯುವುದಿಲ್ಲ.

ನಿಮ್ಮ ಕನಸಿನ ಮನೆ ಈಗ ನನಸು! 🏠

ಅತಿ ಕಡಿಮೆ ಬಡ್ಡಿ ದರದಲ್ಲಿ ಸುಲಭ ಗೃಹ ಸಾಲ

ಈಗಲೇ ಕರೆ ಮಾಡಿ
9972194422

About The Editor

ನಿತಿನ್‌ ಆರ್‌.ಕೈದೊಟ್ಲು

Nitin Kaidotlu - Editor - Shivamogga Live

© ಶಿವಮೊಗ್ಗ ಲೈವ್‌ : November 20, 2022

ಮೈಸೂರು – ಶಿವಮೊಗ್ಗ ರೈಲು, ಎರಡು ದಿನ ಭಾಗಶಃ ರದ್ದು, ಯಾವಾಗ?

ಮೈಸೂರು – ಶಿವಮೊಗ್ಗ ರೈಲು, ಎರಡು ದಿನ ಭಾಗಶಃ ರದ್ದು, ಯಾವಾಗ?

ಮೂವರ ಮೇಲೆ ದಾಳಿ ಮಾಡಿದ್ದ ಚಿರತೆ ಅನುಮಾನಾಸ್ಪದ ಸಾವು, ಎಲ್ಲಿ?

ಮೂವರ ಮೇಲೆ ದಾಳಿ ಮಾಡಿದ್ದ ಚಿರತೆ ಅನುಮಾನಾಸ್ಪದ ಸಾವು, ಎಲ್ಲಿ?

ಶಿವಮೊಗ್ಗ ಸಿಟಿಯಲ್ಲಿ ಭಾರಿ ಮಳೆ, ಹೊಳಲೂರು ಭಾಗದಲ್ಲಿ ಆಲಿಕಲ್ಲು ಸಹಿತ ವರ್ಷಧಾರೆ

ಶಿವಮೊಗ್ಗ ಸಿಟಿಯಲ್ಲಿ ಭಾರಿ ಮಳೆ, ಹೊಳಲೂರು ಭಾಗದಲ್ಲಿ ಆಲಿಕಲ್ಲು ಸಹಿತ ವರ್ಷಧಾರೆ

ಶಿವಮೊಗ್ಗದಲ್ಲಿ ದಾವಣಗೆರೆಗಿಂತಲು ದೊಡ್ಡ BSC ಶೋರೂಂ, ಏನೇನಿರುತ್ತೆ? ಯಾವಾಗ ಶುರು?

ಶಿವಮೊಗ್ಗದಲ್ಲಿ ದಾವಣಗೆರೆಗಿಂತಲು ದೊಡ್ಡ BSC ಶೋರೂಂ, ಏನೇನಿರುತ್ತೆ? ಯಾವಾಗ ಶುರು?

ಇವತ್ತು ಸರಕು ಅಡಿಕೆ ಎಷ್ಟಿದೆ? ರಾಶಿ, ಗೊರಬಲು ಧಾರಣೆ ಹೇಗಿದೆ? – 23 ಮಾರ್ಚ್‌ 2026

ಇವತ್ತು ಸರಕು ಅಡಿಕೆ ಎಷ್ಟಿದೆ? ರಾಶಿ, ಗೊರಬಲು ಧಾರಣೆ ಹೇಗಿದೆ? – 23 ಮಾರ್ಚ್‌ 2026

ಗಾಂಧಿ ಬಜಾರ್‌ ಉದ್ಯಮಿಗೆ ಬೆದರಿಕೆ ಕರೆ, ₹5,00,000 ಹಣಕ್ಕೆ ಡಿಮಾಂಡ್‌, ಏನಿದು ಕೇಸ್‌?

ಗಾಂಧಿ ಬಜಾರ್‌ ಉದ್ಯಮಿಗೆ ಬೆದರಿಕೆ ಕರೆ, ₹5,00,000 ಹಣಕ್ಕೆ ಡಿಮಾಂಡ್‌, ಏನಿದು ಕೇಸ್‌?

ಸೋಮಿನಕೊಪ್ಪದಲ್ಲಿ ಕಣ್ಮನ ಸೆಳೆದ ಜಾನಪದ ಸಮ್ಮೇಳನ, ಹೇಗಿತ್ತು? ಯಾರೆಲ್ಲ ಭಾಗವಹಿಸಿದ್ದರು?

ಸೋಮಿನಕೊಪ್ಪದಲ್ಲಿ ಕಣ್ಮನ ಸೆಳೆದ ಜಾನಪದ ಸಮ್ಮೇಳನ, ಹೇಗಿತ್ತು? ಯಾರೆಲ್ಲ ಭಾಗವಹಿಸಿದ್ದರು?

ಅಧಿಕಾರಿಗಳು, ಪೊಲೀಸರ ಜಂಟಿ ಕಾರ್ಯಾಚರಣೆ, ಶಿವಮೊಗ್ಗದ ಮಂಡ್ಲಿಯಲ್ಲಿ ದಾಳಿ, ದಾಖಲಾಯ್ತು ಕೇಸ್‌

ಅಧಿಕಾರಿಗಳು, ಪೊಲೀಸರ ಜಂಟಿ ಕಾರ್ಯಾಚರಣೆ, ಶಿವಮೊಗ್ಗದ ಮಂಡ್ಲಿಯಲ್ಲಿ ದಾಳಿ, ದಾಖಲಾಯ್ತು ಕೇಸ್‌

ಶಿವಮೊಗ್ಗ ಸಿಟಿಯಲ್ಲಿ ಶೆಟ್ಟರ ಸಂತೆ, ಶ್ರೀನಿವಾಸ ಕಲ್ಯಾಣೋತ್ಸವ, ಯಾವಾಗ? ಎಲ್ಲಿ ನಡೆಯಲಿದೆ?

ಶಿವಮೊಗ್ಗ ಸಿಟಿಯಲ್ಲಿ ಶೆಟ್ಟರ ಸಂತೆ, ಶ್ರೀನಿವಾಸ ಕಲ್ಯಾಣೋತ್ಸವ, ಯಾವಾಗ? ಎಲ್ಲಿ ನಡೆಯಲಿದೆ?

ರಾತ್ರಿ 11:45ಕ್ಕೆ ಅಮೀರ್‌ ಅಹಮದ್‌ ಸರ್ಕಲ್‌ಗೆ ಬಂದ ವ್ಯಕ್ತಿಗೆ ಕಾದಿತ್ತು ಆಘಾತ, ಆಗಿದ್ದೇನು?

ರಾತ್ರಿ 11:45ಕ್ಕೆ ಅಮೀರ್‌ ಅಹಮದ್‌ ಸರ್ಕಲ್‌ಗೆ ಬಂದ ವ್ಯಕ್ತಿಗೆ ಕಾದಿತ್ತು ಆಘಾತ, ಆಗಿದ್ದೇನು?

Leave a Comment