ಚುನಾವಣೆಗು ಮೊದಲೆ ಆಪರೇಷನ್ ಆರಂಭಿಸಿದ ಬಿಜೆಪಿ, ಭದ್ರಕೋಟೆ ಉಳಿಸಿಕೊಳ್ಳಲು ಪ್ಲಾನ್ ರೆಡಿ

ಶಿವಮೊಗ್ಗLIVE

ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ

SHIVAMOGGA LIVE NEWS | 4 DECEMBER 2022

ಶಿವಮೊಗ್ಗ : ಚುನಾವಣೆಗು ಮೊದಲೆ ಜಿಲ್ಲಾ ಬಿಜೆಪಿ ಆಪರೇಷನ್ ಆರಂಭಿಸಿದೆ. ಅಳೆದು ತೂಗಿ ಕೆಲವು ನಾಯಕರನ್ನು ಪಕ್ಷಕ್ಕೆ ಕರೆತರಲಾಗುತ್ತಿದೆ. ಈ ಮೂಲಕ ಶಿವಮೊಗ್ಗ ಜಿಲ್ಲೆಯಲ್ಲಿ ಪಕ್ಷದ ಮತ ಬ್ಯಾಂಕ್ ಭದ್ರಪಡಿಸಿಕೊಳ್ಳಲಾಗುತ್ತಿದೆ. ಮುಂದಿನ ವರ್ಷ ನಡೆಯುವ ಸಾಲು ಸಾಲು ಚುನಾವಣೆಗೆ ಈಗಿನಿಂದಲೆ ರಣತಂತ್ರ (bjp plan) ರೂಪಿಸಲಾಗುತ್ತಿದೆ.

Shimoga Nanjappa Hospital

ಶಿವಮೊಗ್ಗ ಜಿಲ್ಲೆಯನ್ನು ತನ್ನ ಭದ್ರ ಕೋಟೆಯಾಗಿ ಉಳಿಸಿಕೊಳ್ಳಲು ಬಿಜೆಪಿ ತರಹೇವಾರಿ ತಂತ್ರಗಳನ್ನು ಹೆಣೆಯಲು ಆರಂಭಿಸಿದೆ. ಜಿಲ್ಲೆಯ ಆರು ಕ್ಷೇತ್ರಗಳಲ್ಲಿ ಪುನಃ ಗೆಲುವು ಸಾಧಿಸಲು ರಣ ತಂತ್ರ ರೂಪಿಸುತ್ತಿದೆ.

(bjp plan)

ಸಕೆಂಡ್ ಲೈನ್ ಲೀಡರ್ ಗಳತ್ತ ಕಣ್ಣು

ಜಿಲ್ಲೆಯಲ್ಲಿ ಸದ್ಯ ಬಿಜೆಪಿಗೆ ಕಾಂಗ್ರೆಸ್ ಪಕ್ಷ ಮಾತ್ರ ನೇರ ಎದುರಾಳಿಯಾಗಿದೆ. ಹಾಗಾಗಿ ಕಾಂಗ್ರೆಸ್ ಪಕ್ಷದತ್ತ ದೊಡ್ಡ ಸಂಖ್ಯೆಯ ಮತಗಳು ಹರಿದು ಹೋಗದಂತೆ ತಡೆಯಲು ಬಿಜೆಪಿಯಲ್ಲಿ ಕಸರತ್ತು ಆರಂಭವಾಗಿದೆ. ಇದೆ ಕಾರಣಕ್ಕೆ ಕಾಂಗ್ರೆಸ್ ಪಕ್ಷ ಪಡೆಯಬಹುದಾದ ಮತಗಳಿಗಿಂತಲು ಹೆಚ್ಚಿನ ಮತಗಳನ್ನು ಈಗಲೆ ಒಗ್ಗೂಡಿಸಿ, ಭದ್ರಪಡಿಸಿಕೊಳ್ಳಲು ಬಿಜೆಪಿ ಮುಖಂಡರು ಪ್ರಯತ್ನ ಆರಂಭಿಸಿದ್ದಾರೆ.

Shimoga BJP Workers

ಮುಂಚೂಣಿ ನಾಯಕರನ್ನು ಬಿಟ್ಟು ಸಕೆಂಡ್ ಲೈನ್ ಲೀಡರ್ ಗಳನ್ನು ಬಿಜೆಪಿ ಸೆಳೆದುಕೊಳ್ಳುತ್ತಿದೆ. ಆಯಾ ಕ್ಷೇತ್ರದಲ್ಲಿ ಜಾತಿಯ ಮತಗಳು, ಪ್ರಭಾವವನ್ನು ಗಮನಿಸಿ ಎರಡನೇ ಹಂತದ ನಾಯಕರನ್ನು ಪಕ್ಷಕ್ಕೆ ಸೇರಿಸಿಕೊಳ್ಳಲಾಗುತ್ತಿದೆ. ಕಳೆದ ಎರಡು ತಿಂಗಳಲ್ಲಿ ನಾಲ್ವರು ಪ್ರಮುಖ ನಾಯಕರು ಬಿಜೆಪಿ ಸದಸ್ಯತ್ವ ಪಡೆದಿರುವುದು ಇದಕ್ಕೆ ಉದಾಹರಣೆ.

(bjp plan)

2 ತಿಂಗಳಲ್ಲಿ ನಾಲ್ವರು ಸೇರ್ಪಡೆ

ರಾಜು ತಲ್ಲೂರು – ಕಳೆದ ವಿಧಾನಸಭೆ ಚುನಾವಣೆಯಲ್ಲಿ ಸೊರಬದ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾಗಿದ್ದರು. 21,721 ಮತಗಳನ್ನು ಪಡೆದಿದ್ದರು.

Shimoga BJP HT Baligar Joining

ಹೆಚ್.ಟಿ.ಬಳಿಗಾರ್ – ಶಿಕಾರಿಪುರದಲ್ಲಿ ಜೆಡಿಎಸ್ ಪಕ್ಷವನ್ನು ಸಂಘಟಿಸಿದ್ದರು. ಎರಡು ಬಾರಿ ವಿಧಾನಸಭೆ ಚುನಾವಣೆಗೆ ಸ್ಪರ್ಧೆ ಮಾಡಿದ್ದರು. 2013ರಲ್ಲಿ 15 ಸಾವಿರ ಮತಗಳು, 2018ರಲ್ಲಿ 13 ಸಾವಿರ ಮತ ಗಳಿಸಿದ್ದರು.

ALSO READ – ಶಿವಮೊಗ್ಗದ ಮತ್ತಿಬ್ಬರು ನಾಯಕರು ಬಿಜೆಪಿಗೆ ಸೇರ್ಪಡೆ, ಯಾರೆಲ್ಲ ಸೇರ್ಪಡೆಯಾದರು? ಏನೇನು ಹೇಳಿದರು?

ಡಾ. ಧನಂಜಯ ಸರ್ಜಿ – ಶಿವಮೊಗ್ಗ ನಗರದಿಂದ ವಿಧಾನಸಭೆ ಚುನಾವಣೆಗೆ ಸ್ಪರ್ಧಿಸುವ ಇಂಗಿತ ಹೊಂದಿದ್ದರು. ಜನಪರ ಜೀವಪರ ಘೋಷಣೆಯೊಂದಿಗೆ ಸಮಾಜಮುಖಿ ಚಟುವಟಿಕೆಯಲ್ಲಿ ತೊಡಗಿಸಿಕೊಂಡಿದ್ದರು. ದೊಡ್ಡ ಮೊತ್ತದ ಮತ ಸೆಳೆಯುವ ಸಾಧ್ಯತೆ ಇತ್ತು.

ಕೆ.ಎಸ್.ಪ್ರಶಾಂತ್ – ಯುವ ಉದ್ಯಮಿ. ಮಾಜಿ ಮುಖ್ಯಮಂತ್ರಿ ಬಂಗಾರಪ್ಪ ಅವರ ಸಂಬಂಧಿ. ಸಾಗರ ಕ್ಷೇತ್ರದಿಂದ ವಿಧಾನಸಭೆ ಚುನಾವಣೆಗೆ ಸ್ಪರ್ಧಿಸುವ ಯೋಚನೆಯಲ್ಲಿದ್ದರು. ತಾಲೂಕಿನಾದ್ಯಂತ ಸಂಚರಿಸಿ ವೈಯಕ್ತಿಕ ವರ್ಚಸ್ಸು ವೃದ್ಧಿಸಿಕೊಂಡಿದ್ದರು.

Dr Dhananjaya Sarji and KS Prashanth joining BJP

(bjp plan)

‘ಇದು ಇಲ್ಲಿಗೆ ನಿಲ್ಲುವುದಿಲ್ಲ..’

ಡಾ.ಧನಂಜಯ ಸರ್ಜಿ ಮತ್ತು ಪ್ರಶಾಂತ್ ಅವರು ಪಕ್ಷ ಸೇರ್ಪಡೆ ಕಾರ್ಯಕ್ರಮದಲ್ಲಿ ಮಾತನಾಡಿದ ಜಿಲ್ಲಾ ಬಿಜೆಪಿ ಅಧ್ಯಕ್ಷ ಟಿ.ಡಿ.ಮೇಘರಾಜ್ ಅವರು, ಮುಖಂಡರ ಪಕ್ಷ ಸೇರ್ಪಡೆ ಇಲ್ಲಿಗೆ ನಿಲ್ಲುವುದಿಲ್ಲ ಎಂಬ ಸುಳಿವು ನೀಡಿದ್ದಾರೆ.

ALSO READ – ಶಿವಮೊಗ್ಗ ವಿಮಾನ ನಿಲ್ದಾಣ, ಒಳಗೆ ಏನೇನಿದೆ? ಹೇಗಿದೆ? ಯಾವೆಲ್ಲ ಕಟ್ಟಡ ನಿರ್ಮಿಸಲಾಗಿದೆ?

‘ಜಿಲ್ಲೆಯಲ್ಲಿ ರಾಜಕೀಯ ಧೃವೀಕರಣದ ವಾತಾವರಣವಿದೆ. ಇದು ಚುನಾವಣೆ ಸಂದರ್ಭದ ಪಕ್ಷ ಸೇರ್ಪಡೆಯಲ್ಲ. ಸೇರ್ಪಡೆಗಳು ನಿರಂತರವಾಗಿರಲಿದೆ. ಇದರಿಂದ ಸಂಘಟನೆಯ ಶಕ್ತಿ ಅಧಿಕವಾಗಲಿದೆ. ಚುನಾವಣೆ ಸಂದರ್ಭ ಪಕ್ಷ ಸೇರ್ಪಡೆ ಸಂಘಟನೆಗೆ ವೇಗ ನೀಡಲಿದೆ’ ಎಂದರು.

BJP Office Shimoga

‘ಸೊರಬದ ರಾಜು ತಲ್ಲೂರು, ಶಿಕಾರಿಪುರದ ಹೆಚ್.ಟಿ.ಬಳಿಗಾರ್, ಭದ್ರಾವತಿಯ ಕೆಂಚೇನಹಳ್ಳಿ ಕುಮಾರ್ ಅವರು ಗಣನೀಯವಾಗಿ ಮತಗಳನ್ನು ತರಬಲ್ಲವರಾಗಿದ್ದಾರೆ’ ಎಂದು ಹೇಳಿದ್ದಾರೆ. ಈ ಮೂಲಕ ಟಿ.ಡಿ.ಮೇಘರಾಜ್ ಅವರು ಕ್ಷೇತ್ರವಾರು ಬಿಜೆಪಿ ತನ್ನ ಮತ ಬ್ಯಾಂಕ್ ಭದ್ರಪಡಿಸಿಕೊಳ್ಳುತ್ತಿರುವ ಸುಳಿವು ನೀಡಿದ್ದಾರೆ.

ಮುಖಂಡರಿಗೆ ಪರಿಚಯ ವರ್ಗ

ಬಿಜೆಪಿ ಪಕ್ಷವು ಮುಖಂಡರ ಸೇರ್ಪಡೆಯನ್ನು ಅತ್ಯಂತ ವ್ಯವಸ್ಥಿತವಾಗಿ ನಿರ್ವಹಿಸುತ್ತಿದೆ. ಯಾರಂದರೆ ಅವರನ್ನು ಪಕ್ಷಕ್ಕೆ ಸೇರಿಸಿಕೊಳ್ಳುವ ಬದಲು ಮತ ಸೆಳೆಯುವ ಶಕ್ತಿ ಇದ್ದವರಿಗೆ ಅದ್ಯತೆ ನೀಡುತ್ತಿದೆ.

ಸಂಘಟನೆಯ ವತಿಯಿಂದ ‘ಪರಿಚಯ ವರ್ಗ’ಗಳನ್ನು ಆಯೋಜಿಸಿ, ಮುಖಂಡರ ಮನವರಿಕೆ https://chat.whatsapp.com/KChu2C1bGTM2v9HmZlfIkSಮಾಡಲಾಗುತ್ತಿದೆ. ಬಿಜೆಪಿ ಸೇರ್ಪಡೆಯಾದ ಬಳಿಕ ಮಾತನಾಡಿದ ಕೆ.ಎಸ್.ಪ್ರಶಾಂತ್ ಅವರು, ‘ತಮಗೆ ಈ ಮೊದಲು ಬಜರಂಗದಳದಲ್ಲಿ ಸ್ನೇಹಿತರಿದ್ದರು. ಅವರಿಂದ ಸಂಘದ ಸಂಪರ್ಕವಾಯಿತು. ಪರಿಚಯ ವರ್ಗವನ್ನು ಆಯೋಜಿಸಿ ತಮ್ಮನ್ನು ಆಹ್ವಾನಿಸಿದ್ದರು. ಅಲ್ಲಿ ಮನ ಪರಿವರ್ತನೆಯಾಗಿ ಬಿಜೆಪಿಯಲ್ಲಿ ತೊಡಗಿಸಿಕೊಳ್ಳಲು ಮುಂದಾದೆ’ ಎಂದು ತಿಳಿಸಿದರು.

BJP Joining in Shimoga

ಸಾಲು ಸಾಲು ಚುನಾವಣೆಗೆ ಸಿದ್ಧತೆ

2023 ಚುನಾವಣೆ ವರ್ಷವಾಗಿದೆ. ವಿಧಾನಸಭೆ ಚುನಾವಣೆ ಬೆನ್ನಿಗೆ ಜಿಲ್ಲಾ, ತಾಲೂಕು ಪಂಚಾಯಿತಿ ಮತ್ತು ಸ್ಥಳೀಯ ಸಂಸ್ಥೆಗಳ ಚುನಾವಣೆ ನಡೆಯಲಿದೆ. ಇದರ ಹಿಂದೆಯೆ 2024ರ ಲೋಕಸಭೆ ಚುನಾವಣೆಗೆ ಸಿದ್ಧತೆ ನಡೆಸಬೇಕಿದೆ.

ALSO READ – 5 ದಿನ ಬಿಟ್ಟು ಶಿವಮೊಗ್ಗದ ಮನೆಗೆ ಬಂದ ದಂಪತಿ ರೂಮೊಳಗೆ ಹೋಗುತ್ತಿದ್ದಂತೆ ಕಾದಿತ್ತು ಶಾಕ್

ಇವೆಲ್ಲ ಚುನಾವಣೆಗಳನ್ನು ಗಮನದಲ್ಲಿ ಇರಿಸಿಕೊಂಡು ಬಿಜೆಪಿಯಲ್ಲಿ ಮುಖಂಡರ ಸೇರ್ಪಡೆಯಾಗುತ್ತಿದೆ. ಈ ಮೂಲಕ ಜಿಲ್ಲೆಯಲ್ಲಿನ ತಮ್ಮ ಕೋಟೆಯನ್ನು ಮತ್ತಷ್ಟು ಭದ್ರಪಡಿಸಿಕೊಳ್ಳಲು ಬಿಜೆಪಿ ಮುಖಂಡರು ಯೋಚಿಸುತ್ತಿದ್ದಾರೆ.

Shimoga Nanjappa HOspital

ನಿಮ್ಮ ಕನಸಿನ ಮನೆ ಈಗ ನನಸು! 🏠

ಅತಿ ಕಡಿಮೆ ಬಡ್ಡಿ ದರದಲ್ಲಿ ಸುಲಭ ಗೃಹ ಸಾಲ


ಈಗಲೇ ಕರೆ ಮಾಡಿ
9972194422


 

About The Editor

ನಿತಿನ್‌ ಆರ್‌.ಕೈದೊಟ್ಲು

Nitin Kaidotlu - Editor - Shivamogga Live

Leave a Comment