ಅಡಕೆ ಬೆಳೆಗಾರರ ಎಲ್ಲಾ ಬಗೆಯ ಸಾಲ ಮನ್ನಾಗೆ ಸರ್ಕಾರಕ್ಕೆ ಒತ್ತಾಯ

Published On : ಡಿಸೆಂಬರ್ 5, 2022

Published By : ನಿತಿನ್‌ ಆರ್‌.ಕೈದೊಟ್ಲು 

SHIVAMOGGA LIVE NEWS | 5 DECEMBER 2022

ಶಿವಮೊಗ್ಗ : ಅಡಕೆ ಬೆಳೆಗಾರರು ಮಾಡಿರುವ ಎಲ್ಲಾ ಬೆಗೆಯ ಸಾಲವನ್ನು ರಾಜ್ಯ ಸರ್ಕಾರ ಮನ್ನಾ  (LOAN WAVE) ಮಾಡಬೇಕು. ಇದಕ್ಕಾಗಿ ಅಡಕೆ ಮಂಡಳಿ ರಚನೆ ಮಾಡಬೇಕು ಎಂದು ರಾಜ್ಯ ರೈತ ಸಂಘದ ಮುಖಂಡ ಕೆ.ಟಿ.ಗಂಗಾಧರ್ ಒತ್ತಾಯಿಸಿದರು.

Shimoga nanjappa hospital

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕೆ.ಟಿ.ಗಂಗಾಧರ್ ಅವರು, ಅಡಕೆ ಬೆಳೆಗಾರರ ಹಿತಕ್ಕಾಗಿ ಅವರ ಸಹಕಾರ ಸಂಘದ ಸಾಲ, ವಾಣಿಜ್ಯ ಬ್ಯಾಂಕುಗಳಲ್ಲಿ ಪಡೆದ ಸಾಲಗಳನ್ನು ರಾಜ್ಯ ಸರ್ಕಾರ ಮನ್ನಾ (LOAN WAVE) ಮಾಡಬೇಕು. ಅಲ್ಲದೆ ಅಡಕೆಗಾಗಿ ಪ್ರತ್ಯೇಕ ಮಂಡಲಿ ರಚಿಸಬೇಕು. ಕೇಂದ್ರ ಸರ್ಕಾರ ಅಡಕೆ ಬೆಳೆಗಾರರ ಬೆಂಬಲಕ್ಕೆ ನಿಲ್ಲಬೇಕು ಎಂದು ಆಗ್ರಹಿಸಿದರು.

ALSO READ – ಅಡಕೆ ರೇಟ್ | 5 ಡಿಸೆಂಬರ್ 2022 | ಎಲ್ಲೆಲ್ಲಿ ಎಷ್ಟಿದೆ ಅಡಕೆ ಧಾರಣೆ?

ಎಲೆ ಚುಕ್ಕೆ ರೋಗದಿಂದ ರೈತರು ಸಂಕಷ್ಟಕ್ಕೀಡಾಗಿದ್ದಾರೆ. ಈಗಾಗಲೆ ಇಬ್ಬರು ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಅಡಕೆ ಮರಗಳು ಕೂಡ ಜೀವ ಬಿಡುವ ಸ್ಥಿತಿಗೆ ತಲುಪಿವೆ. 7 ತಜ್ಞರ ಸಮಿತಿಯನ್ನು ಸರ್ಕಾರ ರಚನೆ ಮಾಡಿದೆ. ಈ ತಂಡ ಪ್ರವಾಸ ಕೈಗೊಂಡು ಪರಿಶೀಲನೆ ನಡೆಸಿತು. ಆದರೆ ಈತನಕ ಪರಿಹಾರ ಮಾರ್ಗ ಸೂಚಿಸಿಲ್ಲ. ಮುಖ್ಯಮಂತ್ರಿಯವರು ನೆಪಮಾತ್ರಕ್ಕೆ ಬಂದು ಹೋದರು. ಈವರೆಗೂ ಸರ್ಕಾರ ಸಮಗ್ರವಾದ ಅಭಿಪ್ರಾಯ ಪ್ರಕಟಿಸಿಲ್ಲ. ಇದು ಅಡಕೆ ಬೆಳೆಗಾರರ ಆತಂಕ ಹೆಚ್ಚಿಸಿದೆ ಎಂದರು.

ALSO READ – ಅಡಕೆ ಸಾಗಣೆಗೆ 6 ಗೈಡ್ ಲೈನ್ ಪ್ರಕಟಿಸಿದ ಶಿವಮೊಗ್ಗ ಪೊಲೀಸ್, ಏನದು? ಕಾರಣವೇನು?

ಯಶವಂತರಾವ್ ಘೋರ್ಪಡೆ, ಗಂಗಾಧರ, ಹಿರಣ್ಣಯ್ಯ, ಕೆ.ಆರ್.ಮಂಜುನಾಥ, ಪಾಂಡಪ್ಪ ಅವರು ಸುದ್ದಿಗೋಷ್ಠಿಯಲ್ಲಿದ್ದರು.

Shimoga nanjappa hospital

ನಿಮ್ಮ ಕನಸಿನ ಮನೆ ಈಗ ನನಸು! 🏠

ಅತಿ ಕಡಿಮೆ ಬಡ್ಡಿ ದರದಲ್ಲಿ ಸುಲಭ ಗೃಹ ಸಾಲ


ಈಗಲೇ ಕರೆ ಮಾಡಿ
9972194422


 

About The Editor

ನಿತಿನ್‌ ಆರ್‌.ಕೈದೊಟ್ಲು

Nitin Kaidotlu - Editor - Shivamogga Live

© ಶಿವಮೊಗ್ಗ ಲೈವ್‌ : ಡಿಸೆಂಬರ್ 5, 2022

Leave a Comment