ಶಿವಮೊಗ್ಗ ಲೈವ್.ಕಾಂ
ಶಿವಮೊಗ್ಗ ಜಿಲ್ಲೆಯ ನಂಬರ್ 1 ಸುದ್ದಿ ಮಾಧ್ಯಮ
SHIVAMOGGA LIVE NEWS | 10 DECEMBER 2022
ಶಿವಮೊಗ್ಗ : ಸರ್ಕಾರದ ಕೈಗಾರಿಕ (Forest Industries) ನಿಗಮವೊಂದರಲ್ಲಿ ಲಕ್ಷ ಲಕ್ಷ ರೂ. ವಂಚನೆ ಮಾಡಿದ ನಿವೃತ್ತ ಕಿರಿಯ ಸಹಾಯಕನ ವಿರುದ್ಧ ಪ್ರಕರಣ ದಾಖಲಾಗಿದೆ. ಪೂರ್ಣ ಪ್ರಮಾಣದಲ್ಲಿ ಹಣ ಹಿಂತಿರುಗಿಸದ ಹಿನ್ನಲೆ ದೂರು ನೀಡಲಾಗಿದೆ.
ಶಿವಮೊಗ್ಗ ರಾಗಿಗುಡ್ಡದ ಬಳಿ ಇರುವ ರಾಜ್ಯ ಅರಣ್ಯ ಕೈಗಾರಿಕಾ (Forest Industries) ನಿಗಮದಲ್ಲಿ ಬಸಪ್ಪ ಎಂಬುವವರು ಕಿರಿಯ ಸಹಾಯಕರಾಗಿ ಕೆಲಸ ಮಾಡುತ್ತಿದ್ದರು. 2004 ರಿಂದ 2007ರವರೆಗೆ ನಡೆದ ಲಾಗಿಂಗ್ ಕಾಮಗಾರಿ ವೇಳೆ ಲಕ್ಷಾಂತರ ರೂ. ವಂಚನೆಯಾಗಿದೆ ಅನ್ನವುದು ಬೆಳಕಿಗೆ ಬಂದಿದೆ. ಒಟ್ಟು 14.90 ಲಕ್ಷ ರೂ. ವಂಚಿಸಿದ್ದಾರೆ ಎಂದು ಆರೋಪಿಸಲಾಗಿದೆ.
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422
ಇದನ್ನೂ ಓದಿ – 7ನೇ ವೇತನ ಆಯೋಗ ಸಂಪೂರ್ಣ ವಿಭಿನ್ನ, ಹಿಂದಿನಂತಿಲ್ಲ ಹೊರೆ, ಹೇಗಿರುತ್ತೆ ಆಯೋಗದ ಕೆಲಸ?
ಇಲಾಖೆ ವಿಚಾರಣೆ ವೇಳೆ ವಂಚನೆ ಮಾಡಿರುವುದನ್ನು ಆರೋಪಿ ಒಪ್ಪಿಕೊಂಡಿದ್ದಾರೆ. ಹಾಗಾಗಿ 14.90 ಲಕ್ಷ ರೂ. ವಸೂಲಿಗೆ ಆದೇಶವಾಗಿತ್ತು. ನಿವೃತ್ತಿ ಸೌಲಭ್ಯಗಳಲ್ಲಿ ವಸೂಲಿ ಮಾಡಿಕೊಳ್ಳುವಂತೆ ಬಸಪ್ಪ ಪತ್ರದ ಮೂಲಕ ತಿಳಿಸಿದ್ದರು. ಅದರಿಂದ 6.22 ಲಕ್ಷ ರೂ. ವಸೂಲಿ ಮಾಡಿಕೊಳ್ಳಲಾಗಿದೆ. ಉಳಿದ 8.68 ಲಕ್ಷ ರೂ. ಪಾವತಿಸುವಂತೆ ಹಲವು ಬಾರಿ ನೊಟೀಸ್ ನೀಡಲಾಗಿದೆ. ಆದರೆ ಈತನಕ ಹಣ ಪಾವತಿ ಮಾಡಿಲ್ಲ ಎಂದು ದೂರಿನಲ್ಲಿ ಆರೋಪಿಸಲಾಗಿದೆ.
ಇದೆ ಕಾರಣಕ್ಕೆ ರಾಜ್ಯ ಅರಣ್ಯ ಕೈಗಾರಿಕ (Forest Industries) ನಿಗಮದ ಡಿಸಿಎಫ್ ಮತ್ತು ರಿಜನಲ್ ಮ್ಯಾನೇಜರ್ ಸತೀಶ್ ಚಂದ್ರ ಅವರು ದೂರು ನೀಡಿದ್ದಾರೆ. ಶಿವಮೊಗ್ಗ ಗ್ರಾಮಾಂತರ ಠಾಣೆಯಲ್ಲಿ ಬಸಪ್ಪ ವಿರುದ್ಧ ಪ್ರಕರಣ ದಾಖಲಾಗಿದೆ.