ಶಿವಮೊಗ್ಗದಲ್ಲಿ ಪ್ರಥಮ ಬಹುಮಾನ ಪಡೆದ ಹಾಸ್ಯ ನಾಟಕ, ಜನರ ಜೊತೆ ಪೂರ್ತಿ ನಾಟಕ ನೋಡಿ ನಕ್ಕು ಹಗುರಾದ ಡಿಸಿ

SHIVAMOGGA LIVE NEWS | 28 DECEMBER 2022

ಶಿವಮೊಗ್ಗ : ರಂಗ ದಸರಾ ಹಾಸ್ಯ ನಾಟಕ ಸ್ಪರ್ಧೆಯಲ್ಲಿ (comedy drama) ಮೊದಲ ಬಹುಮಾನ ಪಡೆದ ಪದ್ಮಾವತಿ ಪ್ರಣಯ ಪ್ರಸಂಗ ನಾಟಕವನ್ನು ಕುವೆಂಪು ರಂಗಮಂದಿರದಲ್ಲಿ ಪ್ರದರ್ಶಿಸಲಾಯಿತು. ಜಿಲ್ಲಾಧಿಕಾರಿ ಡಾ.ಸೆಲ್ವಮಣಿ ಸೇರಿದಂತೆ ಹಲವು ಅಧಿಕಾರಿಗಳು, ಜನಪ್ರತಿನಿಧಿಗಳು, ಸಾರ್ವಜನಿಕರು ನಟಕ ನೋಡಿ, ಹೊಟ್ಟೆ ಹುಣ್ಣಾಗುವಷ್ಟು ನಕ್ಕು ಹಗುರಾದರು.

Shimoga Nanjappa hospital

ಶಿವಮೊಗ್ಗ ಪಾಲಿಕೆ ವತಿಯಿಂದ ದಸರಾ ಹಬ್ಬದ ಸಂದರ್ಭ ರಂಗ ದಸರಾ ಹಾಸ್ಯ ನಾಟಕ (comedy drama) ಸ್ಪರ್ಧೆ ಆಯೋಜಿಸಲಾಗಿತ್ತು. ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಮಂಗಳವಾರ ಕುವೆಂಪು ರಂಗಮಂದಿರದಲ್ಲಿ ಪ್ರಶಸ್ತಿ ವಿತರಿಸಲಾಯಿತು.

drama5

ಕಾರ್ಯಕ್ರಮದಲ್ಲಿ ಪ್ರಾಸ್ತಾವಿಕವಾಗಿ ಮಾತನಾಡಿದ ಪಾಲಿಕೆ ಆಡಳಿತ ಪಕ್ಷದ ನಾಯಕ ಎಸ್.ಎನ್.ಚನ್ನಬಸಪ್ಪ, ರಂಗಕಲೆಗೆ ಪ್ರೋತ್ಸಾಹ ನೀಡುವ ಉದ್ದೇಶವನ್ನು ಪಾಲಿಕೆ ಹೊಂದಿದೆ. ನಾಟಕ ರಚನೆಗೆ ಪ್ರೋತ್ಸಾಹ ನೀಡಲು ಯೋಜಿಸಲಾಯಿತು. ಹಾಸ್ಯ ನಾಟಕ (comedy drama) ರಚನೆ ಆಯೋಜಿಸಲಾಗಿತ್ತು. ಈ ಬಾರಿ ತಕ್ಕಮಟ್ಟಿನ ಪ್ರತಿಕ್ರಿಯೆ ವ್ಯಕ್ತವಾಗಲಿಲ್ಲ. ಮುಂದಿನ ಭಾರಿ ಮತ್ತೆ ಪ್ರಯತ್ನ ಮಾಡುತ್ತೇವೆ ಎಂದರು.

drama4

ಜಿಲ್ಲಾಧಿಕಾರಿ ಡಾ. ಸೆಲ್ವಮಣಿ ಅವರು ಮಾತನಾಡಿ, ನಾಟಕೋತ್ಸವ ಮಾಡುವುದೆ ಕಷ್ಟ. ಅದರಲ್ಲೂ ಪಾಲಿಕೆ ಹಾಸ್ಯ ನಾಟಕೋತ್ಸವ ಮಾಡಿರುವುದು ಖುಷಿಯ ವಿಚಾರ. ನಾವು ಸಣ್ಣ ಮಕ್ಕಳಿದ್ದಾಗ ನಮ್ಮೂರಲ್ಲಿ ಜಾತ್ರೆಗಳಿದ್ದಾಗ ನಾಟಕ ನೋಡಿದರಷ್ಟ ಮನರಂಜೆನೆ ಇತ್ತು. ಟಿವಿಗಳು, ಮೊಬೈಲ್ ಬಂದ ಮೇಲೆ ನಾಟಕಗಳು ಕಡಮೆಯಾದವವು. ನಮ್ಮ ಮಣ್ಣಿನ ಕಲೆಯನ್ನು ಬೆಳೆಸುವಲ್ಲಿ ಪಾಲಿಕೆ ಶ್ರಮ ವಹಿಸುತ್ತಿದೆ ಎಂದರು.

Kalleshwara-Enterprises.webp

drama3

ಕಲಾವಿದರ ಸಂಘದ ಅಧ್ಯಕ್ಷ ಕೊಟ್ಟೂರಪ್ಪ ಮಾತನಾಡಿ, ನಗರದಲ್ಲಿ ಇನ್ನಷ್ಟು ರಂಗಚಟುವಟಿಕೆ ನಡೆಯುವ ಅಗತ್ಯವಿದೆ. ಹಾಗಾಗಿ ರಂಗ ತಾಲೀಮು ಕೊಠಡಿ ಅವಶ್ಯಕತೆ ಇದೆ. ಇದಕ್ಕೆ ಪಾಲಿಕೆ, ಜಿಲ್ಲಾಡಳಿತದ ಸಹಕಾರ ಬೇಕು ಎಂದು ಮನವಿ ಮಾಡಿದರು.

drama2

ಇದೆ ವೇಳೆ ಪ್ರಥಮ ಪ್ರಶಸ್ತಿ ಪಡೆದ ಪದ್ಮಾವತಿ ಪ್ರಣಯ ಪ್ರಸಂಗ ನಾಟಕವನ್ನು ಪ್ರದರ್ಶಿಸಲಾಯಿತು. ಕುವೆಂಪು ರಂಗಮಂದಿರದಲ್ಲಿ ದೊಡ್ಡ ಸಂಖ್ಯೆಯ ಪ್ರೇಕ್ಷಕರು ಸೇರಿದ್ದರು.

ಇದನ್ನೂ ಓದಿ – ಕುಪ್ಪಳಿಯ ರಾಷ್ಟ್ರಕವಿ ಕುವೆಂಪು ಪ್ರಾಧಿಕಾರಕ್ಕೆ ಸರ್ಕಾರದಿಂದ ಒಂದು ಕೋಟಿ ರೂ., ಕಾರಣವೇನು?

drama1

ಆಟೋ ಚಾಲಕನೊಬ್ಬ ಯುವತಿಯೊಬ್ಬಳನ್ನು ಪ್ರೀತಿಸುತ್ತಾನೆ. ಆಕೆಯ ಮನೆಯವರನ್ನು ಒಪ್ಪಿಸಿ ಮದುವೆಯಾಗಲು ಹರಸಾಹಸ ಪಡುತ್ತಾನೆ. ಭರತನಾಟ್ಯ ಶಿಕ್ಷಕನ ವೇಷದಲ್ಲಿ ಯುವತಿಯ ಮನೆಗೆ ಹೋಗುತ್ತಾನೆ. ಈ ವೇಳೆ ಯುವತಿಯ ಚಿಕ್ಕಮ್ಮ ಭರತನಾಟ್ಯ ಶಿಕ್ಷಕನನ್ನು ಪ್ರೀತಿಸಲು ಆರಂಭಿಸುತ್ತಾಳೆ. ಧರ್ಮ ಸಂಕಟದಲ್ಲಿ ಸಿಕ್ಕಿಬೀಳುವ ಯುವಕ ಕೊನೆಗೂ ಯುವತಿಯನ್ನು ವಿವಾಹವಾಗುತ್ತಾನೆ. ಈ ನಡುವೆ ನಡೆಯುವ ಕೆಲವು ಬೆಳವಣಿಗೆಗಳು ಪ್ರೇಕ್ಷಕರನ್ನು ನಗೆಗಡಲಲ್ಲಿ ತೇಲಿಸಿತು.

drama6

ಜಿಲ್ಲಾಧಿಕಾರಿ ಡಾ.ಸೆಲ್ವಮಣಿ ಸೇರಿದಂತೆ ಹಲವು ಅಧಿಕಾರಿಗಳು, ಪಾಲಿಕೆ ಸದಸ್ಯರು ಕೂಡ ನಾಟಕವನ್ನು ಪೂರ್ತಿ ನೋಡಿ ಖುಷಿಪಟ್ಟರು.

Shimoga Nanjappa Hospital

ಶಿವಮೊಗ್ಗ ಜಿಲ್ಲೆಯ ಯಾವುದೇ ಊರಿನ ಸುದ್ದಿಯನ್ನು ವಾಟ್ಸಪ್‌ ಮಾಡಬಹುದು. ಉಚಿತವಾಗಿ ಪ್ರಕಟಿಸುತ್ತೇವೆ. ವಾಟ್ಸಪ್‌ ನಂಬರ್: 7411700200
Kalleshwara-Enterprises.webp

Leave a Comment