ಬುಕ್ ಮಾಡಿದ ಸೀಟ್ ಬಿಟ್ಟು ಮತ್ತೊಂದು ಸೀಟ್ ಕೇಳಿದ ಪ್ರಯಾಣಿಕ, ಕೊಡದಿದ್ದಕ್ಕೆ ರಂಪಾಟ, ಹಲ್ಲೆ

ಶಿವಮೊಗ್ಗ
LIVE

ಕಡಿಮೆ ಬಡ್ಡಿಯಲ್ಲಿ ಗೃಹ ಸಾಲ (HOME LOAN)

ನಿಮ್ಮ ಸ್ವಂತ ಮನೆಯ ಕನಸು ಈಗ ನನಸು!
ಮನೆ ಕಟ್ಟಲು ಅಥವಾ ಸೈಟ್ ಖರೀದಿಸಲು ಸಾಲ ಸೌಲಭ್ಯ.

✅ ಅತೀ ಕಡಿಮೆ ಬಡ್ಡಿ ದರ
✅ ತ್ವರಿತ ಸಾಲ ಮಂಜೂರಾತಿ
✅ ಸುಲಭ ಮರುಪಾವತಿ ಕಂತುಗಳು

ಹೆಚ್ಚಿನ ಮಾಹಿತಿಗಾಗಿ ಕರೆ ಮಾಡಿ ಅಥವಾ ವಾಟ್ಸಾಪ್ ಮಾಡಿ:

99721 94422
*ಷರತ್ತುಗಳು ಅನ್ವಯಿಸುತ್ತವೆ

SHIVAMOGGA LIVE NEWS |29 DECEMBER 2022

ಶಿವಮೊಗ್ಗ : ಖಾಸಗಿ ಬಸ್ಸಿನಲ್ಲಿ ಬದಲಿ ಸೀಟ್ (bus seat) ಕೊಡಲಿಲ್ಲ ಎಂಬ ಕಾರಣಕ್ಕೆ ಪ್ರಯಾಣಿಕ ಮತ್ತು ಆತನ ಜೊತೆಗೆ ಬಂದಿದ್ದವರು ಕಚೇರಿಯಲ್ಲಿದ್ದ ವಸ್ತುಗಳನ್ನು ಹಾನಿಗೆಡವಿದ್ದಾರೆ. ಅಲ್ಲದೆ ಸಿಬ್ಬಂದಿಯೊಬ್ಬರ ಮೇಲೆ ಹಲ್ಲೆ ಮಾಡಿದ್ದಾರೆ.

ಶಿವಮೊಗ್ಗ ಲೈವ್‌ನ ಪ್ರತಿ ಅಪ್‌ಡೇಟ್‌ ನೀವೇ ಮೊದಲು ಪಡೆಯಲು ಕೆಳಗಿನ ಗ್ರೂಪ್‌ಗಳನ್ನು ಜಾಯಿನ್ ಆಗಿ:

Shimoga Nanjappa Hospital

ಈಸ್ಟ್ ವೆಸ್ಟ್ ಬಸ್ ಸಂಸ್ಥೆಯ ಉದ್ಯೋಗಿ ಮೊಹಮ್ಮದ್ ಶೋಹೆಬ್ ಅಹಮದ್ ಎಂಬುವವರ ಮೇಲೆ ಹಲ್ಲೆ ನಡೆಸಲಾಗಿದೆ.

ಏನಿದು ಪ್ರಕರಣ? (bus seat)

ಉಮರ್ ಎಂಬಾತ ಮುಂಬೈಗೆ ತೆರಳಲು ಆನ್ ಲೈನ್ ಮೂಲಕ ಸೀಟ್ ಬುಕ್ ಮಾಡಿದ್ದ. ಬಸ್ ಹತ್ತುವಾಗ ತನಗೆ ಬೇರೆ ಸೀಟ್ (bus seat) ಬೇಕು ಎಂದು ಕೇಳಿದ್ದಾನೆ. ಆಗ ಮೊಹಮ್ಮದ್ ಶೋಹೆಬ್ ಅವರು ಸದ್ಯಕ್ಕೆ ಸೀಟ್ ಖಾಲಿ ಇಲ್ಲ. ಮುಂದೆ ಖಾಲಿಯಾದರೆ ಬದಲಿ ವ್ಯವಸ್ಥೆ ಮಾಡುವುದಾಗಿ ತಿಳಿಸಿದ್ದಾರೆ. ಇದರಿಂದ ಕೆರಳಿದ ಉಮರ್, ಈಸ್ಟ್ ವೆಸ್ಟ್ ಬಸ್ ಕಚೇರಿಗೆ ನುಗ್ಗಿ ಶೋಹೆಬ್ ಅವರ ಮೇಲೆ ಹಲ್ಲೆ ನಡೆಸಿದ್ದಾನೆ ಎಂದು ಆರೋಪಿಸಲಾಗಿದೆ.

ಇದನ್ನೂ ಓದಿ – ಶಿವಮೊಗದಲ್ಲಿ ಹುಕ್ಕಾ ಬಾರ್, ಪೊಲೀಸರು, ಅಧಿಕಾರಿಗಳಿಂದ ದಾಳಿ

ಉಮರ್ ಜೊತೆಗೆ ಬಂದಿದ್ದ ಇತರೆ 7 ಮಂದಿ ಕೂಡ ತನ್ನ ಮೇಲೆ ಹಲ್ಲೆ ಮಾಡಿದ್ದಾರೆ. ಈ ವೇಳೆ ತನ್ನ ಜೇಬಿನಲ್ಲಿದ್ದ 23 ಸಾವಿರ ರೂ. ನಗದು ನಾಪತ್ತೆಯಾಗಿದೆ. ಕಚೇರಿಯಲ್ಲಿದ್ದ ಪ್ರಿಂಟರ್ ಹಾನಿಗೀಡಾಗಿದೆ. ಎಟಿಎಂ ಮೆಷಿನ್ ನಿಂದ ತನ್ನ ತಲೆಗೆ ಹೊಡೆದಿದ್ದಾರೆ ಎಂದು ಮೊಹಮ್ಮದ್ ಶೋಹೆಬ್ ಆರೋಪಿಸಿದ್ದಾರೆ.

ಘಟನೆ ಸಂಬಂಧ ದೊಡ್ಡಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Shimoga Nanjappa Hospital

About The Editor

ನಿತಿನ್‌ ಆರ್‌.ಕೈದೊಟ್ಲು

Nitin Kaidotlu - Editor - Shivamogga Live

Leave a Comment