ಸಿಗಂದೂರು ಲಾಂಚ್‌ ವಿಚಾರ, ಸರ್ಕಾರ ನಿರ್ಧಾರ ಪ್ರಕಟಿಸುವಂತೆ ಆಗ್ರಹ, ಏನಂದ್ರು ಪ್ರಸನ್ನ ಕೆರೆಕೈ?

ಸಾಗರ: ಕಳಸವಳ್ಳಿ – ಅಂಬಾರಗೋಡ್ಲು ನಡುವೆ ಓಡಾಡುತ್ತಿದ್ದ ಲಾಂಚ್‌ನ್ನು (Sigandur launch) ಪ್ರವಾಸೋದ್ಯಮಕ್ಕೆ ಬಳಸಲು ಜಿಲ್ಲಾಡಳಿತ ಮತ್ತು ಶಾಸಕರು ಆಡಳಿತಾತ್ಮಕ ಕ್ರಮ ಕೈಗೊಳ್ಳಬೇಕು ಎಂದು ಕೇಂದ್ರ ಸಂಬಾರು ಮಂಡಳಿ ಸದಸ್ಯ ಪ್ರಸನ್ನ ಕೆರೆಕೈ ಒತ್ತಾಯಿಸಿದರು.

ಸುದ್ದಿಯ ಮುಂದಿನ ಭಾಗ ಕೆಳಗಿದೆ

Sunrise Facility Services, Sri sai Trust Shimoga

ಕಾರ್ಯನಿರತ ಪತ್ರಕರ್ತರ ಸಂಘದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಿಗಂದೂರು ಸೇತುವೆ ಉದ್ಘಾಟನೆಗೊಂಡು ಲಾಂಚ್ ಸೇವೆ ಸ್ಥಗಿತಗೊಂಡಿದೆ. ಆ ಸಂದರ್ಭ ಲಾಂಚ್‌ಗಳನ್ನು ಪ್ರವಾಸೋದ್ಯಮಕ್ಕೆ ಬಳಸಲಾಗುವುದು ಎಂದು ಸರ್ಕಾರ ಹೇಳಿತ್ತು. ಇದಾದ 8 ತಿಂಗಳಾದರೂ ಕ್ರಮ ಕೈಗೊಂಡಿಲ್ಲ ಎಂದು ಆಕ್ಷೇಪ ವ್ಯಕ್ತಪಡಿಸಿದರು.

Sigandur-Launch-at-Holebagilu

Sigandur-Launch-in-sharavathi-back-water.

ಶರಾವತಿ ಹಿನ್ನೀರಿನಲ್ಲಿ ಮೂರು ಲಾಂಚ್‌ಗಳು ಸೇವೆಯಲ್ಲಿದ್ದವು. ಮುಪ್ಪಾನೆಯಲ್ಲಿ ಫ್ಲಾಟ್‌ ಫಾರಂ ಸಿದ್ದಪಡಿಸಿದರೆ ಒಂದು ಲಾಂಚ್‌ನ್ನು ಅಲ್ಲಿ ಬಿಡಬಹುದು. ಜನರ ಹಿತದೃಷ್ಟಿಯಿಂದ ಅಲ್ಲಿ ಇದರ ಅಗತ್ಯವಿದೆ. ಬರುವೆಯಲ್ಲೊಂದು ಫ್ಲಾಟ್‌ ಫಾರಂ ಮಾಡಿದರೆ ಅಲ್ಲೂ ಒಂದು ಲಾಂಚ್‌ನ್ನು ವ್ಯವಸ್ಥೆ ಮಾಡಬಹುದು. ಬರುವೆಯ ಜನರು ಪಡಿತರಕ್ಕೆ 40 ಕಿ.ಮೀ. ಸುತ್ತುವರಿದು ಬರುವುದು ಇದರಿಂದ ತಪ್ಪುತ್ತದೆ ಎಂದು ಅವರು ಸಲಹೆ ನೀಡಿದರು.

Nanjappa Hospital Advertisement

ಬಿಜೆಪಿ ತಾಲೂಕು ಅಧ್ಯಕ್ಷ ದೇವೇಂದ್ರಪ್ಪ ಯಲಕುಂಡ್ಲಿ, ಜಿಲ್ಲಾ ಸಮಿತಿ ಸದಸ್ಯ ಪ್ರಶಾಂತ್, ಶ್ರೀಧರ ಚುಟ್ಟಿಕೆರೆ, ಗಣಪತಿ, ಗೋವರ್ಧನ ಮತ್ತಿತರರು ಹಾಜರಿದ್ದರು.

ಇದನ್ನೂ ಓದಿ – ಆಗುಂಬೆ ಘಾಟಿಯಲ್ಲಿ ರಸ್ತೆಗೆ ಬಿದ್ದ ಮರ, ಕೆಲ ಹೊತ್ತು ಟ್ರಾಫಿಕ್‌ ಜಾಮ್

Number 1 News Website in shimoga - Shivamogga Live
📍 ನಿಮ್ಮೂರ ಸುದ್ದಿ
ಶಿವಮೊಗ್ಗ ಜಿಲ್ಲೆಯ ಯಾವುದೇ ಊರಿನ ಸುದ್ದಿಯನ್ನು ವಾಟ್ಸಪ್‌ ಮಾಡಬಹುದು. ಉಚಿತವಾಗಿ ಪ್ರಕಟಿಸುತ್ತೇವೆ.
Shivamogga Live Promotion

Leave a Comment