ಲಾರಿಗೆ ಹಿಂಬದಿಯಿಂದ ಡಿಕ್ಕಿ, ಗೌತಮಪುರಕ್ಕೆ ಹೋಗುತ್ತಿದ್ದ ಸವಾರರು ಸ್ಥಳದಲ್ಲೇ ಸಾವು

SHIVAMOGGA LIVE NEWS |5 JANUARY 2023

ANANDAPURA : ಲಾರಿಗೆ ಬೈಕ್ ಹಿಂಬದಿಯಿಂದ ಡಿಕ್ಕಿಯಾಗಿ ಇಬ್ಬರು ಯುವಕರು (youths) ಸ್ಥಳದಲ್ಲೆ ಸವಾನ್ನಪ್ಪಿದ್ದಾರೆ.

ಆನಂದಪುರ ಸಮೀಪದ ಗೌತಮಪುರದ ತಮಿಳು ಕ್ಯಾಂಪ್ ನ ಪ್ರದೀಪ್ (28) ಮತ್ತು ಆತನ ಸಂಬಂಧ ತರಲಘಟ್ಟದ ದಯಾನಂದ (32) ಮೃತರು. ಆನಂದಪುರ – ಶಿಕಾರಿಪುರ ರಾಷ್ಟ್ರೀಯ ಹೆದ್ದಾರಿಯಲ್ಲಿ ಕಣ್ಣೂರು ಗ್ರಾಮದ ಬಳಿ ಘಟನೆ ಸಂಭವಿಸಿದೆ.

ರಸ್ತೆ ಬದಿಯಲ್ಲಿ ನಿಲ್ಲಿಸಿದ್ದ ಲಾರಿಗೆ ಬೈಕ್ ಹಿಂಬದಿಯಿಂದ ಡಿಕ್ಕಿ ಹೊಡೆದಿದೆ. ಗಂಭೀರವಾಗಿ ಗಾಯಗೊಂಡಿದ್ದ ಇಬ್ಬರು (youths) ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.

ಇದನ್ನೂ ಓದಿ – ಗೌತಮಪುರ ಬಳಿ ಬೈಕ್ ಸ್ಕಿಡ್, ಗಂಭೀರ ಗಾಯಗೊಂಡಿದ್ದ ಸವಾರ ಸಾವು

ಪ್ರದೀಪ್ ಮತ್ತು ದಯಾನಂದ್ ಆನಂದಪುರದ ವಾರದ ಸಂತೆಗೆ ತೆರಳಿದ್ದರು. ತರಕಾರ ಮತ್ತು ಇತ್ಯಾದಿ ವಸ್ತುಗಳನ್ನು ಖರೀದಿಸಿ ಮನೆಗೆ ತೆರಳುತ್ತಿದ್ದಾಗ ಘಟನೆ ಸಂಭವಿಸಿದೆ. ಸಾಗರ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

bike-collides-with-lorry-at-Anandapura-in-Sagara

Leave a Comment