ಕೊನೆವರೆಗು ಹೋರಾಡಿದ ಉದ್ಯಮಿ ಶರತ್ ಭೂಪಾಳಂ, ಭಾನುವಾರ ಬೆಳಗಿನ ಜಾವ ಏನೇನಾಯ್ತು?

SHIVAMOGGA LIVE NEWS | 9 JANUARY 2023

ಶಿವಮೊಗ್ಗ : ಉದ್ಯಮಿ ಶರತ್ ಭೂಪಾಳಂ ಅವರು ತಮ್ಮ ಮನೆಯಲ್ಲಿ ಸಂಭವಿಸಿದ ಅಗ್ನಿ ಅವಘಡದಲ್ಲಿ ಮೃತಪಟ್ಟಿದ್ದಾರೆ. ಅವರ ಮಗ ಸಂಚಿತ್ ಆರೋಗ್ಯದಲ್ಲಿ ಚೇತರಿಕೆ ಕಂಡು ಬಂದಿದೆ. ಶಾರ್ಟ್ ಸರ್ಕಿಟ್ ನಿಂದಾಗಿ ಅವಘಡ ಸಂಭವಿಸಿದೆ. (business man death)

ಘಟನೆ ಸಂಭವಿಸಿದ್ದು ಹೇಗೆ?

ಶಿವಮೊಗ್ಗ ಜಿಲ್ಲಾ ಪಂಚಾಯಿತಿ ಎದುರಿನ ಭೂಪಾಳಂ ನಿವಾಸದಲ್ಲಿ ಭಾನುವಾರ ಬೆಳಗಿನ ಜಾವ 4 ಗಂಟೆ ಹೊತ್ತಿಗೆ ಶಾರ್ಟ್ ಸರ್ಕಿಟ್ ಸಂಭವಿಸಿದೆ. ಕೂಡಲೆ ಮನೆಯಲ್ಲಿ ವಿದ್ಯುತ್ ಸಂಪರ್ಕ ಕಡಿತಗೊಂಡಿದೆ ಎಂದು ತಿಳಿದು ಬಂದಿದೆ. ಮನೆಯಲ್ಲಿದ್ದವರು ಎಚ್ಚರಗೊಳ್ಳುವ ಹೊತ್ತಿಗಾಗಲೆ ಮನೆಯೊಳಗೆ ಕತ್ತಲು ಆವರಿಸಿತ್ತು.

sharat1

ಮಗನನ್ನು ರಕ್ಷಿಸಲು ತೆರಳಿದ್ದರು

ಶರತ್ ಅವರು ಮನೆಯಲ್ಲಿದ್ದ ಎಲ್ಲರನ್ನು ಹೊರಗೆ ಕರೆ ತಂದಿದ್ದಾರೆ. ನಾಲ್ವರು ಮನೆಯಿಂದ ಹೊರಗೆ ಬಂದಿರುವುದನ್ನು ಗಮನಿಸಿ ಅವರು, ಪುನಃ ಮನೆಯೊಳಗೆ ಹೋಗಿದ್ದಾರೆ. ಮೊದಲ ಮಹಡಿಯಲ್ಲಿ ಮಲಗಿದ್ದ ಮಗ ಸಂಚಿತ್ ನನ್ನು ರಕ್ಷಿಸಲು ತೆರಳಿದ್ದರು. ಸಂಚಿತ್ ನನ್ನು ರಕ್ಷಿಸಿ ಹೊರೆಗೆ ಕಳುಹಿಸಿದ್ದರು. (business man death)

Shimoga Live News Reach

ಮನೆ ಒಳಗೆ ಪ್ರಜ್ಞೆ ಕಳೆದುಕೊಂಡರು

ಮನೆಯಲ್ಲಿ ದಟ್ಟ ಹೊಗೆ ಆವರಿಸಿಕೊಂಡಿದ್ದರಿಂದ ಕಿಟಕಿಗಳನ್ನು ತೆಗೆಯಲು ಶರತ್ ಭೂಪಾಳಂ ಅವರು ಪ್ರಯತ್ನಿಸಿದ್ದಾರೆ ಎಂದು ಶಂಕಿಸಲಾಗಿದೆ. ಅಷ್ಟು ಹೊತ್ತಿಗಾಗಲೆ ಶಾರ್ಟ್ ಸರ್ಕಿಟ್ ಮತ್ತು ಉಪಕರಣ ಸುಟ್ಟಿದ್ದರಿಂದ ಕೊಠಡಿಯಲ್ಲಿ ವಿಷ ಅನಿಲ ಆವರಿಸಿಕೊಂಡಿತ್ತು. ಇದರ ಸೇವನೆಯಿಂದ ಶರತ್ ಅವರು ಪ್ರಜ್ಞೆ ಕಳೆದುಕೊಂಡಿದ್ದಾರೆ.

Kalleshwara-Enterprises.webp

sharat2

ಆಸ್ಪತ್ರೆಗೆ ದಖಲಿಸಿದರು ವಿಧಿ ಬಿಡಲಿಲ್ಲ

ಕೆಲವೇ ನಿಮಿಷದಲ್ಲಿ ಅಗ್ನಿಶಾಮಕ ಸಿಬ್ಬಂದಿ ಶರತ್ ಅವರನ್ನು ರಕ್ಷಣೆ ಮಾಡಿ, ಖಾಸಗಿ ಆಸ್ಪತ್ರೆಗೆ ದಾಖಲು ಮಾಡಿದ್ದರು. ಆದರೆ ಚಿಕಿತ್ಸೆ ಫಲಕಾರಿ ಆಗದೆ ಶರತ್ ಭೂಪಾಳಂ ಅವರು ಕೊನೆಯುಸಿರೆಳೆದಿದ್ದಾರೆ. ಅವರ ಮಗ ಸಂಚಿತ್ ಆರೋಗ್ಯದಲ್ಲಿ ಚೇತರಿಕೆ ಕಂಡು ಬಂದಿದೆ. (business man death)

sharat%20house3

ಕಂಬನಿ ಮಿಡಿದ ಜನ

ಶರತ್ ಭೂಪಾಳಂ ಅವರ ನಿಧನದ ವಿಚಾರ ತಿಳಿಯುತ್ತಿದ್ದಂತೆ ಅವರ ಸಂಬಂಧಿಗಳು, ಸ್ನೇಹಿತರು, ಅವರ ಕಂಪನಿಯಲ್ಲಿ ಕೆಲಸ ಮಾಡುವ ನೌಕರರು ಮನೆ ಬಳಿ ಧಾವಿಸಿ ಅಂತಿಮ ನಮನ ಸಲ್ಲಿಸಿದರು. ಸಂಸದ ಬಿ.ವೈ.ರಾಘವೇಂದ್ರ ಸೇರಿದಂತೆ ಹಲವು ಗಣ್ಯರು ಕುಟುಂಬದವರಿಗೆ ಸಾಂತ್ವನ ಹೇಳಿದರು.

sharat%20house2

ಇದನ್ನೂ ಓದಿ – ಶಿವಮೊಗ್ಗ ಜಿಲ್ಲಾ ಪಂಚಾಯಿತಿ ಎದುರಿನ ಭೂಪಾಳಂ ಮನೆಯಲ್ಲಿ ಅಗ್ನಿ ಅವಘಡ, ಖ್ಯಾತ ಉದ್ಯಮಿ ನಿಧನ

ಸ್ವಾತಂತ್ರ್ಯ ಹೋರಾಟಗಾರರ ಕುಟುಂಬ

ಶರತ್ ಭೂಪಾಳಂ ಅವರು ಸ್ವಾತಂತ್ರ್ಯ ಹೋರಾಟಗಾರ, ವೈಚಾರಿಕ ಸಾಹಿತಿ ಭೂಪಾಳಂ ಚಂದ್ರಶೇಖರಯ್ಯ ಅವರ ಕುಟುಂಬದವರು. ಮಾಚೇನಹಳ್ಳಿಯಲ್ಲಿ ಕೈಗಾರಿಕೆ  ನಡೆಸುತ್ತಿದ್ದರು. ಶಿವಮೊಗ್ಗದ ವಾಣಿಜ್ಯೋದ್ಯಮ ಕ್ಷೇತ್ರದಲ್ಲಿ ಉತ್ತಮ ಹೆಸರು ಹೊಂದಿದ್ದರು.

ಶಿವಮೊಗ್ಗ ಜಿಲ್ಲೆಯ ಯಾವುದೇ ಊರಿನ ಸುದ್ದಿಯನ್ನು ವಾಟ್ಸಪ್‌ ಮಾಡಬಹುದು. ಉಚಿತವಾಗಿ ಪ್ರಕಟಿಸುತ್ತೇವೆ. ವಾಟ್ಸಪ್‌ ನಂಬರ್: 7411700200
Kalleshwara-Enterprises.webp

Leave a Comment