ನಕಲಿ ಪಾಸ್ ಪೋರ್ಟ್ ಹೊಂದಿದ್ದ ಆರೋಪ ಸಾಬೀತು, ತೀರ್ಥಹಳ್ಳಿಯ ಮಹಿಳೆಗೆ ಜೈಲು

ಶಿವಮೊಗ್ಗLIVE

ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ

SHIVAMOGGA LIVE NEWS | 21 JANUARY 2023

THIRTHAHALLI | ನಕಲಿ ಪಾಸ್ ಪೋರ್ಟ್ (passport) ಹೊಂದಿದ್ದ ಆರೋಪ ಸಂಬಂಧ ಮಹಿಳೆಯೊಬ್ಬರಿಗೆ ನ್ಯಾಯಾಲಯ ಜೈಲು ಶಿಕ್ಷೆ ವಿಧಿಸಿದೆ.

Thirrthahalli Taluk Graphics

ಶಹನಾಜ್ ಭಾನು ಎಂಬುವವರು ನಕಲಿ ಪಾಸ್ ಪೋರ್ಟ್ (passport) ಹೊಂದಿದ್ದಾರೆ ಎಂದು ಆರೋಪಿಸಿ 2019ರ ನವೆಂಬರ್ 26ರಂದು ತೀರ್ಥಹಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ತನ್ನ ನೈಜ ತಂದೆ, ತಾಯಿಯ ಹೆಸರು ಮರೆ ಮಾಚಿರುವುದು ವಿಚಾರಣೆ ವೇಳೆ ಬೆಳಕಿಗೆ ಬಂದಿದೆ.

ಈ ಹಿನ್ನೆಲೆ ತೀರ್ಥಹಳ್ಳಿಯ ಪ್ರಧಾನ ಸಿವಿಲ್ ಮತ್ತು ಜೆ.ಎಂ.ಎಫ್.ಸಿ ನ್ಯಾಯಾಲಯ ಶಹನಾಜ್ ಭಾನುಗೆ 3 ವರ್ಷ ಸಾದಾ ಕಾರಾಗೃಹ ವಾಸ ಶಿಕ್ಷೆ ವಿಧಿಸಿದೆ. ತೀರ್ಥಹಳ್ಳಿಯ ಅಂದಿನ ಸಿಪಿಐ ಜಿ.ವಿ.ಗಣೇಶಪ್ಪ ಸಾಕ್ಷ್ಯಾಧಾರಗಳೊಂದಿಗೆ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದರು. ಸರ್ಕಾರದ ಪರವಾಗಿ ಅಭಿಯೋಜಕ ಡಿ.ಭಿನು ವಾದ ಮಂಡಿಸಿದ್ದರು.

ಇದನ್ನೂ ಓದಿ – ಶಿವಮೊಗ್ಗ ವಿಮಾನ ನಿಲ್ದಾಣದಲ್ಲಿ ಉದ್ಯೋಗದ ನಿರೀಕ್ಷೆಯಲ್ಲಿದ್ದವರಿಗೆ ನಿರಾಸೆ, ಅಧಿಕಾರಿಗಳು ಹೇಳೋದೇನು?

ನಿಮ್ಮ ಕನಸಿನ ಮನೆ ಈಗ ನನಸು! 🏠

ಅತಿ ಕಡಿಮೆ ಬಡ್ಡಿ ದರದಲ್ಲಿ ಸುಲಭ ಗೃಹ ಸಾಲ


ಈಗಲೇ ಕರೆ ಮಾಡಿ
9972194422


 

About The Editor

ನಿತಿನ್‌ ಆರ್‌.ಕೈದೊಟ್ಲು

Nitin Kaidotlu - Editor - Shivamogga Live

Leave a Comment