ಬೈಪಾಸ್ ರಸ್ತೆ ಮನೆಯಲ್ಲಿ ವ್ಯಕ್ತಿ ನೇಣಿಗೆ | ಮದುವೆ ವಿಚಾರಕ್ಕೆ ಯುವತಿ ಆತ್ಮಹತ್ಯೆ | ತುಂಗಾ ನದಿಯಲ್ಲಿ ಮುಳುಗಿದ ಬಾಲಕ

ಶಿವಮೊಗ್ಗ
LIVE

ಕಡಿಮೆ ಬಡ್ಡಿಯಲ್ಲಿ ಗೃಹ ಸಾಲ (HOME LOAN)

ನಿಮ್ಮ ಸ್ವಂತ ಮನೆಯ ಕನಸು ಈಗ ನನಸು!
ಮನೆ ಕಟ್ಟಲು ಅಥವಾ ಸೈಟ್ ಖರೀದಿಸಲು ಸಾಲ ಸೌಲಭ್ಯ.

✅ ಅತೀ ಕಡಿಮೆ ಬಡ್ಡಿ ದರ
✅ ತ್ವರಿತ ಸಾಲ ಮಂಜೂರಾತಿ
✅ ಸುಲಭ ಮರುಪಾವತಿ ಕಂತುಗಳು

ಹೆಚ್ಚಿನ ಮಾಹಿತಿಗಾಗಿ ಕರೆ ಮಾಡಿ ಅಥವಾ ವಾಟ್ಸಾಪ್ ಮಾಡಿ:

99721 94422
*ಷರತ್ತುಗಳು ಅನ್ವಯಿಸುತ್ತವೆ

SHIVAMOGGA LIVE NEWS | 14 FEBRURARY 2023 | Crime News

ಬೈಪಾಸ್ ರಸ್ತೆಯ ಮನೆಯಲ್ಲಿ ನೇಣು ಬಿಗಿದು ವ್ಯಕ್ತಿ ಆತ್ಮಹತ್ಯೆ

SHIMOGA : ವ್ಯಕ್ತಿಯೊಬ್ಬರು ಮನೆಯಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ (Crime News). ಕೌಟುಂಬಿಕ ಕಲಹವೆ ಘಟನೆಗೆ ಕಾರಣ ಎಂದು ಆರೋಪಿಸಲಾಗಿದೆ. ಬೈಪಾಸ್ ರಸ್ತೆಯ ಮನೆಯೊಂದರಲ್ಲಿ ಘಟನೆ ಸಂಭವಿಸಿದೆ. ಖಾಜಾ ಮೋಹಿನುದ್ದೀನ್ (35) ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿ. ಕುಟುಂಬದಲ್ಲಿ ಪದೇ ಪದೆ ಜಗಳದಿಂದ ಮನನೊಂದು ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ಇದೆ. ದೊಡ್ಡಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ.

ಶಿವಮೊಗ್ಗ ಲೈವ್‌ನ ಪ್ರತಿ ಅಪ್‌ಡೇಟ್‌ ನೀವೇ ಮೊದಲು ಪಡೆಯಲು ಕೆಳಗಿನ ಗ್ರೂಪ್‌ಗಳನ್ನು ಜಾಯಿನ್ ಆಗಿ:

Crime-News-General-Image

ಮದುವೆ ವಿಚಾರಕ್ಕೆ ಜಗಳ, ವಿಷ ಸೇವಿಸಿದ್ದ ಯುವತಿ ಸಾವು

SHIMOGA : ಮದುವೆ ವಿಚಾರಕ್ಕೆ ನಡೆದ ಜಗಳದಿಂದ ಮನನೊಂದು ವಿಷ ಸೇವಿಸಿದ್ದ ವಿದ್ಯಾರ್ಥಿನಿ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾಳೆ. ಬೊಮ್ಮನಕಟ್ಟೆ ನಿವಾಸಿ ಸುಮಾ (22) ಮೃತಳು. ಕುಟುಂಬದವರು ಸುಮಾಳಿಗೆ ಮದುವೆ ಮಾಡಲು ಹುಡುಗನನ್ನು ನಿಶ್ಚಿಯಿಸಿದ್ದರು. ಆದರೆ ಎಂಸಿಎ ವಿದ್ಯಾಭ್ಯಾಸದ ಬಳಿಕ ಮದುವೆ ಮಾಡಿಕೊಳ್ಳುವುದಾಗಿ ಸುಮಾ ತಿಳಿಸಿದ್ದಳು. ಮದುವೆ ನಿಶ್ಚಯವಾಗಿದ್ದ ಹುಡುಗ ಮತ್ತು ಆತನ ಕಡೆಯವರು ಸುಮಾಳಿಗೆ ಬೇಗ ಮದುವೆ ಆಗುವಂತೆ ಒತ್ತಡ ಹೇರಿದ್ದರು ಎಂದು ಆರೋಪಿಸಲಾಗಿದೆ. ಈಚೆಗೆ ಮನೆಗೆ ಬಂದಿದ ಹುಡುಗ ಮತ್ತು ಅವರ ಕುಟುಂಬದವರು ಜಗಳವಾಡಿದ್ದಾರೆ. ಇದರಿಂದ ಮನನೊಂದು ಸುಮಾ ವಿಷ ಸೇವಿಸಿದ್ದಳು ಎಂದು ದೂರಿನಲ್ಲಿ ತಿಳಿಸಲಾಗಿದೆ. ಆಕೆಯನ್ನು ಮ್ಯಾಕ್ಸ್ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಹೆಚ್ಚಿನ ಚಿಕಿತ್ಸೆಗೆ ಮಣಿಪಾಲದ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೆ ಸುಮಾ ಕೊನೆಯುಸಿರೆಳೆದಿದ್ದಾಳೆ. ವಿನೋಬನಗರ ಠಾಣೆಯಲ್ಲಿ ಐವರ ವಿರುದ್ಧ ಪ್ರಕರಣ ದಾಖಲಾಗಿದೆ.

ತುಂಗಾ ನದಿಯಲ್ಲಿ ಮುಳುಗಿ ಬಾಲಕ ಸಾವು

SHIMOGA : ನಗರದ ತುಂಗಾ ನದಿಯಲ್ಲಿ ಸ್ನೇಹಿತರೊಂದಿಗೆ ಈಜಲು ಹೋಗಿದ್ದ ಬಾಲಕ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾನೆ. ಭಾನುವಾರ ಶಾಲೆಗೆ ರಜೆ ಇದ್ದಿದ್ದರಿಂದ ಲಷ್ಕರ್ ಮೊಹಲ್ಲಾ ನಿವಾಸಿ ಯುಸೂಫ್ (14) ಸ್ನೇಹಿತರೊಂದಿಗೆ ನದಿಗೆ ತೆರಳಿದ್ದ. ನೀರಿಗೆ ಹಾರಿದ ಯುಸೂಫ್ ಬಹು ಹೊತ್ತು ಮೇಲೆ ಬರಲಿಲ್ಲ. ಆತನ ಸ್ನೇಹಿತರು ಪೋಷಕರಿಗೆ ಮಾಹಿತಿ ನೀಡಿದ್ದರು. ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ಸಿಬ್ಬಂದಿ ಕಾರ್ಯಾಚರಣೆ ನಡೆಸಿ ಮೃತದೇಹ ಮೇಲೆತ್ತಿದ್ದಾರೆ.

ಇದನ್ನೂ ಓದಿ – ಶಿವಮೊಗ್ಗ ಜಿಲ್ಲೆಯಿಂದ ಮಾಯವಾದ ಟಾಪ್ 5 ಕಾರ್ಖಾನೆಗಳಿವು, ಈಗ ಜಿಲ್ಲೆಗಿರುವುದು ಒಂದೆ ಆರ್ಥಿಕ ಮೂಲ, ಯಾವುದದು?

About The Editor

ನಿತಿನ್‌ ಆರ್‌.ಕೈದೊಟ್ಲು

Nitin Kaidotlu - Editor - Shivamogga Live

Leave a Comment