SHIVAMOGGA LIVE NEWS | 18 FEBRURARY 2023
SHIMOGA : ನಗರದಲ್ಲಿ ಎಟಿಎಂ ಮೆಷಿನ್ (ATM Theft) ಒಡೆದು ಹಣ ಕಳ್ಳತನಕ್ಕೆ ವಿಫಲ ಯತ್ನ ಮಾಡಲಾಗಿದೆ. ಇದರಿಂದ ಎಟಿಎಂ ಮೆಷಿನ್ ಗೆ ಹಾನಿಯಾಗಿದೆ.
ಮಾಚೇನಹಳ್ಳಿ (Machenahalli) ಇಂಡಸ್ಟ್ರಿಯಲ್ ಏರಿಯಾದ ಕೆನರಾ ಬ್ಯಾಂಕ್ ಎಟಿಎಂ ಮೆಷಿನ್ (ATM Theft) ಒಡೆದು ಕಳ್ಳತನಕ್ಕೆ ಪ್ರಯತ್ನಿಸಲಾಗಿದೆ. ಫೆ.15ರ ರಾತ್ರಿ 10 ಗಂಟೆಯಿಂದ ಫೆ.16ರ ಬೆಳಗಿನ ಜಾವ 6 ಗಂಟೆಯೊಳಗೆ ಈ ಕಳ್ಳತನ ಯತ್ನ ನೆಡಸಲಾಗಿದೆ.
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422
ಇದನ್ನೂ ಓದಿ – ಅಡಕೆ ವ್ಯಾಪಾರಿ ಮೇಲೆ ಅಟ್ಯಾಕ್, ಕಂತೆ ಕಂತೆ ದುಡ್ಡಿನ ಜೊತೆ ಸಿಕ್ಕಿಬಿತ್ತು ದರೋಡೆ ಗ್ಯಾಂಗ್
ಕಳ್ಳರು ಎಟಿಎಂ ಮೆಷಿನ್ ಫ್ರಂಟ್ ಡೋರ್ ಮತ್ತು ಹುಡ್ ಡೋರ್ ಬಿಚ್ಚಿದ್ದಾರೆ. ಒಳ ಭಾಗದಲ್ಲಿರುವ ಹಣ ಕಳ್ಳತನ ಮಾಡಲು ಪ್ರಯತ್ನಿಸಿದ್ದಾರೆ. ಎಟಿಎಂ ಭದ್ರತೆಗೆ ಸೆಕ್ಯೂರಿಟಿಯನ್ನು ನಿಯೋಜನೆ ಮಾಡಿರಲಿಲ್ಲ ಎಂದು ನಿರ್ವಹಣೆಗೆ ಗುತ್ತಿಗೆ ಪಡೆದಿರುವ ಸಂಸ್ಥೆ ದೂರಿನಲ್ಲಿ ತಿಳಿಸಿದೆ.
ತುಂಗಾ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ.