ಮಲವಗೊಪ್ಪದಲ್ಲಿ ಅದ್ಧೂರಿ ಬ್ರಹ್ಮ ರಥೋತ್ಸವ, ಹೇಗಿತ್ತು ಜಾತ್ರೆಯ ವೈಭವ?

SHIVAMOGGA LIVE NEWS | 16 MARCH 2023

SHIMOGA : ಮಲವಗೊಪ್ಪದ ಶ್ರೀ ಚನ್ನವಸವೇಶ್ವರ ಸ್ವಾಮಿ ಬ್ರಹ್ಮ ರಥೋತ್ಸವವು (Brahma Rathotsava) ವಿಜೃಂಭಣೆಯಿಂದ ನಡೆಯಿತು. ದೊಡ್ಡ ಸಂಖ್ಯೆಯಲ್ಲಿ ಸೇರಿದ್ದ ಭಕ್ತರು ರಥೋತ್ಸವವನ್ನು ಕಣ್ತುಂಬಿಕೊಂಡು ಪುನೀತರಾದರು. (ಈ ಸುದ್ದಿಯನ್ನು ಇನ್ನು 43 ಸೆಕೆಂಡ್‌ಗಳಲ್ಲಿ ಓದಿ ಮುಗಿಸಬಹುದು)

Malavagoppa-Brahma-Rathotsava

ಬುಧವಾರ ಮಲವಗೊಪ್ಪದಲ್ಲಿ ಬ್ರಹ್ಮ ರಥೋತ್ಸವ (Brahma Rathotsava) ನಡೆಯಿತು. ಮಲವಗೊಪ್ಪದ ಸುತ್ತಮುತ್ತಲ ಬಡಾವಣೆ ಮತ್ತು ಗ್ರಾಮಗಳಿಂದ ಜನರು ಆಗಮಿಸಿದ್ದರು. ರಥೋತ್ಸವದ ವೇಳೆ ವಿಶೇಷ ಪೂಜೆ ಸಲ್ಲಿಸಲಾಯಿತು. ಭಕ್ತರು ದೇವರ ಘೋಷಣೆಗಳನ್ನು ಕೂಗಿದರು.

ಇದನ್ನೂ ಓದಿ – ಶಿವಮೊಗ್ಗ ಜಿಲ್ಲಾಧಿಕಾರಿ ವಾಸ್ತವ್ಯಕ್ಕೆ ಗ್ರಾಮ ನಿಗದಿ, ಮಾ.18ರಂದು ಎಲ್ಲಿ ವಾಸ್ತವ್ಯ ಮಾಡಲಿದ್ದಾರೆ ಡಿಸಿ?

ನೀವು ಲೇಖನದ ಮಧ್ಯಭಾಗದಲ್ಲಿದ್ದೀರಿ. ಈ ಸುದ್ದಿಯ ಮುಂದಿನ 1 ಪ್ಯಾರಾಗಳು ಕೆಳಗಿವೆ

ಇದಕ್ಕೂ ಮೊದಲು ಅರ್ಚಕರ ಮನೆಯಲ್ಲಿ ಶ್ರೀ ಚನ್ನಬಸವೇಶ್ವರ ಸ್ವಾಮಿಗೆ ರುದ್ರಾಭಿಷೇಕ, ಪೂಜೆ, ಬಾಸಿಂಗ ಧಾರಣೆ, ಮಹಾ ಮಂಗಳಾರತಿ ನೆರವೇರಿಸಲಾಯಿತು. ಭಕ್ತರಿಗೆ ಪ್ರಸಾದ ವಿನಿಯೋಗದ ಬಳಿಕ ರಾಜಬೀದಿ ಉತ್ಸವ ನೆರವೇರಿಸಲಾಯಿತು.

Malavagoppa-Brahma-Rathotsava

ಗೂಗಲ್‌ನಲ್ಲಿ ಶಿವಮೊಗ್ಗ ಲೈವ್ ಸುದ್ದಿಗಳು ನಿಮಗೆ ಮೊದಲು ಸಿಗಬೇಕೆ? ಕೆಳಗಿನ ಬಟನ್ ಒತ್ತಿ:

Leave a Comment