ಅಧಿಕಾರಿಗಳಿಂದ ಬಹಿರಂಗವಾಗಿಯೇ ಲಂಚಕ್ಕೆ ಬೇಡಿಕೆ, ಶಿವಮೊಗ್ಗದಲ್ಲಿ ಕಚೇರಿ ಮುಂದೆ ಆಮ್ ಆದ್ಮಿ ಪ್ರತಿಭಟನೆ

SHIVAMOGGA LIVE NEWS | 18 MARCH 2023

SHIMOGA : ಸಾರ್ವಜನಿಕರಿಗೆ ಮುಕ್ತ ಸೇವೆ ನೀಡಬೇಕಾದ ಪ್ರಾದೇಶಿಕ ಸಾರಿಗೆ ಇಲಾಖೆ ಕಚೇರಿಯಲ್ಲಿ ಭ್ರಷ್ಟಾಚಾರ (Corruption) ನಡೆಯುತ್ತಿದೆ. ಅಧಿಕಾರಿಗಳು ಬಹಿರಂಗವಾಗಿಯೇ ಲಂಚದ ಹಣಕ್ಕೆ ಬೇಡಿಕೆ ಇಡುತ್ತಿದ್ದಾರೆ ಎಂದು ಆಪಾದಿಸಿ ಆಮ್ ಆದ್ಮಿ ಪಕ್ಷದ ಪ್ರತಿಭಟನೆ ನಡೆಸಿತು. (ಈ ಸುದ್ದಿಯನ್ನು ಇನ್ನು 60 ಸೆಕೆಂಡ್‌ಗಳಲ್ಲಿ ಓದಿ ಮುಗಿಸಬಹುದು)

AAP-protest-at-RTO-office-in-Shimoga

ಆರ್.ಟಿ.ಒ ಕಚೇರಿ ಮುಂದೆ ಪ್ರತಿಭಟನೆ ನಡೆಸಿದ ಆಮ್ ಆದ್ಮಿ ಪಕ್ಷದ ಮುಖಂಡರು, ಆರ್.ಟಿ.ಒ ಕಚೇರಿಗೆ ಬರುವ ಜನರಿಗೆ ಅಧಿಕಾರಿಗಳು ಬಹಿರಂಗವಾಗಿಯೇ ಲಂಚಕ್ಕೆ ಬೇಡಿಕೆ ಇಡುತ್ತಿದ್ದಾರೆ. ಈ ಹಿಂದೆ ಭ್ರಷ್ಟಾಚಾರ (Corruption) ಆರೋಪ ಸಂಬಂಧ ಅಮಾನತುಗೊಂಡು, ಬೇರೆಡೆಗೆ ವರ್ಗವಾಗಿದ್ದ ಅಧಿಕಾರಿಯನ್ನು ಪುನಃ ಇಲ್ಲಿಗೆ ಕರೆಯಿಸಿಕೊಳ್ಳಲಾಗಿದೆ ಎಂದು ಆರೋಪಿಸಿದರು.

ಆರ್.ಟಿ.ಒ ಕಚೇರಿಯಲ್ಲಿ ಭ್ರಷ್ಟಾಚಾರಕ್ಕೆ ಕಡಿವಾಣ ಹಾಕಬೇಕು. ಮಧ್ಯವರ್ತಿಗಳ ಹಾವಳಿ ತಡೆಗಟ್ಟಬೇಕು ಎಂದು ಆಗ್ರಹಿಸಿ ಮನವಿ ಸಲ್ಲಿಸಿದರು.

ನೀವು ಲೇಖನದ ಮಧ್ಯಭಾಗದಲ್ಲಿದ್ದೀರಿ. ಈ ಸುದ್ದಿಯ ಮುಂದಿನ 2 ಪ್ಯಾರಾಗಳು ಕೆಳಗಿವೆ

ಇದನ್ನೂ ಓದಿ – ಶಿವಮೊಗ್ಗದಲ್ಲಿ ಲೇಡಿಸ್ ನೈಟ್ ಪಾರ್ಟಿ, ಹೊಟೇಲ್ ಮೇಲೆ ಬಜರಂಗದಳ ಕಾರ್ಯಕರ್ತರ ದಾಳಿ

ಆಮ್ ಆದ್ಮಿ ಪಾರ್ಟಿ ಜಿಲ್ಲಾಧ್ಯಕ್ಷ ಕಿರಣ್, ನೇತ್ರಾವತಿ, ನಜೀರ್ ಅಹ್ಮದ್, ಸುರೇಶ್ ಕೋಟೆಕರ್, ಶ್ರೀನಿವಾಸ್, ಮನೋಹರ ಗವಡ, ಏಳುಮಲೈ, ಮಾಲತೇಶ್ ಸೇರಿದಂತೆ ಹಲವರು ಇದ್ದರು.

AAP-protest-at-RTO-office-in-Shimoga

ಗೂಗಲ್‌ನಲ್ಲಿ ಶಿವಮೊಗ್ಗ ಲೈವ್ ಸುದ್ದಿಗಳು ನಿಮಗೆ ಮೊದಲು ಸಿಗಬೇಕೆ? ಕೆಳಗಿನ ಬಟನ್ ಒತ್ತಿ:

Leave a Comment