ದೇವರ ಕಾರ್ಯಕ್ಕೆ ಊರಿಗೆ ಹೋದವರಿಗೆ ಎದುರು ಮನೆಯವರಿಂದ ಬಂತು ಆಘಾತಕಾರಿ ಫೋನ್ ಕರೆ

ಶಿವಮೊಗ್ಗLIVE

ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ

SHIVAMOGGA LIVE NEWS | 9 APRIL 2023

SHIMOGA : ದೇವರ ಕಾರ್ಯಕ್ಕೆಂದು ಊರಿಗೆ ಹೋಗಿದ್ದಾಗ ಶಿವಮೊಗ್ಗದಲ್ಲಿದ್ದ ಮನೆಯ ಹೆಂಚು ತೆಗೆದು ಕಳ್ಳತನ (theft) ಮಾಡಲಾಗಿದೆ. ಮನೆಯ ಬೀರುವಿನಲ್ಲಿದ್ದ 75 ಸಾವಿರ ರೂ. ನಗದು ಕಳ್ಳತನವಾಗಿದೆ.

theft case general image

ಮೇಲಿನ ತುಂಗಾನಗರದ ಚೆಲ್ಲಾದೊರೆ ಎಂಬುವವರ ಮನೆಯಲ್ಲಿ ಕಳ್ಳತನವಾಗಿದೆ (theft). ಚೆಲ್ಲಾದೊರೆಯವರು ದೇವರ ಪೂಜೆಗೆಂದು ತಮಿಳುನಾಡಿನ ಮಧುರೈಗೆ ತೆರಳಿದ್ದರು. ಮನೆಯಲ್ಲಿ ಸಾಕಿದ್ದ ಬೆಕ್ಕಿಗೆ ನಿತ್ಯ ಹಾಲು ಹಾಕುವಂತೆ ಎದುರು ಮನೆಯವರಿಗೆ ಬೀಗ ಕೊಟ್ಟಿದ್ದರು.

ಇದನ್ನೂ ಓದಿ – ಶಿವಮೊಗ್ಗದಲ್ಲಿ KSRTC ಬಸ್ಸಿನಲ್ಲಿ ಟಿಕೆಟ್ ಮಾಡಿಸಲು ವ್ಯಾನಿಟಿ ಬ್ಯಾಗ್ ತೆಗೆದ ಮಹಿಳೆಗೆ ಆಘಾತ

ಏ.3ರಂದು ಎದುರು ಮನೆಯವರು ಫೋನ್ ಮಾಡಿ ಕಳ್ಳತನವಾಗಿರುವ ವಿಚಾರ ತಿಳಿಸಿದ್ದಾರೆ. ಮನೆಯ ಹೆಂಚು ತೆಗೆಯಲಾಗಿತ್ತು. ಮನೆಯ ಹಿಂಬಾಗಿಲು ತೆರೆದಿತ್ತು. ಬೀರುವಿನಲ್ಲಿದ್ದ 75 ಸಾವಿರ ರೂ. ನಗರದ ಕಳ್ಳನತವಾಗಿತ್ತು. ಘಟನೆ ಸಂಬಂಧ ತುಂಗಾ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ.

ನಿಮ್ಮ ಕನಸಿನ ಮನೆ ಈಗ ನನಸು! 🏠

ಅತಿ ಕಡಿಮೆ ಬಡ್ಡಿ ದರದಲ್ಲಿ ಸುಲಭ ಗೃಹ ಸಾಲ


ಈಗಲೇ ಕರೆ ಮಾಡಿ
9972194422


 

About The Editor

ನಿತಿನ್‌ ಆರ್‌.ಕೈದೊಟ್ಲು

Nitin Kaidotlu - Editor - Shivamogga Live

© ಶಿವಮೊಗ್ಗ ಲೈವ್‌ : April 9, 2023

Leave a Comment