ಮಧ್ಯರಾತ್ರಿ 12.30ಕ್ಕೆ ಮಾಜಿ ಸಚಿವ ಈಶ್ವರಪ್ಪಗೆ ಮಿಸ್ಡ್‌ ಕಾಲ್‌, ಎಸ್ಪಿಗೆ ದೂರು, ಎಲ್ಲಿಂದ ಬಂದಿತ್ತು ಫೋನ್‌?

ಶಿವಮೊಗ್ಗLIVE

ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ

SHIVAMOGGA LIVE NEWS | 15 MAY 2023

SHIMOGA : ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ಅವರಿಗೆ ವಿದೇಶದಿಂದ (Abroad) ಪುನಃ ಕರೆ ಬಂದಿದೆ. ಭಾನುವಾರ ತಡರಾತ್ರಿ ಖಝಕಿಸ್ಥಾನ ದೇಶದಿಂದ ಮಿಸ್ಡ್‌ ಕಾಲ್‌ ಬಂದಿದೆ. ಇದು ಬಹುಶಃ ಕೊಲೆ ಬೆದರಿಕೆ ಕರೆಯಾಗಿರಬಹುದು ಎಂಬ ಅನುಮಾನದಲ್ಲಿ ಈಶ್ವರಪ್ಪ ಅವರು ಜಿಲ್ಲಾ ರಕ್ಷಣಾಧಿಕಾರಿಗೆ ದೂರು ನೀಡಿದರು.

Eshwarappa-files-complaint-against-a-missed-call

ಇದಕ್ಕು ಮುನ್ನ ಬಿಜೆಪಿ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕೆ.ಎಸ್.ಈಶ್ವರಪ್ಪ ಅವರು, ತಡರಾತ್ರಿ 12.30ರ ಹೊತ್ತಿಗೆ +7(678)815-46-5(5) ನಂಬರ್‌ನಿಂದ ಅನಾಮಧೇಯ ಅಂತರಾಷ್ಟ್ರೀಯ ಕರೆ ಬಂದಿದೆ. ಇದು ಮಿಸ್ಡ್ ಕಾಲ್ ಆಗಿದೆ ಎಂದರು.

WATCH VIDEO

ಹೆಚ್ಚಿನ ಮಾಹಿತಿಗೆ ಇಲ್ಲಿ CLICK ಮಾಡಿ

ಈ ಹಿಂದೆ ಪಿಎಫ್‌ಐ ಸಂಘಟನೆಗೆ ಸೇರಿದ ಜಯೇಶ್ ಪೂಜಾರಿ ಅಲಿಯಾಸ್ ಶಾಹಿರಿ ಶೇಖ್ ಎಂಬಾತನನ್ನು ಮಹಾರಾಷ್ಟ್ರ ಪೊಲೀಸ್ ಇಲಾಖೆ ಬಂಧಿಸಿ ವಿಚಾರಣೆ ಮಾಡಿದಾಗ, ಆ ವ್ಯಕ್ತಿ ನನ್ನನ್ನು ಹತ್ಯೆ ಮಾಡಲು ಸಂಚು ರೂಪಿಸದ್ದ ಎಂದು ಗೊತ್ತಾಗಿದೆ. ಈ ಕರೆಯೂ (Abroad) ಇಂತಹುದೇ ಇರಬಹುದು ಎಂಬ ಸಂಶಯದಿಂದ ಪೊಲೀಸರಿಗೆ ದೂರು ನೀಡುತ್ತಿದ್ದೇನೆ. ಈ ಬಗ್ಗೆ ಸೂಕ್ತ ತನಿಖೆ ನಡೆಸಲು ಆಗ್ರಹಿಸುತ್ತೇನೆ ಎಂದರು.

ಇದನ್ನೂ ಓದಿ – ಶಿವಮೊಗ್ಗದಲ್ಲಿ ಆಟೋ ಮೇಲೆ ದಾಳಿ, ಚಾಲಕನಿಗೆ ಹಲ್ಲೆ, ಈಶ್ವರಪ್ಪ ಕಾಲಿಗೆ ಬಿದ್ದು ರಕ್ಷಣೆ ಬೇಡಿದ ಡ್ರೈವರ್

ನಿಮ್ಮ ಕನಸಿನ ಮನೆ ಈಗ ನನಸು! 🏠

ಅತಿ ಕಡಿಮೆ ಬಡ್ಡಿ ದರದಲ್ಲಿ ಸುಲಭ ಗೃಹ ಸಾಲ


ಈಗಲೇ ಕರೆ ಮಾಡಿ
9972194422


 

About The Editor

ನಿತಿನ್‌ ಆರ್‌.ಕೈದೊಟ್ಲು

Nitin Kaidotlu - Editor - Shivamogga Live

© ಶಿವಮೊಗ್ಗ ಲೈವ್‌ : May 15, 2023

Leave a Comment