ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ
SHIVAMOGGA LIVE NEWS | 19 MAY 2023
BHADRAVATHI : ಭಾವಸಾರ ಕ್ಷತ್ರಿಯ ಸಮಾಜದ ವತಿಯಿಂದ ದಿಂಡಿ ಉತ್ಸವ ಅಂಗವಾಗಿ ಭದ್ರಾವತಿ ಪಟ್ಟಣದಲ್ಲಿ ರಾಜಬೀದಿ ಮೆರವಣಿಗೆ (Procession) ನಡೆಯಿತು. ಸಮಾಜದವರು ದೊಡ್ಡ ಸಂಖ್ಯೆಯಲ್ಲಿ ಭಾಗವಹಿಸಿದ್ದರು.

ಶ್ರೀ ಕೃಷ್ಣ ರುಕ್ಮಿಣಿಯರ ಉತ್ಸವ ಮೂರ್ತಿಯನ್ನು ಪುಷ್ಪಾಲಂಕಾರದ ವಾಹನದಲ್ಲಿ ಇರಿಸಿ ನಗರದ ಪ್ರಮುಖ ಬೀದಿಗಳಲ್ಲಿ ಮೆರಣಿಗೆ ನಡೆಸಲಾಯಿತು. ವಾದ್ಯ ತಂಡಗಳೊಂದಿಗೆ ದೇವರ ನಾಮ ಜಪಿಸುತ್ತ ಭಕ್ತರು ಹೆಜ್ಜೆ ಹಾಕಿದರು. ನಂತರ ದೇವಸ್ಥಾನದ ಆವರಣದಲ್ಲಿ ಅನ್ನ ಸಂತರ್ಪಣೆ ನಡೆಸಲಾಯಿತು.
WATCH VIDEO
ಹೆಚ್ಚಿನ ಮಾಹಿತಿಗೆ ಇಲ್ಲಿ CLICK ಮಾಡಿ
ಇದನ್ನೂ ಓದಿ – ಶಿವಮೊಗ್ಗ ಜಿಲ್ಲೆಯ ಮೂವರು ಶಾಸಕರ ಪೈಕಿ ಯಾರಾಗ್ತಾರೆ ಮಿನಿಸ್ಟರ್?
ಮೂರು ದಿನ ದಿಂಡಿ ಉತ್ಸವ ಆಯೋಜಿಸಲಾಗಿತ್ತು. ಮೇ 16ರಂದು ಭೂತನಗುಡಿಯ ಕೃಷ್ಣ ರುಕ್ಮಿಣಿ ದೇವಸ್ಥಾನದಲ್ಲಿ ವಿಶೇಷ ಪೂಜೆ, ಪೋತಿ ಸ್ಥಾಪನೆ. ಮೇ 17ರಂದು ಅಖಂಡ ಜಾಗರಣೆ, ಪ್ರವಚನ ಕಾರ್ಯಕ್ರಮ ಜರುಗಿತು. ಮೂರನೆ ದಿನ ವೈಭವದ ರಾಜಬೀದಿ ಮೆರವಣಿಗೆ (Procession) ನಡೆಯಿತು. ಪಟ್ಟಣದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಸಾಗಿತು.
ಇದನ್ನೂ ಓದಿ – ಪ್ರಥಮ ಪಿಯುಸಿಗೆ ಉಚಿತ ಪ್ರವೇಶಾತಿ, ಯಾರೆಲ್ಲ ಅರ್ಜಿ ಸಲ್ಲಿಸಬಹುದು? ಮಾನದಂಡವೇನು?
ಪ್ರಮುಖರಾದ ಡಿ.ಕೆ.ರಾಘವೇಂದ್ರ ರಾವ್ ಡೋಯಿಜೋಡೆ, ಟಿ.ಎಸ್.ಭವಾನಿ ಕುಮಾರ್ ತೇಲ್ಕರ್, ಟಿ.ಎಂ.ವಿಠಲನಾಥ ತೇಲ್ಕರ್, ರಾಘವೇಂದ್ರ, ಶ್ರೀದರ್ ರಾವ್, ನಾರಾಯಣ ರಾವ್, ಮಂಜುಳಾ, ಪ್ರತಿಮಾ, ಮೈಲಾರಿ ರಾವ್, ಸ್ವಪ್ನಾ ಕುಮಾರ್, ಜಗನ್ನಾಥ ಸೇರಿದಂತೆ ಹಲವರು ಇದ್ದರು.
LATEST NEWS
- ಶಿವಮೊಗ್ಗದಲ್ಲಿ ರಾಷ್ಟ್ರಮಟ್ಟದ ಬಯಲು ಕುಸ್ತಿ, ಹೇಗಿತ್ತು ಎರಡನೇ ದಿನದ ಕಾದಾಟ? ಯಾರೆಲ್ಲ ಗೆದ್ದರು?

- ತೀರ್ಥಹಳ್ಳಿಯಲ್ಲಿ ಫಾರ್ಚುನರ್ ಕಾರಿನಲ್ಲಿ ಬಂದು ಇಂಜಿನಿಯರ್ಗೆ ಬೆದರಿಸಿ ಹಣ ವಸೂಲಿ, ಏನಿದು ಕೇಸ್?

- ಶಿವಮೊಗ್ಗ ಜಿಲ್ಲೆಯಲ್ಲಿ ಮುಂದುವರೆದ ರಣ ಬಿಸಿಲು, ಇವತ್ತು ಎಷ್ಟಿರುತ್ತೆ ತಾಪಮಾನ?

- ಫೇಸ್ಬುಕ್ನಲ್ಲಿ ಮಹಿಳೆಯ ಖಾಸಗಿ ವಿಡಿಯೋ, ಹೊಸನಗರದ ಮಹಿಳೆ, ಬೆಂಗಳೂರಿನ ವ್ಯಕ್ತಿ ಅರೆಸ್ಟ್, ಯಾರಿವರು?

- ಇಂದಿನ ಪಂಚಾಂಗ, ಇವತ್ತು ಶುಭ ಸಮಯ ಎಷ್ಟೊತ್ತಿಗಿದೆ? ದಿನ ನಕ್ಷತ್ರ ಯಾವುದು?

About The Editor
ನಿತಿನ್ ಆರ್.ಕೈದೊಟ್ಲು





