ಜನ ಶತಾಬ್ದಿ ರೈಲು 3 ಗಂಟೆ ಲೇಟ್‌, ರಾತ್ರಿ ಬದಲು ಮಧ್ಯರಾತ್ರಿ ಶಿವಮೊಗ್ಗ ತಲುಪಿದ ಟ್ರೈನ್‌, ಪ್ರಯಾಣಿಕರು ಹೈರಾಣು

ಶಿವಮೊಗ್ಗLIVE

ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ

SHIVAMOGGA LIVE | 31 MAY 2023

SHIMOGA : ಬೆಂಗಳೂರು – ಶಿವಮೊಗ್ಗ ಜನ ಶತಾಬ್ದಿ ರೈಲು ಕಳೆದ ರಾತ್ರಿ ಮೂರುವರೆ ಗಂಟೆ ತಡವಾಗಿ (Delay) ನಿಲ್ದಾಣ ತಲುಪಿದೆ. ಅರಸೀಕೆರೆ, ಕಡೂರು, ಬೀರೂರು ನಿಲ್ದಾಣಗಳಲ್ಲಿ ಗಂಟೆಗಟ್ಟಲೆ ರೈಲು ನಿಲಿಸಿದ್ದರಿಂದ ಪ್ರಯಾಣಿಕರು ಪರದಾಡುವಂತಾಗಿತ್ತು.

Jan-Shatabdi-Train-inside

ಸಾಮಾನ್ಯವಾಗಿ ಬೆಂಗಳೂರಿನಿಂದ ಸಂಜೆ 5.15ಕ್ಕೆ ಹೊರಡುವ ರೈಲು ರಾತ್ರಿ 9.40ಕ್ಕೆ ಶಿವಮೊಗ್ಗ ನಿಲ್ದಾಣ ತಲುಪಲಿದೆ. ಆದರೆ ಮಂಗಳವಾರ ರಾತ್ರಿ ಮೂರೂವರೆ ಗಂಟೆ ತಡವಾಗಿ ಶಿವಮೊಗ್ಗ ನಿಲ್ದಾಣಕ್ಕೆ ಬಂದಿದೆ.

ಗಂಟೆಗಟ್ಟಲೆ ರೈಲು ನಿಲುಗಡೆ

ಜನ ಶತಾಬ್ದಿ ರೈಲು ನಿಗದಿಯಂತೆ 5.15ಕ್ಕೆ ಬೆಂಗಳೂರಿನಿಂದ ಹೊರಟಿದೆ. ಆದರೆ ಅರಸೀಕೆರೆ ರೈಲ್ವೆ ನಿಲ್ದಾಣದಲ್ಲಿ ಸುಮಾರು 37 ನಿಮಿಷ ರೈಲು ನಿಲ್ಲಿಸಲಾಗಿತ್ತು. ಕಡೂರು ನಿಲ್ದಾಣದಲ್ಲಿ 52 ನಿಮಿಷ, ಬೀರೂರಿನಲ್ಲಿ ಸುಮಾರು ಗಂಟೆಗಟ್ಟಲೆ ನಿಲುಗಡೆ ನೀಡಲಾಗಿತ್ತು. ರಾತ್ರಿ 11.56ಕ್ಕೆ ರೈಲು ತರೀಕೆರೆ ತಲುಪಿದೆ. ಮಧ್ಯರಾತ್ರಿ 12.41ಕ್ಕೆ ಭದ್ರಾವತಿ, ರಾತ್ರಿ 1.04ಕ್ಕೆ ಶಿವಮೊಗ್ಗ ನಿಲ್ದಾಣಕ್ಕೆ ತಲುಪಿದೆ.

ಕಾರಣ ಗೊತ್ತಾಗದೆ ಪ್ರಯಾಣಿಕರು ಹೈರಾಣು

ಜನ ಶತಾಬ್ದಿ ರೈಲು ಗಂಟೆಗಟ್ಟಲೆ ವಿಳಂಬವಾಗಲು ಕಾರಣ ಸ್ಪಷ್ಟವಾಗಿಲ್ಲ. ನಿಲ್ದಾಣಗಳಲ್ಲಿ ರೈಲು ಬಹು ಹೊತ್ತು ನಿಂತಿದ್ದರಿಂದ ಪ್ರಯಾಣಿಕರು ಅಲ್ಲಿಯ ರೈಲ್ವೆ ಅಧಿಕಾರಿಗಳನ್ನು ವಿಚಾರಿಸಿದಾಗ ʼತಾಂತ್ರಿಕ ಕಾರಣʼ ಎಂದು ತಿಳಿಸಿದ್ದಾರೆ. ಹಾಗಾಗಿ ಪ್ರಯಾಣಿಕರು ಗಂಟೆಗಟ್ಟಲೆ ಕಾದು ಹೈರಾಣಾಗಿದ್ದರು. ಊಟವಿಲ್ಲದೆ, ಮನೆ ಸೇರಲಾಗದೆ ಪರದಾಡಿದರು.

ಉಳಿದ ರೈಲುಗಳು ವಿಳಂಬ

ಕಳೆದ ರಾತ್ರಿ ಶಿವಮೊಗ್ಗದಿಂದ ತೆರಳುವ ಮತ್ತು ಶಿವಮೊಗ್ಗ ಕಡೆಗೆ ಆಗಮಿಸಬೇಕಿದ್ದ ಉಳಿದ ರೈಲುಗಳು ಕೂಡ ವಿಳಂಬವಾಗಿ ಸಂಚರಿಸಿವೆ. ಮಧ್ಯಾಹ್ನ 3 ಗಂಟೆಗೆ ಹೊರಡುವ ಬೆಂಗಳೂರು ತಾಳಗುಪ್ಪ ಎಕ್ಸ್‌ಪ್ರೆಸ್‌ ರೈಲು 25 ನಿಮಿಷ ತಡವಾಗಿ (Delay) ಶಿವಮೊಗ್ಗ ನಿಲ್ದಾಣ ತಲುಪಿದೆ.

ಇದನ್ನೂ ಓದಿ – ಶಿವಮೊಗ್ಗ – ಬೆಂಗಳೂರು ಮಧ್ಯೆ ಸಂಚರಿಸುತ್ತಾ ವಂದೇ ಭಾರತ್‌ ರೈಲು? ಸಂಸದ ರಾಘವೇಂದ್ರ ಮೀಟಿಂಗ್‌, ಏನೇನು ಚರ್ಚೆಯಾಯ್ತು?

ಇನ್ನು, ರಾತ್ರಿಯ ತಾಳಗುಪ್ಪ – ಶಿವಮೊಗ್ಗ – ಬೆಂಗಳೂರು – ಮೈಸೂರು ಎಕ್ಸ್‌ಪ್ರೆಸ್‌ ರೈಲು ಕೂಡ ವಿಳಂಬವಾಗಿ ಸಂಚರಿಸಿದೆ. ಮಧ್ಯರಾತ್ರಿ 1.20ಕ್ಕೆ ತಿಪಟೂರು ನಿಲ್ದಾಣಕ್ಕೆ ತಲುಪಬೇಕಿದ್ದ ರೈಲು ರಾತ್ರಿ 2 ಗಂಟೆಗೆ ನಿಲ್ದಾಣಕ್ಕೆ ತೆರಳಿದೆ.

WATCH VIDEO

ಹೆಚ್ಚಿನ ಮಾಹಿತಿಗೆ ಇಲ್ಲಿ CLICK ಮಾಡಿ

ನಿಮ್ಮ ಕನಸಿನ ಮನೆ ಈಗ ನನಸು! 🏠

ಅತಿ ಕಡಿಮೆ ಬಡ್ಡಿ ದರದಲ್ಲಿ ಸುಲಭ ಗೃಹ ಸಾಲ


ಈಗಲೇ ಕರೆ ಮಾಡಿ
9972194422


 

About The Editor

ನಿತಿನ್‌ ಆರ್‌.ಕೈದೊಟ್ಲು

Nitin Kaidotlu - Editor - Shivamogga Live

© ಶಿವಮೊಗ್ಗ ಲೈವ್‌ : May 31, 2023

Leave a Comment