ಶಿವಮೊಗ್ಗದಲ್ಲಿ ಮಲೆನಾಡ ವೈಭವ, ಬಗೆ ಬಗೆ ವಸ್ತು, ಆಭರಣ ಪ್ರದರ್ಶನ, ವಿವಿಧ ಖಾದ್ಯ ಸವಿದು ಬಾಯಿ ಚಪ್ಪರಿಸಿದ ವಿದ್ಯಾರ್ಥಿಗಳು

ಶಿವಮೊಗ್ಗLIVE

ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ

SHIVAMOGGA LIVE | 21 JUNE 2023

SHIMOGA : ರಾಷ್ಟ್ರೀಯ ಶಿಕ್ಷಣ ಅಮೃತ ಮಹೋತ್ಸವದ ಅಂಗವಾಗಿ ಆಯೋಜಿಸಿದ್ದ ಮಲೆನಾಡ ವೈಭವ (Malenadu) ವಸ್ತು ಪ್ರದರ್ಶನ ಶಿಕ್ಷಕರು, ಉಪನ್ಯಾಸಕರು, ವಿದ್ಯಾರ್ಥಿಗಳ ಗಮನ ಸೆಳೆಯಿತು. ಮಲೆನಾಡಿನ ವೈಭವ ಕಂಡು, ವಿವಿಧ ಖಾದ್ಯಗಳನ್ನು ಸವಿದು ಖುಷಿಪಟ್ಟರು.

1

ನಗರದ ಎನ್‌ಇಎಸ್‌ ಮೈದಾನದಲ್ಲಿ ಅಮೃತ ಮಹೋತ್ಸವ ಕಾರ್ಯಕ್ರಮ ನಡೆಯುತ್ತಿದೆ. ಇಲ್ಲಿ ಮಲೆನಾಡ ವೈಭವ ಪ್ರದರ್ಶಿನಿ ಆಯೋಜಿಸಲಾಗಿದೆ.

17

ಪ್ರದರ್ಶಿನಿಯಲ್ಲಿ ಏನೇನೆಲ್ಲ ಇದೆ?

ಶಿಕ್ಷಕರು, ಉಪನ್ಯಾಸಕರು, ವಿದ್ಯಾರ್ಥಿಗಳಿಗೆ ಮಲೆನಾಡಿನ ಸಂಸ್ಕೃತಿಯನ್ನು ಪರಿಚಯಿಸುವ ಉದ್ದೇಶದಿಂದ ಮಲೆನಾಡ (Malenadu) ವೈಭವ ಪ್ರದರ್ಶಿನಿ ಆಯೋಜಿಸಲಾಗಿದೆ. ಇದರೊಳಗೆ ಮಲೆನಾಡಿನ ಕಿರುಪರಿಚಯ ಸಿಗಲಿದೆ.

16

ಶಾರಾವತಿ ಪ್ರಥಮ ದರ್ಜೆ ಕಾಲೇಜಿನ ವತಿಯಿಂದ ಮಲೆನಾಡು ವಸ್ತುಗಳ ಪ್ರದರ್ಶಿನಿ ಆಯೋಜಿಸಲಾಗಿದೆ. ಮಲೆನಾಡಿನಲ್ಲಿ ನಿತ್ಯ ಬಳಕೆ ವಸ್ತುಗಳನ್ನು ಸಂಗ್ರಹಿಸಿ ಇಲ್ಲಿಡಲಾಗಿದೆ. ಪ್ರತಿ ವಸ್ತುವಿನ ಹೆಸರು ಮತ್ತು ಅದರ ಬಳಕೆ ಕುರಿತು ವಿದ್ಯಾರ್ಥಿಗಳಿಗೆ ವಿವರಣೆ ನೀಡಲಾಯಿತು.

18

19

ಹಣ್ಣಿನಲ್ಲಿ ಕಲಾಕೃತಿಗಳ ಸೃಷ್ಟಿಯ ಹಣ್ಣಿನ ಮನೆ ಮಕ್ಕಳಲ್ಲಿ ಆಸಕ್ತಿ ಮೂಡಿಸಿತು. ಮಲೆನಾಡಿನ ಅಭರಣ ಮನೆ ವಿದ್ಯಾರ್ಥಿನಿಯರು, ಶಿಕ್ಷಕಿಯರು, ಉಪನ್ಯಾಸಕಿಯರ ಮನ ಸೆಳೆಯಿತು. ವಿವಿಧ ಬಗೆಯ ಮಲೆನಾಡಿನ ಆಭರಣಗಳ ಮಾದರಿಯನ್ನು ಪ್ರದರ್ಶನಕ್ಕೆ ಇಡಲಾಗಿತ್ತು.

15

13

PARISHRAMA NEET ACADEMY SHIVAMOGGA LIVE

14

12

ಶಿವಮೊಗ್ಗದ ಲಕ್ಕಿನಕೊಪ್ಪದಲ್ಲಿರುವ ಅಮೂಲ್ಯ ಶೋಧ ವಸ್ತು ಸಂಗ್ರಹಾಲಯವು ಮಕ್ಕಳಲ್ಲಿ ಆಸಕ್ತಿ ಮೂಡಿಸುವ ಕೆಲವು ವಸ್ತುಗಳನ್ನು ಪ್ರದರ್ಶನಕ್ಕೆ ಇರಿಸಿದೆ. ಹೆಚ್‌.ಖಂಡೋಬರಾವ್‌ ಮತ್ತು ಅವರ ಸಹವರ್ತಿಗಳು ಮಕ್ಕಳಿಗೆ ವಿವಿಧ ವಸ್ತುಗಳ ಕುರಿತು ವಿವರಿಸಿ ಕುತೂಹಲ ತಣಿಸಿದರು.

8

3

2

ಮಲೆನಾಡು ವೈಭವದಲ್ಲಿ ಮಲೆನಾಡಿನ ಖಾದ್ಯಗಳು ಪ್ರಮುಖ ಆಕರ್ಷಣೆಯಾಗಿದ್ದವು. ಗ್ರಾಮ ರಾಜ್ಯ, ಸ್ತ್ರೀ ಶಕ್ತಿ ಮನೆಯಲ್ಲಿ ಮಹಿಳೆಯರು ತಯಾರಿಸಿದ ವಿವಿಧ ಅಡುಗೆ ಸಾಮಗ್ರಿಗಳನ್ನು ಪ್ರದರ್ಶಿಸಿ ರುಚಿ ಸವಿಯಲು ಅವಕಾಶ ಕಲ್ಪಿಸಿದ್ದರು.

4

Shivamogga Live Editor Nitin Kaidotlu

5

6

ಸಾಂಬಾರು ಪುಡಿಗಳು, ನೆಲ್ಲಿಕಾಯಿ ತೊಕ್ಕು, ಅಗಸೆ ಚಟ್ನಿ, ರವೆ ಉಂಡೆ, ಹಲಸು, ಕುಂಬಳ ಕಾಯಿ ಸಂಡಿಗೆ, ಸೌತೆಕಾಯಿ ಮತ್ತು ಹಲಸಿನ ಕಾಯಿ ಉಪ್ಪಿನ ಕಾಯಿ ರುಚಿ ನೋಡಲು ಮತ್ತು ಮಾರಾಟಕ್ಕೆ ವ್ಯವಸ್ಥೆ ಮಾಡಲಾಗಿತ್ತು.

ಇದನ್ನೂ ಓದಿ – ಶಿವಮೊಗ್ಗದಲ್ಲಿ ಸಾವಿರ ಸಾವಿರ ವಿದ್ಯಾರ್ಥಿಗಳಿಂದ ಅಮೃತ ನಡಿಗೆ, ಹೇಗಿತ್ತು? ನಡಿಗೆಗೆ ಕಾರಣವೇನು?

9

ಸಿರಿಮನೆಯಲ್ಲಿ ಸಿರಿ ಧಾನ್ಯಗಳ ಉತ್ಪನ್ನಗಳು, ಮಲ್ನಾಡ್ ಕಿಚನ್‌ನಲ್ಲಿ ಹಾಲುಬಾಯಿ ಅಕ್ಕಿಯ ಸಿಹಿ ಪದಾರ್ಥ, ಒತ್ತು ಶಾವಿಗೆಯ ಖಾರ ಮತ್ತು ಸಿಹಿ ತಿಂಡಿ, ಸಿಹಿ ಕಡಬು ಸೇರಿದಂತೆ ವಿವಿಧ ಖಾದ್ಯಗಳು ಟೇಸ್ಟ್‌ ಮಾಡಿ ವಿದ್ಯಾರ್ಥಿಗಳು ಖುಷಿಪಟ್ಟರು.

11

10

20

ನಿಮ್ಮ ಕನಸಿನ ಮನೆ ಈಗ ನನಸು! 🏠

ಅತಿ ಕಡಿಮೆ ಬಡ್ಡಿ ದರದಲ್ಲಿ ಸುಲಭ ಗೃಹ ಸಾಲ

ಈಗಲೇ ಕರೆ ಮಾಡಿ
9972194422

About The Editor

ನಿತಿನ್‌ ಆರ್‌.ಕೈದೊಟ್ಲು

Nitin Kaidotlu - Editor - Shivamogga Live

© ಶಿವಮೊಗ್ಗ ಲೈವ್‌ : June 21, 2023

ಕೂಡ್ಲಿಯಲ್ಲಿ ಸಾವಿರ ಸಾವಿರ ಜನರಿಂದ ಪುಣ್ಯ ಸ್ನಾನ, ಹೇಗಿದೆ ಈ ಬಾರಿ ಜಾತ್ರೆ?

ಕೂಡ್ಲಿಯಲ್ಲಿ ಸಾವಿರ ಸಾವಿರ ಜನರಿಂದ ಪುಣ್ಯ ಸ್ನಾನ, ಹೇಗಿದೆ ಈ ಬಾರಿ ಜಾತ್ರೆ?

ಶಿವಮೊಗ್ಗದಲ್ಲಿ ಯುಗಾದಿ ಚಂದ್ರ ದರ್ಶನ, ಜನರಿಂದ ಪೂಜೆ, ಶುಭಾಶಯ ವಿನಿಮಯ

ಶಿವಮೊಗ್ಗದಲ್ಲಿ ಯುಗಾದಿ ಚಂದ್ರ ದರ್ಶನ, ಜನರಿಂದ ಪೂಜೆ, ಶುಭಾಶಯ ವಿನಿಮಯ

ಇವತ್ತು ಎಲ್ಲೆಲ್ಲಿ ಎಷ್ಟಿದೆ ಅಡಿಕೆ ರೇಟ್‌ | 20 ಮಾರ್ಚ್‌ 2026 | ಅಡಿಕೆ ಧಾರಣೆ

ಇವತ್ತು ಎಲ್ಲೆಲ್ಲಿ ಎಷ್ಟಿದೆ ಅಡಿಕೆ ರೇಟ್‌ | 20 ಮಾರ್ಚ್‌ 2026 | ಅಡಿಕೆ ಧಾರಣೆ

ಕಾರು, ಬೈಕ್‌ ಡಿಕ್ಕಿ, ಯುವಕ ದಾರುಣ ಸಾವು, ಹೇಗಾಯ್ತು ಘಟನೆ?

ಕಾರು, ಬೈಕ್‌ ಡಿಕ್ಕಿ, ಯುವಕ ದಾರುಣ ಸಾವು, ಹೇಗಾಯ್ತು ಘಟನೆ?

ಉಷಾ ನರ್ಸಿಂಗ್‌ ಹೋಂ ಸಿಗ್ನಲ್‌ನಲ್ಲಿನ ಅಪಘಾತ, ಸಿಸಿಟಿವಿ ದೃಶ್ಯ ಲಭ್ಯ, ಇಲ್ಲಿದೆ ಡಿಕ್ಕಿಯ ಕಂಪ್ಲೀಟ್‌ ಡಿಟೇಲ್ಸ್‌

ಉಷಾ ನರ್ಸಿಂಗ್‌ ಹೋಂ ಸಿಗ್ನಲ್‌ನಲ್ಲಿನ ಅಪಘಾತ, ಸಿಸಿಟಿವಿ ದೃಶ್ಯ ಲಭ್ಯ, ಇಲ್ಲಿದೆ ಡಿಕ್ಕಿಯ ಕಂಪ್ಲೀಟ್‌ ಡಿಟೇಲ್ಸ್‌

ರಂಗಾಯಣದಲ್ಲಿ ನಾಟಕ ನಿರ್ದೇಶಕ, ಸಹಾಯಕ ನಿರ್ದೇಶಕರಿಂದ ಅರ್ಜಿ ಆಹ್ವಾನ

ರಂಗಾಯಣದಲ್ಲಿ ನಾಟಕ ನಿರ್ದೇಶಕ, ಸಹಾಯಕ ನಿರ್ದೇಶಕರಿಂದ ಅರ್ಜಿ ಆಹ್ವಾನ

ಭದ್ರಾವತಿಯ 3 ಮಹಿಳೆಯರು ಸೇರಿ 6 ಮಂದಿಗೆ 2 ವರ್ಷ ಜೈಲು, ₹1.74 ಲಕ್ಷ ದಂಡ, ಯಾಕೆ?

ಭದ್ರಾವತಿಯ 3 ಮಹಿಳೆಯರು ಸೇರಿ 6 ಮಂದಿಗೆ 2 ವರ್ಷ ಜೈಲು, ₹1.74 ಲಕ್ಷ ದಂಡ, ಯಾಕೆ?

ಮೇ 1ರಿಂದ ಶಿವಮೊಗ್ಗ – ಬೆಂಗಳೂರು ಇಂಡಿಗೋ ವಿಮಾನ ರದ್ದು, ಕಾರಣವೇನು?

ಮೇ 1ರಿಂದ ಶಿವಮೊಗ್ಗ – ಬೆಂಗಳೂರು ಇಂಡಿಗೋ ವಿಮಾನ ರದ್ದು, ಕಾರಣವೇನು?

ದುರ್ಗಿಗುಡಿಯಲ್ಲಿ ಅಂಗಡಿಯೊಳಗೆ ಹೋಗಿ ಬಂದ ಮಾಲೀಕನಿಗೆ ಆಘಾತ, ದಾಖಲಾಯ್ತು ಪ್ರಕರಣ, ಆಗಿದ್ದೇನು?

ದುರ್ಗಿಗುಡಿಯಲ್ಲಿ ಅಂಗಡಿಯೊಳಗೆ ಹೋಗಿ ಬಂದ ಮಾಲೀಕನಿಗೆ ಆಘಾತ, ದಾಖಲಾಯ್ತು ಪ್ರಕರಣ, ಆಗಿದ್ದೇನು?

ಶಿವಮೊಗ್ಗ JNNCEಯಲ್ಲಿ ಹ್ಯಾಕ್‌ಫೆಸ್ಟ್‌, ತಮಿಳುನಾಡು, ಮೈಸೂರು, ದಾವಣಗೆರೆ ಕಾಲೇಜುಗಳಿಗೆ ಬಹುಮಾನ

ಶಿವಮೊಗ್ಗ JNNCEಯಲ್ಲಿ ಹ್ಯಾಕ್‌ಫೆಸ್ಟ್‌, ತಮಿಳುನಾಡು, ಮೈಸೂರು, ದಾವಣಗೆರೆ ಕಾಲೇಜುಗಳಿಗೆ ಬಹುಮಾನ

Leave a Comment