BREAKING NEWS – ಗಾಜನೂರಿನ ತುಂಗಾ ಡ್ಯಾಂ ಭರ್ತಿ, ಸಂಜೆಯೊಳಗೆ ಗೇಟ್‌ ಓಪನ್‌, ಒಳ ಹರಿವು ಎಷ್ಟಿದೆ?

ಶಿವಮೊಗ್ಗLIVE

ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ

SHIVAMOGGA LIVE | 5 JULY 2023

SHIMOGA : ಹಿನ್ನೀರು ಭಾಗದಲ್ಲಿ ಭಾರಿ ಮಳೆಯಾದ ಹಿನ್ನೆಲೆ ಗಾಜನೂರಿನಲ್ಲಿರುವ ತುಂಗಾ ಜಲಾಶಯ (Tunga Dam) ಭರ್ತಿಯಾಗಿದೆ. ಇವತ್ತು ಸಂಜೆಯೊಳಗೆ ಯಾವುದೆ ಸಂದರ್ಭ ಜಲಾಶಯದ ಗೇಟ್‌ಗಳನ್ನು ಮೇಲೆತ್ತಿ ನೀರು ಹೊರಗೆ ಬಿಡುವ ಸಾಧ್ಯತೆ ಇದೆ.

Gajanur Tunga Dam, Shivamogga

ತುಂಗಾ ಜಲಾಶಯದಲ್ಲಿ (Tunga Dam) ಗರಿಷ್ಠ ನೀರಿನ ಸಂಗ್ರಹ ಮಟ್ಟ 588.24 ಅಡಿ. ಇವತ್ತು ನೀರಿನ ಮಟ್ಟ 587.54 ಅಡಿಗೆ ತಲುಪಿದೆ. ಕಳೆದ 24 ಗಂಟೆ ಅವಧಿಯಲ್ಲಿ ನೀರಿನ ಮಟ್ಟ ಸುಮಾರು ಒಂದು ಅಡಿಯಷ್ಟು ಏರಿಕೆಯಾಗಿದೆ. ಸದ್ಯ ಒಳ ಹರಿವು 4830 ಕ್ಯೂಸೆಕ್‌ ಇದೆ. ತುಂಗಾ ಜಲಾಶಯವು 2.848 ಟಿಎಂಸಿ ನೀರಿನ ಸಂಗ್ರಹ ಸಾಮರ್ಥ್ಯ ಹೊಂದಿದೆ. ಪ್ರಸ್ತುತ 2.019 ಟಿಎಂಸಿ ನೀರಿದೆ.

ಇದನ್ನೂ ಓದಿ – ತೀರ್ಥಹಳ್ಳಿ, ಹೊಸನಗರದ ವಿವಿಧೆಡೆ ಭಾರಿ ಮಳೆ, ಉಳಿದ ತಾಲೂಕಿನಲ್ಲಿ ಎಲ್ಲೆಲ್ಲಿ ಹೇಗಿದೆ ಪರಿಸ್ಥಿತಿ?

ಹಿನ್ನೀರು ಭಾಗದಲ್ಲಿ ಮಳೆ ಜೋರು

ತುಂಗಾ ಜಲಾಶಯದ ಹಿನ್ನೀರು ಭಾಗದಲ್ಲಿ ನಿರಂತರ ಮಳೆಯಾಗುತ್ತಿದೆ. ಚಿಕ್ಕಮಗಳೂರು, ತೀರ್ಥಹಳ್ಳಿಯಲ್ಲಿ ಮಳೆ ಬಿರುಸಾಗಿದೆ. ಹಾಗಾಗಿ ಜಲಾಶಯಕ್ಕೆ ನೀರಿನ ಒಳ ಹರಿವು ಹೆಚ್ಚಳವಾಗಲಿದೆ. ಜಲಾಶಯವು ಅಪಾಯದ ಮಟ್ಟ ತಲುಪುವ ಹಿನ್ನೆಲೆ ಮುನ್ನೆಚ್ಚರಿಕೆ ಕ್ರಮವಾಗಿ ಕ್ರಸ್ಟ್‌ ಗೇಟ್‌ಗಳನ್ನು ಮೇಲೆತ್ತಿ ಹೆಚ್ಚುವರಿ ನೀರನ್ನು ಹೊಳೆಗೆ ಹರಿಸಲು ನಿರ್ಧರಿಸಲಾಗಿದೆ.

Gajanur Tunga Dam, Shivamogga

ಮಳೆ ಪ್ರಮಾಣ ಇದೇ ರೀತಿ ಮುಂದುವರೆದರೆ ಇವತ್ತು ಸಂಜೆಯೊಳಗೆ ತುಂಗಾ ಜಲಾಶಯದಿಂದ ನದಿಗೆ ನೀರು ಹರಿಸಲಾಗುತ್ತದೆ ಎಂದು ಮೂಲಗಳು ತಿಳಿಸಿವೆ.

ನಿಮ್ಮ ಕನಸಿನ ಮನೆ ಈಗ ನನಸು! 🏠

ಅತಿ ಕಡಿಮೆ ಬಡ್ಡಿ ದರದಲ್ಲಿ ಸುಲಭ ಗೃಹ ಸಾಲ


ಈಗಲೇ ಕರೆ ಮಾಡಿ
9972194422


 

About The Editor

ನಿತಿನ್‌ ಆರ್‌.ಕೈದೊಟ್ಲು

Nitin Kaidotlu - Editor - Shivamogga Live

Leave a Comment