ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ
SHIVAMOGGA LIVE | 9 JULY 2023
HOSANAGARA : ಜಿಲ್ಲೆಯಾದ್ಯಂತ ಮಳೆ (Rain Decreases) ಪ್ರಮಾಣ ತಗ್ಗಿದೆ. ಅತಿ ಹೆಚ್ಚು ಮಳೆಯಾಗುತ್ತಿದ್ದ ಹೊಸನಗರ ತಾಲೂಕಿನಲ್ಲಿಯು ಮಳೆ ಕಡಿಮೆಯಾಗಿದೆ. ಮಾಸ್ತಿಕಟ್ಟೆ, ಸಾವೆಹಕ್ಲು, ಚಕ್ರ ಸೇರಿದಂತೆ ವಿವಿಧೆಡೆ ಗಣನೀಯ ಪ್ರಮಾಣದಲ್ಲಿ ಮಳೆ ಪ್ರಮಾಣ ಇಳಿಕೆಯಾಗಿದೆ.

ಎಲ್ಲೆಲ್ಲಿ ಎಷ್ಟು ಮಳೆಯಾಗಿದೆ?
ಕಳೆದ 24 ಗಂಟೆಯಲ್ಲಿ ಮಾಣಿ ಜಲಾಶಯ ವ್ಯಾಪ್ತಿಯಲ್ಲಿ 59 ಮಿ.ಮೀ
ಮಳೆಯಾಗಿದೆ. ಕಳೆದ ವರ್ಷ ಇದೆ ದಿನ 136 ಮಿ.ಮೀ ಮಳೆಯಾಗಿತ್ತು. ಯಡೂರಿನಲ್ಲಿ 67 ಮಿ.ಮೀ ಮಳೆಯಾಗಿದೆ (ಕಳೆದ ವರ್ಷ 125 ಮಿ.ಮೀ), ಹುಲಿಕಲ್‌ನಲ್ಲಿ 73 ಮಿ.ಮೀ (ಕಳೆದ ವರ್ಷ 149 ಮಿ.ಮೀ), ಮಾಸ್ತಿಕಟ್ಟೆ 50 ಮಿ.ಮೀ (ಕಳೆದ ವರ್ಷ 126 ಮಿ.ಮೀ), ಚಕ್ರ 49 ಮಿ.ಮೀ (ಕಳೆದ ವರ್ಷ 68 ಮಿ.ಮೀ), ಸಾವೆಹಕ್ಲು 64 ಮಿ.ಮೀ (ಕಳೆದ ವರ್ಷ 89 ಮಿ.ಮೀ) ಮಳೆಯಾಗಿದೆ.
ಒಳ ಹರಿವು ಇಳಿಕೆ
ಮಳೆ ಪ್ರಮಾಣ ಇಳಿಕೆ ಆಗಿರುವುದರಿಂದ ಜಲಾಶಯಗಳ ಒಳ ಹರಿವು ಕೂಡ ಕುಸಿತ ಕಂಡಿದೆ. ಮಾಣಿ ಜಲಾಶಯಕ್ಕೆ 3092 ಕ್ಯೂಸೆಕ್ ಒಳ ಹರಿವು ಇದೆ. ಪಿಕ್‌ಅಪ್ ಡ್ಯಾಂಗೆ 1318 ಕ್ಯೂಸೆಕ್, ಚಕ್ರ ಡ್ಯಾಂಗೆ 1134 ಕ್ಯೂಸೆಕ್, ಸಾವೆಹಕ್ಲು 852 ಕ್ಯೂಸೆಕ್ ಒಳ ಹರಿವು ದಾಖಲಾಗಿದೆ.
ಇದನ್ನೂ ಓದಿ – ಶಾಲೆಗಳಿಗೆ ರಜೆ ವಿಚಾರ, ವೈರಲ್ ಆಯ್ತು ತಪ್ಪು ಸಂದೇಶ, ವಾಸ್ತವದಲ್ಲಿ ಶಿಕ್ಷಣ ಇಲಾಖೆ ಘೋಷಿಸಿದ್ದೇನು?
ಹೊಸನಗರದಲ್ಲಿ ಮಳೆ ಇಳಿಕೆ
ಹೊಸನಗರ ತಾಲೂಕಿನಲ್ಲಿ ಪ್ರತಿ ವರ್ಷ ಅತಿ ಹೆಚ್ಚು ಮಳೆಯಾಗುತ್ತದೆ. ಈ ಬಾರಿ ನಗರ ಹೋಬಳಿಯಲ್ಲಿ ಭಾರಿ ಮಳೆಯಾಗಿತ್ತು. ನಿಟ್ಟೂರು, ಸಂಪೆಕಟ್ಟೆ, ನಗರ ಸೇರಿದಂತೆ ವಿವಿಧೆಡೆ ಮಳೆ ಅಬ್ಬರಿಸಿತ್ತು. ಆದರೆ ದಿಢೀರನೆ ಪ್ರಮಾಣ ಕಡಿಮೆಯಾಗಿದೆ (Rain Decreases).

LATEST NEWS
- ಕೂಡ್ಲಿಯಲ್ಲಿ ಸಾವಿರ ಸಾವಿರ ಜನರಿಂದ ಪುಣ್ಯ ಸ್ನಾನ, ಹೇಗಿದೆ ಈ ಬಾರಿ ಜಾತ್ರೆ?

- ಶಿವಮೊಗ್ಗದಲ್ಲಿ ಯುಗಾದಿ ಚಂದ್ರ ದರ್ಶನ, ಜನರಿಂದ ಪೂಜೆ, ಶುಭಾಶಯ ವಿನಿಮಯ

- ಇವತ್ತು ಎಲ್ಲೆಲ್ಲಿ ಎಷ್ಟಿದೆ ಅಡಿಕೆ ರೇಟ್ | 20 ಮಾರ್ಚ್ 2026 | ಅಡಿಕೆ ಧಾರಣೆ

- ಕಾರು, ಬೈಕ್ ಡಿಕ್ಕಿ, ಯುವಕ ದಾರುಣ ಸಾವು, ಹೇಗಾಯ್ತು ಘಟನೆ?

- ಉಷಾ ನರ್ಸಿಂಗ್ ಹೋಂ ಸಿಗ್ನಲ್ನಲ್ಲಿನ ಅಪಘಾತ, ಸಿಸಿಟಿವಿ ದೃಶ್ಯ ಲಭ್ಯ, ಇಲ್ಲಿದೆ ಡಿಕ್ಕಿಯ ಕಂಪ್ಲೀಟ್ ಡಿಟೇಲ್ಸ್

About The Editor
ನಿತಿನ್ ಆರ್.ಕೈದೊಟ್ಲು
















