SHIVAMOGGA LIVE | 18 JULY 2023
SHIMOGA : ನಗರದ ಪ್ರಮುಖ ಕಾಂಕ್ರಿಟ್ ರಸ್ತೆಯಲ್ಲಿ ಗಜಗಾತ್ರದ ಗುಂಡಿಗಳು (Pot Holes) ಸೃಷ್ಟಿಯಾಗಿವೆ. ಅಲ್ಲಲ್ಲಿ ಕಂಬಿಗಳು ಮೇಲೆದ್ದು ಕಾಣಿಸುತ್ತಿವೆ. ತುರ್ತಾಗಿ ರಿಪೇರಿ ಮಾಡದೆ ಇದ್ದರೆ ಇನ್ನು ಕೆಲವೆ ಸಮಯದಲ್ಲಿ ಈ ರಸ್ತೆಯಲ್ಲಿ ವಾಹನ ಸವಾರರ ಜೀವಕ್ಕೆ ಕುತ್ತು ಉಂಟಾಗಲಿದೆ.
ಬಿ.ಎಸ್.ಯಡಿಯೂರಪ್ಪ ಅವರು ಉಪ ಮುಖ್ಯಮಂತ್ರಿಯಾಗಿದ್ದ ಸಂದರ್ಭ ಶಿವಮೊಗ್ಗದ ಬಿ.ಹೆಚ್.ರಸ್ತೆಯ ಅಗಲೀಕರಣ ಮಾಡಿ, ಕಾಂಕ್ರಿಟ್ ರಸ್ತೆ ನಿರ್ಮಿಸಲಾಯಿತು. ಶಂಕರಮಠ ಸರ್ಕಲ್ನಿಂದ ಶಿವಮೊಗ್ಗದ ಬಸ್ ನಿಲ್ದಾಣದವರೆಗೆ ಗಟ್ಟಿಮುಟ್ಟು ಕಾಂಕ್ರಿಟ್ ರಸ್ತೆ ನಿರ್ಮಿಸಲಾಗಿತ್ತು. ಆದರೆ ನಿರ್ವಹಣೆ ಕೊರತೆ ಕಾರಣಕ್ಕೆ ಈಗ ರಸ್ತೆಯಲ್ಲಿ ಗುಂಡಿಗಳು ಕಾಣಿಸಿಕೊಂಡಿವೆ.
ಅಲ್ಲಲ್ಲಿ ಗಜಗಾತ್ರದ ಗುಂಡಿಗಳು, ಎದ್ದು ಕಾಣುತ್ತಿವೆ ಕಬ್ಬಿಣದ ಸರಳು
ಕಾಂಕ್ರಿಟ್ ರಸ್ತೆಯಲ್ಲಿ ಏನೇನಾಗಿದೆ? ಇಲ್ಲಿದೆ 4 ಪಾಯಿಂಟ್
ಬಿ.ಹೆಚ್.ರಸ್ತೆಯ ಕಾಂಕ್ರಿಟ್ ರೋಡ್ನಲ್ಲಿ ಹಲವು ಕಡೆ ಗುಂಡಿಗಳಾಗಿವೆ. ನಿರ್ವಹಣೆ ಕೊರತೆ, ಭಾರಿ ವಾಹನಗಳ ಓಡಾಟದ ಕಾರಣಕ್ಕೆ ಗುಂಡಿಗಳು ಸೃಷ್ಟಿಯಾಗಿವೆ. ದುರ್ಗ ಲಾಡ್ಜ್ ಮುಂಭಾಗ (ರಾಯಲ್ ಆರ್ಕಿಡ್ ಸಮೀಪ) ಎಡ ಮತ್ತು ಬಲ ಬದಿಯಲ್ಲಿ, ಕರ್ನಾಟಕ ಸಂಘದ ಮುಂಭಾಗ, ಸೈನ್ಸ್ ಮೈದಾನದ ಸಮೀಪ, ಏಥರ್ ಬೈಕ್ ಶೋ ರೂಂ ಎದುರು ಗಜಗಾತ್ರದ ಗುಂಡಿಗಳಾಗಿವೆ. ಈ ಗುಂಡಿಗಳನ್ನು ಕಂಡು ವಾಹನ ಸವಾರರು ವೇಗ ತಗ್ಗಿಸಿದರೆ ಹಿಂಬದಿ ಬರುವ ವಾಹನಗಳು ಡಿಕ್ಕಿ ಹೊಡೆಯುತ್ತವೆ. ಇಂತಹ ಹತ್ತಾರು ಅಪಘಾತಗಳು ಈ ರಸ್ತೆಯಲ್ಲಿ ಸಂಭವಿಸಿವೆ.
ಟ್ರಾಫಿಕ್ ಸಿಗ್ನಲ್ ಅಳವಡಿಸಲು ಅಲ್ಲಲ್ಲಿ ರಸ್ತೆ ಅಗೆಯಲಾಗಿದೆ. ಸರ್.ಎಂ.ವಿಶ್ವೇಶ್ವರಯ್ಯ ಅವರ ಪ್ರತಿಮೆ ಮುಂಭಾಗ, ಶಂಕರ ಮಠ ಸರ್ಕಲ್ನಲ್ಲಿ ಗುಂಡಿಗಳು ಅಗೆದು ಸಿಗ್ನಲ್ ಲೈಟ್ಗೆ ಸಂಪರ್ಕ ಕಲ್ಪಿಸಲಾಗಿದೆ. ಈ ಗುಂಡಿಗಳನ್ನು ಸರಿಯಾಗಿ ಮುಚ್ಚಿಲ್ಲ. ದಿನೇ ದಿನೆ ಈ ಗುಂಡಿಗಳ ಆಳ ಹೆಚ್ಚಾಗುತ್ತಿವೆ. ರಾತ್ರಿ ಮೇಳೆ ಮತ್ತು ಮಳೆ ಬಂದಾಗ ನೀರು ತುಂಬಿಕೊಂಡು ಗುಂಡಿಗಳು ಗೊತ್ತಾಗದೆ ದ್ವಿಚಕ್ರ ವಾಹನ ಸವಾರರಿಗೆ ಅಪಾಯ ಒಡ್ಡುತ್ತಿವೆ.
ಇನ್ನು, ರಸ್ತೆಯ ವಿವಿಧೆಡೆ ಕಾಂಕ್ರಿಟ್ ಮೇಲೆದ್ದು ಹೋಗುತ್ತಿವೆ. ಅಮೀರ್ ಅಹಮದ್ ಸರ್ಕಲ್, ದೀಪಕ್ ಪೆಟ್ರೋಲ್ ಬಂಕ್ ಎದುರು ಕಾಂಕ್ರೆಟ್ನ ಮೇಲ್ಮೈ ಕಿತ್ತು ಹೋಗಿದೆ. ಬಹು ಸಮಯದಿಂದ ಈ ಸಮಸ್ಯೆ ಇದ್ದರು ನಿರ್ವಹಣೆ ಮಾಡದೆ ಹಾಗೆ ಬಿಡಲಾಗಿದೆ.
ನಿರಂತರ ವಾಹನ ಸಂಚಾರದಿಂದಾಗಿ ಕಾಂಕ್ರಿಟ್ ಸವೆದು ಒಳಗೆ ಹಾಕಿರುವ ಕಂಬಿಗಳು ಮೇಲೆದ್ದು ಕಾಣುತ್ತಿವೆ. ಕೃಷ್ಣ ಕೆಫೆ ಹೊಟೇಲ್ ಮುಂಭಾಗ ಬಿ.ಹೆಚ್.ರಸ್ತೆಗೆ ಹಾಕಿರುವ ಕಾಂಕ್ರಿಟ್ ಮೇಲೆದ್ದು ಕಾಣುತ್ತಿವೆ. ನಿರ್ವಹಣೆ ಮಾಡದೆ ಇದ್ದಲ್ಲಿ ಕೆಲವೆ ಸಮಯದಲ್ಲಿ ಈ ಕಾಂಬಿಗಳು ಮೇಲೆದ್ದು, ವಾಹನ ಸವಾರರ ಪಾಲಿಗೆ ದೊಡ್ಡ ಅನಾಹುತ ಸೃಷ್ಟಿಸಲಿದೆ.
ಇದನ್ನೂ ಓದಿ – ಶಿವಮೊಗ್ಗ KSRTC ಬಸ್ ನಿಲ್ದಾಣದ ಬಳಿ ಬೆಳಗ್ಗೆ ಯುವತಿ ‘ಕಿಡ್ನಾಪ್’, ಸಂಜೆ ವೇಳೆಗೆ ಪ್ರಕರಣಕ್ಕೆ ಟ್ವಿಸ್ಟ್, ಏನದು?
ಕಾಂಕ್ರಿಟ್ ರಸ್ತೆ ನಿರ್ಮಾಣವಾಗಿ ಒಂದೂವರೆ ದಶಕವಾಗಿದೆ. ನಿತ್ಯ ಸಾವಿರಾರು ವಾಹನಗಳು ಈ ರಸ್ತೆಯಲ್ಲಿ ಓಡಾಡುತ್ತವೆ. ಆದ್ದರಿಂದ ಬಿ.ಹೆಚ್.ರಸ್ತೆಯ ರಿಪೇರಿ ಕೆಲಸ ತುರ್ತಾಗಿ ಆಗಬೇಕಿದೆ. ಇಲ್ಲವಾದಲ್ಲಿ ವಾಹನ ಸವಾರರು ಸಂಕಷ್ಟ ಅನುಭವಿಸುವುದು ನಿಶ್ಚಿತ.
ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್ಗೆ ಕಳುಹಿಸುತ್ತೇವೆ.
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» ಶಿವಮೊಗ್ಗ ಲೈವ್ gmail
» Whatsapp Number
7411700200