ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ
SHIVAMOGGA LIVE | 19 JULY 2023
ನಿಂತಿದ್ದ ಕ್ಯಾಂಟರ್‌ಗೆ ಓಮ್ನಿ ಕಾರು ಡಿಕ್ಕಿ

THIRTHAHALLI : ರಸ್ತೆ ಬದಿ ನಿಂತಿದ್ದ ಕ್ಯಾಂಟರ್ ಲಾರಿಗೆ
ಹಿಂಬದಿಯಿಂದ ಓಮ್ನಿ ಕಾರು (Omni Car) ಡಿಕ್ಕಿ ಹೊಡೆದಿದೆ. ತೀರ್ಥಹಳ್ಳಿಯ ಮೇಲಿನ ಕುರುವಳ್ಳಿ ಬಳಿ ಕೊಪ್ಪ – ಶೃಂಗೇರಿ ಹೆದ್ದಾರಿಯಲ್ಲಿ ಕಳೆದ ರಾತ್ರಿ ಘಟನೆ ಸಂಭವಿಸಿದೆ. ಡಿಕ್ಕಿಯ ರಭಸಕ್ಕೆ ಕಾರಿನ ಮುಂಭಾಗದ ನಜ್ಜುಗುಜ್ಜಾಗಿದೆ. ಸ್ಥಳೀಯರು ಕಾರಿನಲ್ಲಿ ಸಿಲುಕಿದ್ದ ಚಾಲಕನನ್ನು ರಕ್ಷಿಸಿದ್ದಾರೆ. ಚಾಲಕನ ಸ್ಥಿತಿ ಗಂಭೀರವಾಗಿದ್ದು ಆತನನ್ನು ತೀರ್ಥಹಳ್ಳಿಯ ಜೆ.ಸಿ.ಆಸ್ಪತ್ರೆಗೆ ರವಾನಿಸಲಾಗಿತ್ತು. ತೀರ್ಥಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ಸಂಭವಿಸಿದೆ.
ಇದನ್ನೂ ಓದಿ – ಡೇಂಜರ್ ರೋಡ್ ಆಗುತ್ತಿದೆ ಶಿವಮೊಗ್ಗದ ಕಾಂಕ್ರಿಟ್ ರಸ್ತೆ, ಯಾಕೆ? ಇಲ್ಲಿದೆ 4 ಪ್ರಮುಖ ಪಾಯಿಂಟ್

ಐವರಿಗೆ ತಲಾ 10 ಸಾವಿರ ರೂ. ದಂಡ
BHADRAVATHI : ವಾರಂತ್ಯದಲ್ಲಿ ಮದ್ಯ ಸೇವಿಸಿ ವಾಹನ ಚಲಾವಣೆ
ಮಾಡುತ್ತಿದ್ದ ಐವರ ವಿರುದ್ಧ ಸಂಚಾರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿದ್ದರು. ವಿಶೇಷ ಕಾರ್ಯಾಚರಣೆ ವೇಳೆ ಐವರು ಪತ್ತೆಯಾಗಿದ್ದರು. ವಿಚಾರಣೆ ನಡೆಸಿದ 1ನೇ ಹಚ್ಚುವರಿ ಜಿಲ್ಲಾ ಸೆಷನ್ಸ್ ನ್ಯಾಯಾಲಯ ಐವರಿಗೆ ದಂಡ ವಿಧಿಸಿದೆ. ತಲಾ 10 ಸಾವಿರ ರೂ. ದಂಡ ವಿಧಿಸಲಾಗಿದೆ.
ಇದನ್ನೂ ಓದಿ – ಗುಟ್ಕಾ ಜಗಿದು ಕಂಡಲ್ಲೆಲ್ಲ ಉಗುಳುವವರೆ ಹುಷಾರ್, ಕೋರ್ಟಲ್ಲಿ ಗೋಡೆಗೆ ಉಗಿದವನಿಗೆ ತಕ್ಕ ಪಾಠ ಕಲಿಸಿದ ಜಡ್ಜ್

ಗಾಡಿಕೊಪ್ಪದಲ್ಲಿ ಹೊಟೇಲ್‌ನಲ್ಲಿ ಬೆಂಕಿ
SHIMOGA : ಗಾಡಿಕೊಪ್ಪದಲ್ಲಿ ಹೊಟೇಲ್ ಒಂದರಲ್ಲಿ ಬೆಂಕಿ
ಕಾಣಿಸಿಕೊಂಡಿದೆ. ಹೊಟೇಲ್‌ನಲ್ಲಿದ್ದ ದಿನಸಿ ಹಾಗೂ ಇತರೆ ವಸ್ತುಗಳು ಬೆಂಕಿಗೆ ಆಹುತಿಯಾಗಿವೆ. ಸೋಮವಾರ ತಡರಾತ್ರಿ ಘಟನೆ ಸಂಭವಿಸಿದೆ. ಸ್ಥಳೀಯರು ಆಗ್ನಿಶಾಮಕ ಸಿಬ್ಬಂದಿಗೆ ಮಾಹಿತಿ ತಿಳಿಸಿದ್ದರು. ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ಸಿಬ್ಬಂದಿ ಬೆಂಕಿ ನಂದಿಸಿ ಹೆಚ್ಚಿನ ಅನಾಹುತ ತಪ್ಪಿಸಿದರು.
LATEST NEWS
- ಶಿವಮೊಗ್ಗದ ದೇಗುಲಗಳಿಗೆ ಸಂಜೆ ಬಳಿಕ ಹೆಚ್ಚಿದ ಭಕ್ತರು, ವಿಶೇಷ ಪೂಜೆ

- ಬೆಟ್ಟೆ, ರಾಶಿ ರೇಟ್ ಇವತ್ತು ಎಷ್ಟಿದೆ? ಸರಕು ದರ ಮತ್ತೆ ಹೆಚ್ಚಾಯ್ತಾ? – 3 ಮಾರ್ಚ್ 2026

- ಶಿವಮೊಗ್ಗದಲ್ಲಿ ರಂಗ ಹಬ್ಬ, ನಾಲ್ಕು ದಿನ ನಾಟಕೋತ್ಸವ, ಯಾವ್ಯಾವ ದಿನ ಯಾವ ನಾಟಕವಿದೆ?

- ಶಿವಮೊಗ್ಗ ಬಸ್ ನಿಲ್ದಾಣದಲ್ಲಿ ವ್ಯಕ್ತಿಗೆ ಬಿಸಿ ಮುಟ್ಟಿಸಿದ ಅಕ್ಕ ಪಡೆ, ಆಗಿದ್ದೇನು?

- ದುರ್ಗಿಗುಡಿಯಲ್ಲಿ ವೈಭವದ ರಥೋತ್ಸವ, ಈ ಬಾರಿ ಉತ್ಸವ ಬೆಳಗ್ಗೆ ನಡೆದಿದ್ದೇಕೆ?

About The Editor
ನಿತಿನ್ ಆರ್.ಕೈದೊಟ್ಲು








