ಪ್ರಾಣಿ ನುಂಗಿ ಚರಂಡಿಯಲ್ಲಿ ಮಲಗಿದ್ದ ಹೆಬ್ಬಾವು, ಹಗ್ಗ ಕಟ್ಟಿ ಮೇಲೆತ್ತಿದ ಗ್ರಾಮಸ್ಥರು

ಶಿವಮೊಗ್ಗLIVE

ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ

PARISHRAMA NEET ACADEMY SHIVAMOGGA LIVE

SHIVAMOGGA LIVE | 20 JULY 2023

HOLEHONNURU : ಚರಂಡಿ ಸ್ವಚ್ಛಗೊಳಿಸುವ ವೇಳೆ ಹೆಬ್ಬಾವು (the python) ಕಾಣಿಸಿಕೊಂಡಿದೆ. ಇದರಿಂದ ಕೆಲಕಾಲ ಕಾರ್ಮಿಕರು ಮತ್ತು ಗ್ರಾಮಸ್ಥರು ಆತಂಕಕ್ಕೀಡಾಗಿದ್ದರು. ಹೊಳೆಹೊನ್ನೂರು ಸಮೀಪದ ಇಟ್ಟಿಗೆಹಳ್ಳಿಯಲ್ಲಿ ಘಟನೆ ಸಂಭವಿಸಿದೆ.

200723-Ittigehalli-near-Holehonnuru-Hebbavu-caught-by-villagers.jpg

ಪ್ರಾಣಿ ನುಂಗಿ ಮಲಗಿತ್ತು

ಇಟ್ಟಿಗೆಹಳ್ಳಿಯಲ್ಲಿ ಚರಂಡಿ ಸ್ವಚ್ಛತಾ ಕಾರ್ಯದ ವೇಳೆ ಹೆಬ್ಬಾವು (the python) ಕಾಣಿಸಿಕೊಂಡಿದೆ. ಕೂಡಲೆ ಕಾರ್ಮಿಕರು ಗ್ರಾಮಸ್ಥರಿಗೆ ಮಾಹಿತಿ ನೀಡಿದ್ದು, ಜನರು ತಂಡೋಪ ತಂಡವಾಗಿ ಸ್ಥಳಕ್ಕೆ ಆಗಮಿಸಿ ಹೆಬ್ಬಾವನ್ನು ವೀಕ್ಷಿಸಿದರು. ಯಾವುದೋ ಪ್ರಾಣಿಯನ್ನು ನುಂಗಿದ್ದ ಹೆಬ್ಬಾವು, ಚರಂಡಿಯಲ್ಲಿ ಮಲಗಿತ್ತು.

ಇದನ್ನೂ ಓದಿ – ಶಿವಮೊಗ್ಗ ಜಿಲ್ಲೆಯಲ್ಲಿ ಕಳೆಗಟ್ಟಿದ ಮಳೆ, ಅಲ್ಲಲ್ಲಿ ಮರಗಳು ಧರೆಗೆ, ಕೆಲವೆಡೆ ಗೋಡೆ ಕುಸಿತ, ಛಾವಣಿಗೆ ಹಾನಿ

ಹಗ್ಗದಿಂದ ಕಟ್ಟಿ ಹೆಬ್ಬಾವನ್ನು ಚರಂಡಿಯಿಂದ ಮೇಲತ್ತಿದ್ದಾರೆ. ಶಾಂತಿ ಸಾಗರ ಅರಣ್ಯಾಧಿಕಾರಿಗಳಿಗೆ ಮಾಹಿತಿ ನೀಡಿದ್ದರು. ಸ್ಥಳಕ್ಕಾಗಮಿಸಿದ ಅರಣ್ಯಾಧಿಕಾರಿಗಳು ಹೆಬ್ಬಾವನ್ನು ವಶಕ್ಕೆ ಪಡೆದಿದ್ದು, ಅರಣ್ಯದಲ್ಲಿ ಬಿಡುವುದಾಗಿ ತಿಳಿಸಿದ್ದಾರೆ.

Ready%20Compund%20New2

ನಿಮ್ಮ ಕನಸಿನ ಮನೆ ಈಗ ನನಸು! 🏠

ಅತಿ ಕಡಿಮೆ ಬಡ್ಡಿ ದರದಲ್ಲಿ ಸುಲಭ ಗೃಹ ಸಾಲ


ಈಗಲೇ ಕರೆ ಮಾಡಿ
9972194422


 

About The Editor

ನಿತಿನ್‌ ಆರ್‌.ಕೈದೊಟ್ಲು

Nitin Kaidotlu - Editor - Shivamogga Live

Leave a Comment