ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ
SHIVAMOGGA LIVE | 27 JULY 2023
SHIKARIPURA : ನಿರಂತರ ಮಳೆ ಹಿನ್ನೆಲೆ ಶಿಕಾರಿಪುರ ತಾಲೂಕಿನ ಅಂಜನಾಪುರ ಜಲಾಶಯ (DAM) ಕೋಡಿ ಬಿದ್ದಿದೆ. ವಿಷಯ ತಿಳಿದು ತಾಲೂಕಿನ ಜನರು, ಪ್ರವಾಸಿಗರು ಜಲಾಶಯದ ವೀಕ್ಷಿಸಲು ಭೇಟಿ ನೀಡುತ್ತಿದ್ದಾರೆ.

ಹಿನ್ನೀರು ಭಾಗದಲ್ಲಿ ನಿರಂತರ ಮಳೆಯಾಗುತ್ತಿದೆ. ಆದ್ದರಿಂದ ಅಂಜನಾಪುರ ಜಲಾಶಯಕ್ಕೆ ಹೆಚ್ಚಿನ ಪ್ರಮಾಣದ ನೀರು ಹರಿದು ಬರುತ್ತಿದ್ದು ಕೋಡಿ ಬಿದ್ದಿದೆ. 21 ಅಡಿ ನೀರು ಭರ್ತಿಯಾದರೆ ಜಲಾಶಯ ಕೋಡಿ ಬೀಳುತ್ತದೆ.
ಕೃಷಿ, ಕುಡಿಯುವ ನೀರಿನ ಮೂಲ
ಅಂಜನಾಪುರ ಜಲಾಶಯವು 1.82 ಟಿಎಂಸಿ ನೀರು ಸಂಗ್ರಹ ಸಾಮರ್ಥ್ಯ ಹೊಂದಿದೆ. ಶಿಕಾರಿಪುರ ಮತ್ತು ಶಿರಾಳಕೊಪ್ಪ ಪಟ್ಟಣಕ್ಕೆ ಇಲ್ಲಿಂದಲೆ ಕುಡಿಯುವ ನೀರು ಪೂರೈಕೆಯಾಗುತ್ತದೆ. ಅಲ್ಲದೆ 6,736 ಹೆಕ್ಟೇರ್ ಕೃಷಿ ಭೂಮಿಗೆ ನೀರು ಒದಗಿಸುತ್ತದೆ. ಹಾಗಾಗಿ ಜಲಾಶಯ ಭರ್ತಿಯಾಗುತ್ತಿದ್ದಂತೆ ಶಿಕಾರಿಪುರ ಜನತೆ ಹರ್ಷ ವ್ಯಕ್ತಪಡಿಸುತ್ತಾರೆ.
ಇದನ್ನೂ ಓದಿ – GOOD NEWS | ಶಿವಮೊಗ್ಗ – ಬೆಂಗಳೂರು ವಿಮಾನದ ಟಿಕೆಟ್ ಬುಕಿಂಗ್ ಆರಂಭ, ಎಷ್ಟಿದೆ ದರ? ಬುಕ್ ಮಾಡುವುದು ಹೇಗೆ?
ಪ್ರವಾಸಿಗರ ಸಂಖ್ಯೆ ಹೆಚ್ಚಳ
ಮೈಸೂರು ಮಹಾರಾಜರು 1936ರಲ್ಲಿ ಕುಮದ್ವತಿ ನದಿಗೆ ಅಡ್ಡಲಾಗಿ ಅಂಜನಾಪುರ ಜಲಾಶಯ (DAM) ನಿರ್ಮಿಸಿದರು. 1600 ಮೀಟರ್ ಮಣ್ಣಿನ ಏರಿ ಹೊಂದಿದ್ದು, 23 ಅಡಿ ಎತ್ತರವಿದೆ. ಇನ್ನು, ಅಂಜನಾಪುರ ಜಲಾಶಯದ ಒಳಹರಿವು ಹೆಚ್ಚಳವಾದ ಸುದ್ದಿ ತಿಳಿಯುತ್ತಿದ್ದಂತೆ ಪ್ರವಾಸಿಗರ ಸಂಖ್ಯೆ ಹೆಚ್ಚಾಗಿದೆ.
ಪಕ್ಕದಲ್ಲಿ ರಾಕ್ ಗಾರ್ಡನ್ ಇರುವುದರಿಂದ ಪ್ರವಾಸಿಗರು ಸಮಯ ಕಳೆಯಲು ಇಲ್ಲಿ ಅವಕಾಶವಾಗಲಿದೆ. ಜಲಾಶಯ ಭರ್ತಿಯಾದ ವಿಚಾರ ತಿಳಿಯುತ್ತಿದ್ದಂತೆ ಪ್ರವಾಸಿಗರು ಅಂಜನಾಪುರ ಜಲಾಶಯದ ಬಳಿ ಬಂದು ಕಣ್ತುಂಬಿಕೊಳ್ಳುತ್ತಿದ್ದಾರೆ.
.jpeg)
LATEST NEWS
- ಶಿವಮೊಗ್ಗ ವಿಮಾನ ನಿಲ್ದಾಣ, ಮಹತ್ವದ ಟೆಸ್ಟ್ನಲ್ಲಿ ಪಾಸ್, DoVR ಕೆಲಸ ಶುರು, ಏನಿದು? ಪ್ರಯೋಜನ ಏನು?

- ಶಿವಮೊಗ್ಗ ಜಿಲ್ಲೆಯ ಎಲ್ಲ ತಾಲೂಕುಗಳಲ್ಲಿಯು ಹೆಚ್ಚಿದ ತಾಪಮಾನ? ಇವತ್ತು ಎಷ್ಟಿರುತ್ತೆ?

- ಭಟ್ಕಳದ ಮಹಿಳೆ ಸೇರಿ ನಾಲ್ವರು ನಗರ ಠಾಣೆ ಪೊಲೀಸರ ಬಲೆಗೆ, ಕಾರಣವೇನು? ಏನೇನೆಲ್ಲ ಸಿಕ್ತು?

- ಇಂದಿನ ಪಂಚಾಂಗ – ಯಾವ್ಯಾವ ಸಮಯ ಯಾವಾಗಿದೆ?

- ಶಿವಮೊಗ್ಗದ ದೇಗುಲಗಳಿಗೆ ಸಂಜೆ ಬಳಿಕ ಹೆಚ್ಚಿದ ಭಕ್ತರು, ವಿಶೇಷ ಪೂಜೆ

About The Editor
ನಿತಿನ್ ಆರ್.ಕೈದೊಟ್ಲು





