ವರ್ಷಗಟ್ಟಲೆ ಚೌಡಿ ಕಲ್ಲು ಅಂತಾ ಪೂಜೆ, ಈಗ ಸಂಶೋಧಕರು ಹೇಳಿದ್ದೆ ಬೇರೆ, ಗ್ರಾಮಸ್ಥರಲ್ಲಿ ಹೆಚ್ಚಿದ ಕುತೂಹಲ

ಶಿವಮೊಗ್ಗLIVE

ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ

SHIVAMOGGA LIVE | 31 JULY 2023

THIRTHAHALLI : ಅರ್ಧ ಮಣ್ಣಿನಲ್ಲಿ ಮುಚ್ಚಿ ಹೋಗಿದ್ದ ವಿಜಯನಗರ ಕಾಲದ ದಾನ ಶಾಸನ (Epigraphy)) ಜಮೀನಿನಲ್ಲಿ ಪತ್ತೆಯಾಗಿದೆ. ಚೌಡಿ ಕಲ್ಲು ಎಂದು ಗ್ರಾಮಸ್ಥರು ಇದನ್ನು ಶ್ರದ್ಧೆಯಿಂದ ಪೂಜೆ ಸಲ್ಲಿಸುತ್ತಿದ್ದರು.

Daana-Shasana-found-in-Thirthahalli-Guddekoppa

ಗುಡ್ಡೇಕೊಪ್ಪ ಗ್ರಾಮದ ಕೃಷಿಕ ವಿಶ್ವನಾಥ ಅವರಿಗೆ ಸೇರಿದ ಜಮೀನಿನಲ್ಲಿ ಈ ದಾನ ಶಾಸನ ಸಿಕ್ಕಿದೆ. 14, 15ನೇ ಶತಮಾನದ ಶಾಸನ ಇದಾಗಿದ್ದು, 47 ಸಾಲುಗಳ ಅಕ್ಷರಗಳನ್ನು ಇಲ್ಲಿ ಕಾಣಬಹುದಾಗಿದೆ. ಯಾವ ರಾಜರ ಕಾಲದ ಶಾಸನ ಎಂಬುದು ಗೊತ್ತಾಗಿಲ್ಲ. ಅಲ್ಲಲ್ಲಿ ಅಕ್ಷರಗಳು ಅಳಿಸಿ ಹೋಗಿವೆ. ಕೆಲವು ಅಕ್ಷರಗಳನ್ನು ಗುರುತಿಸಲಾಗಿದ್ದು ಉಳಿದ್ದದ್ದರ ಕುರಿತು ಸಂಶೋಧನೆ ನಡೆಯಬೇಕಿದೆ. ಪಕ್ಕದಲ್ಲಿಯೇ ವಾಮನಮುದ್ರೆಯು ದೊರೆತಿದೆ.

ಇದನ್ನೂ ಓದಿ – ಕೊಡಚಾದ್ರಿ ಪ್ರವಾಸಿಗರಿಗೆ ಶಾಕ್‌ ನೀಡಿದ ವನ್ಯಜೀವಿ ವಿಭಾಗ, ಇವತ್ತಿನಿಂದ ಪ್ರವೇಶ ನಿಷೇಧ

ಸಂಶೋಧಕ ಎಲ್‌.ಎಸ್.ರಾಘವೇಂದ್ರ ಮತ್ತು ಪತ್ರಕರ್ತ ಜಿ.ಆರ್‌.ಸತ್ಯನಾರಾಯಣ ಶಾಸನದ ವಿವರ ಸಂಗ್ರಹಿಸಿದ್ದಾರೆ. ದಾನ ಶಾಸನ ವಿಚಾರ ತಿಳಿದು ಗ್ರಾಮಸ್ಥರಲ್ಲಿ ಕುತೂಹಲ ಮೂಡಿದೆ.

PARISHRAMA NEET ACADEMY

ನಿಮ್ಮ ಕನಸಿನ ಮನೆ ಈಗ ನನಸು! 🏠

ಅತಿ ಕಡಿಮೆ ಬಡ್ಡಿ ದರದಲ್ಲಿ ಸುಲಭ ಗೃಹ ಸಾಲ


ಈಗಲೇ ಕರೆ ಮಾಡಿ
9972194422


 

About The Editor

ನಿತಿನ್‌ ಆರ್‌.ಕೈದೊಟ್ಲು

Nitin Kaidotlu - Editor - Shivamogga Live

Leave a Comment